ನವದೆಹಲಿ: ಭಾರತೀಯರ ರೈಲ್ವೆ, ದಶಕಗಳಷ್ಟು ಹಳೆಯದಾದ ಆರ್‌ಎಸಿ ಟಿಕೆಟ್ ವ್ಯವಸ್ಥೆ ರದ್ದುಪಡಿಸುವ ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದೆ. ಆರ್‌ಎಸಿ (ರಿಸರ್ವೇಷನ್ ಅಗೈನೆಸ್ಟ್ ಕ್ಯಾನ್ಸಲೇಷನ್) ಬುಕ್ ಮಾಡಿದವರು ಟಿಕೆಟ್ ರದ್ದು ಮಾಡಿದರೆ ಕಾಯ್ದಿಟ್ಟ ಪಟ್ಟಿಯಲ್ಲಿ ಇದ್ದವರಿಗೆ ಟಿಕೆಟ್ ಹಂಚುವ ವ್ಯವಸ್ಥೆ ಇದು. ಇದರಲ್ಲಿ ಆರ್‌ಎಸಿಯಲ್ಲಿ ಇರುವ ಪ್ರಯಾಣಿಕರಿಂದ ಪೂರ್ಣ ಪ್ರಮಾಣದ ಹಣ ಪಡೆದು, ಸ್ಲೀಪರ್ ರೈಲಿನಲ್ಲಿ ಒಂದೇ ಸೀಟನ್ನು ಇಬ್ಬರು ಹಂಚಿಕೊಳ್ಳುವ ವ್ಯವಸ್ಥೆ ಇದಾಗಿದೆ. ಆದರೆ ಪೂರ್ಣ ಹಣ ಪಡೆದು ಅರ್ಧ ಸೀಟು ನೀಡುವುದು ಸರಿಯಲ್ಲ. ಜೊತೆಗೆ ಪುರುಷ ಮತ್ತು ಮಹಿಳಾ ಪ್ರಯಾಣಿಕರಿಗೆ ಒಂದೇ ಸೀಟು ಹಂಚಿಕೆಯಾದಾಗ ಈ ವ್ಯವಸ್ಥೆಯು ತೊಂದರೆಗಳಿಗೆ ಕಾರಣವಾಗಬಹುದು. ಹೀಗಾಗಿ ಇಲಾಖೆ ಇದರ ಮರು ಪರಿಶೀಲನೆಗೆ ಮುಂದಾಗಿದೆ.