Published : Apr 21, 2026, 06:45 AM ISTUpdated : Apr 21, 2026, 10:44 PM IST

India Latest News Live: ಕೇರಳದಲ್ಲಿ ಪಟಾಕಿ ಕಾರ್ಖಾನೆ ಭೀಕರ ಸ್ಫೋಟ - 13 ಸಾವು, ಛಿದ್ರಗೊಂಡ ದೇಹಗಳು; ತ್ರಿಶೂರ್‌ನಲ್ಲಿ ಭೀಕರ ದುರಂತ

ಸಾರಾಂಶ

ಕೋಲ್ಕತಾ: ಭಾನುವಾರ ಚುನಾವಣಾ ಪ್ರಚಾರಕ್ಕೆಂದು ಪಶ್ಚಿಮ ಬಂಗಾಳಕ್ಕೆ ತೆರಳಿದ್ದ ವೇಳೆಪ್ರಧಾನಿ ನರೇಂದ್ರ ಮೋದಿ, ಕುರುಕಲು ತಿಂಡಿ ಅಂಗಡಿಯಲ್ಲಿ ಮಂಡಕ್ಕಿ ಖರೀದಿಸಿದ್ದು ಬರೀ ನಾಟಕ ಎಂದು ಸಿಎಂ ಮಮತಾ ಬ್ಯಾನರ್ಜಿ ವ್ಯಂಗ್ಯವಾಡಿದ್ದಾರೆ.

ನರೇಂದ್ರ ಮೋದಿ ಹೆಸರು ಹೇಳದೆಯೇ ಚುನಾವಣಾ ರ್‍ಯಾಲಿಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ದೀದಿ, ‘ಇದೆಲ್ಲ ನಾಟಕ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಇದ್ದಕ್ಕಿದ್ದಂತೆ ಅಂಗಡಿಗೆ ತೆರಳಿದಾಗ ಅಂಗಡಿಗೆ ಕ್ಯಾಮರಾಮ್ಯಾನ್‌ ಏಕೆ ಬಂದಿದ್ದ? ಇಡೀ ಘಟನೆಯನ್ನು ಹೇಗೆ ಚಿತ್ರೀಕರಿಸಲಾಯಿತು? ಅವರು ಜೇಬಿನಲ್ಲಿ 10 ರು. ನೋಟು ಇರಿಸಿಕೊಂಡಿದ್ದು ಕಂಡು ಬಂದಿದೆ. ಇದು ನಂಬುವುದಕ್ಕೆ ಸಾಧ್ಯವೇ?’ ಎಂದು ಪ್ರಶ್ನಿಸಿದರು.

ಮೋದಿ ಚುನಾವಣಾ ಪ್ರಚಾರಕ್ಕೆಂದು ಭಾನುವಾರ ಬಂಗಾಳಕ್ಕೆ ಬಂದಾಗ ಝಾರ್‌ಗ್ರಾಮದ ಕುರುಕಲು ತಿಂಡಿ ಅಂಗಡಿಗೆ ‘ಅನಿರೀಕ್ಷಿತವಾಗಿ’ ತೆರಳಿ, ಮಂಡಕ್ಕಿ ಖರಿದಿಸಿ ತಿಂದಿದ್ದಲ್ಲದೆ ಮಕ್ಕಳಿಗೆ ಹಂಚಿದ್ದರು.

10:44 PM (IST) Apr 21

ಕೇರಳದಲ್ಲಿ ಪಟಾಕಿ ಕಾರ್ಖಾನೆ ಭೀಕರ ಸ್ಫೋಟ - 13 ಸಾವು, ಛಿದ್ರಗೊಂಡ ದೇಹಗಳು; ತ್ರಿಶೂರ್‌ನಲ್ಲಿ ಭೀಕರ ದುರಂತ

ಕೇರಳದ ತ್ರಿಶೂರ್ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 13 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇರಳ ಸರ್ಕಾರ ಪರಿಹಾರ ಘೋಷಿಸಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ವಿಶೇಷ ವ್ಯವಸ್ಥೆ ಮಾಡಿದೆ.
Read Full Story

10:27 PM (IST) Apr 21

ಪಿತೃತ್ವದ ಬಗ್ಗೆ ಹೆಚ್ಚುತ್ತಿದೆ ಅನುಮಾನ, ಅಹಮದಾಬಾದ್‌ನಲ್ಲಿ ವರ್ಷಕ್ಕೆ 550 ಡಿಎನ್‌ಎ ಪರೀಕ್ಷೆ!

ಗುಜರಾತ್‌ನ ಅಹಮದಾಬಾದ್‌ನಲ್ಲಿ, ಮಗುವಿನ ನಿಜವಾದ ತಂದೆಯನ್ನು ಪತ್ತೆಹಚ್ಚಲು ನಡೆಸುವ ಡಿಎನ್‌ಎ ಪರೀಕ್ಷೆಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಹಿಂದೆ ವೈದ್ಯಕೀಯ ಕಾರಣಗಳಿಗೆ ಸೀಮಿತವಾಗಿದ್ದ ಈ ಪರೀಕ್ಷೆಗಳು, ಈಗ ದಂಪತಿಗಳ ನಡುವಿನ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ಬಳಕೆಯಾಗುತ್ತಿವೆ. 

Read Full Story

08:42 PM (IST) Apr 21

ಬದುಕು ಕಿತ್ತುಕೊಂಡ ವಿಧಿ, ನೆಲೆ ಕಿತ್ತುಕೊಳ್ಳುತ್ತಿದೆ ಬ್ರಿಟನ್ - ಏರ್ ಇಂಡಿಯಾ ಅಪಘಾತದಲ್ಲಿ ಕುಟುಂಬ ಕಳೆದುಕೊಂಡ ವ್ಯಕ್ತಿಯ ಗಡೀಪಾರಿಗೆ ಆದೇಶ!

ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಪತ್ನಿ ಮತ್ತು ಮಗಳನ್ನು ಕಳೆದುಕೊಂಡ ಮೊಹಮ್ಮದ್ ಶೇತ್ವಾಲಾ ಎಂಬ ಭಾರತೀಯನಿಗೆ ಬ್ರಿಟನ್ ಸರ್ಕಾರವು ದೇಶ ತೊರೆಯುವಂತೆ ಆದೇಶಿಸಿದೆ. ಮಾನವೀಯ ನೆಲೆಯಲ್ಲಿ ವಾಸ್ತವ್ಯ ವಿಸ್ತರಿಸಲು ಸಲ್ಲಿಸಿದ್ದ ಅವರ ಮನವಿಯನ್ನು ತಿರಸ್ಕರಿಸಿದೆ.

Read Full Story

08:37 PM (IST) Apr 21

ಈ ಇಂಡಸ್ಟ್ರಿ ಹಿಟ್ ಸಿನಿಮಾ ಮಾಡ್ಬೇಡಿ ಅಂದಿದ್ರು ಶ್ರೀಹರಿ ಪತ್ನಿ ಡಿಸ್ಕೋ ಶಾಂತಿ - ಆದ್ರೆ ಆಗಿದ್ದೇ ಬೇರೆ!

ನಟ ಶ್ರೀಹರಿಗೆ ವಿಶೇಷ ಸ್ಥಾನವಿದೆ. ಅವರು ಹೀರೋ, ವಿಲನ್ ಹಾಗೂ ಪೋಷಕ ನಟನಾಗಿ ಪ್ರೇಕ್ಷಕರನ್ನು ರಂಜಿಸಿದ್ದರು. ತೆರೆಮೇಲೆ ಸಿಕ್ಸ್ ಪ್ಯಾಕ್ ತೋರಿಸಿದ ಮೊದಲ ಹೀರೋ ಎಂಬ ಹೆಗ್ಗಳಿಕೆ ಶ್ರೀಹರಿಗಿದೆ. ಅವರು ಅನಾರೋಗ್ಯದಿಂದ ನಿಧನರಾದರು.

Read Full Story

08:15 PM (IST) Apr 21

ಭಾರತೀಯ ಸೇನೆಗೆ 'ಮೈನ್‌ಫೀಲ್ಡ್' ಭೇದಿಸುವ ಶಕ್ತಿ - 975 ಕೋಟಿ ರೂ. ವೆಚ್ಚದ 'ಟ್ರಾಲ್' ಸಿಸ್ಟಮ್ ಖರೀದಿಗೆ ಒಪ್ಪಂದ!

ಭಾರತೀಯ ಸೇನೆಯ T-72 ಮತ್ತು T-90 ಟ್ಯಾಂಕ್‌ಗಳಿಗಾಗಿ 975 ಕೋಟಿ ರೂಪಾಯಿ ಮೌಲ್ಯದ 'ಟ್ರಾಲ್' ವ್ಯವಸ್ಥೆಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಈ ತಂತ್ರಜ್ಞಾನವು ಯುದ್ಧಭೂಮಿಯಲ್ಲಿ ಮೈನ್‌ಗಳನ್ನು ತೆರವುಗೊಳಿಸಿ, ಸೈನಿಕರ ಸುರಕ್ಷಿತ ಸಂಚಾರಕ್ಕೆ ನೆರವಾಗಲಿದೆ. 

Read Full Story

08:13 PM (IST) Apr 21

ಬೆಲ್ಜಿಯಂ ಕಾರ್ ರೇಸ್‌ನಲ್ಲಿ ನಟ ಅಜಿತ್ ಧೂಳೆಬ್ಬಿಸಿದ ಕ್ಷಣ - ಭಾರತದ ಬಾವುಟ ಹಿಡಿದು ಸಂಭ್ರಮ!

ನಟ ಅಜಿತ್ ಸಿನಿಮಾ ಮಾತ್ರವಲ್ಲದೆ ಬೇರೆ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಅದರಲ್ಲೂ ಕಾರ್ ರೇಸಿಂಗ್‌ನಲ್ಲಿ ಅವರ ಆಸಕ್ತಿ ಮತ್ತು ಪ್ರತಿಭೆ ಅಭಿಮಾನಿಗಳನ್ನು ಹಾಗೂ ಕ್ರೀಡಾ ಜಗತ್ತನ್ನು ಬೆರಗುಗೊಳಿಸಿದೆ.

Read Full Story

07:10 PM (IST) Apr 21

ಪುರುಷರ ಕೋಣೆಯೊಳಗೆ ಹೋಗದೆ ಶೇ. 90 ಮಹಿಳೆಯರು ರಾಜಕಾರಣಕ್ಕೆ ಪ್ರವೇಶಿಸಲು ಸಾಧ್ಯವಿಲ್ಲ - ಸಂಸದ ಪಪ್ಪು ಯಾದವ್‌

ಪಕ್ಷೇತರ ಸಂಸದ ಪಪ್ಪು ಯಾದವ್ ಅವರು, ಮಹಿಳಾ ಮೀಸಲಾತಿ ಮಸೂದೆ ಸೋತ ನಂತರ ರಾಜಕೀಯದಲ್ಲಿ ಮಹಿಳೆಯರು 'ಲೈಂಗಿಕ ರಾಜಿ' ಮಾಡಿಕೊಳ್ಳಬೇಕಾಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ತೀವ್ರ ರಾಜಕೀಯ ಆಕ್ರೋಶ ವ್ಯಕ್ತವಾಗಿದ್ದು, ಬಿಹಾರ ಮಹಿಳಾ ಆಯೋಗವು ಅವರಿಗೆ ನೋಟಿಸ್ ಜಾರಿ ಮಾಡಿದೆ.
Read Full Story

07:07 PM (IST) Apr 21

ಉಜ್ಜಯಿನಿ ಮಹಾಕಾಳೇಶ್ವರನ ದರ್ಶನ ಪಡೆದ ನಟ ಅನುಪಮ್ ಖೇರ್ - 'ಬದುಕೇ ಸಾರ್ಥಕ' ಎಂದಿದ್ದೇಕೆ?

ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್, ಉಜ್ಜಯಿನಿಯ ಪ್ರಸಿದ್ಧ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ತಮ್ಮ ಆಧ್ಯಾತ್ಮಿಕ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಭೇಟಿಯನ್ನು 'ದೆೈವಿಕ' ಮತ್ತು 'ಮನಸ್ಸನ್ನು ಕಲಕುವ' ಅನುಭವ ಎಂದು ಅವರು ಬಣ್ಣಿಸಿದ್ದಾರೆ.

Read Full Story

06:35 PM (IST) Apr 21

ನೀತಾ ಅಂಬಾನಿಗೆ 'ಭಾಭಿ' ಎಂದ ಆಲಿಯಾ - ವೇದಿಕೆ ಮೇಲೆ ಕ್ಷಣಕಾಲ ಮೌನ, ತಕ್ಷಣವೇ ನಟಿ ಮಾಡಿದ್ದೇನು?

ಒಂದು ಅವಾರ್ಡ್ ಶೋನಲ್ಲಿ ಆಲಿಯಾ ಭಟ್, ನೀತಾ ಅಂಬಾನಿಯವರನ್ನು 'ಭಾಭಿ' ಎಂದು ಕರೆದ ವಿಡಿಯೋ ವೈರಲ್ ಆಗಿದೆ. ನೀತಾ ಅವರ ಪ್ರತಿಕ್ರಿಯೆಯಿಂದ ತಪ್ಪು ಅರಿತ ಆಲಿಯಾ, ತಕ್ಷಣವೇ 'ನೀತಾ ಮ್ಯಾಮ್' ಎಂದು ಸರಿಪಡಿಸಿಕೊಂಡರು.

Read Full Story

06:21 PM (IST) Apr 21

ಕೌಟುಂಬಿಕ ಕಲಹದ ನಂತರ ಇಬ್ಬರು ಮುದ್ದಾದ ಮಕ್ಕಳೊಂದಿಗೆ ಕೆರೆಗೆ ಹಾರಿದ 25ರ ಹರೆಯದ ತಾಯಿ

ಮಹಾರಾಷ್ಟ್ರದ ಲಾತೂರ್‌ನಲ್ಲಿ, ಕೌಟುಂಬಿಕ ಕಲಹದಿಂದ ಬೇಸತ್ತ 25 ವರ್ಷದ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ. ಈ ದುರಂತ ಘಟನೆಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಅವರ ಮೃತದೇಹಗಳು ಸೋಮವಾರ ಪತ್ತೆಯಾಗಿವೆ.

Read Full Story

06:10 PM (IST) Apr 21

ಶಾರುಖ್‌ಗೆ ಶಾರುಖ್‌ ಖಾನೇ ಸಾಟಿ - 'ಕಿಂಗ್' ಚಿತ್ರದ ಬ್ಯುಸಿನೆಸ್ ಮೊತ್ತ ಕೇಳಿ ಬೆಚ್ಚಿಬಿದ್ದ ಬಾಲಿವುಡ್!

2023ರಲ್ಲಿ ಭರ್ಜರಿ ಯಶಸ್ಸು ಕಂಡಿದ್ದ ಶಾರುಖ್ ಖಾನ್, 'ಪಠಾಣ್' ನಿರ್ದೇಶಕ ಸಿದ್ಧಾರ್ಥ್ ಆನಂದ್ ಜೊತೆ 'ಕಿಂಗ್' ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದಾರೆ. ಈ ಚಿತ್ರ ಬಿಡುಗಡೆಗೂ ಮುನ್ನವೇ ದೊಡ್ಡ ಮೊತ್ತದ ಬಿಸಿನೆಸ್ ಮಾಡಿದೆ.

Read Full Story

05:48 PM (IST) Apr 21

ಹಿಂದೂಗಳಿಗೆ ತಿಲಕ, ಪಾಕ್​ನಲ್ಲಿ ಉರಿ - ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಿಯೇ ತೀರುತ್ತೇವೆ - ಓಪನ್​ ಚಾಲೆಂಜ್ ಕೇಳಿ​

ಲೆನ್ಸ್‌ಕಾರ್ಟ್ ಕಂಪೆನಿಯು ಹಿಂದೂ ಧಾರ್ಮಿಕ ಚಿಹ್ನೆಗಳನ್ನು ನಿಷೇಧಿಸಿ, ಹಿಜಾಬ್‌ಗೆ ಅವಕಾಶ ನೀಡಿದ ಹೊಸ ಡ್ರೆಸ್‌ ಕೋಡ್ ವಿವಾದಕ್ಕೆ ಕಾರಣವಾಗಿದೆ. ಈ ಕ್ರಮವನ್ನು ವಿರೋಧಿಸಿದ ಬಿಜೆಪಿ ನಾಯಕಿ ನಾಜಿಯಾ ಖಾನ್‌ಗೆ ಪಾಕಿಸ್ತಾನದಿಂದ ಜೀವ ಬೆದರಿಕೆ ಬಂದಿದ್ದು, ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸುವ ಕುರಿತ ಚರ್ಚೆಗಳು ಮುನ್ನೆಲೆಗೆ ಬಂದಿವೆ.
Read Full Story

05:06 PM (IST) Apr 21

ಪ್ರಶಾಂತ್ ನೀಲ್-ಜೂ.ಎನ್‌ಟಿಆರ್ ಕಾಂಬಿನೇಷನ್‌ನ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ - ಫಸ್ಟ್ ಗ್ಲಿಂಪ್ಸ್ ಯಾವಾಗ?

ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಹಾಗೂ ಜೂ.ಎನ್‌ಟಿಆರ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರದ ರಿಲೀಸ್ ಡೇಟ್ ಘೋಷಣೆಯಾಗಿದೆ. ಮೇ 20ರಂದು ಫಸ್ಟ್ ಗ್ಲಿಂಪ್ಸ್ ಬಿಡುಗಡೆಯಾಗಲಿದೆ. ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

Read Full Story

04:52 PM (IST) Apr 21

ಪ್ರಧಾನಿ ವಿರುದ್ಧ ಕೀಳು ಮಟ್ಟದ ಹೇಳಿಕೆ, ಕೂಡಲೇ ಕ್ಷಮೆಯಾಚಿಸಿ ಎಂದು ಖರ್ಗೆಗೆ ಆಗ್ರಹಿಸಿದ ಬಿಎಸ್‌ ಯಡಿಯೂರಪ್ಪ

ಪ್ರಧಾನಿ ನರೇಂದ್ರ ಮೋದಿಯವರನ್ನು 'ಭಯೋತ್ಪಾದಕ' ಎಂದು ಕರೆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯು ರಾಷ್ಟ್ರಮಟ್ಟದಲ್ಲಿ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನು ಬಿಜೆಪಿ ನಾಯಕರು, ಅದರಲ್ಲೂ ವಿಶೇಷವಾಗಿ ಬಿ.ಎಸ್. ಯಡಿಯೂರಪ್ಪ ತೀವ್ರವಾಗಿ ಖಂಡಿಸಿದ್ದಾರೆ.

Read Full Story

04:44 PM (IST) Apr 21

ಸಂಭಾವನೇ ಬೇಡ, ಕಲೆಕ್ಷನ್‌ನಲ್ಲಿ ಶೇ.30 ಪಾಲು - 'ಪುಷ್ಪ'ದಿಂದ ಅಲ್ಲು ಅರ್ಜುನ್‌ಗೆ ಬಂದ ಹಣವೆಷ್ಟು ಗೊತ್ತಾ?

ಪುಷ್ಪ ಫ್ರಾಂಚೈಸಿ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ ಅಲ್ಲು ಅರ್ಜುನ್‌, ಈ ಚಿತ್ರಕ್ಕಾಗಿ ಅಡ್ವಾನ್ಸ್ ಸಂಭಾವನೆಯನ್ನೇ ಪಡೆದಿರಲಿಲ್ಲ. ಬದಲಿಗೆ, ಸಿನಿಮಾ ಗಳಿಸಿದ ಲಾಭದಲ್ಲಿ ಪಾಲು ಪಡೆಯುವ ಒಪ್ಪಂದ ಮಾಡಿಕೊಂಡಿದ್ದರು. ಇದರ ಅಸಲಿ ಲೆಕ್ಕಾಚಾರ ಇಲ್ಲಿದೆ.

Read Full Story

04:28 PM (IST) Apr 21

ವಿಜಯ್ ದೇವರಕೊಂಡಗೆ ನಾನಿ ಸಾಥ್ - ಪೌರಾಣಿಕ ಹಿನ್ನೆಲೆಯ ಸಿನಿಮಾಗೆ ಹಾಲಿವುಡ್ ತಂತ್ರಜ್ಞರ ದಂಡು!

'ಹಾಯ್ ನಾನ್ನ' ಚಿತ್ರದ ಮೂಲಕ ಗಮನ ಸೆಳೆದ ನಿರ್ದೇಶಕ ಶೌರ್ಯುವ್ ಜೊತೆ ವಿಜಯ್ ದೇವರಕೊಂಡ ಕೈಜೋಡಿಸಿದ್ದು, ಈ ಹೊಸ ಗ್ಲೋಬಲ್ ಪ್ರಾಜೆಕ್ಟ್‌ಗೆ ಹೈದರಾಬಾದ್‌ನಲ್ಲಿ ಚಾಲನೆ ಸಿಕ್ಕಿದೆ. ನಾನಿ ಮೊದಲ ಶಾಟ್‌ಗೆ ಕ್ಲ್ಯಾಪ್.

Read Full Story

04:06 PM (IST) Apr 21

ಮೋದಿ ಒಬ್ಬ 'ಭಯೋತ್ಪಾದಕ' - ತಮಿಳುನಾಡಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಸ್ಫೋಟಕ ಹೇಳಿಕೆ!

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ಮೋದಿಯವರನ್ನು 'ಭಯೋತ್ಪಾದಕ' ಎಂದು ಕರೆದು ವಿವಾದ ಸೃಷ್ಟಿಸಿದ್ದಾರೆ. ನಂತರ, ಅವರು ಎಲ್ಲರನ್ನೂ ಬೆದರಿಸುತ್ತಾರೆ ಎಂಬ ಅರ್ಥದಲ್ಲಿ ಹೇಳಿದ್ದಾಗಿ ಸ್ಪಷ್ಟನೆ ನೀಡಿದರು. 

Read Full Story

03:18 PM (IST) Apr 21

ರೈಡ್ ಮುಗಿದ ಮೇಲೆ ಗ್ರಾಹಕಿಗೆ ವಾಟ್ಸಾಪ್‌ನಲ್ಲಿ ಮೆಸೇಜ್ ಮಾಡಿದ Rapido ರೈಡರ್! ಸ್ಕ್ರೀನ್‌ಶಾಟ್ ವೈರಲ್!

ರಾಪಿಡೋ ರೈಡ್ ಮುಗಿದ ನಂತರ ಚಾಲಕನೊಬ್ಬ ಮಹಿಳಾ ಗ್ರಾಹಕಿಗೆ ವೈಯಕ್ತಿಕ ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸಿ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ. ಈ ಘಟನೆಯು ರೈಡ್-ಹೇಲಿಂಗ್ ಅಪ್ಲಿಕೇಶನ್‌ಗಳಲ್ಲಿ ಬಳಕೆದಾರರ ಡೇಟಾ ಗೌಪ್ಯತೆ ಮತ್ತು ಸುರಕ್ಷತೆಯ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ.

Read Full Story

02:46 PM (IST) Apr 21

ನಡುರಸ್ತೆಯಲ್ಲೇ ದಾಂಧಲೆ, ಕ್ರಿಕೆಟಿಗ-ಟಿಎಂಸಿ ಸಂಸದ ಯೂಸುಫ್‌ ಪಠಾಣ್‌ ಮಾವ, ಭಾವ ಅರೆಸ್ಟ್‌

ಮುಂಬೈನ ಬೈಕುಲ್ಲಾದಲ್ಲಿ ಟಿಎಂಸಿ ಸಂಸದ ಯೂಸುಫ್ ಪಠಾಣ್ ಅವರ ಸಂಬಂಧಿಕರು ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ. ಕಾರಿನಿಂದ ನೀರು ಸಿಡಿದ ಸಣ್ಣ ಕಾರಣಕ್ಕೆ ಆರಂಭವಾದ ಜಗಳವು, ದೊಣ್ಣೆ ಮತ್ತು ಬ್ಯಾಟ್‌ಗಳಿಂದ ನಡೆದ ಬರ್ಬರ ಹಲ್ಲೆಯಲ್ಲಿ ಅಂತ್ಯಗೊಂಡಿದೆ.

Read Full Story

01:53 PM (IST) Apr 21

ಎಕ್ಸ್​ ಗರ್ಲ್​ಫ್ರೆಂಡ್ ಫೋಟೋಗೆ ಲೈಕ್​ ಒತ್ತಿದ್ದೇ ಬಂತು ಆಪತ್ತು - ಹಾಲಿ ಸ್ನೇಹಿತೆ ಏನ್ ಮಾಡಿದ್ಲು ನೋಡಿ

ತನ್ನ ಮಾಜಿ ಪ್ರೇಯಸಿಯ ಇನ್‌ಸ್ಟಾಗ್ರಾಮ್ ಫೋಟೋಗೆ ಲೈಕ್ ಮಾಡಿದ್ದಕ್ಕೆ ಕೋಪಗೊಂಡ ಯುವತಿಯೊಬ್ಬಳು, ತನ್ನ ಹಾಲಿ ಪ್ರಿಯಕರನಿಗೆ ಸೇರಿದ ನಾಲ್ಕು ಲಕ್ಷ ರೂಪಾಯಿ ಮೌಲ್ಯದ ರಾಯಲ್ ಎನ್‌ಫೀಲ್ಡ್ ಬೈಕನ್ನು ಮಾರಾಟ ಮಾಡಿದ್ದಾಳೆ. ಈ ಘಟನೆಯಿಂದ ಆಘಾತಕ್ಕೊಳಗಾದ ಯುವಕ, ಪ್ರೇಯಸಿಯ ಭಯದಿಂದ ಪೊಲೀಸ್ ದೂರು ನೀಡಲೂ ಸಾಧ್ಯವಾಗದೆ ಅಸಹಾಯಕನಾಗಿದ್ದಾನೆ.
Read Full Story

01:19 PM (IST) Apr 21

Pranavah - ಸಂಸ್ಕೃತ ಭಾಷೆ ಭಾರತದ ಆತ್ಮ- ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್

ದೆಹಲಿಯಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಂಸ್ಕೃತ ಭಾರತಿಯ 'ಪ್ರಣವ್' ಅಂತರರಾಷ್ಟ್ರೀಯ ತರಬೇತಿ ಕೇಂದ್ರವನ್ನು ಉದ್ಘಾಟಿಸಿದರು. ಸಂಸ್ಕೃತವು ಭಾರತದ ಆತ್ಮವಾಗಿದ್ದು, ಸಂಭಾಷಣೆಯ ಮೂಲಕ ಅದನ್ನು ಸುಲಭವಾಗಿ ಕಲಿಯಬಹುದು ಎಂದು ಪ್ರತಿಪಾದಿಸಿದರು.

Read Full Story

01:15 PM (IST) Apr 21

SRHಗೆ ಕಾಡ್ತಿದೆ ಒಂದು ಸಮಸ್ಯೆ ? ಇತ್ತ DC ತಂಡದ ಇಬ್ಬರಲ್ಲಿ ಕಾಣಸ್ತಿಲ್ಲ ವಿನ್ನಿಂಗ್‌ ಪ್ರದರ್ಶನ

IPL 2026: ಸತತ ಎರಡು ಪಂದ್ಯಗಳನ್ನು ಗೆದ್ದು ಬೀಗುತ್ತಿರುವ ಸನ್‌ರೈಸರ್ಸ್ ಹೈದರಾಬಾದ್, ಇಂದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಮಂಗಳವಾರ ಸಂಜೆ ಹೈದರಾಬಾದ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಗುರಿ ಹೊಂದಿದೆ.

Read Full Story

01:11 PM (IST) Apr 21

ತಿರುಚಿ ಚರ್ಚ್‌ನಲ್ಲಿ ಮೊಣಕಾಲೂರಿ ನಡೆದು ಪ್ರಾರ್ಥನೆ ಮಾಡಿದ ನಟ ವಿಜಯ್ - ಟ್ರೋಲ್ ಆಗಿದ್ದೇಕೆ?

ನಟ ಹಾಗೂ ರಾಜಕಾರಣಿ ದಳಪತಿ ವಿಜಯ್ ತಿರುಚಿಯ ಚರ್ಚ್‌ನಲ್ಲಿ ಮೊಣಕಾಲೂರಿ ಪ್ರಾರ್ಥನೆ ಸಲ್ಲಿಸಿದ್ದು, ಈ ವೀಡಿಯೋ ವೈರಲ್ ಆಗಿದೆ. ಸಿನಿಮಾಗಳಲ್ಲಿ ಹಿಂದೂ ನಂಬಿಕೆಗಳನ್ನು ಅವಹೇಳನ ಮಾಡುವ ವಿಜಯ್, ತಮ್ಮ ಧರ್ಮವನ್ನು ಶ್ರದ್ಧೆಯಿಂದ ಪಾಲಿಸುವುದು ನೆಟ್ಟಿಗರ ಟೀಕೆಗೆ ಕಾರಣವಾಗಿದೆ. 

Read Full Story

12:09 PM (IST) Apr 21

ಕುಂಕುಮ, ಬಿಂದಿ ನಿರಾಕರಿಸ್ತಿರೋ Lenskart ಬೆವರಿಳಿಸಿದ 'ಸುಪ್ರೀಂ' ವಕೀಲೆ ನಾಜಿಯಾ ಖಾನ್​! Video Viral

ಲೆನ್ಸ್‌ಕಾರ್ಟ್ ಕಂಪನಿಯು  ಉದ್ಯೋಗಿಗಳಿಗೆ  ಡ್ರೆಸ್‌ ಕೋಡ್ ಜಾರಿಗೊಳಿಸಿದ್ದು,  ಹಿಂದೂಗಳ ಬಿಂದಿ, ಸಿಂಧೂರಕ್ಕೆ ನಿರ್ಬಂಧ ಹೇರಿ ಹಿಜಾಬ್‌ಗೆ ಅವಕಾಶ ನೀಡಿದೆ. ಸುಪ್ರೀಂಕೋರ್ಟ್ ವಕೀಲೆ, BJP Leader ನಾಜಿಯಾ ಖಾನ್  ಮಳಿಗೆಗೆ ಭೇಟಿ ನೀಡಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Read Full Story

11:50 AM (IST) Apr 21

West Bengal Polls - ಬಿಜೆಪಿ ರೋಡ್‌ಶೋ ವೇಳೆ ಬೀದಿ ದೀಪ ಆಫ್ ಮಾಡಿಸಿದ ಟಿಎಂಸಿ - ಮಮತಾ ವಿರುದ್ಧ ಬಿಜೆಪಿ ನಾಯಕಿ ರೇಖಾ ಗುಪ್ತ ಕಿಡಿ

ದೆಹಲಿ ಸಿಎಂ ರೇಖಾ ಗುಪ್ತಾ ಅವರು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಹಿಳಾ ಸುರಕ್ಷತೆ, ಭ್ರಷ್ಟಾಚಾರ, ಗೂಂಡಾಗಿರಿ ವಿಷಯಗಳನ್ನು ಮುಂದಿಟ್ಟುಕೊಂಡು, ಈ ಬಾರಿ ಬಂಗಾಳದ ಜನರು ಬಿಜೆಪಿಯನ್ನು ಆಯ್ಕೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Read Full Story

10:58 AM (IST) Apr 21

ಜರ್ಮನಿಯ ಗುರುದ್ವಾರದಲ್ಲಿ ಘರ್ಷಣೆ - ರಕ್ಷಿಸಲು ಬಳಸುವ ಕಿರ್ಪಾನ್ ಆಯುಧದಿಂದಲೇ ರಕ್ತ ಹರಿಸಿದರು - 11 ಜನರಿಗೆ ಗಾಯ

ಜರ್ಮನಿಯ ಡುಯಿಸ್‌ಬರ್ಗ್ ಪ್ರದೇಶದ ಗುರುದ್ವಾರವೊಂದರಲ್ಲಿ ನಿರ್ವಹಣೆ ಮತ್ತು ಹಣಕಾಸಿನ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿದೆ. ಈ ಗಲಾಟೆಯಲ್ಲಿ ಕಿರ್ಪಾನ್‌ಗಳನ್ನು ಬಳಸಿ ದಾಳಿ ನಡೆಸಲಾಗಿದ್ದು, ಕನಿಷ್ಠ 11 ಜನರು ಗಾಯಗೊಂಡಿದ್ದಾರೆ.

Read Full Story

10:57 AM (IST) Apr 21

ವಿಡಿಯೋ - ಕ್ರಿಕೆಟ್‌ ಫೈನಲ್‌ಗೆ ಆಹ್ವಾನಿಸದ್ದಕ್ಕೆ ಪಿಚ್ ಧ್ವಂಸಗೊಳಿಸಿದ ಪುರಸಭೆ ಅಧ್ಯಕ್ಷ!

ಮಹಾರಾಷ್ಟ್ರದ ಜಲಗಾಂವ್‌ ಜಿಲ್ಲೆಯಲ್ಲಿ ನಡೆದ 'ಎಂಎಲ್‌ಎ ಟ್ರೋಫಿ' ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯಕ್ಕೆ ತಮ್ಮನ್ನು ಆಹ್ವಾನಿಸದ ಕಾರಣ, ಕೋಪಗೊಂಡ ಪುರಸಭೆ ಅಧ್ಯಕ್ಷರೊಬ್ಬರು ಟ್ರ್ಯಾಕ್ಟರ್ ಬಳಸಿ ಪಿಚ್ ಅನ್ನೇ ಧ್ವಂಸಗೊಳಿಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ ವಿಡಯೋ ನೋಡಿ.

Read Full Story

10:15 AM (IST) Apr 21

ಎರಡು ಶೇಡ್‌ನಲ್ಲಿ ಕಂಡ ತಿಲಕ್‌ ಆಟ ಸೇರಿತು ದಾಖಲೆ; ಕೊನೆಗೂ ಬೂಮ್ರಾಗೆ ಬಿಡ್ತು ಗ್ರಹಣ

ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ತಿಲಕ್ ವರ್ಮಾ ಕೇವಲ 45 ಎಸೆತಗಳಲ್ಲಿ ಶತಕ ಸಿಡಿಸಿ, ಮುಂಬೈ ಇಂಡಿಯನ್ಸ್ ಪರ ಅತಿ ವೇಗದ ಶತಕದ ಸನತ್ ಜಯಸೂರ್ಯ ದಾಖಲೆಯನ್ನು ಸರಿಗಟ್ಟಿದರು. ಇದೇ ಪಂದ್ಯದಲ್ಲಿ, ಸತತ ವೈಫಲ್ಯದ ನಂತರ ಜಸ್ಪ್ರೀತ್ ಬುಮ್ರಾ ತಮ್ಮ ಮೊದಲ ಎಸೆತದಲ್ಲೇ ವಿಕೆಟ್ ಪಡೆದು ಯಶಸ್ಸು ಕಂಡರು.
Read Full Story

09:14 AM (IST) Apr 21

ಪಾಕಿಸ್ತಾನಕ್ಕೆ ಬೈ ಹೇಳಿ, ಭಾರತಕ್ಕೆ ಬಂದ ಶ್ರೀಲಂಕಾ ಆಟಗಾರನ ಮೇಲೆ ನಿಷೇಧ ಹಾಕಿದ ಪಿಸಿಬಿ

ಐಪಿಎಲ್‌ಗಾಗಿ ಪಾಕಿಸ್ತಾನ ಸೂಪರ್‌ ಲೀಗ್‌ ತೊರೆದ ಶ್ರೀಲಂಕಾದ ದಸುನ್‌ ಶಾನಕಗೆ ಪಿಸಿಬಿ 1 ವರ್ಷ ನಿಷೇಧ ಹೇರಿದೆ. ಮತ್ತೊಂದೆಡೆ, ಅಫ್ಘಾನಿಸ್ತಾನದ ಮಾಜಿ ವೇಗಿ ಶಪೂರ್‌ ಜದ್ರಾನ್‌ ಅಪರೂಪದ ಹಾಗೂ ಅಪಾಯಕಾರಿ ಕಾಯಿಲೆಯಿಂದ ಬಳಲುತ್ತಿದ್ದು, ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Read Full Story

08:08 AM (IST) Apr 21

ಇಂದು ಪ್ರಧಾನಿ ಮೋದಿ ಉದ್ಘಾಟಿಸಬೇಕಿದ್ದ ₹80000 ವೆಚ್ಚದ ಕೋಟಿ ತೈಲ ಘಟಕಕ್ಕೆ ನಿನ್ನೆ ಬೆಂಕಿ!

ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಬೇಕಿದ್ದ ರಾಜಸ್ಥಾನದ ಪಚ್ಪದ್ರಾದಲ್ಲಿನ ನೂತನ ತೈಲ ಶುದ್ಧೀಕರಣ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಈ ಘಟನೆಯಿಂದಾಗಿ ₹80000 ಕೋಟಿ ವೆಚ್ಚದ, ದೇಶದ ಮೊದಲ ಗ್ರೀನ್‌ಫೀಲ್ಡ್‌ ರಿಫೈನರಿಯ ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

Read Full Story

More Trending News