ಢಾಕಾ: ಬಾಂಗ್ಲಾದಲ್ಲಿ ಭಾರತ ವಿರೋಧಿ ಧೋರಣೆ ಮುಂದುವರೆದಿದ್ದು, ಅಲ್ಲಿನ ಹಿಂದೂಗಳನ್ನು ಭಾರತೀಯರೆಂದು ಅವಮಾನಿಸಲಾಗುತ್ತಿದೆ. ಜತೆಗೆ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಹಿಂದೂಗಳನ್ನು ಕೆಲಸದಿಂದ ವಜಾಗೊಳಿಸಿರುವ ಆರೋಪವೂ ಕೇಳಿ ಬಂದಿದೆ. ಎನ್‌ಡೀವಿ ಬಾಂಗ್ಲಾದಲ್ಲಿ ಪ್ರತ್ಯಕ್ಷ ವರದಿ ನಡೆಸಿದ್ದು, ಈ ವೇಳೆ ಹಿಂದೂಗಳು ತಮ್ಮ ಅಸಹಾಯಕತೆ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.
‘ ಇಸ್ಲಾಮಿಸ್ಟ್‌ಗಳು ನಮ್ಮನ್ನು ಹಿಂದೂಗಳೆಂದು ಕರೆಯುತ್ತಾರೆ. ಅವರನ್ನು ನಮ್ಮನ್ನು ಭಾರತಕ್ಕೆ ಮರಳಿ ಎನ್ನುತ್ತಾರೆ. ಸಮಾನವಾಗಿ ನೋಡುತ್ತಿಲ್ಲ. ಭಾರತದ ಏಜೆಂಟ್ ಎನ್ನುತ್ತಾರೆ. ನಾವು ಭಾರತೀಯರಲ್ಲ. ಬಾಂಗ್ಲಾದ ಹಿಂದೂಗಳು. ಇಲ್ಲಿಯೇ ಹುಟ್ಟಿದ್ದೇವೆ, ಇಲ್ಲಿಯೇ ಸಾಯುತ್ತೇನೆ’ ಎಂದು ಢಾಕಾ ನಿವಾಸಿಯೊಬ್ಬರು ನೋವು ತೋಡಿಕೊಂಡಿದ್ದಾರೆ, ಇನ್ನು ಕೆಲವರು, ಹಿಂದೂಗಳು ಎನ್ನುವ ಕಾರಣಕ್ಕೆ ಸರ್ಕಾರಿ ಕೆಲಸದಿಂದ ತೆಗೆದು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
11:41 PM (IST) Dec 28
ನಿಂದಿಸಿದ ಕೆಎಫ್‌ಸಿ ಮ್ಯಾನೇಜರ್ ವಿರುದ್ದ ಕೇಸ್, ಜನಾಂಗೀಯ ನಿಂದನೆ ಜೊತೆಗೆ ದ್ವಷದ ಕಾರಣದಿಂದ ಕೆಲಸದಿಂದ ವಜಾ ಮಾಡಿದ ವಿರುದ್ಧಭಾರತೀಯ ಮೂಲದ ಉದ್ಯೋಗಿ ಕಾನೂನು ಹೋರಾಟ ನಡೆಸಿದ್ದಾರೆ. ಇದೀಗ 81 ಲಕ್ಷ ರೂಪಾಯಿ ಪರಿಹಾರ ಪಡೆದಿದ್ದಾನೆ.
10:49 PM (IST) Dec 28
ಪ್ರಧಾನಿ ಮೋದಿಯವರು 2025ನೇ ವರ್ಷವನ್ನು ಭಾರತದ ಹೆಮ್ಮೆಯ ವರ್ಷವೆಂದು ಬಣ್ಣಿಸಿದ್ದು, ಮಹಾಕುಂಭ, ರಾಮಮಂದಿರದಂತಹ ಘಟನೆಗಳನ್ನು ಸ್ಮರಿಸಿದರು. ದುಬೈನಲ್ಲಿರುವ 'ಕನ್ನಡ ಪಾಠಶಾಲೆ', ಮಣಿಪುರದ ಯುವಕನ ಸೌರಶಕ್ತಿ ಕ್ರಾಂತಿ, ಸ್ವಾತಂತ್ರ್ಯ ಹೋರಾಟಗಾರ್ತಿ ಪಾರ್ವತಿ ಗಿರಿ ಅವರ ಸೇವೆ ಸ್ಮರಿಸಿದರು.
10:38 PM (IST) Dec 28
ಪಿಎಫ್ to ಆದಾಯ ತೆರಿಗೆ, ಹೊಸ ವರ್ಷ (2026) ಹಲವು ನಿಯಮ ಬದಲಾಗುತ್ತಿದೆ. ಪಿಎಫ್, ಆದಾಯ ತೆರಿಗೆ, 8ನೇ ವೇತನ ಆಯೋಗ ಸೇರಿದಂತೆ ಹೊಸ ವರ್ಷದಲ್ಲಿ ಬದಲಾವಣೆಯಾಗುತ್ತಿರುವ ಹಣದ ನಿಯಮಗಳ ವಿವರ ಇಲ್ಲಿದೆ. ಇದು ನೇರವಾಗಿ ನಿಮ್ಮ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದೆ.
09:09 PM (IST) Dec 28
ಮದುವೆಯಲ್ಲಿ ಅದನ್ನೇ ಮರತೆ ನವ ಜೋಡಿ, 5 ನಿಮಿಷದಲ್ಲಿ ಸಮಸ್ಯೆಗೆ ಪರಿಹಾರ ಹುಡುಕಿದ್ದು ಹೇಗೆ?, ಮದುವೆ ಕಾರ್ಯಗಳು ನಡೆಯುತ್ತಿರುವ ನಡುವೆ ದಿಢೀರ್ ಇಬ್ಬರಿಗೂ ತಮ್ಮ ಮರೆವು ಗೊತ್ತಾಗಿದೆ. ಇತ್ತ ಮದುವೆ ಪ್ರಕ್ರಿಯೆ ಮುಂದುವರಿಸಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.
08:24 PM (IST) Dec 28
ದಿಗ್ವಿಜಯ್ ಹೊಗಳಿಕೆ ಬೆನ್ನಲ್ಲೇ RSSನ್ನು ಅಲ್ ಖೈದಾ ಉಗ್ರ ಸಂಘಟನೆ ಎಂದ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಆರ್‌ಎಸ್‌ಎಸ್ ಬಿಜೆಪಿ ಹೊಗಳಿಗೆ ಕಾಂಗ್ರೆಸ್‌ನಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ನ ಮತ್ತೊಬ್ಬ ನಾಯಕ ಭಾರಿ ವಿವಾದ ಕಿಡಿ ಹೊತ್ತಿದ್ದಾರೆ.
07:42 PM (IST) Dec 28
ಚಿನ್ನ, ಬ್ಯಾಂಕ್ ಠೇವಣಿ, ಷೇರು; ಯಾವುದು ಬೆಸ್ಟ್? 40 ವರ್ಷ ಹಿಂದೆ ₹100 ಹೂಡಿಕೆ ಮಾಡಿದ್ರೆ ಈಗ ಎಷ್ಟಾಗುತ್ತಿತ್ತು?, ಕಳೆದ 40 ವರ್ಷದ ಅಂಕಿ ಅಂಶದ ಪ್ರಕಾರ ನೀವು ಯಾವ ಮಾರ್ಗದಲ್ಲಿ ಹೂಡಿಕೆ ಮಾಡಿ ಉತ್ತಮ ರಿಟರ್ನ್ಸ್ ಪಡೆಯಬಹುದು?
07:21 PM (IST) Dec 28
ಅಸ್ಸಾಂನ ಮುಸ್ಲಿಂ ಮಹಿಳೆಯೊಬ್ಬಳು, ಹಿಮಂತ್ ಬಿಸ್ವಾ ಶರ್ಮಾ ಇರುವವರೆಗೂ ಅಸ್ಸಾಂ ತೊರೆದು ಬೆಂಗಳೂರಿಗೆ ಬರುವಂತೆ ವಲಸಿಗರಿಗೆ ಕರೆ ನೀಡುವ ವೀಡಿಯೋ ವೈರಲ್ ಆಗಿದೆ. ಈ ಘಟನೆಯು ಬೆಂಗಳೂರಿನ ಜನಸಂಖ್ಯೆಯ ಮಧ್ಯೆ ನುಸುಳಿ ಹೋಗಿರುವ ಅಕ್ರಮ ವಲಸಿಗರ ಬಗ್ಗೆ ಪ್ರಶ್ನೆ ಮಾಡುವಂತಾಗಿದೆ.
06:34 PM (IST) Dec 28
ಹವಾಮಾನ ಇಲಾಖೆ ಎಚ್ಚರಿಕೆ, ನಾಲ್ಕು ದಿನ ಭಾರಿ ಚಳಿ, ಈ ರಾಜ್ಯಗಳಲ್ಲಿ ಹಿಮಪಾತ ಸಾಧ್ಯತೆ, ದಟ್ಟವಾದ ಮಂಜು, ಅತೀಯಾದ ಚಳಿ ದೇಶದ ಬಹುತೇಕ ಕಡೆ ಆವರಿಸಲಿದೆ. ಈ ವರ್ಷದ ಅಂತಿಮ ಕೆಲ ದಿನಗಳು ಶೀತಮಯವಾಗಿರಲಿದೆ, ಜೊತೆ ಕೆಲ ರಾಜ್ಯಗಳಲ್ಲಿ ಹಿಮಪಾತವಾಗಲಿದೆ ಎಂದಿದ್ದಾರೆ.
06:15 PM (IST) Dec 28
ಜಾಗತಿಕ ಸಿನಿಮಾದಲ್ಲಿ ಅತ್ಯಂತ ಗುರುತಿಸಬಹುದಾದ ಮುಖಗಳಲ್ಲಿ ಒಬ್ಬರಾಗುವ ಮೊದಲು ವಿಶ್ವವಿಖ್ಯಾತ ನಟ ಜಾಕಿ ಚಾನ್ ಅವರ ಕುಟುಂಬದ ಹಿನ್ನೆಲೆ ಬಹುತೇಕರಿಗೆ ತಿಳಿದಿಲ್ಲ. ಅವರ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ...
06:14 PM (IST) Dec 28
ಸುಪ್ರೀಂಕೋರ್ಟ್ ಚಾಲನಾ ಪರವಾನಗಿ (DL) ಕುರಿತು ಮಹತ್ವದ ತೀರ್ಪು ನೀಡಿದ್ದು, ಪರವಾನಗಿ ಅವಧಿ ಮುಗಿದ ನಂತರ ನವೀಕರಣಕ್ಕೆ ಲಭ್ಯವಿದ್ದ 30 ದಿನಗಳ ಅವಕಾಶವನ್ನು ರದ್ದುಪಡಿಸಿದೆ. ಈ ಹೊಸ ನಿಯಮದ ಪ್ರಕಾರ, ಲೈಸೆನ್ಸ್ ಅವಧಿ ಮುಗಿದ ಮರುದಿನದಿಂದಲೇ ಅದು ಅಮಾನ್ಯವಾಗಲಿದೆ.
05:22 PM (IST) Dec 28
ಬೆಂಗಳೂರು: ಭಾರತದ ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ ಬರೋಬ್ಬರಿ 15 ವರ್ಷಗಳ ಬಳಿಕ ಮೊದಲ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಂಡು ಗಮನಾರ್ಹ ಪ್ರದರ್ಶನ ತೋರಿದ್ದಾರೆ. ಸದ್ಯ ಬಿಡುವು ಪಡೆದುಕೊಂಡಿರುವ ಕೊಹ್ಲಿ ಮತ್ತೆ ವಿಜಯ್ ಹಜಾರೆ ಟ್ರೋಫಿ ಟೂರ್ನಿ ಆಡೋದು ಯಾವಾಗ ನೋಡೋಣ ಬನ್ನಿ.
04:50 PM (IST) Dec 28
Mehbooba Mufti House Arrest: ಜಮ್ಮು ಮತ್ತು ಕಾಶ್ಮೀರದಲ್ಲಿನ ಹಾಲಿ ಮೀಸಲಾತಿ ನೀತಿ ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗುವುದಾಗಿ ಹೇಳಿದ ಬೆನ್ನಲ್ಲೇ ಮೆಹಬೂಬಾ ಮುಫ್ತಿ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ.
04:49 PM (IST) Dec 28
ಪತ್ನಿ ಆಗಾಗ ತವರು ಮನೆಗೆ ಹೋಗುತ್ತಾಳೆಂಬ ಕೋಪಕ್ಕೆ ಗಂಡನೊಬ್ಬ ಜೆಸಿಬಿ ಬಳಸಿ ಆಕೆಯ ತವರು ಮನೆಯನ್ನೇ ಧ್ವಂಸಗೊಳಿಸಲು ಯತ್ನಿಸಿದ ವಿಚಿತ್ರ ಘಟನೆ ಜಾರ್ಖಂಡ್‌ನ ಗಿರಿದ್‌ನಲ್ಲಿ ನಡೆದಿದೆ. ಗಂಡನ ಕಿರುಕುಳದಿಂದ ಬೇಸತ್ತು ತವರಿಗೆ ಬಂದಿದ್ದೆ ಎಂದು ಪತ್ನಿ ಆರೋಪಿಸಿದ್ದಾಳೆ.
04:36 PM (IST) Dec 28
ಸುಂದರ್ ಪಿಚೈ, ನಾಡೆಲ್ಲ ಹಿಂದಿಕ್ಕಿ ಭಾರತೀಯ ಮೂಲದ ಶ್ರೀಮಂತರ ಪಟ್ಟಿಯಲ್ಲಿ ಜಯಶ್ರಿ ಉಲ್ಲಾಳ್ ನಂ.1, ಹುರನ್ ಇಂಡಿಯಾ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಜಯಶ್ರಿ ಮೊದಲ ಸ್ಥಾನ ಪಡೆದಿದ್ದಾರೆ. ಯಾರಿದು ಜಯಶ್ರಿ ಉಲ್ಲಾಳ್
03:30 PM (IST) Dec 28
ಈ ಕೆಟ್ಟ ವ್ಯವಸ್ಥೆಯಲ್ಲಿ ಆಗಲ್ಲ, 4 ಕೋಟಿ ತೆರಿಗೆ ಕಟ್ಟುತ್ತಿರುವ ಬೆಂಗಳೂರು ಕಂಪನಿ ವಿದೇಶಕ್ಕೆ ಶಿಫ್ಟ್ ಆಗುತ್ತಿದೆ. ಹೊಸ ವರ್ಷಕ್ಕೆ ಕಂಪನಿ ಬೆಂಗಳೂರು ತೊರೆದು ವಿದೇಶದಲ್ಲಿ ಆರಂಭಗೊಳ್ಳುತ್ತಿದೆ. ಇದಕ್ಕ ಕಾರಣವನ್ನು ಕಂಪನಿ ಸಂಸ್ಥಾಪಕ ಬಹಿರಂಗಪಡಿಸಿದ್ದಾರೆ.
03:20 PM (IST) Dec 28
ಬೆಂಗಳೂರು: ಬರೋಬ್ಬರಿ 15 ವರ್ಷಗಳ ಬಳಿಕ ಮೊದಲ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಂಡ ವಿರಾಟ್ ಕೊಹ್ಲಿ ಅದ್ಬುತ ಪ್ರದರ್ಶನದ ಮೂಲಕ ಮಿಂಚಿದ್ದಾರೆ. ಬನ್ನಿ ನಾವಿಂದು ಟೂರ್ನಿಯಲ್ಲಿ ಕೊಹ್ಲಿ ಗಳಿಸಿದ ಒಟ್ಟು ಪ್ರೈಜ್ ಮನಿ ಎಷ್ಟು ಎನ್ನುವುದನ್ನು ನೋಡೋಣ.
02:46 PM (IST) Dec 28
ಹಿಮಾಚಲ ಪ್ರವಾಸಿ ತಾಣದಲ್ಲಿ ಪ್ಯಾರಾಗ್ಲೈಡಿಂಗ್ ಪತನ, ಓರ್ವ ಸಾವು, ಮತ್ತೊರ್ವನಿಗೆ ಗಾಯ, ಹೊಸ ವರ್ಷದ ಸಂಭ್ರಮದಲ್ಲಿ ಅಡ್ವೆಂಚರ್ ಪ್ರವಾಸದಲ್ಲಿ ಈ ಅವಘಡ ಸಂಭವಿಸಿದೆ. ಪ್ಯಾರಾಗ್ಲೈಡರ್ ಮೃತಪಟ್ಟಿದ್ದರೆ, ಪ್ರವಾಸಿ ಗಾಯಗೊಂಡಿದ್ದಾರೆ.
02:25 PM (IST) Dec 28
ಉತ್ತರಾಖಂಡ್‌ನಲ್ಲಿ BSF ಯೋಧರೋರ್ವರ ಪುತ್ರ ಎಂಬಿಎ ವಿದ್ಯಾರ್ಥಿಯನ್ನು ಚೈನೀಸ್ ನೇಪಾಳಿ ಎಂದೆಲ್ಲಾ ನಿಂದಿಸಿ ಗುಂಪೊಂದು ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದು, ಆ ವಿದ್ಯಾರ್ಥಿ ಸಾಯುವ ಮೊದಲು ತಾನು ಭಾರತೀಯ ಎಂದು ಹೇಳಿ ಪ್ರಾಣ ಬಿಟ್ಟಿದ್ದಾನೆ. ಆತನ ಸಾವು ಈಗ ಈಶಾನ್ಯ ಭಾರತೀಯರ ರಕ್ತ ಕುದಿಯುವಂತೆ ಮಾಡಿದೆ.
12:50 PM (IST) Dec 28
ಮದುವೆಯ ಆರತಕ್ಷತೆಯೊಂದರಲ್ಲಿ, ವರನ ಮಾಜಿ ಗೆಳತಿ ವೇದಿಕೆ ಮೇಲೆ ಬಂದು ವರನ ಕೈಗೆ ಮುತ್ತಿಡಲು ಯತ್ನಿಸಿದ್ದಾಳೆ. ಇದರಿಂದ ಕೋಪಗೊಂಡ ನವವಧು, ಆಕೆಯನ್ನು ವೇದಿಕೆಯಿಂದ ಕೆಳಗೆಳೆದು ಥಳಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
12:21 PM (IST) Dec 28
ಅಡಿಲೇಡ್: ಬಹುನಿರೀಕ್ಷಿತ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ದಿನಗಣನೆ ಶುರುವಾಗಿದೆ. ಹೀಗಿರುವಾಗಲೇ ಪಾಕಿಸ್ತಾನ ಕ್ರಿಕೆಟ್ ಪಾಳಯದಲ್ಲಿ ಹೊಸದೊಂದು ತಲೆನೋವು ಶುರುವಾಗಿದೆ. ಪಾಕ್ ತಂಡದ ಪ್ರೀಮಿಯರ್ ವೇಗಿಗೆ ಗಾಯದ ಭೀತಿ ಶುರುವಾಗಿದೆ.
12:10 PM (IST) Dec 28
ವೈದ್ಯ ಭಾವನ ಮೇಲೆ ಸುಳ್ಳು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ ಮಹಿಳೆಗೆ ನ್ಯಾಯಾಲಯವು ತಕ್ಕಶಿಕ್ಷೆ ನೀಡಿದೆ. ಆರೋಪಗಳು ಸುಳ್ಳೆಂದು ಸಾಬೀತಾದ ಹಿನ್ನೆಲೆಯಲ್ಲಿ, ಮಾನನಷ್ಟ ಮೊಕದ್ದಮೆಯಲ್ಲಿ ಆಕೆಗೆ ಮೂರು ತಿಂಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ.
11:17 AM (IST) Dec 28
ಮದುವೆಯಾದ ನಂತರ ಮಗು ಜನಿಸಿದ ನಂತರ ಬಹುತೇಕ ಹೆಣ್ಣು ಮಕ್ಕಳ ಜೀವನ ಬದಲಾಗುತ್ತದೆ. ಹಾಗೆಯೇ ಇಲ್ಲೊಬ್ಬರು ತಾಯಿ ತನಗೆ ವಿಶೇಷಚೇತನ ಮಗು ಜನಿಸಿದ ನಂತರ ಕುಟುಂಬದಲ್ಲಿ ಎದುರಿಸಿದ ಸವಾಲುಗಳನ್ನು ಹಂಚಿಕೊಂಡಿದ್ದು, ಅವರ ಕತೆ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರಿಗೆ ಸ್ಪೂರ್ತಿಯಾಗಿದೆ.
10:22 AM (IST) Dec 28
ಮುಂಬೈ: ಮುಂಬರುವ ಅಂಡರ್-19 ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಬಲಿಷ್ಠ ಭಾರತ ಯುವ ತಂಡವನ್ನು ಪ್ರಕಟಿಸಲಾಗಿದೆ. ಈ ಕುರಿತಾದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.
09:53 AM (IST) Dec 28
09:04 AM (IST) Dec 28
08:50 AM (IST) Dec 28