Published : Aug 24, 2026, 05:29 AM ISTUpdated : Aug 24, 2026, 11:01 PM IST

India Latest News Live: ಈಜಲು ಹೋಗಿದ್ದ ಬಾಲಕಿಯ ಬಲಿ ಪಡೆದ ಮಿದುಳು ತಿನ್ನುವ ಅಮೀಬಾ; ದಾರುಣ ಘಟನೆ

ಸಾರಾಂಶ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಹಿಳೆಯರ ಬೆಂಬಲಕ್ಕೆ ನಿಲ್ಲುವ ತಮ್ಮ ಮಾತುಗಳನ್ನು ಕೃತಿಯಲ್ಲಿ ತೋರಬೇಕಾದರೆ, ಮಹಿಳಾ ಮೀಸಲು ಮಸೂದೆಗೆ ಬೆಂಬಲ ನೀಡಬೇಕು ಹಾಗೂ ತಮ್ಮ ಪಕ್ಷದ ಕಚೇರಿಯಲ್ಲಿ ದುರ್ಗಾದೇವಿಯ ಸ್ತುತಿಯನ್ನು ಒಳಗೊಂಡಿರುವ ‘ವಂದೇ ಮಾತರಂ’ ಗೀತೆಯ ಪೂರ್ಣ ಆವೃತ್ತಿಯನ್ನು ಹಾಡಿಸಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಮೃತಿ ಇರಾನಿ ಆಗ್ರಹಿಸಿದ್ದಾರೆ.

ಪುಣೆಯಲ್ಲಿ ಶನಿವಾರ ವಿದ್ಯಾರ್ಥಿನಿಯರೊಂದಿಗೆ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಹುಲ್, ಪುರುಷಪ್ರಧಾನ ವ್ಯವಸ್ಥೆಯನ್ನು ಟೀಕಿಸಿ, ಮಹಿಳೆಯರ ಪರ ಧ್ವನಿ ಎತ್ತಿದ್ದರು. ಅವರ ಈ ಹೇಳಿಕೆಗೆ ತಿರುಗೇಟು ನೀಡಿದ ಇರಾನಿ, ‘ಮಹಿಳೆಯರ ಕುರಿತು ಆಡಿದ ಮಾತುಗಳನ್ನು ರಾಹುಲ್‌ ಕ್ರಿಯೆಯಲ್ಲಿ ತೋರಬೇಕಾದರೆ, ಮಹಿಳೆಯರಿಗೆ ತಕ್ಷಣವೇ ಮೀಸಲಾತಿ ಜಾರಿಗೊಳಿಸುವುದನ್ನು ಬೆಂಬಲಿಸಬೇಕು ಮತ್ತು ಕಾಂಗ್ರೆಸ್ ಕಚೇರಿಯಲ್ಲಿ ಪೂರ್ಣ ವಂದೇ ಮಾತರಂ ಗಾಯನವನ್ನು ಆಯೋಜಿಸಬೇಕು’ ಎಂದರು.

11:01 PM (IST) Aug 24

ಈಜಲು ಹೋಗಿದ್ದ ಬಾಲಕಿಯ ಬಲಿ ಪಡೆದ ಮಿದುಳು ತಿನ್ನುವ ಅಮೀಬಾ; ದಾರುಣ ಘಟನೆ

ಅಮೆರಿಕದ ಲೂಸಿಯಾನಾದಲ್ಲಿ ಕೆರೆಯಲ್ಲಿ ಈಜಲು ಹೋಗಿದ್ದ 8 ವರ್ಷದ ಬಾಲಕಿ 'ಮಿದುಳು ತಿನ್ನುವ ಅಮೀಬಾ' ಸೋಂಕಿಗೆ ಬಲಿಯಾಗಿದ್ದಾಳೆ. ಮೂಗಿನ ಮೂಲಕ ಮಿದುಳನ್ನು ಪ್ರವೇಶಿಸುವ ಈ ಭೀಕರ ಸೋಂಕಿನಿಂದಾಗಿ ಬಾಲಕಿ ತನ್ನ ಎಂಟನೇ ಹುಟ್ಟುಹಬ್ಬದ ಮರುದಿನವೇ ಕೊನೆಯುಸಿರೆಳೆದಿದ್ದಾಳೆ.

Read Full Story

10:31 PM (IST) Aug 24

ಹೀರೋ-ವಿಲನ್ ಕಥೆಯಲ್ಲ - ನಿಮ್ಮ ತಲೆಯನ್ನೇ ಕೆಡಿಸುವ 5 ಅದ್ಭುತ ಮಿಸ್ಟರಿ ಸಿನಿಮಾಗಳಿವು!

English Mystery Movies: ಹೆಚ್ಚು ಸದ್ದು ಮಾಡದ, ಆದರೆ ಒಮ್ಮೆ ನೋಡಲು ಶುರು ಮಾಡಿದರೆ ಮುಂದೆ ಏನಾಗುತ್ತೆ ಎಂಬ ಕುತೂಹಲ ಕೆರಳಿಸುವ 5 ಅದ್ಭುತ ಮಿಸ್ಟರಿ ಸಿನಿಮಾಗಳಿವು! ಪ್ರತಿಯೊಂದು ಸಿನಿಮಾ ಕೂಡ ವಿಭಿನ್ನ ಕಥೆಯೊಂದಿಗೆ ನಿಮ್ಮನ್ನು ಕೊನೆಯವರೆಗೂ ಹಿಡಿದಿಡುತ್ತದೆ.

Read Full Story

08:14 PM (IST) Aug 24

ಗಾಯದ ಬಳಿಕ ರಶ್ಮಿಕಾ ಮಂದಣ್ಣ ಗ್ರ್ಯಾಂಡ್‌ ರೀ-ಎಂಟ್ರಿ - ಪತಿ ಜೊತೆ ಕೈಹಿಡಿದು ಬಂದ ನಟಿ!

Actress Rashmika Mandanna ಹೈದರಾಬಾದ್‌ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವುದು, ಅವರು ನಿಧಾನವಾಗಿ ತಮ್ಮ ಸಾರ್ವಜನಿಕ ಚಟುವಟಿಕೆಗಳಿಗೆ ಮರಳುತ್ತಿದ್ದಾರೆ ಎಂಬುದನ್ನು ಸೂಚಿಸಿದೆ. ಇಂಜುರಿಯಿಂದ ಚೇತರಿಸಿಕೊಳ್ಳುತ್ತಿರುವ ನಟಿಯ ಈ ಮೊದಲ ಸಾರ್ವಜನಿಕ ಕಾಣಿಕೆ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

Read Full Story

08:11 PM (IST) Aug 24

ಒಂದಕ್ಕಿಂತ ಹೆಚ್ಚು SIM ನಿಮ್ಮ ಬಳಿ ಇದೆಯಾ? ಸಿಮ್ ಕಾರ್ಡ್‌ ನಿಯಮದಲ್ಲಿ ಭಾರೀ ಬದಲಾವಣೆ

ಇಂದಿನಿಂದ ಒಬ್ಬ ವ್ಯಕ್ತಿ ಗರಿಷ್ಠ 9 ಸಿಮ್ ಕಾರ್ಡ್‌ಗಳನ್ನು ಮಾತ್ರ ಹೊಂದಲು ಅವಕಾಶವಿದ್ದು, ನಕಲಿ ಸಿಮ್‌ಗಳ ಹಾವಳಿ ತಡೆಯಲು ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆ. ಗ್ರಾಹಕರು 'ಸಂಚಾರ್ ಸಾಥಿ' ಪೋರ್ಟಲ್ ಮೂಲಕ ತಮ್ಮ ಹೆಸರಿನಲ್ಲಿರುವ ಅನಗತ್ಯ ನಂಬರ್‌ಗಳನ್ನು ಪರಿಶೀಲಿಸಿ ರಿಪೋರ್ಟ್ ಮಾಡಬಹುದಾಗಿದೆ.

Read Full Story

07:32 PM (IST) Aug 24

ಪಿಜ್ಜಾ ಸೈಜ್​ 3 ಇಂಚು ಕಡಿಮೆ ಆದುದಕ್ಕೆ ಗ್ರಾಹಕನಿಗೆ ಸಿಕ್ತು 10 ಸಾವಿರ ರೂ ಪರಿಹಾರ! ಕೋರ್ಟ್​ ಆದೇಶ

ಆನ್‌ಲೈನ್ ಫುಡ್ ಡೆಲಿವರಿ ಆ್ಯಪ್ ಮೂಲಕ 10 ಇಂಚಿನ ಪಿಜ್ಜಾ ಆರ್ಡರ್ ಮಾಡಿದ ಗ್ರಾಹಕನಿಗೆ 7 ಇಂಚಿನ ಪಿಜ್ಜಾ ಸಿಕ್ಕಿದೆ. ಹಣ ಮರುಪಾವತಿಸದಿದ್ದಾಗ, ಗ್ರಾಹಕ ಆಯೋಗದ ಮೊರೆ ಹೋದರು. ಆಯೋಗವು ಡೆಲಿವರಿ ಪ್ಲಾಟ್‌ಫಾರ್ಮ್ ಮತ್ತು ರೆಸ್ಟೋರೆಂಟ್‌ಗೆ ₹10,520 ದಂಡ ವಿಧಿಸಿ ಗ್ರಾಹಕನಿಗೆ ಪರಿಹಾರ ನೀಡಲು ಆದೇಶಿಸಿದೆ.
Read Full Story

07:08 PM (IST) Aug 24

ಭಾರತದ ಯುವಕರಿಗಾಗಿ ಬಂದರು 150 ಪಾಕ್​ ಯುವತಿಯರು - ಲೈನ್​ನಲ್ಲಿ ಇದ್ದಾರೆ ಇನ್ನೂ 300 ಮಂದಿ- ಏನಿದು ವಿಷ್ಯ

ಭಾರತದ 'ಆಪರೇಷನ್ ಸಿಂದೂರ್' ಕಾರ್ಯಾಚರಣೆಯ ನಂತರ ಸ್ಥಗಿತಗೊಂಡಿದ್ದ ಭಾರತ-ಪಾಕಿಸ್ತಾನದ ವೈವಾಹಿಕ ಸಂಬಂಧಗಳು ಇದೀಗ ಮತ್ತೆ ಚಿಗುರೊಡೆದಿವೆ. ಶಾದಾನಿ ದರ್ಬಾರ್​ನ ಪ್ರಯತ್ನದಿಂದಾಗಿ, ಸುಮಾರು 150 ಪಾಕಿಸ್ತಾನಿ ಯುವತಿಯರು ವೀಸಾ ಪಡೆದು ಭಾರತದಲ್ಲಿರುವ ತಮ್ಮ ವರರನ್ನು ಸೇರಲು ಆಗಮಿಸಿದ್ದಾರೆ. ಇನ್ನೂ 300ಕ್ಕೂ ಹೆಚ್ಚು ಯುವತಿಯರು ಭಾರತಕ್ಕೆ ಬರಲು ಕಾಯುತ್ತಿದ್ದಾರೆ.
Read Full Story

06:33 PM (IST) Aug 24

Baleno Facelift - ಹೊಸ ಬಲೆನೋದಲ್ಲಿ ಏನೆಲ್ಲಾ ಬದಲಾವಣೆ? CNG ಜೊತೆ ಆಟೋಮ್ಯಾಟಿಕ್ ಗೇರ್ ಕೂಡ ಸಿಗುತ್ತಾ?

ಮಾರುತಿ ಸುಜುಕಿಯ ಜನಪ್ರಿಯ ಬಲೆನೋ, ಫೇಸ್‌ಲಿಫ್ಟ್ ಮಾಡೆಲ್‌ನೊಂದಿಗೆ ಸೆಪ್ಟೆಂಬರ್ 5 ರಂದು ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಈ ಹೊಸ ಆವೃತ್ತಿಯು ವೆಂಟಿಲೇಟೆಡ್ ಸೀಟ್‌ಗಳು, ದೊಡ್ಡ ಟಚ್‌ಸ್ಕ್ರೀನ್, ADAS ಸುರಕ್ಷತಾ ವ್ಯವಸ್ಥೆ ಮತ್ತು ಬಹುನಿರೀಕ್ಷಿತ CNG-AMT ಗೇರ್‌ಬಾಕ್ಸ್‌ನಂತಹ ಹಲವು ಹೊಸ ಫೀಚರ್‌ಗಳೊಂದಿಗೆ ಬರಲಿದೆ. ಕಾರಿನ ಮುಂಭಾಗದ ವಿನ್ಯಾಸದಲ್ಲೂ ಗಮನಾರ್ಹ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ.
Read Full Story

06:08 PM (IST) Aug 24

ಧ್ರುವ್ ಜುರೆಲ್ ಜಬರ್ದಸ್ತ್ ಸೆಂಚುರಿ, ಭಾರತ ಇನ್ನಿಂಗ್ಸ್ ಡಿಕ್ಲೇರ್..! ಬ್ಯಾಟಿಂಗ್ ಆರಂಭಿಸಿದ ಲಂಕಾಗೆ ಕನ್ನಡಿಗನಿಂದ ಬಿಗ್ ಶಾಕ್

ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಧ್ರುವ್ ಜುರೆಲ್ ಅವರ ಅಜೇಯ ಶತಕ (115*) ಮತ್ತು ರಿಷಭ್ ಪಂತ್ ಅವರ ಅರ್ಧಶತಕದ (63) ನೆರವಿನಿಂದ ಭಾರತ 503 ರನ್‌ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಬೃಹತ್ ಮೊತ್ತ ಬೆನ್ನತ್ತಿದ ಶ್ರೀಲಂಕಾ, ದಿನದಾಟದಂತ್ಯಕ್ಕೆ 8 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
Read Full Story

06:00 PM (IST) Aug 24

‘ಟಾಕ್ಸಿಕ್‌’ನಲ್ಲಿ ನಯನತಾರಾ ನಟಿಸಲು ಗೀತು ಕಾರಣ - ‘ನೋ’ ಹೇಳಿದ್ದ ಲೇಡಿ ಸೂಪರ್‌ಸ್ಟಾರ್‌ ಕೊನೆಗೆ ಒಪ್ಪಿದ್ದೇಕೆ?

‘ಟಾಕ್ಸಿಕ್‌: ಎ ಫೇರಿ ಟೇಲ್‌ ಫಾರ್‌ ಗ್ರೋನ್‌-ಅಪ್ಸ್‌’ ಚಿತ್ರದಲ್ಲಿ ಗಂಗಾ ಎಂಬ ಗ್ಯಾಂಗ್‌ಸ್ಟರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಲೇಡಿ ಸೂಪರ್‌ಸ್ಟಾರ್‌ ನಯನತಾರಾ, ಆರಂಭದಲ್ಲಿ ಈ ಸಿನಿಮಾದ ಭಾಗವಾಗಲು ಅಷ್ಟೊಂದು ಉತ್ಸುಕರಾಗಿರಲಿಲ್ಲವಂತೆ.

Read Full Story

05:51 PM (IST) Aug 24

ಉಬರ್‌ಗೆ 9,226 ಕೋಟಿ ರೂಪಾಯಿ ದಂಡ; ಕಾರಣವೇನು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ಯುರೋಪ್‌ನಲ್ಲಿ ಕ್ಯಾಬ್ ಕಂಪನಿ ಉಬರ್‌ಗೆ 9,226 ಕೋಟಿ ರೂ. ದಂಡ ವಿಧಿಸಲಾಗಿದೆ. ಚಾಲಕರ ಖಾತೆಗಳನ್ನು ಯಾವುದೇ ಮಾನವ ಪರಿಶೀಲನೆ ಇಲ್ಲದೆ ಸ್ವಯಂಚಾಲಿತವಾಗಿ ಅಮಾನತುಗೊಳಿಸಿದ್ದಕ್ಕಾಗಿ ನೆದರ್‌ಲ್ಯಾಂಡ್ಸ್ ಡೇಟಾ ಪ್ರೊಟೆಕ್ಷನ್ ವಾಚ್‌ಡಾಗ್ ಈ ಕ್ರಮ ಕೈಗೊಂಡಿದೆ. ಇದು ಚಾಲಕರ ಹಕ್ಕುಗಳ ಗಂಭೀರ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ.
Read Full Story

05:43 PM (IST) Aug 24

ಶುಕ್ರ ಸಂಚಾರದಿಂದ 5 ರಾಶಿಯವರಿಗೆ ರಾಜಯೋಗ? ಹಣ, ಆಸ್ತಿ, ಉದ್ಯೋಗದಲ್ಲಿ ಭರ್ಜರಿ ಲಾಭ

ಜ್ಯೋತಿಷ್ಯದ ಪ್ರಕಾರ, ಶುಕ್ರ ಗ್ರಹವು ಆಗಾಗ ತನ್ನ ರಾಶಿ ಹಾಗೂ ನಕ್ಷತ್ರವನ್ನು ಬದಲಾಯಿಸುತ್ತಲೇ ಇರುತ್ತದೆ. ಸದ್ಯ ಕನ್ಯಾ ರಾಶಿಯಲ್ಲಿರುವ ಶುಕ್ರನು, ಸೆಪ್ಟೆಂಬರ್ 3ರಂದು ತುಲಾ ರಾಶಿಗೆ ಪ್ರವೇಶಿಸಲಿದ್ದಾನೆ. ಈ ಬದಲಾವಣೆಯು 5 ರಾಶಿಯವರಿಗೆ ಅದೃಷ್ಟವನ್ನು ತರಲಿದೆ.

Read Full Story

05:20 PM (IST) Aug 24

'ರಾಮಾಯಣ' ಬಳಿಕ ರಣ್‌ಬೀರ್ ಮುಂದಿನ ಸಿನಿಮಾ ಪತ್ನಿ ಆಲಿಯಾ ಜೊತೆ.. ಅದ್ರಲ್ಲಿ ಎಕ್ಸ್‌ ಗರ್ಲ್‌ಫ್ರೆಂಡ್ ಕೂಡ ಇರ್ತಾರೆ!

ರಣಬೀರ್ ಕಪೂರ್ ಮುಂಬರುವ ಸಿನಿಮಾ ಕೇವಲ ಸಿನಿಮಾ ಮಾತ್ರವಲ್ಲ, ಅದು ಭಾರತೀಯ ಚಿತ್ರರಂಗದ ಅತಿದೊಡ್ಡ ಮ್ಯಾಜಿಕ್ ಆಗಲು ಸಜ್ಜಾಗುತ್ತಿದೆ. ರಣ್‌ಬೀರ್ ಕಪೂರ್, ಆಲಿಯಾ ಭಟ್ ಮತ್ತು ದೀಪಿಕಾ ಪಡುಕೋಣೆ ಅವರನ್ನು ಒಂದೇ ತೆರೆಯ ಮೇಲೆ ನೋಡಲು ಕಾದು ಕುಳಿತಿದ್ದ ಫ್ಯಾನ್ಸ್‌ಗೆ ಈ ಸುದ್ದಿ ನಿಜಕ್ಕೂ "ಬ್ಲಾಕ್ ಬಸ್ಟರ್ ಅಪ್‌ಡೇಟ್" ಆಗಿದೆ!

Read Full Story

05:00 PM (IST) Aug 24

ನಾಲ್ವರು ನಿರ್ದೇಶಕರು ರಿಜೆಕ್ಟ್ ಮಾಡಿದ ಹಾಡು! ಈಗ 7.8 ಕೋಟಿ ವೀಕ್ಷಣೆ ಪಡೆದು ಸೂಪರ್ ಹಿಟ್..!

ಸಂಗೀತ ನಿರ್ದೇಶಕ ವಿಜಯ್ ಬುಲ್ಗಾನಿನ್ ಅವರ 'ಕೊಯಿಲ' ಹಾಡು ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸುತ್ತಿದೆ. ನಾಲ್ವರು ನಿರ್ದೇಶಕರು ಬೇಡವೆಂದಿದ್ದ ಈ ಹಾಡು, ಇದೀಗ 7.8 ಕೋಟಿ ವೀಕ್ಷಣೆ ಪಡೆದು ಸಖತ್ ಸದ್ದು ಮಾಡುತ್ತಿದೆ. ಈ ಹಾಡಿನ ಇಂಟ್ರೆಸ್ಟಿಂಗ್‌ ಡೀಟೈಲ್ಸ್ ಇಲ್ಲಿದೆ.

Read Full Story

04:54 PM (IST) Aug 24

ಕರ್ನಾಟಕಕ್ಕೂ LPG ಪೈಪ್‌ಲೈನ್ ಯೋಜನೆಗೆ ಕೇಂದ್ರದ ಅಸ್ತು - ಇಂಧನದ ಬೆಲೆಯಲ್ಲಿ ಕಡಿತ? ಏನಿದರ ಪ್ರಯೋಜನ

ಕೇಂದ್ರ ಪೆಟ್ರೋಲಿಯಂ ನಿಯಂತ್ರಣ ಮಂಡಳಿಯು ಕರ್ನಾಟಕದ ಹುಬ್ಬಳ್ಳಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಹೊಸ ಎಲ್‌ಪಿಜಿ ಪೈಪ್‌ಲೈನ್ ಯೋಜನೆಗೆ ಅನುಮೋದನೆ ನೀಡಿದೆ. ಈ ಯೋಜನೆಯು ರಸ್ತೆ ಸಾರಿಗೆ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲಿದ್ದು, ಸಾರಿಗೆ ವೆಚ್ಚ ತಗ್ಗುವುದರಿಂದ ಭವಿಷ್ಯದಲ್ಲಿ ಎಲ್‌ಪಿಜಿ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ.
Read Full Story

04:45 PM (IST) Aug 24

ಯಶ್‌ ಭೇಟಿಯಾಗಿ ಫುಲ್‌ ಖುಷಿಯಾದ ಅನುಪಮ್‌ ಖೇರ್‌ - ‘ಟಾಕ್ಸಿಕ್‌’ ಹೀರೋ ಬಗ್ಗೆ ಎಷ್ಟೊಳ್ಳೆ ಮಾತು ಹೇಳಿದ್ರು ನೋಡಿ!

Anupam Kher praises Yash: ರಾಕಿಂಗ್‌ ಸ್ಟಾರ್‌ ಯಶ್‌ ಸದ್ಯ ‘ಟಾಕ್ಸಿಕ್‌’ ಸಿನಿಮಾದ ಬಿಡುಗಡೆ ಸಂಭ್ರಮದಲ್ಲಿದ್ದಾರೆ. ಈ ನಡುವೆಯೇ ಬಾಲಿವುಡ್‌ನ ಹಿರಿಯ ನಟ ಅನುಪಮ್‌ ಖೇರ್‌ ಅವರನ್ನು ಯಶ್‌ ಭೇಟಿಯಾಗಿದ್ದಾರೆ.

Read Full Story

04:35 PM (IST) Aug 24

ಲಕ್ಷಗಟ್ಟಲೆ ಜನರ ಮುಂದೆ ಕನ್ನಡ ನಟ 'ಯಶ್ ಸಿನಿಮಾ ಮಾಡೋದು ಫಿಕ್ಸ್‌' ಎಂದು ಘೋಷಿಸಿದ ತೆಲುಗು ನಿರ್ಮಾಪಕ ದಿಲ್‌ ರಾಜು!

'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಕೇವಲ ಸಿನಿಮಾ ಮಾತ್ರವಲ್ಲ, ಅದು ಬಾಕ್ಸ್ ಆಫೀಸ್‌ನಲ್ಲಿ ಸೃಷ್ಟಿಯಾಗಲಿರುವ ದೊಡ್ಡ ಸುನಾಮಿ ಎಂಬ ಮುನ್ಸೂಚನೆ ಸಿಕ್ಕಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಈ ಸಾಹಸಕ್ಕೆ ದಿಲ್ ರಾಜು ಅವರಂತಹ ದಿಗ್ಗಜರು ಸಾಥ್ ನೀಡಿರುವುದು ಸಿನಿಮಾದ ಹೈಪ್ ಅನ್ನು ಆಕಾಶಕ್ಕೆ ಮುಟ್ಟಿಸಿದೆ.

Read Full Story

04:33 PM (IST) Aug 24

ಮೂರು LPG ಸಿಲಿಂಡರ್ ಉಚಿತ, ಇನ್ಮುಂದೆ ಎಕ್ಸ್‌ಪ್ರೆಸ್‌ ಬಸ್‌ಗಳಲ್ಲೂ ಉಚಿತ ಪ್ರಯಾಣ -ಸಿಎಂ ಮಹತ್ವದ ಘೋಷಣೆ

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ತಮ್ಮ ರಾಜ್ಯದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ. ವಿಧಾನಸಭೆಯಲ್ಲಿ ನಿಂತು ಘೋಷಣೆ ಮಾಡುತ್ತಿದ್ದಂತೆಯೇ ಭಾರೀ ಚರ್ಚೆಗೆ ಕಾರಣವಾಗಿದೆ.. ಈ ಕುರಿತ ಸ್ಟೋರಿ ಇಲ್ಲಿದೆ..

Read Full Story

04:17 PM (IST) Aug 24

ಮೈದಾನದಲ್ಲೇ ಕಿತ್ತಾಟ; ಹರ್ಷಾ ಬೋಗ್ಲೆಗೆ ಗೊತ್ತಿಲ್ದೇ ಏನೇನೋ ಮಾತಾಡ್ಬೇಡಿ ಎಂದ ಯಶಸ್ವಿ ಜೈಸ್ವಾಲ್..!

ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ ವೇಗಿ ಅಸಿತ ಫೆರ್ನಾಂಡೊ ಜೊತೆಗಿನ ಜಟಾಪಟಿ ಬಗ್ಗೆ ಯಶಸ್ವಿ ಜೈಸ್ವಾಲ್ ಸ್ಪಷ್ಟನೆ ನೀಡಿದ್ದಾರೆ. ಪ್ರಚೋದನೆಗೆ ತಕ್ಕ ಉತ್ತರ ನೀಡುವುದು 'ಹೊಸ ಭಾರತ'ದ ನೀತಿ ಎಂದು ಹೇಳಿಕೊಂಡಿರುವ ಅವರು, ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಘಟನೆಗಾಗಿ ಐಸಿಸಿ ಇಬ್ಬರೂ ಆಟಗಾರರಿಗೆ ದಂಡ ವಿಧಿಸಿದೆ.
Read Full Story

02:16 PM (IST) Aug 24

WTC ಇತಿಹಾಸದಲ್ಲೇ ಹೊಸ ಮೈಲಿಗಲ್ಲು ನೆಟ್ಟ ರವೀಂದ್ರ ಜಡೇಜಾ..! ಸಿರಾಜ್‌ಗೆ ಎರಡನೇ, ಕೊಹ್ಲಿಗೆ ಮೂರನೇ ಸ್ಥಾನ..!

ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದ ರವೀಂದ್ರ ಜಡೇಜಾ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 50 ಪಂದ್ಯಗಳನ್ನು ಆಡಿದ ಏಷ್ಯಾದ ಮೊದಲ ಆಟಗಾರ ಎಂಬ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಈ ಮೂಲಕ ಅವರು ವಿರಾಟ್ ಕೊಹ್ಲಿಯಂತಹ ಆಟಗಾರರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. ಇದೇ ವೇಳೆ, ಕೊಲಂಬೊ ಟೆಸ್ಟ್‌ನಲ್ಲಿ ಭಾರತ ತಂಡವು ದೇವದತ್ ಪಡಿಕ್ಕಲ್ ಶತಕದ ನೆರವಿನಿಂದ ಬೃಹತ್ ಮೊತ್ತ ಕಲೆಹಾಕಿದೆ.
Read Full Story

01:03 PM (IST) Aug 24

ಕೇವಲ 20 ನಿಮಿಷದ ಕೂಲಿ ಕೆಲಸಕ್ಕೆ 12,000 ರೂ ಬಿಲ್! ಯುಕೆಯಲ್ಲಿ ಭಾರತೀಯ ಮಹಿಳೆಗೆ ಕಾದಿತ್ತು ದೊಡ್ಡ ಶಾಕ್!

ಯುಕೆಯಲ್ಲಿ ನೆಲೆಸಿರುವ ಭಾರತೀಯ ಮಹಿಳೆಯೊಬ್ಬರು ತಮ್ಮ ಮನೆಯ ಮೇಲ್ಛಾವಣಿಯ ಚರಂಡಿ ಸ್ವಚ್ಛಗೊಳಿಸಲು 20 ನಿಮಿಷಕ್ಕೆ ಸುಮಾರು 12,000 ರೂಪಾಯಿ ಪಾವತಿಸಿದ್ದಾರೆ. ಈ ಘಟನೆಯು ಭಾರತ ಮತ್ತು ವಿದೇಶಗಳಲ್ಲಿನ ಸೇವಾ ವೆಚ್ಚಗಳ ನಡುವಿನ ಅಗಾಧ ವ್ಯತ್ಯಾಸದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

12:52 PM (IST) Aug 24

'ಗೋವನ್ನು ರಾಷ್ಟ್ರೀಯ ತಾಯಿನ್ನಾಗಿ ಘೋಷಿಸಿ', ಭಕ್ತನಿಂದ ತಿರುಮಲ ಬೆಟ್ಟದ 3,550 ಮೆಟ್ಟಿಲುಗಳ ಮೇಲೆ ಉರುಳು ಸೇವೆ

ಆಂಧ್ರಪ್ರದೇಶದ ಭಕ್ತರೊಬ್ಬರು ಗೋ ಸಂರಕ್ಷಣೆಯ ಜಾಗೃತಿ ಮೂಡಿಸಲು ತಿರುಮಲದ ಅಲಿಪಿರಿ ಮಾರ್ಗದಲ್ಲಿ ಉರುಳು ಸೇವೆ ಮಾಡುತ್ತಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆಗಳನ್ನು ಕಠಿಣಗೊಳಿಸಬೇಕು ಮತ್ತು ಗೋವನ್ನು ರಾಷ್ಟ್ರ ಮಾತೆ ಎಂದು ಘೋಷಿಸಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಇದು ಅವರ 13ನೇ ಬಾರಿಯ ವಿಶಿಷ್ಟ ಯಾತ್ರೆಯಾಗಿದೆ.

Read Full Story

12:31 PM (IST) Aug 24

ಪ್ರಖ್ಯಾತ ನಟಿ ಭೀಕರ ಹ* - ಕಾರಿನಲ್ಲಿ ಸಿಕ್ಕ ಬ್ಲಿಚಿಂಗ್ ಪೌಡರ್ ವಾಸನೆಯಿಂದ ಬಯಲಾಯ್ತು ಘೋರ ರಹಸ್ಯ!

ಬಾಂಗ್ಲಾದೇಶಿ ನಟಿ ರಾಯ್ಮಾ ಇಸ್ಲಾಂ ಶಿಮು ಅವರ ಭೀಕರ ಕೊಲೆ ಪ್ರಕರಣವು ಪ್ಲಾಸ್ಟಿಕ್ ಚೀಲದಲ್ಲಿ ಅವರ ಛಿದ್ರಗೊಂಡ ದೇಹ ಪತ್ತೆಯಾಗುವುದರೊಂದಿಗೆ ಬೆಳಕಿಗೆ ಬಂದಿತು. ಪತಿಯ ಕಾರಿನಲ್ಲಿದ್ದ ಬ್ಲೀಚಿಂಗ್ ಪೌಡರ್ ವಾಸನೆಯು ಕೊಲೆಯ ರಹಸ್ಯವನ್ನು ಬಯಲು ಮಾಡಿತು.

Read Full Story

12:13 PM (IST) Aug 24

RCB ಗೇಮ್‌ ಚೇಂಜರ್ ಡಿಕೆ, ಚೆನ್ನೈ ಸೂಪರ್ ಕಿಂಗ್ಸ್ ಹೆಡ್ ಕೋಚ್ ಆಗ್ತಾರಾ? ಹೊಸ ಬಾಂಬ್ ಸಿಡಿಸಿದ ಮ್ಯಾಥ್ಯೂ ಹೇಡನ್..!

ರಜತ್ ಪಾಟೀದಾರ್ ನಾಯಕತ್ವದ ಆರ್‌ಸಿಬಿ ತಂಡವು ಸತತ ಎರಡು ಬಾರಿ ಐಪಿಎಲ್ ಟ್ರೋಫಿ ಗೆಲ್ಲಲು ದಿನೇಶ್ ಕಾರ್ತಿಕ್ ಅವರ ತಂತ್ರಗಾರಿಕೆ ಪ್ರಮುಖ ಪಾತ್ರ ವಹಿಸಿದೆ. ಇದೀಗ, ಸ್ಟಿಫನ್ ಫ್ಲೆಮಿಂಗ್ ರಾಜೀನಾಮೆಯಿಂದ ತೆರವಾಗಿರುವ ಸಿಎಸ್‌ಕೆ ಹೆಡ್‌ ಕೋಚ್ ಹುದ್ದೆಗೆ ದಿನೇಶ್ ಕಾರ್ತಿಕ್ ಸೂಕ್ತ ಅಭ್ಯರ್ಥಿ ಎಂದು ಮ್ಯಾಥ್ಯೂ ಹೇಡನ್ ಅಭಿಪ್ರಾಯಪಟ್ಟಿದ್ದಾರೆ.
Read Full Story

11:00 AM (IST) Aug 24

ಬಾರಾಮತಿ ರಸ್ತೆಬದಿಯಲ್ಲಿ ಶವವಾದ ಶಾಸಕ ರೋಹಿತ್ ಪವಾರ್ PA ಮಗಳು! ಅನುಮಾನಾಸ್ಪದ ಸಾವು ಮಹಾರಾಷ್ಟ್ರದಲ್ಲಿ ಸಂಚಲನ

ಬಾರಾಮತಿಯಲ್ಲಿ ಎನ್‌ಸಿಪಿ ಶಾಸಕ ರೋಹಿತ್ ಪವಾರ್ ಅವರ ಆಪ್ತ ಸಹಾಯಕನ 14 ವರ್ಷದ ಪುತ್ರಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾಳೆ. ತಾಯಿಯೊಂದಿಗೆ ಜಗಳವಾಡಿ ಮನೆಯಿಂದ ಹೊರಟಿದ್ದ ಬಾಲಕಿಯ ಶವ ಮರುದಿನ ಬೆಳಿಗ್ಗೆ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಾಸಕ ರೋಹಿತ್ ಪವಾರ್ ಘಟನೆಯ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.
Read Full Story

10:30 AM (IST) Aug 24

ನೈಟ್‌ಕ್ಲಬ್‌ನಲ್ಲಿ ಗಲಾಟೆ - ಬೆನ್ ಸ್ಟೋಕ್ಸ್‌ ಜತೆಗಿದ್ದ ಇಂಗ್ಲೆಂಡ್ ಸ್ಟಾರ್ ಕ್ರಿಕೆಟಿಗ ಅರೆಸ್ಟ್! ಕೈಗೆ ಬೇಡಿಹಾಕಿ ಕರೆದೊಯ್ದ ಪೊಲೀಸರು

ಡರ್ಬಿಯ ನೈಟ್‌ಕ್ಲಬ್‌ನಲ್ಲಿ ನಡೆದ ಗಲಾಟೆಯೊಂದರಲ್ಲಿ ಇಂಗ್ಲೆಂಡ್ ವೇಗದ ಬೌಲರ್ ಬ್ರೈಡನ್ ಕಾರ್ಸ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ನಡೆದಾಗ ಬೆನ್ ಸ್ಟೋಕ್ಸ್ ಮತ್ತು ಮ್ಯಾಥ್ಯೂ ಪಾಟ್ಸ್ ಕೂಡ ಅವರ ಜೊತೆಗಿದ್ದರು. ನಂತರ ಕಾರ್ಸ್ ಅವರನ್ನು ಬಿಡುಗಡೆ ಮಾಡಲಾಗಿದ್ದರೂ, ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಈ ಘಟನೆಯ ಬಗ್ಗೆ ತನಿಖೆ ಆರಂಭಿಸಿದೆ.
Read Full Story

09:14 AM (IST) Aug 24

ಗುರುವಾಯೂರು ದೇಗುಲದಲ್ಲಿ ಐತಿಹಾಸಿಕ ದಾಖಲೆ - ಚಿಂಗಂ ಮಾಸದ ಶುಭ ಮುಹೂರ್ತ, 7 ಗಂಟೆಯಲ್ಲಿ  ಹಸೆಮಣೆ ಏರಿದ 416 ಜೋಡಿ!

ಕೇರಳದ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ, ಮಲಯಾಳಂ ಪಂಚಾಂಗದ ಚಿಂಗಂ ಮಾಸದ ಶುಭ ದಿನದಂದು ಒಂದೇ ದಿನದಲ್ಲಿ 400ಕ್ಕೂ ಹೆಚ್ಚು ವಿವಾಹಗಳು ನಡೆದು ಹೊಸ ದಾಖಲೆ ಸೃಷ್ಟಿಯಾಗಿದೆ. ಈ ಐತಿಹಾಸಿಕ ಸಂದರ್ಭಕ್ಕಾಗಿ ದೇವಸ್ಥಾನದಲ್ಲಿ 6 ಮಂಟಪಗಳನ್ನು ನಿರ್ಮಿಸಿ, ಕಟ್ಟುನಿಟ್ಟಿನ ಜನಸಂದಣಿ ನಿರ್ವಹಣೆಯೊಂದಿಗೆ ವಿವಾಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.
Read Full Story

06:57 AM (IST) Aug 24

ಸಿಂದೂರದಲ್ಲಿ ಧ್ವಂಸವಾಗಿದ್ದ ಜೈಷ್‌ ಹೆಡ್‌ ಆಫೀಸ್‌ ಪುನರ್‌ ನಿರ್ಮಾಣ; ಪಾಕ್‌ ಸರ್ಕಾರದಿಂದ ₹25 ಕೋಟಿ

'ಆಪರೇಷನ್ ಸಿಂದೂರ' ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯಿಂದ ಧ್ವಂಸಗೊಂಡಿದ್ದ ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಪ್ರಧಾನ ಕಚೇರಿಯನ್ನು ಪುನರ್‌ ನಿರ್ಮಿಸಲಾಗಿದೆ. ಈ ಮರುನಿರ್ಮಾಣಕ್ಕೆ ಪಾಕಿಸ್ತಾನ ಸರ್ಕಾರವೇ 25 ಕೋಟಿ ಪಾಕಿಸ್ತಾನಿ ರುಪಾಯಿ ನೀಡಿರುವುದು ವರದಿಯಾಗಿದೆ.
Read Full Story

06:46 AM (IST) Aug 24

Jobs - ಕೇಂದ್ರ ಸರ್ಕಾರದ 8 ಲಕ್ಷ ಹುದ್ದೆ ಖಾಲಿ! ಆರ್‌ಟಿಐ ಅರ್ಜಿಯಲ್ಲಿ ಮಾಹಿತಿ ಬಯಲು

ಆರ್‌ಟಿಐ ಅರ್ಜಿಯೊಂದರ ಪ್ರಕಾರ, ಕೇಂದ್ರ ಸರ್ಕಾರದಲ್ಲಿ 8.23 ಲಕ್ಷಕ್ಕೂ ಹೆಚ್ಚು ಮಂಜೂರಾದ ಹುದ್ದೆಗಳು ಖಾಲಿ ಇವೆ. ಸುಮಾರು 39 ಲಕ್ಷ ಹುದ್ದೆಗಳಲ್ಲಿ ಕೇವಲ 31 ಲಕ್ಷ ಮಾತ್ರ ಭರ್ತಿಯಾಗಿದ್ದು, ರೈಲ್ವೆ, ರಕ್ಷಣೆ ಮತ್ತು ಗೃಹ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಪ್ರತಿ 5 ಹುದ್ದೆಗಳಲ್ಲಿ 1 ಹುದ್ದೆ ಖಾಲಿ ಉಳಿದಿದೆ.
Read Full Story

06:11 AM (IST) Aug 24

ಜಿರಳೆ ಹೋರಾಟದಿಂದ ದನದ ಕೊಟ್ಟಿಗೆಯಲ್ಲಿ ನಡೆಯುತ್ತಿದ್ದ ಶಾಲೆಗೆ ಸಿಕ್ತು ಹೊಸ ಕಟ್ಟಡ

ರಾಜಸ್ಥಾನದ ರಾಂಪುರದಲ್ಲಿ ದನದ ಕೊಟ್ಟಿಗೆಯಲ್ಲಿ ನಡೆಯುತ್ತಿದ್ದ ಸರ್ಕಾರಿ ಶಾಲೆಯ ದುಸ್ಥಿತಿಯ ವಿರುದ್ಧ 'ಜಿರಳೆ ಜನತಾ ಪಕ್ಷ' ನಡೆಸಿದ ಹೋರಾಟ ಯಶಸ್ವಿಯಾಗಿದೆ. 'ಸ್ಕೂಲ್‌ ಠೀಕ್‌ ಕರೋ' ಅಭಿಯಾನದ ಭಾಗವಾಗಿ ನಡೆದ ಈ ಪ್ರತಿಭಟನೆಯ ನಂತರ, ರಾಜಸ್ಥಾನ ಸರ್ಕಾರವು ಅದೇ ಗ್ರಾಮದಲ್ಲಿ ಹೊಸ ಶಾಲಾ ಕಟ್ಟಡ ನಿರ್ಮಿಸುವುದಾಗಿ ಘೋಷಿಸಿದೆ.
Read Full Story

06:05 AM (IST) Aug 24

2027ರ ಸಪ್ತರಾಜ್ಯ ಸಮರ - ಬಿಜೆಪಿಯಿಂದ ರಹಸ್ಯ ರಣತಂತ್ರ! ಜೆನ್‌ ಝೀ ಸೆಳೆಯುವತ್ತ ಚರ್ಚೆ

2027ರಲ್ಲಿ ನಡೆಯಲಿರುವ ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ 7 ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ಬಿಜೆಪಿ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ನಿತಿನ್‌ ನವೀನ್‌ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವುದು ಮತ್ತು ಯುವಕರನ್ನು ಸೆಳೆಯುವ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗಿದೆ.
Read Full Story

05:51 AM (IST) Aug 24

ಮಂಗಳೂರಿಗಾಗಿ ಕೇರಳಂ ಸಂಸದರಿಂದ ಓಣಂ ಉಪವಾಸ; ಮೈಸೂರು ವಿಭಾಗಕ್ಕೆ ಸೇರ್ಪಡೆಗೆ ಆಕ್ರೋಶ

ಮಂಗಳೂರು ರೈಲು ನಿಲ್ದಾಣವನ್ನು ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿರುವುದನ್ನು ವಿರೋಧಿಸಿ ಕೇರಳದ ಸಂಸದರು ಪ್ರತಿಭಟನೆಗೆ ಮುಂದಾಗಿದ್ದಾರೆ. ಓಣಂ ಹಬ್ಬದ ದಿನದಂದೇ ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ, ಈ ನಿರ್ಧಾರದಿಂದ ಪಾಲಕ್ಕಾಡ್ ವಿಭಾಗಕ್ಕೆ ಆಗುವ ಆದಾಯ ನಷ್ಟದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಲು ನಿರ್ಧರಿಸಿದ್ದಾರೆ.
Read Full Story

05:38 AM (IST) Aug 24

ದಿಲ್ಲಿಯಲ್ಲಿ ಕಾರು ಅಪಘಾತ - ಶಾಸಕ ಅಭಯ್ ಪಾಟೀಲ್ ಪ್ರಾಣಾಪಾಯದಿಂದ ಪಾರು

ಶನಿವಾರ ರಾತ್ರಿ 9:30ರ ವೇಳೆಗೆ ಲಕ್ಷ್ಮೀ ನಗರದಿಂದ ಐಟಿಒ ಕಡೆಗೆ ಪ್ರಯಾಣಿಸುತ್ತಿದ್ದ ಕಾರೊಂದು ಎದುರಿನಿಂದ ಬರುತ್ತಿದ್ದ ಇನ್ನೋವಾ ಕಾರಿಗೆ ಡಿಕ್ಕಿಯಾಗಿದೆ. ಇನ್ನೋವಾ ಕಾರಿನಲ್ಲಿ ಕರ್ನಾಟಕದ ಶಾಸಕ ಅಭಯ್ ಪಾಟೀಲ್ ಹಾಗೂ ಕಿರಾರಿ ಶಾಸಕ ಅನಿಲ್ ಝಾ ಪ್ರಯಾಣಿಸುತ್ತಿದ್ದರು.

Read Full Story

More Trending News