Published : Jul 14, 2025, 06:23 AM ISTUpdated : Jul 14, 2025, 09:39 PM IST

India latest news live: ಲಾರ್ಡ್ಸ್‌ ಥ್ರಿಲ್ಲರ್‌ನಲ್ಲಿ ಭಾರತದ ಹೃದಯ ಭಗ್ನ ಮಾಡಿದ ಪಾಕ್‌ ಮೂಲದ ಬೌಲರ್‌, 22 ರನ್‌ ಗೆಲುವು ಕಂಡ ಇಂಗ್ಲೆಂಡ್‌!

ಸಾರಾಂಶ

ಲಖನೌ: ಹಿಂದು ಮಹಿಳೆಯರನ್ನು ಮತಾಂತರ ಮಾಡಿ ಲವ್ ಜಿಹಾದ್ ನಡೆಸಲು 1000 ಮುಸ್ಲಿಂ ಯುವಕರನ್ನು ಸ್ವಯಂಘೋಷಿತ ದೇವಮಾನವ ಜಮಾಲುದ್ದಿನ್ ಅಲಿಯಾಸ್ ಛಂಗೂರ್ ಬಾಬಾ ನೇಮಿಸಿಕೊಂಡಿದ್ದ. ಅದಕ್ಕಾಗಿ ಮುಸ್ಲಿಂ ರಾಷ್ಟ್ರಗಳಿಂದ 3 ವರ್ಷದಲ್ಲಿ 500 ಕೋಟಿ ರು. ಗಳನ್ನು ಸಹ ಪಡೆದಿದ್ದ ಎಂಬ ಸ್ಫೋಟಕ ವಿಷಯ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಯುವಕರನ್ನು ಬಳಸಿಕೊಂಡು ಯುವತಿಯರು, ಬಡ ಕುಟುಂಬ ಮಹಿಳೆಯರು, ವಿದವೆಯರನ್ನು ಛಂಗೂರ್ ಗುರಿ ಮಾಡುತ್ತಿದ್ದ. ಅವರಿಗೆ ಪ್ರೇಮ, ವಿವಾಹ, ಮನೆ ಎಂಬ ಆಸೆಗಳನ್ನು ತೋರಿಸಿ, ಅವರನ್ನು ಮತಾಂತರ ಮಾಡುತ್ತಿದ್ದ. ಇನ್ನು ಕೆಲ ಸಂದರ್ಭಗಳಲ್ಲಿ ಬಲವಂತವಾಗಿ ಮತಾಂತರಿಸುತ್ತಿದ್ದ. ಮತಾಂತರ ಸಂಚಲ್ಲಿ ಇತ್ತೀಚೆಗೆ ಉತ್ತರ ಪ್ರದೇಶದ ಲಖನೌದಲ್ಲಿ ಬಂಧನ ಕ್ಕೊಳಗಾಗಿದ್ದ ಜಮಾಲುದ್ದೀನ್ ಈ ವೇಳೆ ಆತ ಪಾಕ್ ಸಲಹೆ, ಕೊಲ್ಲಿ ದೇಶದ 500 ಕೋಟಿ ಹಣದೊಂದಿಗೆ ಮತಾಂತರ ನಡೆಸುತ್ತಿದ್ದದ್ದು ಪತ್ತೆ, 14-24ರ ವಯೋಮಾನದ ಹಿಂದೂ ಯುವತಿಯರನ್ನೇ ಗುರುತಿಸಿ ಅವರಿಗೆ ಬಾಬಾ ಗ್ಯಾಂಗ್‌ನಿಂದ ಗಾಳ ಬ್ರಾಹ್ಮಣ, ಕ್ಷತ್ರಿಯ, ಒಬಿಸಿಗಳ ಮತಾಂತರಕ್ಕೆ ಒಂದೊಂದು ದರ ಫಿಕ್ಸ್ ಮಾಡಿ ಹಣ ಪಡೆಯುತ್ತಿದ್ದ ಬಾಬಾ.

India Day 4 Lord's Test

09:39 PM (IST) Jul 14

ಲಾರ್ಡ್ಸ್‌ ಥ್ರಿಲ್ಲರ್‌ನಲ್ಲಿ ಭಾರತದ ಹೃದಯ ಭಗ್ನ ಮಾಡಿದ ಪಾಕ್‌ ಮೂಲದ ಬೌಲರ್‌, 22 ರನ್‌ ಗೆಲುವು ಕಂಡ ಇಂಗ್ಲೆಂಡ್‌!

ಲಾರ್ಡ್ಸ್‌ ಟೆಸ್ಟ್‌ನಲ್ಲಿ ಭಾರತ 22 ರನ್‌ಗಳಿಂದ ಸೋಲು ಕಂಡಿದೆ. ಮೊಹಮ್ಮದ್ ಸಿರಾಜ್‌ ಅವರ ಕೊನೆಯ ವಿಕೆಟ್‌ ಬೇಲ್ಸ್‌ ಉರುಳಿದ ರೀತಿ ನಿಜಕ್ಕೂ ಬೇಸರ ತರಿಸಿತು. ಇದರೊಂದಿಗೆ ಇಂಗ್ಲೆಂಡ್‌ ಆಂಡರ್ಸನ್‌-ತೆಂಡುಲ್ಕರ್‌ ಟ್ರೋಫಿಯಲ್ಲಿ 2-1 ಮುನ್ನಡೆ ಸಾಧಿಸಿದೆ.
Read Full Story

08:02 PM (IST) Jul 14

ಬೋಯಿಂಗ್ ವಿಮಾನ ಇಂಧನ ಸ್ವಿಚ್‌ಗಳ ತುರ್ತು ಪರಿಶೀಲನೆಗೆ ಡಿಜಿಸಿಎ ಖಡಕ್ ಆದೇಶ

ಬೋಯಿಂಗ್ ವಿಮಾನಗಳ ಇಂಧನ ನಿಯಂತ್ರಣ ಸ್ವಿಚ್‌ಗಳ ಲಾಕ್ ವ್ಯವಸ್ಥೆಯ ತುರ್ತು ಪರಿಶೀಲನೆ ನಡೆಸುವಂತೆ ಡಿಜಿಸಿಎ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಆದೇಶಿಸಿದೆ. ಅಹಮದಾಬಾದ್‌ನ ಏರ್ ಇಂಡಿಯಾ ಅಪಘಾತದ ಪ್ರಾಥಮಿಕ ತನಿಖೆಯ ವರದಿಯ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
Read Full Story

07:40 PM (IST) Jul 14

ಸಿಎಂ ಇಲ್ಲದೆ ಮುಗಿದ ಸಿಗಂದೂರು ಸೇತುವೆ ಉದ್ಘಾಟನೆ, ಟ್ವಿಟರ್‌ನಲ್ಲಿ ಸಿದ್ದು-ಗಡ್ಕರಿ ಜಟಾಪಟಿ ಶುರು!

ಸಿಗಂದೂರು ಸೇತುವೆ ಉದ್ಘಾಟನೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿವೆ. ಸೇತುವೆ ಉದ್ಘಾಟನೆಗೆ ಆಹ್ವಾನ ನೀಡುವ ವಿಚಾರದಲ್ಲಿ ಗಡ್ಕರಿ ಮತ್ತು ಸಿದ್ದರಾಮಯ್ಯ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದಾರೆ.

Read Full Story

07:38 PM (IST) Jul 14

Sana Khan - ಪತ್ನಿ ಮುಂದೆ ಹೋಗೋದಾ? ನಟಿಯ ಹಿಂದೆ ತಳ್ಳಿದ ಪತಿ - ವಿಡಿಯೋ ನೋಡಿ ಕಣ್ಣೀರಿಡ್ತಿರೋ ಫ್ಯಾನ್ಸ್​​!

ಮಿನಿ ಸ್ಕರ್ಟ್​, ಬಿಕಿನಿ ಎಲ್ಲವನ್ನೂ ಬಿಟ್ಟು ಇದೀಗ ಮದುವೆಯಾಗಿ ಹಿಜಾಬ್​ನಲ್ಲಿಯೇ ಕಾಣಿಸಿಕೊಳ್ತಿರೋ ನಟಿ ಸನಾ ಅವರ ವಿಡಿಯೋ ಒಂದು ಪತಿಯ ಜೊತೆ ವೈರಲ್​ ಆಗಿದ್ದು, ಅಭಿಮಾನಿಗಳು ತುಂಬಾ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು?

 

Read Full Story

07:27 PM (IST) Jul 14

ಅಮೆರಿಕಾಗೂ ಹೆದರಂಗಿಲ್ಲ, ಚೀನಾಗೂ ಡೋಂಟ್ ಕೇಟ್ - ಜಾಕ್‌ಪಾಟ್‌ ಸಮೀಪದಲ್ಲಿ ಭಾರತ; GDP 5 ಪಟ್ಟು ಹೆಚ್ಚಳ!

Union Minister Hardeep Singh Puri Statement:  ಈ ಖಜಾನೆ ಭಾರತಕ್ಕೆ ಸಿಕ್ಕರೆ ದೇಶದ GDP 5 ಪಟ್ಟು ವೃದ್ಧಿಯಾಗಿ 20 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಲಿದೆ.

Read Full Story

07:11 PM (IST) Jul 14

ಸೆನ್ಸಾರ್ ಮಂಡಳಿ ಮೆಚ್ಚುಗೆ ಪಡೆದ 'ಹರಿಹರ ವೀರಮಲ್ಲು'; ಪವನ್ ಕಲ್ಯಾಣ್‌ಗೆ ಅಬ್ಬರಕ್ಕೆ ಡೇಟ್ ಫಿಕ್ಸ್!

ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಹರಿಹರ ವೀರಮಲ್ಲು ಸಿನಿಮಾಗೆ ಸೆನ್ಸಾರ್ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ. ಜುಲೈ 24 ರಂದು ತೆರೆಗೆ ಬರಲಿರುವ ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆಗಳಿವೆ.

Read Full Story

07:06 PM (IST) Jul 14

Delivery Date Calculation - ಎಷ್ಟನೇ ದಿನಕ್ಕೆ ಗರ್ಭಧಾರಣೆಯಾಗತ್ತೆ? ಮಗು ಹುಟ್ಟೋ ದಿನ ನಿರ್ಧರಿಸೋದು ಹೇಗೆ?

ಮದುವೆಯಾಗಿ 15ನೇ ದಿನಕ್ಕೆ ಗರ್ಭ ಧರಿಸ್ಬೋದಾ? ಮಗುವಿನ ಹುಟ್ಟುವ ದಿನ ನಿಗದಿಯಾಗುವುದು ಹೇಗೆ? ಗರ್ಭಧಾರಣೆಯಾಗುವ ಅವಧಿ ಯಾವುದು? ಇಲ್ಲಿದೆ ವೈದ್ಯರಿಂದ ಉತ್ತರ...

 

Read Full Story

06:53 PM (IST) Jul 14

ಬೌದ್ಧ ಧರ್ಮವನ್ನು ಬೋಧಿಸುವ ಸ್ವಾತಂತ್ರ್ಯ ಭಾರತದಲ್ಲಿ ಮಾತ್ರವಿದೆ ಹೊರತು ಚೀನಾದಲ್ಲಿ ಅಲ್ಲ - ದಲೈ ಲಾಮಾ

ತಮ್ಮ 90ನೇ ಜನ್ಮದಿನದ ಸಮ್ಮೇಳನದಲ್ಲಿ, ಭಾರತದ ಆತಿಥ್ಯಕ್ಕೆ ದಲೈ ಲಾಮಾ ಕೃತಜ್ಞತೆ ಸಲ್ಲಿಸಿದ್ದಾರೆ. ಟಿಬೆಟ್‌ನ ಸ್ವಾತಂತ್ರ್ಯ ,ಸಂಸ್ಕೃತಿಯ ರಕ್ಷಣೆಯ ಕುರಿತು ಒತ್ತು ನೀಡಿದ್ದಾರೆ. ಭಾರತದಲ್ಲಿ ಟಿಬೆಟಿಯನ್ ಮಕ್ಕಳಿಗೆ ಆಧುನಿಕ ಶಿಕ್ಷಣ ಮತ್ತು ಸಂಸ್ಕೃತಿಯನ್ನು ಕಲಿಯಲು ಭಾರತ  ನೀಡಿದ ಬೆಂಬಲಕ್ಕೆ ಋಣಿ ಎಂದರು

Read Full Story

06:53 PM (IST) Jul 14

ಬೆಂಗಳೂರು-ಮೈಸೂರು ಹಳೆ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ KSRTC ಬಸ್

ಶ್ರೀರಂಗಪಟ್ಟಣದಲ್ಲಿ ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಹಳ್ಳಕ್ಕೆ ಉರುಳಿ ಬಿದ್ದಿದೆ. ಚಾಲಕನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಖಾಲಿ ಬಸ್ಸಿನಲ್ಲಿ ಪ್ರಯಾಣಿಕರಿಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ.
Read Full Story

06:17 PM (IST) Jul 14

ಮುಟ್ಟದೆಯೇ ನಾಯಕಿಯನ್ನು ಮುದ್ದಾಡೋದು ಹೇಗೆ? ರವಿಚಂದ್ರನ್​- ಹಂಸಲೇಖಾ ಮಾಡಿದ ಪ್ರಯೋಗ ನೋಡಿ!

ರವಿಚಂದ್ರನ್​ ಅವರ ಚಿನ್ನ ಚಿತ್ರದ ನನ್ನವಳು ನನ್ನವಳು... ಹಾಡಿನಲ್ಲಿ ಬರುವ ಮುಟ್ಟದೆಯೇ ಮುದ್ದಾಡಲೇ ಲಿರಿಕ್ಸ್​ ಹುಟ್ಟಿದ್ದು ಹೇಗೆ? ನಾಯಕಿಯನ್ನು ಮುಟ್ಟದೇ ಮುದ್ದಾಡೋದು ಹೇಗೆ ಎನ್ನುವ ಬಗ್ಗೆ ಹಂಸಲೇಖ ಏನ್​ ಹೇಳಿದ್ದಾರೆ ನೋಡಿ...

 

Read Full Story

06:11 PM (IST) Jul 14

ಕೈಕೊಟ್ಟ ಹುಡುಗಿ ಮರೆಯಲು ಕ್ರೂರ ಪ್ರಾಣಿಗಳಿರುವ ದಟ್ಟ ಕಾಡಿನಲ್ಲಿ 6 ದಿನ ಅಲೆದಾಡಿದ ಯುವಕ!

ಪ್ರೇಮ ವಿಫಲವಾದ ಯುವಕನೊಬ್ಬ ಆರು ದಿನ ಕಾಡಿನಲ್ಲಿ ಅಲೆದಾಡಿದ ಘಟನೆ ಬೆಳಕಿಗೆ ಬಂದಿದೆ. ಆಹಾರ, ನೀರಿಲ್ಲದೆ 40 ಕಿ.ಮೀ. ನಡೆದುಕೊಂಡು, ಕಾಡು ಹಣ್ಣುಗಳನ್ನು ತಿಂದು ಬದುಕುಳಿದ ಯುವಕನ ಕಥೆ. ಪೊಲೀಸರು ಕಾರ್ಯಾಚರಣೆ ನಡೆಸಿ ಯುವಕನನ್ನು ಪತ್ತೆ ಹಚ್ಚಿದರು.

Read Full Story

06:06 PM (IST) Jul 14

Pahalgam Attack ನಿಸ್ಸಂದೇಹವಾಗಿ ಭದ್ರತಾ ವೈಫಲ್ಯ, ಸಂಪೂರ್ಣ ಹೊಣೆ ನಾನು ಹೊರುತ್ತೇನೆ - ಮನೋಜ್ ಸಿನ್ಹಾ

ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿಯ ಹೊಣೆಯನ್ನು ಜಮ್ಮು ಕಾಶ್ಮೀರದ ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹಾ ವಹಿಸಿಕೊಂಡಿದ್ದಾರೆ. ಪಾಕಿಸ್ತಾನ ಪ್ರಾಯೋಜಿತ ಈ ದಾಳಿಯನ್ನು ಭದ್ರತಾ ವೈಫಲ್ಯ ಎಂದು ಒಪ್ಪಿಕೊಂಡ ಅವರು, ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿರುವುದರ ಬಗ್ಗೆಯೂ ಮಾತನಾಡಿದ್ದಾರೆ.
Read Full Story

05:56 PM (IST) Jul 14

ಮತ್ತಷ್ಟು ನಷ್ಟದ ಹಾದಿಯಲ್ಲಿ ಓಲಾ ಎಲೆಕ್ಟ್ರಿಕ್, ಆದಾಯ ಅರ್ಧಕ್ಕಿಂತಲೂ ಇಳಿಕೆ, ಷೇರು ಮಾತ್ರ ಏರಿಕೆ!

ಓಲಾ ಎಲೆಕ್ಟ್ರಿಕ್ ಮತ್ತೊಮ್ಮೆ ನಷ್ಟದಲ್ಲಿ ಮುಳುಗಿದ್ದು, ಆದಾಯದಲ್ಲಿ ಗಣನೀಯ ಕುಸಿತ ಕಂಡಿದೆ. ಮೊದಲ ತ್ರೈಮಾಸಿಕದಲ್ಲಿ ರೂ. 428 ಕೋಟಿ ನಷ್ಟ ಅನುಭವಿಸಿದ್ದು, ಆದಾಯ ಅರ್ಧಕ್ಕಿಂತಲೂ ಹೆಚ್ಚು ಕುಸಿದಿದೆ.
Read Full Story

05:51 PM (IST) Jul 14

ಕ್ಲರ್ಕ್‌ ಆಗಿ ಕೆಲಸ ಆರಂಭಿಸಿದ್ದ ಕನ್ನಡಿಗನನ್ನೇ ಎಂಡಿ, ಸಿಇಒ ಆಗಿ ನೇಮಕ ಮಾಡಿದ ಕರ್ಣಾಟಕ ಬ್ಯಾಂಕ್‌!

ಕರ್ಣಾಟಕ ಬ್ಯಾಂಕ್‌ನಲ್ಲಿ ಮಾಜಿ MD ಮತ್ತು CEO ಶ್ರೀಕೃಷ್ಣನ್ ಹರಿ ಹರ ಶರ್ಮಾ ಅವರ ರಾಜೀನಾಮೆಯ ನಂತರ, ರಾಘವೇಂದ್ರ ಶ್ರೀನಿವಾಸ್ ಭಟ್ ಅವರನ್ನು ಮಧ್ಯಂತರ MD ಮತ್ತು CEO ಆಗಿ ನೇಮಿಸಲಾಗಿದೆ. ಭಟ್ ಅವರು ಮೂರು ತಿಂಗಳ ಕಾಲ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

Read Full Story

05:38 PM (IST) Jul 14

Suvarna Podcast - ನಾನು 100% ಮಹಿಳೆನೇ ಡೌಟೇ ಬೇಡ ಎನ್ನುತ್ತಲೇ ಮದ್ವೆ ಬಗ್ಗೆ ಭಾವನಾ ಹೇಳಿದ್ದೇನು?

ಮಕ್ಕಳಾದ ಮೇಲೆ ಮುಂದೆ ಅವಕಾಶ ಸಿಕ್ಕರೆ ನಟಿ ಭಾವನಾ ಮದ್ವೆಯಾಗ್ತಾರಾ? ಈ ಬಗ್ಗೆ ಸುವರ್ಣ ಪಾಡ್​ಕಾಸ್ಟ್​ನಲ್ಲಿ ನಟಿ ಓಪನ್​ ಆಗಿಯೇ ಹೇಳಿದ್ದೇನು?

 

Read Full Story

05:17 PM (IST) Jul 14

ಯಾವ ಗಾಡ್‌ಫಾದರ್‌ ಕೂಡ ಇಲ್ಲದೆ, ತಮಿಳು-ತೆಲುಗಿನಲ್ಲಿ ದೊಡ್ಡ ಸ್ಟಾರ್‌ - ಇದೆಲ್ಲ ದೇವರ ಪವಾಡ ಅಂದಿದ್ದರು ಸರೋಜಾ ದೇವಿ!

ಬಿ. ಸರೋಜಾದೇವಿ ಅವರು ತಮ್ಮ ಪ್ರತಿಭೆಯಿಂದಲೇ ಚಿತ್ರರಂಗದಲ್ಲಿ ಯಶಸ್ಸು ಗಳಿಸಿದರು. ಅವರು ಯಾವುದೇ ಶಿಫಾರಸು ಇಲ್ಲದೆ ದೊಡ್ಡ ನಟರೊಂದಿಗೆ ನಟಿಸುವ ಅವಕಾಶ ಪಡೆದರು. ಸ್ಟುಡಿಯೋಗಳಲ್ಲಿ ನಡೆಯುತ್ತಿದ್ದ ಚಿತ್ರೀಕರಣದ ವೀಕ್ಷಣೆ ಮತ್ತು ಪ್ರತಿಭೆಯ ಮೇಲಿನ ನಂಬಿಕೆಯೇ ಅವರ ಯಶಸ್ಸಿಗೆ ಕಾರಣ.
Read Full Story

04:41 PM (IST) Jul 14

Ragini Dwivedi ಗುಡ್​ನ್ಯೂಸ್​ ಕೊಡೋದು ಯಾವಾಗ? ಫ್ಯಾನ್ಸ್​ ಪ್ರಶ್ನೆಗೆ ಕೊನೆಗೂ ಉತ್ತರಿಸಿದ ತುಪ್ಪದ ಬೆಡಗಿ!

ತುಪ್ಪದ ಬೆಡಗಿ ರಾಗಿಣಿಗೆ 35 ವರ್ಷವಾಗಿದ್ದು, ಗುಡ್​ನ್ಯೂಸ್ ಕೇಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಕೊನೆಗೂ ಈ ಬಗ್ಗೆ ನಟಿ ಹೇಳಿದ್ದೇನು? ಯಾವಾಗ ಗುಡ್​ನ್ಯೂಸ್​?

 

Read Full Story

04:29 PM (IST) Jul 14

ವೇದಾಂತ ಲಿಮಿಟೆಡ್‌ನಿಂದ ಬಿಜೆಪಿಗೆ ಭಾರೀ ಮೊತ್ತದ ದೇಣಿಗೆ, ವರದಿ ಬಹಿರಂಗದಿಂದ ರಾಜಕೀಯ ಚರ್ಚೆ

ಲಂಡನ್ ನಲ್ಲಿ ಪಟ್ಟಿ ಮಾಡಲಾದ ವೇದಾಂತ ಲಿಮಿಟೆಡ್, ಬಿಜೆಪಿಗೆ ₹97 ಕೋಟಿ ದೇಣಿಗೆ ನೀಡಿದೆ. ಈ ಮೊತ್ತವು ಹಿಂದಿನ ವರ್ಷಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. ಚುನಾವಣಾ ಬಾಂಡ್‌ಗಳ ಮೂಲಕವೂ ದೊಡ್ಡ ಮೊತ್ತದ ದೇಣಿಗೆ ನೀಡಲಾಗಿದೆ.
Read Full Story

04:21 PM (IST) Jul 14

Bigg Boss ಕಾರ್ತಿಕ್​ ಜೊತೆಗಿನ ಸಂಬಂಧವೇನು? ಓಪನ್​ ಆಗಿಯೇ ರಿವೀಲ್​ ಮಾಡಿದ ಸಂಗೀತಾ ಶೃಂಗೇರಿ

ಬಿಗ್​ಬಾಸ್​ 10ರಲ್ಲಿ ಹೆಚ್ಚು ಸದ್ದು ಮಾಡಿದ್ದ ಜೋಡಿಗಳ ಪೈಕಿ ಸಂಗೀತಾ ಶೃಂಗೇರಿ ಮತ್ತು ವಿನ್ನರ್​ ಕಾರ್ತಿಕ್​ ಮಹೇಶ್​ ಅವರದ್ದು. ಇವರಿಬ್ಬರ ನಡುವೆ ಇರುವುದೇನು? ಈ ಬಗ್ಗೆ ಓಪನ್​ ಆಗಿಯೇ ಮಾತನಾಡಿದ್ದಾರೆ ಸಂಗೀತಾ

 

Read Full Story

04:05 PM (IST) Jul 14

ಮಾನವ ಕಳ್ಳಸಾಗಣೆದಾರರ ಪಾಲಿಗೆ ಸಿಂಹಸ್ವಪ್ನ ಈ ವ್ಯಕ್ತಿ ಓದಿದ್ದು 7ನೇ ಕ್ಲಾಸ್, ರಕ್ಷಿಸಲ್ಪಟ್ಟ ಮಕ್ಕಳು ಸಾವಿರಾರು

ಏಳನೇ ತರಗತಿಗೆ ಶಾಲೆ ಬಿಟ್ಟ ರಾಜು ನೇಪಾಳಿ ಇಂದು ಸಾವಿರಾರು ಮಕ್ಕಳ ಪಾಲಿನ ರಕ್ಷಕ. ದುರಾಸ್ ಎಕ್ಸ್‌ಪ್ರೆಸ್ ಮೇಲ್ ಎನ್‌ಜಿಒ ಮೂಲಕ ಮಾನವ ಕಳ್ಳಸಾಗಣೆದಾರರಿಗೆ ಸಿಂಹಸ್ವಪ್ನವಾಗಿರುವ ರಾಜು, ಕಾಣೆಯಾದ ಮಕ್ಕಳನ್ನು ರಕ್ಷಿಸಿ, ಕುಟುಂಬಗಳಿಗೆ ಮರಳಿಸುವ ಕಾರ್ಯ ಮಾಡುತ್ತಿದ್ದಾರೆ.

Read Full Story

04:04 PM (IST) Jul 14

ಇನ್‌ಸ್ಟಾಗ್ರಾಂ ರೀಲ್ಸ್, ಯೂಟೂಬ್ ಶಾರ್ಟ್ಸ್ ನೋಡಿದರೆ ಮೆದುಳಿಗೆ ಗಂಭೀರ ಹಾನಿ! ಇಲ್ಲಿದೆ ಸ್ಟಡಿ ರಿಪೋರ್ಟ್

ಇನ್‌ಸ್ಟಾಗ್ರಾಮ್ ರೀಲ್ಸ್‌ ಮತ್ತು ಯೂಟ್ಯೂಬ್ ಶಾರ್ಟ್ಸ್‌ಗಳಂತಹ ಚಿಕ್ಕ ವಿಡಿಯೋಗಳನ್ನು ನಿರಂತರವಾಗಿ ನೋಡುವುದು ಮೆದುಳಿಗೆ ಹಾನಿಕಾರಕ ಎಂದು ಇತ್ತೀಚಿನ ಸಂಶೋಧನೆ ಬಹಿರಂಗಪಡಿಸಿದೆ. ಮನುಷ್ಯನ ದೇಹದ ಮೇಲಾಗುವ ಸಂಪೂರ್ಣ ದುಷ್ಪರಿಣಾಮಗಳ ಮಾಹಿತಿಗಾಗಿ ಈ ವರದಿ ಓದಿ..

Read Full Story

03:31 PM (IST) Jul 14

ಓದಿದ್ದು ಬರೀ 5ನೇ ಕ್ಲಾಸು, ಹಾಗಿದ್ದರೂ ಬಿ.ಸರೋಜಾದೇವಿ ಶ್ರೀಮಂತಿಕೆಯನ್ನು ಮ್ಯಾನೇಜ್‌ ಮಾಡಿದ್ದು ಹೇಗೆ?

ಕನ್ನಡ ಸಿನಿಮಾರಂಗದ ಹಿರಿಯ ನಟಿ ಬಿ. ಸರೋಜಾದೇವಿ ಅವರ ಬದುಕಿನ ಪಯಣ, ಅವರ ವಿದ್ಯಾಭ್ಯಾಸ ಮತ್ತು ಆರ್ಥಿಕ ನಿರ್ವಹಣೆಯ ಬಗ್ಗೆ ಒಂದು ನೋಟ. ತಮ್ಮ ಪತಿಯ ಬೆಂಬಲ ಹಾಗೂ ತಾಯಿಯ ಮಾರ್ಗದರ್ಶನದಿಂದ ಶ್ರೀಮಂತಿಕೆಯನ್ನು ಹೇಗೆ ನಿಭಾಯಿಸಿದರು ಎಂಬುದರ ಕುರಿತು ಒಳನೋಟ.
Read Full Story

03:05 PM (IST) Jul 14

ಬನ್ ಮಸ್ಕ್‌ನಲ್ಲಿ ಗಾಜಿನ ತುಂಡು ಪತ್ತೆ - ಐತಿಹಾಸಿಕ ಕೆಫೆ ಗುಡ್‌ಲಕ್‌ಗೆ ಬೀಗ ಜಡಿದ ಅಧಿಕಾರಿಗಳು

ಪುಣೆಯ ಐತಿಹಾಸಿಕ ಕೆಫೆ ಗುಡ್‌ಲಕ್‌ನಲ್ಲಿ ಗ್ರಾಹಕರೊಬ್ಬರಿಗೆ ಬನ್‌ನಲ್ಲಿ ಗಾಜಿನ ತುಂಡು ಸಿಕ್ಕಿದ ನಂತರ ಅಧಿಕಾರಿಗಳು ಕೆಫೆಗೆ ಬೀಗ ಹಾಕಿದ್ದಾರೆ.

Read Full Story

02:40 PM (IST) Jul 14

Akhilesh Vs Aniruddh Acharya - ಯಾರನ್ನೂ ಶೂದ್ರ ಎಂದು ಕರೆಯಬೇಡಿ - ಅಖಿಲೇಶ್ ಯಾದವ್ ಮನವಿ

ಅನಿರುದ್ಧ ಆಚಾರ್ಯರಿಗೆ ಅಖಿಲೇಶ್ ಯಾದವ್ ಅವರು ಯಾರನ್ನೂ ಶೂದ್ರ ಎಂದು ಕರೆಯಬೇಡಿ ಎಂದು ಮನವಿ ಮಾಡಿದ್ದಾರೆ. ವರ್ಣ ವಿಂಗಡಣೆ ಕುರಿತು ಇಬ್ಬರ ನಡುವೆ ಸೈದ್ಧಾಂತಿಕ ಚರ್ಚೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Read Full Story

01:53 PM (IST) Jul 14

8th Pay Commission - ದೇಶದ 44 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68 ಲಕ್ಷ ಪಿಂಚಣಿದಾರರಿಗೆ ಸಿಹಿ ಸುದ್ದಿ!

೮ನೇ ವೇತನ ಆಯೋಗದ ಶಿಫಾರಸುಗಳು ೨೦೨೬ರಲ್ಲಿ ಜಾರಿಗೆ ಬರಲಿದ್ದು, ಕೇಂದ್ರ ನೌಕರರ ಸಂಬಳ ಮತ್ತು ಪಿಂಚಣಿಯಲ್ಲಿ ಗಣನೀಯ ಹೆಚ್ಚಳವಾಗುವ ನಿರೀಕ್ಷೆಯಿದೆ. ಹಣದುಬ್ಬರ, ಆರ್ಥಿಕ ಸ್ಥಿತಿ ಮತ್ತು ನೌಕರರ ಅಗತ್ಯಗಳನ್ನು ಪರಿಗಣಿಸಿ ಆಯೋಗವು ಶಿಫಾರಸುಗಳನ್ನು ರೂಪಿಸುತ್ತದೆ.
Read Full Story

01:20 PM (IST) Jul 14

Online Fruad - ಇನ್​ಸ್ಟಾದಲ್ಲಿ ಲವ್​ ಮಾಡಿ ಬೆಂಗಳೂರ ಯುವಕನಿಗೆ 44 ಲಕ್ಷ ರೂ. ಟೋಪಿ ಹಾಕಿದ 'ಬೆಳದಿಂಗಳ ಬಾಲೆ'

ಇನ್​ಸ್ಟಾಗ್ರಾಮ್​ ಗೆಳತಿ ವೆಲ್​ಕಮ್​ ವೆಲ್​ಕಮ್​ ಅಂದ... 44 ಲಕ್ಷ ರೂಪಾಯಿ ಕಳಕೊಂಡ ಬೆಂಗಳೂರಿನ ಈ ಯುವಕನ ಕಥೆ ಕೇಳಿ! ಹೆಣ್ಣುಮಕ್ಕಳ ಬಣ್ಣಬಣ್ಣದ ಮಾತುಗಳಿಂದ ಮರುಳಾಗುವ ಮೊದಲು ಈ ಸ್ಟೋರಿಯನ್ನೊಮ್ಮೆ ನೋಡಿ...

 

Read Full Story

01:07 PM (IST) Jul 14

ಲಾರ್ಡ್ಸ್‌ ಟೆಸ್ಟ್ - ಕೊನೆಯ ದಿನದಾಟ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ವಾರ್ನಿಂಗ್ ಕೊಟ್ಟ ಇಂಗ್ಲೆಂಡ್ ಕೋಚ್!

ಲಾರ್ಡ್ಸ್ ಟೆಸ್ಟ್‌ನ ಕೊನೆಯ ದಿನ ಭಾರತಕ್ಕೆ ಗೆಲುವಿಗೆ 135 ರನ್‌ಗಳ ಅಗತ್ಯವಿದ್ದು, ಇಂಗ್ಲೆಂಡ್‌ಗೆ ಆರು ವಿಕೆಟ್‌ಗಳ ಅಗತ್ಯವಿದೆ. ಇಂಗ್ಲೆಂಡ್ ಬ್ಯಾಟಿಂಗ್ ಕೋಚ್ ಟೀಂ ಇಂಡಿಯಾಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಲಾರ್ಡ್ಸ್ ಪಿಚ್‌ನಲ್ಲಿ ಬ್ಯಾಟಿಂಗ್ ಸುಲಭವಲ್ಲ ಎಂಬುದು ಸಾಬೀತಾಗಿದೆ.
Read Full Story

01:05 PM (IST) Jul 14

ಮಲೆಯಾಳಿ ನರ್ಸ್ ನಿಮಿಷ ಪ್ರಿಯಾ ಸೇಫ್! ಮರಣದಂಡನೆ ತಪ್ಪಿಸುವುದಾಗಿ ಅನೌಪಚಾರಿಕವಾಗಿ ತಿಳಿಸಿದ ಯೆಮೆನ್!

ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ನಿಮಿಷಾ ಪ್ರಿಯಾ ಪ್ರಕರಣದಲ್ಲಿ ಗಲ್ಲು ಶಿಕ್ಷೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಭಾರತ ಸರ್ಕಾರದ ಮಧ್ಯಸ್ಥಿಕೆಯ ನಂತರ ಈ ಬೆಳವಣಿಗೆ ಕಂಡುಬಂದಿದ್ದು, ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಜುಲೈ 18ಕ್ಕೆ ಮುಂದೂಡಿದೆ.
Read Full Story

12:45 PM (IST) Jul 14

B.Saroja Devi death - ದೇವರ ಪೂಜೆ ಮಾಡಿ ಉಸಿರು ನಿಲ್ಲಿಸಿದ ನಟಿ; 'ಅಭಿನಯ ಸರಸ್ವತಿ'ಯ ಅಂತಿಮ ಕ್ಷಣ ಹೀಗಿತ್ತು...

ಇಂದು ಇಹಲೋಕ ತ್ಯಜಿಸಿದ ಹಿರಿಯ ನಟಿ ಬಿ.ಸರೋಜಾ ದೇವಿ ಅಂತಿಮ ಕ್ಷಣ ಹೇಗಿತ್ತು? ಅವರ ಜೀವನದ ಅಪೂರ್ವದ ಕ್ಷಣವೇನು? ಇಲ್ಲಿದೆ ಮಾಹಿತಿ...

 

Read Full Story

12:42 PM (IST) Jul 14

ಕೃಷ್ಣ ಸುಂದರಿ ಸ್ಯಾನ್ ರಾಚೆಲ್ - ಪುದುಚೇರಿಯಲ್ಲಿ ಸಾವಿಗೆ ಶರಣಾದ ಖ್ಯಾತ ಮಾಡೆಲ್

ಖ್ಯಾತ ಮಾಡೆಲ್ ತಮ್ಮ ಕೃಷ್ಣ ವರ್ಣದಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿದ್ದ ಸ್ಯಾನ್ ರಾಚೆಲ್ ಬದುಕಿಗೆ ಗುಡ್‌ ಬಾಯ್ ಹೇಳಿದ್ದಾರೆ. ತನ್ನ ತಂದೆಯ ಮನೆಗೆ ಹೋಗಿ ಬಂದ ನಂತರ ರಾಚೆಲ್ ಅತೀಯಾದ ಮಾತ್ರೆಗಳನ್ನು ಸೇವಿಸಿ ಸಾವಿಗೆ ಶರಣಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Read Full Story

12:34 PM (IST) Jul 14

ಏರ್ ಇಂಡಿಯಾ ಪತನಕ್ಕೆ ಸ್ವಿಚ್‌ ಕಾರಣವಲ್ಲ, ಬೋಯಿಂಗ್ ಮತ್ತು FAA ಸ್ಪಷ್ಟನೆ, ಹಾಗಾದ್ರೆ ತಪ್ಪಾಗಿದ್ದೆಲ್ಲಿ?

ಅಹಮದಾಬಾದ್‌ನ ಏರ್ ಇಂಡಿಯಾ ವಿಮಾನ ಪತನದ ತನಿಖಾ ವರದಿ ಬಹಿರಂಗಗೊಂಡಿದೆ. ಇಂಧನ ನಿಯಂತ್ರಣ ಸ್ವಿಚ್‌ಗಳು ಅಪಘಾತಕ್ಕೆ ಕಾರಣವಲ್ಲ ಎಂದು ವರದಿ ಸ್ಪಷ್ಟಪಡಿಸಿದೆ. ಟೇಕ್ ಆಫ್ ಸಮಯದಲ್ಲಿ ಇಂಧನ ಸ್ವಿಚ್‌ಗಳು ಏಕೆ ನಿಷ್ಕ್ರಿಯಗೊಂಡವು ಎಂಬುದು ಇನ್ನೂ ನಿಗೂಢವಾಗಿದೆ.
Read Full Story

11:54 AM (IST) Jul 14

ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂದು ಮತ್ತೊಂದು ವಿಮಾನ

ಲಂಡನ್ ಸೌಥೆಂಡ್ ವಿಮಾನ ನಿಲ್ದಾಣದಲ್ಲಿ ಭೀಕರ ವಿಮಾನ ದುರಂತ ಸಂಭವಿಸಿದ್ದು, ವಿಮಾನದಲ್ಲಿದ್ದವರೆಲ್ಲರೂ ಸಾವನ್ನಪ್ಪಿದ್ದಾರೆ. 

Read Full Story

11:26 AM (IST) Jul 14

ಎಲಾನ್ ಮಸ್ಕ್ ಅಥವಾ ಮಾರ್ಕ್ ಜುಕರ್‌ಬರ್ಗ್ ಯಾರು ಹೆಚ್ಚು ಹಣ ಗಳಿಸುತ್ತಾರೆ, ತಾಂತ್ರಿಕ ಜಗತ್ತಿನಲ್ಲಿ ಯಾರು ಪವರ್‌ಫುಲ್ ಗೊತ್ತಾ?

ತಂತ್ರಜ್ಞಾನ ಕ್ಷೇತ್ರದ ದಿಗ್ಗಜರಾದ ಎಲಾನ್ ಮಸ್ಕ್ ಮತ್ತು ಮಾರ್ಕ್ ಜುಕರ್‌ಬರ್ಗ್, ಗಳಿಕೆ ಮತ್ತು ಪ್ರಭಾವದಲ್ಲಿ ಯಾರು ಮುಂದಿದ್ದಾರೆ ಎಂಬುದನ್ನು ಈ ಲೇಖನ ವಿಶ್ಲೇಷಿಸುತ್ತದೆ. 

Read Full Story

10:31 AM (IST) Jul 14

ಸಿಗಂದೂರು ಸೇತುವೆ - ಬರೀ ಸಂಪರ್ಕವಲ್ಲ, ಬದುಕಿಗೆ ಬೆಳಕು - ಸಂಸದ ಬಿವೈ ರಾಘವೇಂದ್ರ

ಶರಾವತಿ ಹಿನ್ನೀರಿನ ದ್ವೀಪದ ಜನರ ಬದುಕು ಬದಲಿಸಿದ ಸೇತುವೆ ನಿರ್ಮಾಣದ ಹಿಂದಿನ ಕಥೆ. ದಶಕಗಳ ಕನಸು ನನಸಾಗಿ, ಸಂಪರ್ಕ ಕ್ರಾಂತಿಯ ಮೂಲಕ ಹೊಸ ಯುಗಕ್ಕೆ ನಾಂದಿ.
Read Full Story

10:15 AM (IST) Jul 14

Spit Jihad controversy - ಲವ್ ಜಿಹಾದ್‌ನಿಂದ ಉಗುಳು ಜಿಹಾದ್‌ಗೆ, ಶ್ರಾವಣದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ? ನಂದಕಿಶೋರ್ ಗುರ್ಜರ್‌ ಗಂಭೀರ ಆರೋಪ

ಗಾಜಿಯಾಬಾದ್‌ನಲ್ಲಿ ಜ್ಯೂಸ್‌ನಲ್ಲಿ ಉಗುಳುವ ಮೂಲಕ ಆಹಾರವನ್ನು ಅಪವಿತ್ರಗೊಳಿಸುವ ಘಟನೆ ಬೆಳಕಿಗೆ ಬಂದಿದೆ. ಶಾಸಕ ನಂದಕಿಶೋರ್ ಗುರ್ಜರ್ ಈ ಘಟನೆಯನ್ನು 'ಉಗುಳು ಜಿಹಾದ್' ಎಂದು ಕರೆದಿದ್ದು, ಕಠಿಣ ಕಾನೂನು ಜಾರಿಗೆ ಒತ್ತಾಯಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
Read Full Story

07:56 AM (IST) Jul 14

ಜಿಎಸ್‌ಟಿಗೆ ಹೆದರಿ ಯುಪಿಐ ಪೇಮೆಂಟ್‌ಗೆ ಹಿಂದೇಟು!

 ಸಣ್ಣ ಗಾತ್ರದ ವ್ಯಾಪಾರಿಗಳಿಗೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯಿಂದ ಜಿಎಸ್‌ಟಿ ತೆರಿಗೆ ನೋಟಿಸ್‌ಗಳು ಬರುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿನ ಅನೇಕ ವ್ಯಾಪಾರಿಗಳು ಯುಪಿಐ ಮೂಲಕ ಹಣ ಸ್ವೀಕರಿಸುವುದಕ್ಕೆ ಹಿಂದೇಟು   ಹಾಕುತ್ತಿದ್ದಾರೆ.

Read Full Story

07:43 AM (IST) Jul 14

ಬ್ಯಾಡ್ಮಿಂಟನ್ ಜೋಡಿ ಸೈನಾ ನೆಹ್ವಾಲ್ ಪರುಪಳ್ಳಿ ಕಶ್ಯಪ್ ದಾಂಪತ್ಯದಲ್ಲಿ ಬಿರುಕು - ವಿಚ್ಛೇದನ ಘೋಷಿಸಿದ ಜೋಡಿ

ಭಾರತದ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ತಮ್ಮ 7 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸುತ್ತಿದ್ದಾರೆ. ಸೈನಾ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಜೀವನದ ಹೊಸ ಹಾದಿಯ ಹುಡುಕಾಟದಲ್ಲಿ ಬೇರೆಯಾಗಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.
Read Full Story

07:41 AM (IST) Jul 14

500 ಮುಖಬೆಲೆ ನೋಟು ರದ್ದಾಗುತ್ತಾ ? - ಕೇಂದ್ರದಿಂದ ಸ್ಪಷ್ಟನೆ

‘ದೇಶದಲ್ಲಿ ಶೀಘ್ರದಲ್ಲಿಯೇ 500 ರು. ಮುಖಬೆಲೆಯ ನೋಟುಗಳು ರದ್ದಾಗಲಿದೆ’ ಎಂಬ ಸಂದೇಶ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

Read Full Story

07:29 AM (IST) Jul 14

ಇಂದು ಭೂಮಿಯತ್ತ ಶುಭಾಂಶು ಪಯಣ

ಆಕ್ಸಿಯೋಂ-4 ಮಿಷನ್‌ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ (ಐಎಸ್‌ಎಸ್‌) 18 ದಿನ ತಂಗಿದ್ದ ಭಾರತೀಯ ಗಗನಯಾನಿ ಶುಭಾಂಶು ಶುಕ್ಲಾ ಹಾಗೂ ಇತರೆ ಮೂವರು ಗಗನಯಾತ್ರಿಗಳು ಭಾರತೀಯ ಕಾಲಮಾನ ಸೋಮವಾರ ಸಂಜೆ 4.35ಕ್ಕೆ ಭೂಮಿಯತ್ತ ಪ್ರಯಾಣ ಆರಂಭಿಸಲಿದ್ದಾರೆ.

Read Full Story

07:14 AM (IST) Jul 14

ಕೇರಳದಲ್ಲಿ ನಿಪಾಗೆ 2ನೇ ಬಲಿ - ಆರು ಜಿಲ್ಲೆಗಳಲ್ಲಿ ನಿಪಾ ವೈರಸ್ ಭೀತಿ ಹೈ ಅಲರ್ಟ್

ಕೇರಳದಲ್ಲಿ ನಿಪಾ ವೈರಸ್‌ಗೆ ಎರಡನೇ ಬಲಿ ದೃಢಪಟ್ಟಿದ್ದು, ಆರು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಿಪಾ ಭೀತಿ ಹೆಚ್ಚಾಗಿದೆ.
Read Full Story

More Trending News