- Home
- Business
- LPG Price Sep 1, 2025: ತಿಂಗಳ ಮೊದಲ ದಿನವೇ ಸಂತಸದ ಸುದ್ದಿ; ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಗಣನೀಯ ಇಳಿಕೆ
LPG Price Sep 1, 2025: ತಿಂಗಳ ಮೊದಲ ದಿನವೇ ಸಂತಸದ ಸುದ್ದಿ; ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಗಣನೀಯ ಇಳಿಕೆ
LPG cylinder price : ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದೆ. ಇಂಡಿಯನ್ ಆಯಿಲ್ ಮತ್ತು ಇತರ ಸರ್ಕಾರಿ ತೈಲ ಕಂಪನಿಗಳು ಪ್ರತಿ ತಿಂಗಳು ಬೆಲೆಗಳನ್ನು ಪರಿಷ್ಕರಿಸುತ್ತವೆ.

ಇಂದು ತಿಂಗಳ ಮೊದಲ ದಿನವಾಗಿದ್ದು, ತೈಲ ಮಾರುಕಟ್ಟೆ ಕಂಪನಿಗಳು LPG ಸಿಲಿಂಡರ್‌ಗಳ ಹೊಸ ದರಗಳನ್ನು ಬಿಡುಗಡೆ ಮಾಡಿವೆ. ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 51.50 ರೂ.ಗಳಷ್ಟು ಕಡಿಮೆಯಾಗಿದೆ. ದೆಹಲಿಯಲ್ಲಿ 19 ಕೆಜಿ ಎಲ್ ಪಿಜಿ ಸಿಲಿಂಡರ್ ಈಗ 1580 ರೂ.ಗೆ ಲಭ್ಯವಿದೆ. ಬೆಲೆ ಇಳಿಕೆಯಿಂದಾಗಿ ಇಂದಿನಿಂದ 51 ರೂ.ಗಳಷ್ಟು ಕಡಿಮೆಯಾಗಲಿದೆ.
ವಾಣಿಜ್ಯ ಬಳಕೆಯ 19 ಕೆಜಿ LPG ಸಿಲಿಂಡರ್ ಬೆಲೆಯಲ್ಲಿ ಮಾತ್ರ ಕಡಿಮೆಯಾಗಿದೆ. ಗೃಹ ಬಳಕೆಯ 14 ಕೆಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಗೃಹ ಬಳಕೆ ಸಿಲಿಂಡರ್ ದರ ಸ್ಥಿರವಾಗಿದೆ. ಈ ಮೊದಲಿನಂತೆಯೇ ಗೃಹ ಬಳಕೆಯ 14 ಕೆಜಿ ಸಿಲಿಂಡರ್ ಗ್ರಾಹಕರಿಗೆ 853 ರೂ.ಗೆ ಸಿಗಲಿದೆ.
ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ 1684 ರೂ.ಗೆ ಸಿಗಲಿದೆ. ಆಗಸ್ಟ್‌ನಲ್ಲಿ 1734 ರೂಪಾಯಿ, ಜುಲೈನಲ್ಲಿ 1769 ರೂಪಾಯಿ, ಜೂನ್‌ನಲ್ಲಿ ಇದು 1826 ರೂಪಾಯಿ ಆಗಿತ್ತು. ಇಂದು 50 ರೂಪಾಯಿ ದರ ಇಳಿಕೆ ಪರಿಣಾಮ ಬೆಲೆ ಕಡಿಮೆಯಾಗಲಿದೆ.
ವಾಣಿಜ್ಯ ಸಿಲಿಂಡರ್ ಬೆಲೆ ಈಗ ಮುಂಬೈನಲ್ಲಿ 1531.50 ರೂಪಾಯಿ, ಚೆನ್ನೈನಲ್ಲಿ 1738 ರೂಪಾಯಿ ಮತ್ತು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 1,653 ರೂಪಾಯಿ ಆಗಲಿದೆ. ಬೆಂಗಳೂರಿನಲ್ಲಿ ಆಗಸ್ಟ್ ತಿಂಗಳಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1,704 ರೂಪಾಯಿ ಆಗಿದೆ. ಇಂದಿನಿಂದ 51 ರೂಪಾಯಿ ಕಡಿಮೆ ದರದಲ್ಲಿ ಸಿಲಿಂಡರ್‌ಗಳು ಸಿಗಲಿವೆ.
ಇಂದಿನ ಗೃಹಬಳಕೆಯ LPG ಸಿಲಿಂಡರ್ ಬೆಲೆ ಎಷ್ಟು?
ಇಂಡಿಯನ್ ಆಯಿಲ್ ಮಾಹಿತಿ ಪ್ರಕಾರ, ಕಳೆದ ಒಂದು ವರ್ಷದಲ್ಲಿ ದೇಶೀಯ LPG ಬೆಲೆ ಸ್ವಲ್ಪ ಏರಿಕೆಯಾಗಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಾಣದೇ ದರಗಳು ಸ್ಥಿರವಾಗಿವೆ.
ಗೃಹ ಬಳಕೆಯ 14.2 ಕೆಜಿ ಸಿಲಿಂಡರ್‌ನ ಬೆಲೆ ದೇಶದ ಪ್ರಮುಖ ನಗರಗಳಲ್ಲಿ ಈ ಕೆಳಗಿನಂತಿದೆ.
ದೆಹಲಿ: ₹ 853
ಬೆಂಗಳೂರು: ₹ 855.50
ಮುಂಬೈ: ₹ 852.50
ಲಕ್ನೋ: ₹ 890.50
ಕಳೆದ 12 ತಿಂಗಳ ಟ್ರೆಂಡ್
ಕಳೆದ ಕೆಲವು ತಿಂಗಳಿನಿಂದ ವಾಣಿಜ್ಯ ಬಳಕೆ ಸಿಲಿಂಡರ್ ದರದಲ್ಲಿ ಕುಸಿತವಾಗುತ್ತಿರೋದನ್ನು ಕಾಣಬಹುದಾಗಿದೆ. ಜುಲೈ ಮತ್ತು ಆಗಸ್ಟ್‌ನಲ್ಲಿ 33 ರೂ ಮತ್ತು 58 ರೂಪಾಯಿ ಇಳಿಕೆಯಾಗಿತ್ತು. ಇಂಡಿಯನ್ ಆಯಿಲ್ ಮತ್ತು ಇತರ ಸರ್ಕಾರಿ ತೈಲ ಕಂಪನಿಗಳು ಪ್ರತಿ ತಿಂಗಳು ಬೆಲೆಗಳನ್ನು ಪರಿಷ್ಕರಿಸುತ್ತವೆ. ಏಪ್ರಿಲ್ 2025 ರಲ್ಲಿ ಗೃಹಬಳಕೆ ಸಿಲಿಂಡರ್‌ನಲ್ಲಿ ₹ 50 ಹೆಚ್ಚಳವಾಗಿತ್ತು. ಕಳೆದ ವರ್ಷ (ಆಗಸ್ಟ್ 2024 ರಿಂದ ಜುಲೈ 2025 ರವರೆಗೆ), ಒಟ್ಟು ₹ 50 ಹೆಚ್ಚಳವಾಗಿತ್ತು.