ನವದೆಹಲಿ: ಆಂತರಿಕ ಸಂಘರ್ಷದಿಂದ ನಲುಗಿರುವ ಈಶಾನ್ಯ ರಾಜ್ಯ ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಇದೇ ತಿಂಗಳ 2ನೇ ವಾರ ಭೇಟಿ ನೀಡುವ ಸಾಧ್ಯತೆ ಇದೆ. ಸೆ.12-14ರವರೆಗೆ ಮೋದಿ 3 ದಿನಗಳ ಕಾಲ ಅಸ್ಸಾಂ ಮತ್ತು ಮಿಜೋರಾಂ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಅವರು ಮಣಿಪುರಕ್ಕೂ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಇದು ನಿಜವಾದರೆ, 2023ರಲ್ಲಿ ರಾಜ್ಯದಲ್ಲಿ ಹಿಂಸಾಚಾರ ಆರಂಭವಾದ ಬಳಿಕ ಮೋದಿ ಅವರ ಮೊದಲ ಭೇಟಿ ಇದಾಗಲಿದೆ. ರಾಜ್ಯದಲ್ಲಿ ಭಾರೀ ಹಿಂಸಾಚಾರ ನಡೆದು 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರೂ ಮೋದಿ ಒಮ್ಮೆಯೂ ಅಲ್ಲಿಗೆ ಭೇಟಿ ನೀಡಿಲ್ಲ ಎಂದು ವಿಪಕ್ಷಗಳು ಆರೋಪಿಸಿದ್ದವು.

10:29 PM (IST) Sep 01
ಬಂಗಾರದ ಬೆಲೆ ಭವಿಷ್ಯ: ಸೆಪ್ಟೆಂಬರ್ 1 ರಂದು ಬಂಗಾರ-ಬೆಳ್ಳಿ ಬೆಲೆಯಲ್ಲಿ ದಾಖಲೆಯ ಏರಿಕೆಯಾಗಿದೆ. ದಸರಾ-ದೀಪಾವಳಿ ಹಬ್ಬಗಳಲ್ಲಿ ಬಂಗಾರ ಖರೀದಿಸಲು ಯೋಜಿಸುತ್ತಿರುವವವರು ಈಗಲೇ ಖರೀದಿ ಮಾಡಬೇಕಾ ಅಥವಾ ಕಾದು ನೋಡಬೇಕಾ? ಬಂಗಾರದ ಬೆಲೆ ಎಷ್ಟಕ್ಕೆ ತಲುಪಬಹುದು ಎಂದು ತಿಳಿಯಿರಿ.
09:33 PM (IST) Sep 01
2025ರ ಏಷ್ಯಾ ಕಪ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ. ಟಿಕೆಟ್ ಬೆಲೆ, ಬುಕಿಂಗ್ ಪ್ರಕ್ರಿಯೆ ಮತ್ತು ವೇಳಾಪಟ್ಟಿ ಇಲ್ಲಿದೆ.
08:03 PM (IST) Sep 01
ಡೊನಾಲ್ಡ್ ಟ್ರಂಪ್ ಭಾರತದೊಂದಿಗಿನ ವ್ಯಾಪಾರ ಸಂಬಂಧವನ್ನು 'ಏಕಪಕ್ಷೀಯ ವಿಪತ್ತು' ಎಂದು ಕರೆದಿದ್ದಾರೆ. ಭಾರತವು ಅಮೆರಿಕಕ್ಕೆ ಹೆಚ್ಚಿನ ಸರಕುಗಳನ್ನು ರಫ್ತು ಮಾಡುತ್ತದೆ ಆದರೆ ಅಮೆರಿಕದಿಂದ ಕಡಿಮೆ ಆಮದು ಮಾಡಿಕೊಳ್ಳುತ್ತದೆ ಮತ್ತು ಹೆಚ್ಚಿನ ಸುಂಕ ವಿಧಿಸುತ್ತದೆ ಎಂದು ಟ್ರಂಪ್ ಆರೋಪಿಸಿದ್ದಾರೆ.
07:56 PM (IST) Sep 01
ಏಕಕಾಲಕ್ಕೆ ಪಾಕಿಸ್ತಾನ ಮತ್ತು ಅಪ್ಘಾನಿಸ್ತಾನ ಪ್ರಕೃತಿ ವಿಕೋಪಕ್ಕೆ ನಲುಗಿ ಹೋಗಿವೆ. ಪಾಕ್ನಲ್ಲಿ ಪ್ರವಾಹ ಹಾಗೂ ಅಪ್ಘಾನ್ನಲ್ಲಿ ಭೀಕರ ಭೂಕಂಪ ಉಂಟಾಗಿದೆ. ಇದರ ಡಿಟೇಲ್ಸ್ ಇಲ್ಲಿದೆ...
07:02 PM (IST) Sep 01
ಇಲ್ಲೊಂದು ಕಡೆ ವ್ಯಕ್ತಿಯೊಬ್ಬ ಎಲ್ಲರಂತೆ ಯುವತಿಯೊಬ್ಬಳನ್ನು ಮದ್ವೆಯಾಗಿದ್ದ. ಮದುವೆಯ ನಂತರ ದಂಪತಿಗೆ ಮಗುವೂ ಆಗಿದೆ. ಇದಾದ ಒಂದು ವರ್ಷದ ನಂತರ ಈ ಖತರ್ನಾಕ್ ಕಿಲಾಡಿ ಮನೆಯಿಂದಲೇ ನಾಪತ್ತೆಯಾಗಿದ್ದ ಈಗ ಮತ್ತೊಬ್ಬ ಮಹಿಳೆ ಜೊತೆ ಇನ್ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಆತ ಕಾಣಿಸಿಕೊಂಡಿದ್ದಾನೆ.
06:52 PM (IST) Sep 01
₹2000 ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ ಪ್ರಕ್ರಿಯೆಯ ಪ್ರಗತಿಯನ್ನು RBI ಪ್ರಕಟಿಸಿದೆ. ಚಲಾವಣೆಯಲ್ಲಿದ್ದ ಶೇ.98.33 ರಷ್ಟು ನೋಟುಗಳು ಈಗಾಗಲೇ ಹಿಂತಿರುಗಿವೆ. ಈ ನೋಟುಗಳು ಇನ್ನೂ ಕಾನೂನುಬದ್ಧವಾಗಿದ್ದು, ವ್ಯವಹಾರಗಳಲ್ಲಿ ಬಳಸಬಹುದು.
06:50 PM (IST) Sep 01
ವಿವಿಧ ದೇಶಗಳ ವಿರೋಧ ಕಟ್ಟಿಕೊಂಡಿರೋ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಯಸ್ಸು ಇನ್ನು ಕೇವಲ 6-8 ತಿಂಗಳು ಎಂದಿದ್ದಾರೆ ವೈದ್ಯರೊಬ್ಬರು. ಶಾಕಿಂಗ್ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಏನಿದೆ ನೋಡಿ...
06:07 PM (IST) Sep 01
05:15 PM (IST) Sep 01
04:28 PM (IST) Sep 01
04:03 PM (IST) Sep 01
ಗಣೇಶನ ಪೂಜೆ ಮಾಡಿ ಎಂದ್ರೆ ಮದುವೆ ಮಾಡಿಸೋದಾ ಈ ಜನ? ಗಣೇಶನ ಕೈಯಲ್ಲಿ ಯುವತಿ ಇರುವುದನ್ನು ನೋಡಿ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ವಿಡಿಯೋ ವೈರಲ್ ಆಗಿದೆ.
03:19 PM (IST) Sep 01
4 ವರ್ಷದ ಹಾಗೂ 3 ವರ್ಷದ ಅಕ್ಕ ತಮ್ಮ ಮನೆಯಲ್ಲಿ ಹೊಟ್ಟೆನೋವು ಎಂದು ಅಳಲು ಶುರು ಮಾಡಿದಾಗ ಪೋಷಕರು ಜಂತು ಹುಳುವಿನ ಸಮಸ್ಯೆ ಎಂದು ಆರಂಭದಲ್ಲಿ ಸುಮ್ಮನಾಗಿದ್ದರು. ಆದರೆ ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನ್ ಮಾಡಿದ ಪೋಷಕರಿಗೆ ಶಾಕ್ ಆಗಿತ್ತು.
02:09 PM (IST) Sep 01
ಡೆಹ್ರಾಡೂನ್‌ನಲ್ಲಿ ಮನೆಯೊಂದರ ಗೋಡೆಯ ಮೇಲೆ ಹಾವೊಂದು ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಹಿಡಿಯಲು ಹೋದಾಗ ಹಾವು ಅವರ ಮೇಲೆಯೇ ತಿರುಗಿಬಿದ್ದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಭಯ ಹುಟ್ಟಿಸಿದೆ.
01:10 PM (IST) Sep 01
ಪ್ರಧಾನಿ ಈಶಾನ್ಯ ರಾಜ್ಯದ ಇಂಫಾಲ್ ಮತ್ತು ಚುರಚಂದಪುರ ಜಿಲ್ಲೆಗಳಿಗೆ ಭೇಟಿ ನೀಡುವ ಸಾಧ್ಯತೆ ಇದ್ದು, ಅಲ್ಲಿ ಜನಾಂಗೀಯ ಸಂಘರ್ಷದಿಂದಾಗಿ ಮನೆಗಳಿಂದ ಸ್ಥಳಾಂತರಗೊಂಡ ಜನರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
12:21 PM (IST) Sep 01
ಉತ್ತರ ಭಾರತದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಮನೆಗಳು ಕುಸಿದು, ಜನಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ, ಪಂಜಾಬ್‌ನಲ್ಲಿ ಕುಸಿದ ಮನೆಯಲ್ಲಿ ಫ್ಯಾನ್ ಮಾತ್ರ ದೃಢವಾಗಿ ನಿಂತ ದೃಶ್ಯ ವೈರಲ್ ಆಗಿದೆ.
11:36 AM (IST) Sep 01
ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾಲೇಜಿನ ಪ್ರೊಫೆಸರ್ ಪುಷ್ಪರಾಜ್ ಅವರು ಪ್ರಭುದೇವ್ ಅವರ ಮುಕ್ಕಾಲ ಮುಕಾಬಲ ಹಾಡಿಗೆ ನೃತ್ಯ ಮಾಡಿದ್ದು, ಅವರ ವೀಡಿಯೋ ಈಗ ಭಾರಿ ವೈರಲ್ ಆಗ್ತಿದೆ.
11:09 AM (IST) Sep 01
ಇಂದಿನಿಂದ Paytm UPI ಸ್ಥಗಿತ ಎನ್ನುವ ಸಂದೇಶ ನಿಮಗೂ ಬಂದಿರಬೇಕು ಅಲ್ವಾ? ಇದನ್ನು ನೋಡಿ ಶಾಕ್ ಆಗಿದ್ಯಾ? ಯಾರಿಗೆಲ್ಲಾ ಇದು ಅನ್ವಯ? ಡಿಟೇಲ್ಸ್ ಇಲ್ಲಿದೆ...
10:55 AM (IST) Sep 01
ಹೆರಿಗೆ ನೋವಿನಲ್ಲಿದ್ದ ಪತ್ನಿಯನ್ನು ನಗಿಸಲು ಪತಿಯೊಬ್ಬ ಮಾಡಿದ ವಿಶಿಷ್ಟ ಪ್ರಯತ್ನದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೃತ್ಯ ಮಾಡುವ ಮೂಲಕ ಪತ್ನಿಯನ್ನು ನಗಿಸಲು ಯತ್ನಿಸಿದ ಪತಿಯ ಪ್ರೀತಿಗೆ ಮೆಚ್ಚುಗೆ ವ್ಯಕ್ತವಾಗಿದೆ.
10:21 AM (IST) Sep 01
ಕೇರಳದ ಎರ್ನಾಕುಲಂನ ಕೆನರಾ ಬ್ಯಾಂಕ್‌ನಲ್ಲಿ ಗೋಮಾಂಸ ನಿಷೇಧ ಮಾಡಿ ಎಂದು ಮ್ಯಾನೇಜರ್ ಆದೇಶದ ವಿರುದ್ಧ ಉದ್ಯೋಗಿಗಳು ಗೋಮಾಂಸ ಉತ್ಸವ ಆಯೋಜಿಸಿದ ಘಟನೆ ನಡೆದಿದೆ..
10:16 AM (IST) Sep 01
Gold And Silver Price:ಇಂದು ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡುಬಂದಿದ್ದು, 1 ಕೆಜಿ ಬೆಳ್ಳಿ ಬೆಲೆ 1,26,000 ರೂ. ಆಗಿದೆ.
07:35 AM (IST) Sep 01
LPG cylinder price : ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದೆ. ಇಂಡಿಯನ್ ಆಯಿಲ್ ಮತ್ತು ಇತರ ಸರ್ಕಾರಿ ತೈಲ ಕಂಪನಿಗಳು ಪ್ರತಿ ತಿಂಗಳು ಬೆಲೆಗಳನ್ನು ಪರಿಷ್ಕರಿಸುತ್ತವೆ.