ತಿರುವನಂತಪುರ: ಪೊಲೀಸ್ ಠಾಣೆಯಲ್ಲೇ ಇಟ್ಟಿದ್ದ ಸಾಕ್ಷ್ಯದ ಮಾಲನ್ನು ಖಾಕಿ ಅಧಿಕಾರಿಯೊಬ್ಬ ಕದ್ದೊಯ್ದ ಘಟನೆ ಕೇರಳದ ಸುಲ್ತಾನ್ ಬತ್ತೇರಿಯಲ್ಲಿ ನಡೆದಿದೆ. ನಿಷೇಧಿತ ತಂಬಾಕು ಉತ್ಪನ್ನಗಳ ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿರುವ ಸೀನಿಯರ್ ಸಿವಿಲ್ ಪೊಲೀಸ್ ಅಧಿಕಾರಿ ಸಬಿತ್‌ನನ್ನು ಅಮಾನತುಗೊಳಿಸಲಾಗಿದೆ. ಸಬಿತ್, ಸ್ಟೇಷನ್‌ನ ಸ್ಟೋರ್ ರೂಮ್‌ನಲ್ಲಿದ್ದ ಬರೋಬ್ಬರಿ ಏಳು ಚೀಲ 'ಹ್ಯಾನ್ಸ್' ಅನ್ನು ಕದ್ದೊಯ್ದಿದ್ದ. ಈತ ಸದ್ಯ ತಲೆಮರೆಸಿಕೊಂಡಿದ್ದು, ಇಲಾಖಾ ಮಟ್ಟದ ಕ್ರಮಕ್ಕೆ ಬತ್ತೇರಿ ಡಿವೈಎಸ್‌ಪಿ ಶಿಫಾರಸು ಮಾಡಿದ್ದಾರೆ.
ಏಳು ಚೀಲ ಹ್ಯಾನ್ಸ್ ಕಳ್ಳತನ
ಸುಲ್ತಾನ್ ಬತ್ತೇರಿ ಪೊಲೀಸ್ ಠಾಣೆಯ ಸ್ಟೋರ್ ರೂಮ್‌ನಲ್ಲಿ ಇಟ್ಟಿದ್ದ ಏಳು ಚೀಲ ನಿಷೇಧಿತ ತಂಬಾಕು ಉತ್ಪನ್ನಗಳು ಕಳುವಾಗಿದ್ದವು. ಕಳೆದ 10ನೇ ತಾರೀಖಿನಂದು ಸ್ಟೇಷನ್‌ನ ರೈಟರ್ ಮತ್ತು ಅಸಿಸ್ಟೆಂಟ್ ರೈಟರ್ ಪರಿಶೀಲನೆ ನಡೆಸಿದಾಗ ಈ ಕಳ್ಳತನ ಬೆಳಕಿಗೆ ಬಂದಿದೆ. ಸ್ಟೋರ್ ರೂಮ್‌ನ ಬೀಗದಕೈ ಬಳಸಿ ಬಾಗಿಲು ತೆರೆದು ಕಳ್ಳತನ ಮಾಡಿರುವುದರಿಂದ, ಮೊದಲಿನಿಂದಲೂ ಸ್ಟೇಷನ್‌ನ ಸಿಬ್ಬಂದಿ ಮೇಲೆಯೇ ಪೊಲೀಸರಿಗೆ ಅನುಮಾನವಿತ್ತು.
ಜುಲೈ 18 ರಂದು ಜಿಡಿ ಚಾರ್ಜ್‌ನಲ್ಲಿದ್ದ ಸಬಿತ್, ಮಧ್ಯರಾತ್ರಿ 12 ಗಂಟೆಯ ನಂತರ ಈ ಕೃತ್ಯ ಎಸಗಿದ್ದಾನೆ. ತನ್ನ ಸ್ವಂತ ಕಾರಿನಲ್ಲೇ 7 ಚೀಲ ಹ್ಯಾನ್ಸ್ ಸಾಗಿಸಿದ್ದಾನೆ. ಸಿಸಿಟಿವಿ ದೃಶ್ಯಗಳು ತನಿಖಾ ತಂಡಕ್ಕೆ ಆರೋಪಿಯನ್ನು ಪತ್ತೆಹಚ್ಚಲು ಪ್ರಮುಖ ಸಾಕ್ಷಿಯಾದವು.
10:56 PM (IST) Sep 15
₹2,000 ಕ್ಕಿಂತ ಹೆಚ್ಚಿನ ಮೌಲ್ಯದ ಯುಪಿಐ ವರ್ತಕರ ಪಾವತಿಗಳ ಮೇಲೆ ಶುಲ್ಕ ವಿಧಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ನಿರ್ಧಾರದಿಂದ ಬ್ಯಾಂಕ್‌ಗಳು ಮತ್ತು ಪೇಮೆಂಟ್ ಆಪ್‌ಗಳಿಗೆ ಭಾರಿ ಆದಾಯ ಬರುವ ನಿರೀಕ್ಷೆಯಿದೆ,.
08:59 PM (IST) Sep 15
08:11 PM (IST) Sep 15
ಮಹೀಂದ್ರಾ ಸಂಸ್ಥೆಯ ನೂತನ 'XUV 7XO' ಎಸ್‌ಯುವಿ, ಭಾರತ ಎನ್‌ಸಿಎಪಿ ನಡೆಸಿದ ಕ್ರ್ಯಾಶ್ ಟೆಸ್ಟ್‌ನಲ್ಲಿ ಅತ್ಯುನ್ನತ '5-ಸ್ಟಾರ್' ಸುರಕ್ಷತಾ ರೇಟಿಂಗ್ ಪಡೆದು ದಾಖಲೆ ನಿರ್ಮಿಸಿದೆ. ಈ ಕಾರು ಹಿರಿಯರ ಸುರಕ್ಷತೆ (AOP) ಮತ್ತು ಮಕ್ಕಳ ಸುರಕ್ಷತೆ (COP) ಎರಡೂ ವಿಭಾಗಗಳಲ್ಲಿ ಶ್ರೇಷ್ಠತೆಯನ್ನು ಸಾಬೀತುಪಡಿಸಿದೆ.
07:48 PM (IST) Sep 15
ಪಾಕಿಸ್ತಾನದ ಹಿಂದೂ ವ್ಯಕ್ತಿಯೊಬ್ಬರು ತಮ್ಮ ಬಹುದಿನಗಳ ವಿಶೇಷ ಕನಸನ್ನು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ. ಅವರಿಗೆ ಅಯೋಧ್ಯೆ ಶ್ರೀರಾಮನ ಮೇಲೆ ಎಲ್ಲಿಲ್ಲದ ಭಕ್ತಿ. ಇದೀಗ ಅವರ ಆಸೆ ಈಡೇರುತ್ತಾ ಎಂಬ ಚರ್ಚೆ ಶುರುವಾಗಿದೆ.
05:47 PM (IST) Sep 15
ಬ್ರಿಕ್ಸ್ ಶೃಂಗಸಭೆಯಲ್ಲಿ ಮೋದಿ ತಂತ್ರಕ್ಕೆ ಇದೀಗ ಪಾಕಿಸ್ತಾನ ಬೆವತು ಹೋಗಿದೆ. ಮೆಕ್ಕಾ ಒಪ್ಪಂದ ಮಾಡಿಕೊಂಡು ಎದೆಯುಬ್ಬಿಸಿದ ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ ತಿರುಗೇಟು ನೀಡಿದೆ. ಇದೀಗ ಪಾಕ್ ಬದಲು ಇಸ್ರೇಲ್ ನೆರವು ಕೇಳಿದೆ.
05:45 PM (IST) Sep 15
05:07 PM (IST) Sep 15
05:05 PM (IST) Sep 15
04:34 PM (IST) Sep 15
ಭಾರತದ 'ಕೃತಕ ಸೂರ್ಯ' ಯೋಜನೆಯು ಗುಜರಾತ್‌ನ ಪ್ಲಾಸ್ಮಾ ಸಂಶೋಧನಾ ಸಂಸ್ಥೆಯಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಇಲ್ಲಿನ 'ಎಸ್ಎಸ್‌ಟಿ-1 ಟೋಕಾಮ್ಯಾಕ್' ಯಂತ್ರದಲ್ಲಿ ಹೊಸ, ಶಕ್ತಿಶಾಲಿ 'ಗೈರೊಟ್ರಾನ್' ಸಾಧನವನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ.
04:03 PM (IST) Sep 15
02:38 PM (IST) Sep 15
01:49 PM (IST) Sep 15
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ವಿಮಾನಯಾನ ಕಂಪನಿಗಳು ಟಿಕೆಟ್ ದರವನ್ನು ಗಣನೀಯವಾಗಿ ಹೆಚ್ಚಿಸಿವೆ. ನವೆಂಬರ್ 6 ರಿಂದ 8ರ ನಡುವೆ ದೆಹಲಿ, ಮುಂಬೈ, ಬೆಂಗಳೂರಿನಂತಹ ಪ್ರಮುಖ ನಗರಗಳಿಗೆ ಪ್ರಯಾಣ ದರ ಗಗನಕ್ಕೇರಿದೆ. ದರ ಏರಿಕೆಗೆ ಕಾರಣವೇನು?
01:35 PM (IST) Sep 15
01:11 PM (IST) Sep 15
ಇದೊಂದು ಸ್ಫೂರ್ತಿದಾಯಕ ಕತೆ. ಸಾಧನೆಗೆ ವಯಸ್ಸಿನ ಮಿತಿ ಇಲ್ಲ. ಕನಸುಗಳಿಗೆ ಎಕ್ಸ್‌ಪೈರಿ ಡೇಟ್ ಇಲ್ಲ ಎಂಬ ಮಾತಿದೆ. ಈ ಕತೆಯಲ್ಲಿ ಅಮ್ಮನ ಕನಸುಗಳಿಗೆ ಮಗನೇ ಶಿಕ್ಷಕನಾದ. ರಿಸಲ್ಟ್ ಏನು ಅಂದರೆ 22 ವರ್ಷಗಳ ಹಿಂದೆ ಅರ್ಧಕ್ಕೆ ನಿಂತಿದ್ದ ಅಮ್ಮನ ಕನಸು ಇಂದು ನನಸಾಗಿದೆ. ಏನದು ಸ್ಟೋರಿ.. ಇಲ್ಲಿದೆ ಕಂಪ್ಲೀಟ್ ಮಾಹಿತಿ..
01:07 PM (IST) Sep 15
12:42 PM (IST) Sep 15
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾನೆ. ಚುನಾವಣೆ ದಿನ ಹಿರಿಯ ತಾಯಿ ಮತ ಹಾಕಿದ ಬೆನ್ನಲ್ಲೇ ಮೃತಪಟ್ಟಿದ್ದಾರೆ. ಫಲಿತಾಂಶ ಬಂದಾಗ ದುಃಖ ಇಮ್ಮಡಿಯಾಗಿದೆ. ಮಗ ಕೇವಲ ಒಂದು ಮತದಿಂದ ಗೆದ್ದ ಘಟನೆ ನಡೆದಿದೆ.
12:22 PM (IST) Sep 15
ಅಫ್ಘಾನಿಸ್ತಾನದಲ್ಲಿ ಹೆಣ್ಮಕ್ಕಳಿಗೆ ವಿಚಿತ್ರ ವಿಚಿತ್ರ ರೂಲ್ಸ್. ಅದ್ರಲ್ಲೂ ಈಗಿನ ತಾಲಿಬಾನಿ ಸರ್ಕಾರವಂತೂ ಏನೇನೋ ನಿಯಮಗಳನ್ನು ತಂದಿದೆ. ರೂಲ್ಸು, ಗಿಲ್ಸೂ ಏನೂ ಗೊತ್ತಿಲ್ಲದೇ ಒಬ್ಬಂಟಿಯಾಗಿ ತಾಲಿಬಾನಿ ನೆಲದಲ್ಲಿ ಪ್ರಯಾಣಿಸುತ್ತಿದ್ದ ಭಾರತದ ಟ್ರಾವೆಲ್ ವ್ಲಾಗರ್ ಒಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಅನ್ನೋದು ಈ ಸ್ಟೋರಿಯಲ್ಲಿದೆ. ಓದಿ..
11:51 AM (IST) Sep 15
ಯುಪಿಐ ಪಾವತಿಗಳ ಕುರಿತು ಮಹತ್ವದ ಅಧಿಸೂಚನೆ ಹೊರಬಿದ್ದಿದೆ. 2000 ರೂಪಾಯಿ ವರೆಗೆ ಯುಪಿಐ ವಹಿವಾಟು ಫ್ರೀ. ಅದಕ್ಕಿಂತ ಮೇಲೆ ಶುಲ್ಕ ವಿಧಿಸಲು ಸಾಧ್ಯವಿದೆ. ಹಾಗಾದರೆ ಈ ನೀತಿ ನಿಮ್ಮ ಹಣಕಾಸಿನ ಮೇಲೆ ಬೀರುವ ಪರಿಣಾಮವೇನು?
11:35 AM (IST) Sep 15
11:22 AM (IST) Sep 15
ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಮಹತ್ವದ ಹೆಜ್ಜೆ ಇಟ್ಟಿದೆ. ಮೂರು ಹಂತಗಳಲ್ಲಿ ಸರ್ಕಾರಿ ಸೆಕ್ಯೂರಿಟಿ ಮಾರಾಟ ಮಾಡಲು ಮುಂದಾಗಿದೆ. ಈ ಬಾಂಡ್ 2029 ಹಾಗೂ 2032ಕ್ಕೆ ಮೆಚ್ಯೂರಿಟಿ ಪಡೆದುಕೊಳ್ಳಲಿದೆ. ಸೆ.17ಕ್ಕೆ ಹರಾಜು ನಡೆಯಲಿದೆ.
10:43 AM (IST) Sep 15
09:29 AM (IST) Sep 15
08:26 AM (IST) Sep 15