ನವದೆಹಲಿ: ವಿದ್ಯಾವಂತ ಯುವಸಮೂಹಕ್ಕೆ ಅತಿ ಹೆಚ್ಚಿನ ಉದ್ಯೋಗ ಕಲ್ಪಿಸಿರುವ ವಲಯಗಳ ಪೈಕಿ ಒಂದಾದ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಈ ವರ್ಷ ಭಾರೀ ಉದ್ಯೋಗ ಕಡಿತ ಸದ್ದಿಲ್ಲದೇ ನಡೆದಿದೆ. ಒಂದು ಅಂದಾಜಿನ ಪ್ರಕಾರ ಈ ವರ್ಷ ಐಟಿ ವಲಯದಲ್ಲಿ ಒಟ್ಟು ಕಡಿತವಾಗುವ ಉದ್ಯೋಗ ಸಂಖ್ಯೆ 50 ಸಾವಿರ ದಾಟಬಹುದು ಎಂದು ವರದಿಗಳು ತಿಳಿಸಿವೆ. ಐಟಿ ವಲಯದ ಬಹತೇಕ ಕಂಪನಿಗಳು ದಿನೇ ದಿನೇ ಕೃತಕ ಬುದ್ಧಿಮತ್ತೆ ಆಧರಿತ ತಂತ್ರಜ್ಞಾನ ಅಳವಡಿಕೆ ಮೂಲಕ ಭಾರೀ ಪ್ರಮಾಣದ ಉದ್ಯೋಗ ಕಡಿತ ಮಾಡಿವೆ. ಇನ್ನೊಂದೆಡೆ ವೆಚ್ಚ ಕಡಿತದ ಕ್ರಮಗಳು ಕೂಡಾ ಕಂಪನಿಗಳು ಸಿಬ್ಬಂದಿ ಸಂಖ್ಯೆ ಕಡಿತ ಮಾಡಲು ಕಾರಣವಾಗಿದೆ ಎನ್ನಲಾಗಿದೆ.
ಎಲ್ಲಿಎಷ್ಟು?:
ಭಾರತದ ಅತಿದೊಡ್ಡ ಐಟಿ ಕಂಪನಿಯಾದ ಟಿಸಿಎಸ್ ಈ ವರ್ಷ ಜಾಗತಿಕವಾಗಿ 12,000, ವಿಪ್ರೊ 24,516, ಆಕ್ಸೆಂಚರ್ 11,000, ಸೇಲ್ಸ್ ಫೋರ್ಸ್ 4,000, ಮೈಕ್ರೋಸಾಫ್ಟ್ 4,000 ಹುದ್ದೆ ಕಡಿತದ ಘೋಷಣೆ ಮಾಡಿವೆ. ಇನ್ನು ಸಣ್ಣಪುಟ್ಟ ಇತರೆ ಕಂಪನಿಗಳ ಲೆಕ್ಕವನ್ನೂ ಹಿಡಿದರೆ ಈ ಪ್ರಮಾಣ ಇನ್ನಷ್ಟು ಹೆಚ್ಚಲಿದೆ.
08:59 PM (IST) Oct 12
ಗೂಗಲ್ ಮ್ಯಾಪ್ ಪ್ರತಿಸ್ಪರ್ಧಿ ಭಾರತದ ಸ್ವದೇಶಿ ಮ್ಯಾಪಲ್ಸ್ ಸಂಚಲನ, ನ್ಯಾವಿಗೇಶನ್‌ನಲ್ಲೂ ಕ್ರಾಂತಿ ಆಗುತ್ತಿದೆ. ಮೇಡ್ ಇನ್ ಇಂಡಿಯಾ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ ಭಾರಿ ಒತ್ತು ನೀಡುತ್ತಿದೆ. ಆತ್ಮನಿರ್ಭರತೆ ಸಾಧಿಸಲು ಝೋಹೋ ಇಮೇಲ್ ಬಳಿಕ ಕೇಂದ್ರ ಸರ್ಕಾರ ನ್ಯಾವಿಗೇಶ್‌ಗೆ ಮ್ಯಾಪ್ ಗೆ ಒತ್ತು ನೀಡಿದೆ.
07:20 PM (IST) Oct 12
ಬಿಹಾರ ಚನಾವಣೆಗೆ ಬಿಜೆಪಿ-ಜೆಡಿಯು ಸೀಟು ಹಂಚಿಕೆ ಫೈನಲ್, ಇಬ್ಬರಿಗೂ ತಲಾ 101 ಕ್ಷೇತ್ರ ನೀಡಲಾಗಿದೆ. ಇನ್ನು ಚಿರಾಗ್ ಪಾಸ್ವಾನ್ ಎಲ್‌ಜೆಪಿಗೆ 29 ಸ್ಥಾನ ನೀಡಲಾಗಿದೆ. ಎನ್‌ಡಿಎ ಮೈತ್ರಿಕೂಟದಲ್ಲಿ ಯಾರಿಗೆ ಎಷ್ಟು ಸೀಟು?
06:52 PM (IST) Oct 12
ಮಹಿಳಾ ವಿಶ್ವಕಪ್‌ನಲ್ಲಿ ಭಾರತದ ಅಬ್ಬರಕ್ಕೆ ತಬ್ಬಿಬ್ಬಾದ ಆಸಿಸ್, 331 ರನ್ ಟಾರ್ಗೆಟ್ ನೀಡಲಾಗಿದೆ. ಸ್ಮೃತಿ ಮಂಧನಾ ಮತ್ತೆ ನ್ಯಾಶನಲ್ ಕ್ರಶ್ ಆಗಿದ್ದಾರೆ. 80 ರನ್ ಸಿಡಿಸಿದ್ದಾರೆ. ಭಾರತ ನೀಡಿದ ಬೃಹತ್ ಟಾರ್ಗೆಟ್ ಆಸ್ಟ್ರೇಲಿಯಾಗೆ ಸವಾಲಾಗಿ ಪರಿಣಮಿಸಿದೆ.
05:44 PM (IST) Oct 12
Baghani and Rajore tiger story: ಹುಲಿಯೊಂದು ತನ್ನ ಸಂಗಾತಿ ಮೃತಪಟ್ಟ ಅರಿವಿಲ್ಲದೇ ಅದರ ಹುಡುಕಾಟ ನಡೆಸುತ್ತಾ ರೋದಿಸುತ್ತಿರುವ ದೃಶ್ಯ ವನ್ಯಜೀವಿ ಡಾಕ್ಯುಮೆಂಟರಿಯಲ್ಲಿ ಸೆರೆಯಾಗಿದ್ದು ನೋಡುಗರ ಕಣ್ಣಂಚನ್ನು ತೇವಗೊಳಿಸುತ್ತಿದೆ.
05:42 PM (IST) Oct 12
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್‌ನಲ್ಲಿ ಫಾಲೋ ಆನ್‌ಗೆ ಒಳಗಾದ ವಿಂಡೀಸ್, ಎರಡನೇ ಇನ್ನಿಂಗ್ಸ್‌ನಲ್ಲಿ ದಿಟ್ಟ ಪ್ರತಿರೋಧ ತೋರಿದೆ. ಕುಲ್ದೀಪ್ ಯಾದವ್ ಅವರ 5 ವಿಕೆಟ್ ಗೊಂಚಲಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ ಕುಸಿದರೂ, ಎರಡನೇ ಇನ್ನಿಂಗ್ಸ್‌ನಲ್ಲಿ ಚೇತರಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ.
05:01 PM (IST) Oct 12
ಉದ್ಯೋಗಿಗಳಿಗೆ 9 ದಿನ ದೀಪಾವಳಿ ರಜೆ ಕೊಟ್ಟ ಕಂಪನಿ, ಸ್ವೀಟ್ ಬಾಕ್ಸ್‌ಗಿಂತ ಸಿಹಿ ಎಂದ ನೆಟ್ಟಿಗರು, ಇಮೇಲ್ ನೋಡಬೇಡಿ, ಕಚೇರಿ ಕಡೆ ತಲೆ ಹಾಕಬೇಡಿ, ಕಟುಂಬದ ಜೊತೆ ಹಬ್ಬ ಆಚರಿಸಿ ಎಂದು ಕಂಪನಿ ಬಾಸ್ ಉದ್ಯೋಗಿಗಳಿಗೆ ಇಮೇಲ್ ಕಳುಹಿಸಿದ್ದಾರೆ.
04:59 PM (IST) Oct 12
04:29 PM (IST) Oct 12
Kota crocodile viral video: ಮನೆಯೊಂದಕ್ಕೆ ಮೊಸಳೆಯೊಂದು ನುಗ್ಗಿತ್ತು. ಭಯಗೊಂಡಿದ್ದ ಮನೆ ಮಂದಿ ಹಲವು ಬಾರಿ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಕರೆ ಮಾಡಿ ತಿಳಿಸಿದರೂ ಅರಣ್ಯ ಇಲಾಖೆ ಸಿಬ್ಬಂದಿಗಳ ಸುಳಿವಿಲ್ಲ ನಂತರ ಯುವಕನೋರ್ವ ಮೊಸಳೆಯನ್ನು ಹಿಡಿದು ತೆಗೆದುಕೊಂಡು ಹೋಗಿದ್ದಾನೆ.
04:21 PM (IST) Oct 12
ದೆಹಲಿ ದೇವಸ್ಥಾನದ 40 ಲಕ್ಷ ರೂಪಾಯಿ ಕಳಶ ಮಾಯ, ಸಿಸಿಟಿವಿಯಲ್ಲಿ ಬಯಲಾಯ್ತು ರಹಸ್ಯ, ದೇಶದೆಲ್ಲೆಡೆ ದೇವಸ್ಥಾನದ ಚಿನ್ನ ಕಳ್ಳತನ ಚರ್ಚೆಗಳು ನಡೆಯುತ್ತಿದ್ದಂತೆ ದೆಹಲಿ ದೇಗುಲದ ಘಟನೆ ಇದೀಗ ಮತ್ತೆ ಹಿಂದೂ ದೇವಸ್ಥಾನಗಳ ಮೇಲಿನ ಚಿನ್ನಾಭರಣಗಳ ಸುರಕ್ಷತೆ ಕುರಿತು ಪ್ರಶ್ನೆ ಏಳುವಂತೆ ಮಾಡಿದೆ.
04:20 PM (IST) Oct 12
ಭಾರತ ಪ್ರವಾಸದಲ್ಲಿರುವ ಅಫ್ಘಾನ್ ವಿದೇಶಾಂಗ ಸಚಿವ ಆಮೀರ್ ಖಾನ್ ಮುತ್ತಕಿ ಅವರ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರು ಇಲ್ಲದಿರುವುದು ವಿವಾದಕ್ಕೆ ಕಾರಣವಾಗಿತ್ತು. ಇದು 'ತಾಂತ್ರಿಕ ಸಮಸ್ಯೆ'ಯಿಂದ ಆದ ಪ್ರಮಾದವೇ ಹೊರತು ಉದ್ದೇಶಪೂರ್ವಕವಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
04:08 PM (IST) Oct 12
ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ಹಾಗೂ ನಟ ಯೋಗರಾಜ್ ಸಿಂಗ್, ತಮ್ಮ ಮಗನನ್ನು ಜಗತ್ತಿನ ದಿಗ್ಗಜ ಕ್ರಿಕೆಟಿಗನನ್ನಾಗಿ ಮಾಡಲು ಕೈಗೊಂಡ ಕಠಿಣ ಕ್ರಮಗಳ ಬಗ್ಗೆ ಮೊದಲ ಸಲ ಮನಬಿಚ್ಚಿ ಮಾತನಾಡಿದ್ದಾರೆ. ಈ ಪೈಕಿ ಕೆಲವೊಂದು ಮಾತುಗಳು ಎಲ್ಲರನ್ನೂ ಬೆಚ್ಚಿಬೀಳಿಸುವಂತಿವೆ.
03:27 PM (IST) Oct 12
ಇಂದಿರಾ ಗಾಂಧಿಯ ಆಪರೇಶನ್ ಬ್ಲೂ ಸ್ಟಾರ್ ತಪ್ಪು ನಿರ್ಧಾರ, ಕಾಂಗ್ರೆಸ್‌ಗೆ ಮತ್ತೆ ಮಜುಗರ ತಂದ ಚಿದಂಬರಂ, ಈ ಕಾರ್ಯಾಚರಣೆಗೆ ಇಂದಿರಾ ಗಾಂಧಿ ಬೆಲೆ ತೆರಬೇಕಾಯಿತು ಎಂದಿದ್ದಾರೆ. ಚಿದಂಬರಂ ಮಾತಿಗೆ ಹಲವು ಕಾಂಗ್ರೆಸ್ ನಾಯಕರು ಗರಂ ಆಗಿದ್ದಾರೆ.
03:18 PM (IST) Oct 12
Agony of Being Born a Girl: ಆಸ್ಪತ್ರೆಯಲ್ಲಿ ನಾಲ್ಕನೇ ಮಗುವೂ ಹೆಣ್ಣಾದ ಕಾರಣಕ್ಕೆ ಪೋಷಕರು ದುಃಖಿಸಿದ್ದಾರೆ. ಆದರೆ ಆಗಷ್ಟೇ ಜನಿಸಿದ ಶಿಶು ತನ್ನ ಪೋಷಕರ ದುಃಖವನ್ನು ಅರಿತಂತೆ ಚಿಂತೆಯಿಂದ ಗಲ್ಲಕ್ಕೆ ಕೈಯಿಟ್ಟು ನೋಡುತ್ತಿರುವ ದೃಶ್ಯವು ನೆಟ್ಟಿಗರ ಹೃದಯ ಕಲಕಿದೆ.
01:45 PM (IST) Oct 12
12:50 PM (IST) Oct 12
Indian Kids' Littering Habit: ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದ ಭಾರತೀಯ ಮಕ್ಕಳಿಗೆ ವಿದೇಶಿ ಯುವತಿಯೊಬ್ಬಳು ಬುದ್ಧಿ ಹೇಳಲು ಯತ್ನಿಸಿದ್ದಾಳೆ. ಆದರೆ, ಮಕ್ಕಳು ಆಕೆಯ ಮಾತನ್ನು ಕೇಳದೆ, ಹಣಕ್ಕಾಗಿ ಪೀಡಿಸಿ, ಆಕೆಯ ಸುತ್ತಲೂ ಮತ್ತಷ್ಟು ಕಸವನ್ನು ಎಸೆದು ಅಮಾನವೀಯವಾಗಿ ವರ್ತಿಸಿದ್ದಾರೆ.
12:03 PM (IST) Oct 12
ಆಪರೇಷನ್ ಸಿಂದೂರ್ ಮೂಲಕ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ ಭಾರತ, ತನ್ನ 93ನೇ ವಾಯುಪಡೆ ದಿನಾಚರಣೆಯಂದು ವಿಶಿಷ್ಟ ಉತ್ತರ ನೀಡಿದೆ. ದಾಳಿಗೊಳಗಾದ ಪಾಕಿಸ್ತಾನಿ ಸ್ಥಳಗಳ ಹೆಸರನ್ನು ತನ್ನ ಭೋಜನದ ಮೆನುವಿನಲ್ಲಿ ಸೇರಿಸಿ, ಪಾಕಿಗಳಿಗೆ ಮರ್ಮಾಘಾತ ನೀಡಿದೆ.
12:01 PM (IST) Oct 12
10:46 AM (IST) Oct 12
ಜೀವನ ಏನು ಎಂದು ಅರಿಯುವ ಮೊದಲೇ ಹಲವರನ್ನು ಕೊಲೆ ಮಾಡಿ ಪ್ರಪಂಚದ ಅತ್ಯಂತ ಕಿರಿಯ ಸೀರಿಯಲ್ ಕಿಲ್ಲರ್ ಎಂದು ಕುಖ್ಯಾತಿ ಪಡೆದ ವ್ಯಕ್ತಿಯ ಬಗ್ಗೆ ನಿಮಗೆ ಗೊತ್ತಾ? ಈತ ಅಕ್ಷರ ಬರೆಯಲು ಕಲಿಯುವ ಮೊದಲೇ ಕೊಲೆ ಮಾಡುವುದಕ್ಕೆ ಶುರುವಾಗಿದ್ದ ಆತನ ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ…
09:28 AM (IST) Oct 12