Published : May 14, 2026, 06:51 AM ISTUpdated : May 14, 2026, 10:14 PM IST

India Latest News Live: ಅಮೆರಿಕ H-1B ವೀಸಾ ಹಿಂದೆ ಭಾರತದ ಚಿಲ್ಕೂರು ದೇವಸ್ಥಾನ ಕೈವಾಡ, ಯುಎಸ್ ಸಂಸದನ ವಂಗ್ಯ

ಸಾರಾಂಶ

ನವದೆಹಲಿ: ಪ್ರಧಾನಿ ಮೋದಿ ಮಿತವ್ಯಯ ಕರೆ, ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ಸುಂಕ ಶೇ.15ರಷ್ಟು ಏರಿಕೆ ಬೆನ್ನಲ್ಲೇ ದೇಶದಲ್ಲಿ ಒಂದೇ ದಿನ ಚಿನ್ನ, ಬೆಳ್ಳಿ ದರ ಗಗನಕ್ಕೇರಿದೆ. 10 ಗ್ರಾಂ ಚಿನ್ನದ ದರ 8,500 ರು.ಹೆಚ್ಚಾಗಿದ್ದರೆ, ಬೆಳ್ಳಿ ಕೇಜಿಗೆ 20,500 ರು. ಜಿಗಿದಿದೆ.

ದೆಹಲಿಯಲ್ಲಿ ಬುಧವಾರ ಅಂತ್ಯದ ವೇಳೆ 10 ಗ್ರಾಂಗೆ 1,56,800ರು.ಇದ್ದ ಚಿನ್ನದ ದರ 8550 ರು. ಏರಿಕೆ ಕಂಡು 1,65,350 ರು.ಗೆ ತಲುಪಿದೆ. ಬೆಳ್ಳಿ ಕೇಜಿಗೆ 2,97, 500 ರು.ಗೆ ತಲುಪಿದೆ. ಹಿಂದಿನ ದಿನ ಈ ದರ 2,77,000 ರು.ಇತ್ತು.

ಬೆಂಗಳೂರಲ್ಲೂ ಏರಿಕೆ

ಬೆಂಗಳೂರಿನಲ್ಲಿಯೂ ದರ ಏರಿಕೆ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನ 8020 ರು. ಹೆಚ್ಚಳವಾಗಿ 1,62, 000 ರು.ಗೆ ತಲುಪಿದೆ. 22 ಕ್ಯಾರೆಟ್‌ ಚಿನ್ನ 7350 ರು. ಏರಿಕೆಯಾಗಿ 1,48,500 ರು. ಆಗಿದೆ. ಇನ್ನು ಚಿನ್ನ ಕೇಜಿಗೆ 20,000 ರು. ಹೆಚ್ಚಳದೊಂದಿಗೆ 3 ಲಕ್ಷ ರು.ಗೆ ತಲುಪಿದೆ.

10:14 PM (IST) May 14

ಅಮೆರಿಕ H-1B ವೀಸಾ ಹಿಂದೆ ಭಾರತದ ಚಿಲ್ಕೂರು ದೇವಸ್ಥಾನ ಕೈವಾಡ, ಯುಎಸ್ ಸಂಸದನ ವಂಗ್ಯ

ಅಮೆರಿಕ ಸಂಸದ ಇದೀಗ ಭಾರಿ ವಿವಾದ ಸೃಷ್ಟಿಸಿದ್ದಾರೆ. ಅಮೆರಿಕದ H-1B ವೀಸಾ ಭಾರತೀಯರ ಕೈಸೇರುತ್ತಿದೆ. ಅಮೆರಿಕದ ವೀಸಾ ಕಾರ್ಟೆಲ್ ವ್ಯವಸ್ಥೆ ಹೀಗೆ ಹದಗೆಡಲು ಭಾರತದ ಚಿಲ್ಕೂರು ದೇವಸ್ಥಾನದ ಕೈವಾಡವಿದೆ ಎಂದಿದ್ದಾರೆ

Read Full Story

08:48 PM (IST) May 14

ಕೇವಲ 22 ಟಿಕೆಟ್ ಸೇಲ್, ಪಾಕಿಸ್ತಾನದ ಧುರಂಧರ್ ಸಿನಿಮಾದ ಕಣ್ಣೀರ ಕತೆ ಈಗ ಫುಲ್ ಟ್ರೋಲ್

ಭಾರತದ ಧುರಂಧರ್ ಸಿನಿಮಾ ಪಾಕಿಸ್ತಾನವನ್ನು ನೆಗಟೀವ್ ರೀತಿಯಲ್ಲಿ ತೋರಿಸಿದೆ. ಉಗ್ರರರೆಂದು ಬಿಂಬಿಸಿದೆ ಎಂದು ಪ್ರತಿಯಾಗಿ ಮೆರಾ ಲ್ಯಾರಿ ಎಂಬ ಸಿನಿಮಾ ರಿಲೀಸ್ ಮಾಡಿತ್ತು. ಇದರ ಪಯಣ ಈಗ ಬಾರಿ ಟ್ರೋಲ್ ಆಗಿದೆ.

 

Read Full Story

08:04 PM (IST) May 14

ಆಧ್ಯಾತ್ಮಕ್ಕೆ ವಾಲಿದ್ರಾ ರಣಬೀರ್? ರಾಮಾಯಣ ರಿಲೀಸ್‌ಗೂ ಮುನ್ನ ಆಯೋಧ್ಯೆಯಲ್ಲಿ ಭೂಮಿ ಖರೀದಿ

ಬಾಲಿವುಡ್ ನಟ ರಣಬೀರ್ ಕಪೂರ್ ರಾಮಾಯಾಣ ಸಿನಿಮಾದ ಶ್ರೀರಾಮನ ಪಾತ್ರಕ್ಕಾಗಿ ಹಲವು ತ್ಯಾಗ ಮಾಡಿದ್ದಾರೆ. ಇದೀಗ ರಣಬೀರ್ ಕಪೂರ್ ಆಧ್ಯಾತ್ಮಕ್ಕೆ ವಾಲಿದ್ರಾ? ಆಯೋಧ್ಯೆಯಲ್ಲಿ ಭೂಮಿ ಖರೀದಿ ಕೆಲ ಸೂಚನೆ ನೀಡಿದೆ.

 

Read Full Story

07:33 PM (IST) May 14

ದಳಪತಿ ವಿಜಯ್​ಗೆಳತಿ ತ್ರಿಷಾಗೆ ಜಾಕ್​ಪಾಟ್; ಟ್ರೆಂಡಿಂಗ್ ನಟಿಗೆ ಬಂತು ಸೂಪರ್ ಆಫರ್..!

ತ್ರಿಷಾ.. ಸದ್ಯ ಕಾಲಿವುಡ್‌ನಲ್ಲಿ ಸಂಚಲಸೃಷ್ಟಿಸಿರುವ ನಟಿ. ಅದರಲ್ಲೂ ವಿಜಯ್ ದಳಪತಿ ಜೊತೆ ಹಿಂದೆ ಮುಂದೆ ಸುತ್ತುತ್ತಿರೋ ತ್ರಿಷಾ ಕೃಷ್ಣನ್​ತಮಿಳುನಾಡಿನ ಹೊಸ ಜಯಲಲಿತಾ ಅನ್ನೋ ಹಾಗೆ ಫೊಟ್ರೆ ಆಗುತ್ತಿದ್ದಾರೆ. ಆ ಕಡೆ ವಿಜಯ್​ ತಮಿಳುನಾಡು ಸಿಎಂ ಆಗುತ್ತಿದ್ದಂತೆ ಈ ಕಡೆ ನಟಿ ತ್ರಿಷಾಗೆ ಭಾರಿ ಡಿಮ್ಯಾಂಡ್​ ಕ್ರಿಯೆಟ್ ಆಗಿದೆ.

Read Full Story

06:55 PM (IST) May 14

ರೈಲು ಪ್ರಯಾಣಿಕರ ಗಮನಕ್ಕೆ - ಬೆಂಗಳೂರು, ಹುಬ್ಬಳ್ಳಿ ಸೇರಿ ಕೆಲ ಜಿಲ್ಲೆಗಳ ರೈಲು ರದ್ದು, ಸಂಚಾರ ಬದಲು

ರೈಲು ಮಾರ್ಗದ ಕಾಮಗಾರಿಯಿಂದಾಗಿ, ವಿಜಯಪುರ-ಹುಬ್ಬಳ್ಳಿ ವಿಶೇಷ ರೈಲು, ಪಂಚಗಂಗಾ ಎಕ್ಸ್‌ಪ್ರೆಸ್ ಮತ್ತು ಮುರುಡೇಶ್ವರ-ಬೆಂಗಳೂರು ಎಕ್ಸ್‌ಪ್ರೆಸ್ ಸೇರಿದಂತೆ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕೆಲವು ರೈಲುಗಳನ್ನು ಭಾಗಶಃ ರದ್ದುಪಡಿಸಲಾಗಿದೆ. ಡಿಟೇಲ್ಸ್​ ಇಲ್ಲಿದೆ.

Read Full Story

06:34 PM (IST) May 14

ವೈಭವ್ ಸೂರ್ಯವಂಶಿಗೆ ಜಾಕ್‌ಪಾಟ್, ಟೀಂ ಇಂಡಿಯಾ ಎ ತಂಡಕ್ಕೆ 15ರ ಪೋರನ ಆಯ್ಕೆ

ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸುತ್ತಿರುವ ವೈಭವ್ ಸೂರ್ಯವಂಶಿಗೆ ಬಿಸಿಸಿಐ ಮಣೆ ಹಾಕಿದೆ. ಶ್ರೀಲಂಕಾ, ಆಫ್ಘಾನಿಸ್ತಾನ ವಿರುದ್ದದ ತ್ರಿಕೋನ ಸರಣಿಗೆ ಭಾರತ ಎ ತಂಡ ಪ್ರಕಟಗೊಂಡಿದ್ದು, ವೈಭವ್‌ಗೆ ಸ್ಥಾನ ನೀಡಲಾಗಿದೆ.

 

Read Full Story

05:51 PM (IST) May 14

ದೀದಿಗೆ ಮತ್ತೆ ಒಕ್ಕರಿಸಿದ ಗ್ರಹಚಾರ - ಲಾಯರ್​ ಡ್ರೆಸ್​ನಲ್ಲಿ ಕೋರ್ಟ್​ಗೆ ಭರ್ಜರಿ ಎಂಟ್ರಿ ಕೊಡುತ್ತಲೇ ಫಜೀತಿ

ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಲ್ಕತ್ತಾ ಹೈಕೋರ್ಟ್‌ನಲ್ಲಿ ವಕೀಲರಾಗಿ ಕರಿಕೋಟು ಧರಿಸಿ ಕಾಣಿಸಿಕೊಂಡಿದ್ದಾರೆ. ಆದರೆ, ಭಾರತೀಯ ಬಾರ್ ಕೌನ್ಸಿಲ್ ಅವರ ವಕೀಲಿ ವೃತ್ತಿಯ ಅರ್ಹತೆಯ ಬಗ್ಗೆ ಪ್ರಶ್ನಿಸಿ, ಪರವಾನಗಿಗೆ ಸಂಬಂಧಿಸಿದ ದಾಖಲೆಗಳನ್ನು ಕೇಳಿದೆ. ಈಗ ಅವರು ತಮ್ಮ ವಕೀಲಿ ವೃತ್ತಿ ನಡೆಸುವ ಹಕ್ಕನ್ನು ನಿಯಮಗಳ ಪ್ರಕಾರ ಸಾಬೀತುಪಡಿಸಬೇಕಾಗಿದೆ.
Read Full Story

05:45 PM (IST) May 14

ಮೊದಲ ಸ್ವದೇಶಿ ಸೆಮಿ ಹೈಸ್ಪೀಡ್‌ ರೈಲಿಗೆ ಕೇಂದ್ರ ಅಸ್ತು, 20667 ಕೋ ರೂ ವೆಚ್ಚದ ಯೋಜನೆ ಜಾರಿ, ಎಲ್ಲಿಂದ ಎಲ್ಲಿಗೆ ಪಯಣ

ಭಾರತದ ಮೊದಲ ಸ್ವದೇಶಿ ಸೆಮಿ ಹೈಸ್ಪೀಡ್ ರೈಲು ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅಹಮದಾಬಾದ್-ಧೋಲೇರಾ ನಡುವಿನ ಈ ಕಾರಿಡಾರ್, ₹20,667 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದರ ಜೊತೆಗೆ ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ. 

Read Full Story

05:27 PM (IST) May 14

ಯುವತಿಯ ಜೀವ ಕಸಿದ ಮುಟ್ಟು ಮುಂದೂಡುವ ಮಾತ್ರೆ - ಟ್ಯಾಬ್ಲೆಟ್ಸ್​ ಭೀಕರತೆ ತೆರೆದಿಟ್ಟ ವೈದ್ಯರು

ಪೂಜೆ, ಸಮಾರಂಭಗಳಿಗಾಗಿ ಮುಟ್ಟನ್ನು ಮುಂದೂಡುವ ಮಾತ್ರೆ ಸೇವಿಸಿದ ಯುವತಿಯೊಬ್ಬಳು ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಈ ಹಾರ್ಮೋನು ಮಾತ್ರೆಗಳು ಥ್ರಂಬೋಸಿಸ್‌ನಂತಹ ಗಂಭೀರ ಅಪಾಯ ಉಂಟುಮಾಡಬಹುದು,  ಇಂತಹ ಮಾತ್ರೆಗಳನ್ನು ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ. 

Read Full Story

05:22 PM (IST) May 14

ಮೋದಿ ಮನವಿ ಬೆನ್ನಲ್ಲೇ ವಾರದಲ್ಲಿ 2 ದಿನ ವರ್ಕ್ ಫ್ರಮ್ ಹೋಮ್ ಕಡ್ಡಾಯ,ದೆಹಲಿ ಸರ್ಕಾರ ಆದೇಶ

ಯುದ್ಧ ಸಂಕಷ್ಟದಿಂದ ಎದುರಾಗಿರುವ ಸವಾಲು ಎದುರಿಸಲು ಮೋದಿ ಮಾಡಿದ ಹಲವು ಮನವಿಯಲ್ಲಿ ಮನೆಯಿಂದ ಕೆಲಸ ಕೂಡ ಒಂದು. ಈ ಮನವಿ ಬೆನ್ನಲ್ಲೇ ಇದೀಗ ವಾರದಲ್ಲಿ 2 ದಿನ ಮನೆಯಿಂದ ಕೆಲಸ ಮಾಡಲು ಸೂಚಿಸಿದೆ.

Read Full Story

04:55 PM (IST) May 14

ಒಮಾನ್ ಕರಾವಳಿಯಲ್ಲಿ ಭಾರತದ ಹಡಗಿನ ಮೇಲೆ ದಾಳಿ, ಮಳುಗುತ್ತಿದ್ದ ಶಿಪ್‌ನಿಂದ 14 ಸಿಬ್ಬಂದಿ ರಕ್ಷಣೆ

ಒಮಾನ್ ಕರಾವಳಿ ಬಳಿ ಡ್ರೋನ್ ದಾಳಿಗೆ ತುತ್ತಾಗಿ ಗುಜರಾತ್ ಮೂಲದ 'ಹಾಜಿ ಅಲಿ' ಎಂಬ ಭಾರತೀಯ ಸರಕು ಹಡಗು ಮುಳುಗಡೆಯಾಗಿದೆ. ಹಡಗಿನಲ್ಲಿದ್ದ 14 ಭಾರತೀಯ ನಾವಿಕರನ್ನು ಒಮಾನ್ ಅಧಿಕಾರಿಗಳು ರಕ್ಷಿಸಿದ್ದಾರೆ.

Read Full Story

04:36 PM (IST) May 14

ತಮಿಳುನಾಡು ತಲೈವಿ ಕೋಟೆಗೆ ದಳಪತಿ ಮುತ್ತಿಗೆ; ಅಮ್ಮನ ದೊಡ್ಡ ಸಾಮ್ರಾಜ್ಯಕ್ಕೆ ಬೆಂಕಿ ಹಚ್ಚಿದ ವಿಜಯ್!

ತಲೈವಾ ಚಿತ್ರದ ಪೋಸ್ಟರ್ಗಳಲ್ಲಿ ಹಾಗೂ ಹಾಡುಗಳಲ್ಲಿ Time to Lead ಅನ್ನೋ ಸಾಲುಗಳನ್ನು ಬಳಸಲಾಗಿತ್ತು. ಇದನ್ನೇ ನೇರವಾಗಿ ತಮಗೆ ಸವಾಲು ಎಂದು ಪರಿಗಣಿಸಿದ ಅಂದಿನ ಜಯಲಲಿತಾ ಸರ್ಕಾರ ಚಿತ್ರಕ್ಕೆ ಬಾಂಬ್ ಬೆದರಿಕೆ ಇದೆ ಅನ್ನೋ ಕಾರಣಗಳನ್ನು ನೀಡಿ ತಮಿಳುನಾಡಿನಲ್ಲಿ ಸಿನಿಮಾ ಬಿಡುಗಡೆಗೆಯನ್ನೇ ನಿಲ್ಲಿಸಿತ್ತು.

Read Full Story

04:04 PM (IST) May 14

ಸನಾತನ ಧರ್ಮ ನಿರ್ಮೂಲನೆ ಮಾಡಲೆಂದೇ ನಾವು ಹುಟ್ಟಿದ್ದು; ನಾಲಿಗೆ ಹರಿ ಬಿಟ್ಟ ಸಿಎಂ ವಿಜಯ್ ಜೋಸೆಫ್ ಪಕ್ಷದ ಶಾಸಕ ಮುಸ್ತಫಾ

ತಮಿಳುನಾಡಿನಲ್ಲಿ ಸನಾತನ ಧರ್ಮ ನಿರ್ಮೂಲನೆ ಕುರಿತ ಉದಯನಿಧಿ ಸ್ಟಾಲಿನ್ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದೆ. ಇದಕ್ಕೆ ಟಿವಿಕೆ ಶಾಸಕ ಮುಸ್ತಫಾ ಬೆಂಬಲ ಸೂಚಿಸಿದ್ದು, ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ರಾಜಕೀಯ ಸಂಘರ್ಷವು ರಾಜ್ಯದಲ್ಲಿ ಚರ್ಚೆಯ ಬಿರುಗಾಳಿಯನ್ನೇ ಎಬ್ಬಿಸಿದೆ.
Read Full Story

03:06 PM (IST) May 14

ಯುಪಿಯಲ್ಲಿ ಚಂಡಮಾರುತ ಆರ್ಭಟ, ತಗಡಿನ ಶೆಡ್ ಸಮೇತ ಹಾರಿಹೋದ ವ್ಯಕ್ತಿ, 50ಅಡಿ ಎತ್ತರ 300 ಮೀಟರ್ ದೂರ ಬಿದ್ದು ಬದುಕಿತು ಗಟ್ಟಿ ಜೀವ

ಮಾನ್ಸೂನ್‌ಗೂ ಮುನ್ನ ಉತ್ತರ ಪ್ರದೇಶದಲ್ಲಿ ಉಂಟಾದ ಹವಾಮಾನ ವೈಪರೀತ್ಯದಿಂದ 89 ಜನರು ಸಾವನ್ನಪ್ಪಿದ್ದಾರೆ. ಬರೇಲಿ ಜಿಲ್ಲೆಯಲ್ಲಿ, ಚಂಡಮಾರುತದ ರಭಸಕ್ಕೆ ವ್ಯಕ್ತಿಯೊಬ್ಬ ತಗಡಿನ ಶೆಡ್ ಸಮೇತ ಗಾಳಿಯಲ್ಲಿ ಹಾರಿಹೋಗಿ ಗಾಯಗೊಂಡ ಘಟನೆ ವೈರಲ್ ಆಗಿದೆ. ಸರ್ಕಾರವು ಸಂತ್ರಸ್ತರಿಗೆ ಪರಿಹಾರ ಕಾರ್ಯಗಳನ್ನು ಕೈಗೊಂಡಿದೆ.
Read Full Story

01:48 PM (IST) May 14

9ರ ಬಾಲಕನ ಕಿಡ್​ನ್ಯಾಪ್- ಮತಾಂತರ, ಉಗ್ರರ ತರಬೇತಿ! ಆಧಾರ್​ ಕಾರ್ಡ್​ನಿಂದ ಸಿಕ್ಕವನ ಕರುಳುಹಿಂಡುವ ಸ್ಟೋರಿ

2016ರಲ್ಲಿ ಚಂಡೀಗಢದಿಂದ ಅಪಹರಣಕ್ಕೊಳಗಾದ ವಿವೇಕ್ ಕುಮಾರ್ ಎಂಬ ಬಾಲಕ, ಎಂಟು ವರ್ಷಗಳ ನಂತರ ಉತ್ತರ ಪ್ರದೇಶದ ಮದರಸಾವೊಂದರಲ್ಲಿ ಪತ್ತೆಯಾಗುತ್ತಾನೆ. ಈ ಅವಧಿಯಲ್ಲಿ ಅವನನ್ನು ಮೊಹಮ್ಮದ್ ಉಮರ್ ಎಂದು ಮತಾಂತರಿಸಿ, ಭಯೋತ್ಪಾದಕ ತರಬೇತಿ ನೀಡಲಾಗಿತ್ತು. ನಕಲಿ ಆಧಾರ್ ಕಾರ್ಡ್ ಮಾಡಲು ಹೋದಾಗ ಬಯೋಮೆಟ್ರಿಕ್‌ನಿಂದಾಗಿ ಈ ಭಯಾನಕ ಸತ್ಯ ಬಯಲಾಗಿದೆ.
Read Full Story

12:13 PM (IST) May 14

ರಾಹುಲ್ ಗಾಂಧಿ ಆಪ್ತನಿಗೆ ಶಾಕ್; ವಿ.ಡಿ.ಸತೀಶನ್‌ಗೆ ಕೇರಳಂ ರಾಜ್ಯದ ಸಿಎಂ ಪಟ್ಟ

ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ.ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಅಧಿಕೃತವಾಗಿ ಘೋಷಣೆ ಮಾಡಿದೆ.

Read Full Story

12:01 PM (IST) May 14

ತಿರುಚ್ಚಿ ಪೂರ್ವದಿಂದ ಸ್ಪರ್ಧೆ? ರಾಜಕೀಯ ಎಂಟ್ರಿ ಬಗ್ಗೆ ತ್ರಿಷಾ ಕೊಟ್ಟಿದ್ರು ಸ್ಪಷ್ಟನೆ!

ಕಾಲಿವುಡ್‌ನ ಜನಪ್ರಿಯ ನಟಿ ತ್ರಿಷಾ ರಾಜಕೀಯಕ್ಕೆ ಬರ್ತಾರೆ, ತಿರುಚ್ಚಿ ಪೂರ್ವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ತ್ರಿಷಾ ಈ ಹಿಂದೆಯೇ ನೀಡಿದ್ದ ಹೇಳಿಕೆಯೊಂದು ಈಗ ವೈರಲ್ ಆಗಿದೆ. ಆ ಕುರಿತ ಪೂರ್ಣ ವಿವರ ಇಲ್ಲಿದೆ.
Read Full Story

11:38 AM (IST) May 14

Daresh Ahmed - ವೈದ್ಯ ವೃತ್ತಿ ಬಿಟ್ಟು IAS ಆಗಿದ್ದ, ಈಗ ತಮಿಳುನಾಡಿನ ಆರೋಗ್ಯ ಇಲಾಖೆ ಕಾರ್ಯದರ್ಶಿಯಾದ ಈ ವ್ಯಕ್ತಿ ಯಾರು?

ವೈದ್ಯ ವೃತ್ತಿ ಬಿಟ್ಟು ಐಎಎಸ್ ಅಧಿಕಾರಿಯಾದ ಡಾ. ದರೇಶ್ ಅಹ್ಮದ್ ಈಗ ತಮಿಳುನಾಡಿನ ಹೊಸ ಆರೋಗ್ಯ ಕಾರ್ಯದರ್ಶಿ. 2005ರ ಬ್ಯಾಚ್‌ನ ಈ ಅಧಿಕಾರಿಗೆ ವೈದ್ಯಕೀಯ ಹಿನ್ನೆಲೆ ಇದೆ, ಲಂಡನ್‌ನಲ್ಲೂ ಓದಿದ್ದಾರೆ. ಇವರ ನೇಮಕದಿಂದ ರಾಜ್ಯದ ಆರೋಗ್ಯ ವ್ಯವಸ್ಥೆಯಲ್ಲಿ ಜನಪರ ಬದಲಾವಣೆಗಳಾಗುವ ನಿರೀಕ್ಷೆ ಇದೆ.
Read Full Story

10:06 AM (IST) May 14

5 ಸಲ ಸರ್ಜರಿಯಾಗಿ ಮುಖವೇ ಹಾಳಾಯ್ತು, ಆದರೂ ಅವನು ನನ್ನ ಬಿಟ್ಟು ಹೋಗಿಲ್ಲ - The Family Man Series ನಟನ ಪತ್ನಿ!

Actor Sharib Hashmi: 'ಫ್ಯಾಮಿಲಿ ಮ್ಯಾನ್' ಖ್ಯಾತಿಯ ನಟ ಶಾರಿಬ್ ಹಶ್ಮಿ ಪತ್ನಿ ನಸ್ರೀನ್ 6ನೇ ಬಾರಿಗೆ ಬಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಸರಣಿ ಶಸ್ತ್ರಚಿಕಿತ್ಸೆಗಳಿಂದ ಮುಖದ ರೂಪ ಬದಲಾದರೂ, ಪತಿ ಶಾರಿಬ್ ಅವರ ಅಚಲ ಪ್ರೀತಿ, ಬೆಂಬಲವೇ ತಮ್ಮ ದೊಡ್ಡ ಶಕ್ತಿ ಎಂದು ನಸ್ರೀನ್ ಹೇಳಿಕೊಂಡಿದ್ದಾರೆ.

 

Read Full Story

09:24 AM (IST) May 14

ಪುಷ್ಪಾ ಸರ್ಕಾರ ಎಂಬ ಉದಯನಿಧಿ ಸ್ಟಾಲಿನ್ ವ್ಯಂಗ್ಯಕ್ಕೆ ಸಿಎಂ ವಿಜಯ್ ಮೊದಲ ತಿರುಗೇಟು

ವಿಶ್ವಾಸಮತ ಗೆದ್ದ ಮುಖ್ಯಮಂತ್ರಿ ವಿಜಯ್, ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್‌ಗೆ ಅಂಕಿ-ಅಂಶಗಳ ಮೂಲಕ ತಿರುಗೇಟು ನೀಡಿದ್ದಾರೆ. ತಮ್ಮ ಟಿವಿಕೆ ಪಕ್ಷವು ಡಿಎಂಕೆಗಿಂತ ಹೆಚ್ಚು ಮತಗಳನ್ನು ಪಡೆದಿದೆ ಎಂದು ಸಾಬೀತುಪಡಿಸಿ, ತಮ್ಮ ಸರ್ಕಾರವು ಜನಪರ ಕೆಲಸಗಳ ಮೂಲಕವೇ ಉತ್ತರ ನೀಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
Read Full Story

08:58 AM (IST) May 14

ಪ್ಲೇಆಫ್ ಕನಸಿನ ರೂವಾರಿಗಳು; ಚೇತೇಶ್ವರ, ಬೌಷರ್ ಗಮನ ಸೆಳೆದ ಐವರು IPL ಪ್ರತಿಭೆಗಳು

ಟಾಟಾ ಐಪಿಎಲ್ 2026ರ ಪ್ಲೇಆಫ್ ರೇಸ್ ತೀವ್ರಗೊಂಡಿದ್ದು, ಸಿಎಸ್‌ಕೆ, ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ತಂಡಗಳ ಭವಿಷ್ಯವನ್ನು ನಿರ್ಧರಿಸಬಲ್ಲ ಐವರು ಯುವ ಆಟಗಾರರನ್ನು ಕ್ರಿಕೆಟ್ ತಜ್ಞರು ಗುರುತಿಸಿದ್ದಾರೆ. 

Read Full Story

08:23 AM (IST) May 14

Gold Price - ಖರೀದಿ ಕಡಿಮೆ ಮಾಡದಿದ್ರೆ ಚಿನ್ನ ಮತ್ತಷ್ಟೂ ದುಬಾರಿ - ಬಿವಿ ರುದ್ರಮೂರ್ತಿ

ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿಯವರ ಚಿನ್ನದ ಖರೀದಿ ಮಿತಿಗೊಳಿಸುವ ಕರೆ ದೇಶದ ಆರ್ಥಿಕತೆಯ ಮೇಲೆ ಬೀರುವ ಪರಿಣಾಮವನ್ನು ಹೂಡಿಕೆ ತಜ್ಞ ಬಿ.ವಿ.ರುದ್ರಮೂರ್ತಿ ವಿಶ್ಲೇಷಿಸಿದ್ದಾರೆ. ಚಿನ್ನದ ಆಮದು, ವಿದೇಶಿ ವಿನಿಮಯ ಮತ್ತು ಪರ್ಯಾಯ ಹೂಡಿಕೆಗಳ ಬಗ್ಗೆ ಅವರು ಬೆಳಕು ಚೆಲ್ಲಿದ್ದಾರೆ.
Read Full Story

More Trending News