ಶಿವನ ಪ್ರತಿಮೆಯ ಕೊರಳಿಗೆ ನಾಗರಹಾವು ಸುತ್ತಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಜನ ಭಕ್ತಿಪರವಶರಾಗಿದ್ದಾರೆ. ಹಾವುಗಳು ಶಿವನನ್ನು ಏಕೆ ಸುತ್ತಿಕೊಳ್ಳುತ್ತವೆ ಎಂಬುದರ ಬಗ್ಗೆ ಹಲವು ನಂಬಿಕೆಗಳಿವೆ.
ಕೆಲ ದಿನಗಳ ಹಿಂದಷ್ಟೇ ಬೆಕ್ಕೊಂದು ಗಣೇಶನ ತೊಳಲ್ಲಿ ಮಲಗಿ ಸುಖ ನಿದ್ದೆಗೆ ಜಾರಿದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದೇ ರೀತಿ ಈಗ ಹಾವೊಂದು ಶಿವನ ಪ್ರತಿಮೆಯ ಕೊರಳಿಗೆ ಸುತ್ತಿಕೊಂಡು ತಲೆಯ ಮೇಲೆ ಹೆಡೆ ಎತ್ತಿ ನಿಂತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ವಿಡಿಯೋ ನೋಡಿದ ಅನೇಕರು ಹರ್ ಹರ್ ಮಹಾದೇವ್ ಜೈ ಬೋಲೇ ನಾಥ್ ಎಂದು ಕಾಮೆಂಟ್ ಮಾಡಿದ್ದಾರೆ.
ಶಿವನ ಪ್ರತಿಮೆಯ ಕೊರಳೇರಿದ ನಿಜ ನಾಗರಹಾವು
ಭೂಮಿಯ ಪ್ರತಿಯೊಂದು ಚರಾಚರಗಳಲ್ಲೂ ಭಗವಂತನಿದ್ದಾನೆ ಎಂಬುದು ಹಿಂದೂ ಪುರಾಣಗಳಲ್ಲಿ ಉಲ್ಲೇಖವಾಗಿವೆ. ಪ್ರತಿಯೊಂದು ಪ್ರಾಣಿಗಳಲ್ಲೂ ದೇವರನ್ನು ಕಾಣುವುದು ನಮ್ಮ ಪರಂಪರೆ. ಹೀಗಾಗಿ ಮನುಷ್ಯರಂತೆ ಪ್ರಾಣಿಗಳಿಗೂ ಭಗವಂತನ ಸಾಮೀಪ್ಯದಲ್ಲಿ ಅದೇನೋ ಖುಷಿ ಸಿಗುತ್ತದೋ ಏನೋ ಪ್ರಾಣಿಗಳು ಭಗವಂತನ ಸಾನಿಧ್ಯದಲ್ಲಿ ಓಡಾಡುವ ನೆಲೆಸುವ ದೃಶ್ಯಗಳು ಈ ಹಿಂದೆಯೂ ಕ್ಯಾಮರಾದಲ್ಲಿ ಸೆರೆ ಆಗಿದ್ದವು. ಅದೇ ರೀತಿ ಇಲ್ಲಿ ಹಾವೊಂದು ಮಹದೇವನನ್ನು ಅರಸಿ ಬಂದಿದ್ದು, ನಿಧಾನವಾಗಿ ಕಾಲಿನ ಮೂಲಕ ಮೇಲೇರುವ ಹಾವು ಸೀದಾ ಮಹದೇವನ ಕೊರಳಿಗೆ ಸುತ್ತಿಕೊಂಡು ಶಿವನ ಪ್ರತಿಮೆಯ ತಲೆಮೇಲೆ ಹೆಡೆಯೆತ್ತಿ ನಿಂತಿದೆ. ಈ ವಿಡಿಯೋವನ್ನು
ವೀಡಿಯೋ ನೋಡಿ ಭಕ್ತಿಪರವಶರಾದ ಜನ
bhuppy_b4u(Rudra Shiva Mhadev)ಎಂಬ ಇನ್ಸ್ಟಾ ಪೇಜ್‌ನಿಂದ ಪೋಸ್ಟ್ ಮಾಡಲಾಗಿದೆ. ಶ್ರಾವಣ ಮಾಸದ ಮೂರನೇ ಸೋಮವಾರದಂದು, ಸರ್ಪ ದೇವರು ಶಿವನನ್ನು ಪೂಜಿಸುತ್ತಿದ್ದಾನೆ. ನೀವು ಕೂಡ ಈ ವೀಡಿಯೊವನ್ನು ನೋಡಿ ಹರ ಹರ ಮಹಾದೇವ್ ಎಂದು ಕಾಮೆಂಟ್ ಮಾಡಿ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಲಕ್ಷಾಂತರ ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಬ್ರೋಗೆ ಗೊತ್ತು ತಾನು ಎಲ್ಲಿಂದ ಬಂದೆ ಹಾಗೂ ತನ್ನ ರಕ್ಷಕ ಯಾರು ಎಂಬುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ದೇವರ ಉಪಸ್ಥಿತಿಗೊಂದು ಒಳ್ಳೆಯ ಉದಾಹರಣೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಭಾರಿ ವೈರಲ್
ವಿಜ್ಞಾನದ ತರ್ಕಗಳ ಬಗ್ಗೆ ಹೇಳುವುದಾದರೆ ಹಾವುಗಳು ಶಕ್ತಿ ಮತ್ತು ಕಂಪನಗಳಿಗೆ ಬಹಳ ಸೂಕ್ಷ್ಮವಾಗಿರುತ್ತವೆ. ಈ ಕಾರಣಕ್ಕಾಗಿ ಹಾವುಗಳು ಶಿವಲಿಂಗದವರೆಗೆ ಸಾಗುತ್ತವೆ. ಆದರೆ ಇದೇ ಮೊದಲು ನಾನು ಹಾವೊಂದು ಶಿವನ ವಿಗ್ರಹದೊಂದಿಗೆ ಸುತ್ತಿಕೊಳ್ಳುವುದನ್ನು ನೋಡುತ್ತಿದ್ದೇನೆ. ಜೊತೆಗೆ ವೇದ ಮಂತ್ರಗಳು ಸಹ ಶಕ್ತಿಯನ್ನು ಪ್ರೇರೇಪಿಸುತ್ತವೆ. ಅವನು(ಹಾವು) ಆ ಸ್ಥಾನಕ್ಕೆ ಸಂಪೂರ್ಣವಾಗಿ ಜಾರಿದ ರೀತಿ ಪರಿಚಿತತೆಯ ಕಾರಣದಿಂದಾಗಿರಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಯಾವಾಗಲೂ ಕಾಕತಾಳೀಯವಲ್ಲ... ಹಾವುಗಳು ಯಾವಾಗಲೂ ಶಿವನ ಭುಜ ಮತ್ತು ತಲೆಯ ಮೇಲೆ ಏಕೆ ಕುಳಿತುಕೊಳ್ಳುತ್ತವೆ... ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ. ಹಿಂದೂ ಪುರಾಣಗಳ ಪ್ರಕಾರ ಶಿವನ ತಲೆಯ ಮೇಲೆ ಕುಳಿತ ಹಾವು ವಾಸುಕಿಯಾಗಿದ್ದು, ಒಂದು ನಾಗ ಸಮೂಹದ ಹಾವಾಗಿದೆ.
ಹಾವುಗಳು ಮಹಾದೇವನನ್ನು ಎಷ್ಟು ಮುಗ್ಧವಾಗಿ ನೋಡುತ್ತವೆ ಮತ್ತು ಶಿವನ ಗಂಟಲಿನಲ್ಲಿರುವ ವಿಷದಿಂದಾಗಿ ಅವನ ಕುತ್ತಿಗೆಗೆ ಹಾವುಗಳು ತಮ್ಮ ದೇಹವನ್ನು ಸುತ್ತಿಕೊಳ್ಳುವ ಪ್ರಚೋದನೆಯನ್ನು ಹೇಗೆ ಹೊಂದಿರುತ್ತವೆ ಎಂಬುದನ್ನು ಅರಿಯುವದಕ್ಕೆ ನನಗೆ ತುಂಬಾ ಇಷ್ಟ. ಅವು ತಮಗೆ ಗೊತ್ತಿದೆ ನೆನಪಿದೆ ಎಂಬಂತೆ ವರ್ತಿಸುತ್ತವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಶಿವನ ಜೊತೆ ಹಾವುಗಳು ಸುರಕ್ಷಿತ ಭಾವ ಅನುಭವಿಸುತ್ತಿರಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಶಿವನ ಜೊತೆ ಹಾವಿನ ಸಾಂಗತ್ಯದ ಆಧ್ಯಾತ್ಮಿಕ ಹಿನ್ನೆಲೆ:
ಶಿವನ ಜೊತೆ ಹಾವುಗಳ ಸಂಪರ್ಕಕ್ಕೆ ಹಲವು ನಂಬಿಕೆ ಅಭಿಪ್ರಾಯಗಳಿವೆ. ಭಯ, ಸಾವು ಮತ್ತು ಅಹಂಕಾರದ ಮೇಲಿನ ಶಿವನ ಪಾಂಡಿತ್ಯ, ಕುಂಡಲಿನಿ ಶಕ್ತಿಯ ಮೇಲಿನ ಶಿವನ ನಿಯಂತ್ರಣ ಮತ್ತು ಜೀವನ ಮತ್ತು ಪುನರ್ಜನ್ಮದ ಚಕ್ರೀಯ ಸ್ವರೂಪವನ್ನು ಇದು ಪ್ರತಿನಿಧಿಸುತ್ತದೆ. ಅತ್ಯಂತ ಪ್ರಸಿದ್ಧವಾದ ಸರ್ಪವೆಂದರೆ ವಾಸುಕಿ, ಕ್ಷೀರ ಸಾಗರ ಮಂಥನದ ಸಮಯದಲ್ಲಿ ಪ್ರಪಂಚವನ್ನು ರಕ್ಷಿಸಲು ವಿಷವನ್ನು ಕುಡಿದ ಶಿವನನ್ನು ನೀಲಕಂಠ ಆಗಿ ಪರಿವರ್ತಿಸಿದ ನಂತರ ವಾಸುಕಿ ಶಿವನ ಕುತ್ತಿಗೆಯನ್ನು ಆಭರಣದಂತೆ ಸುತ್ತಿಕೊಳ್ಳುತ್ತಾನೆ. ಹಾವಿನೊಂದಿಗೆ ಶಿವನನ್ನು ಪೂಜಿಸುವುದು ಈ ದೈವಿಕ ಶಕ್ತಿಗಳನ್ನು ಅಳವಡಿಸಿಕೊಳ್ಳುವುದನ್ನು ಮತ್ತು ಒಬ್ಬರ ಸ್ವಂತ ಭಯ ಮತ್ತು ಮಿತಿಗಳನ್ನು ಮೀರುವುದನ್ನು ಸಂಕೇತಿಸುತ್ತದೆ.
ಇದನ್ನೂ ಓದಿ: ಆಟವಾಡುತ್ತಾ ಅಕ್ಕ ತಮ್ಮ ನುಂಗಿದ್ದೇನು? ಹೊಟ್ಟೆ ನೋವು ಅಂತಿದ್ದವರ ಆಸ್ಪತ್ರೆಗೆ ಕರೆದೊಯ್ದ ಪೋಷಕರಿಗೆ ಶಾಕ್
ಇದನ್ನೂ ಓದಿ: ಹಾವು ಹಿಡಿಯಲು ಹೋಗಿ ಉಸಿರೇ ನಿಲ್ತಿತ್ತು: ಸಡನ್ ಅಟ್ಯಾಕ್ ಮಾಡಿದ ಕಿಂಗ್ ಕೋಬ್ರಾ ಭಯಾನಕ ವೀಡಿಯೋ
