ಮಹಿಳಾ ವಿಶ್ವಕಪ್‌ನಲ್ಲಿ ಭಾರತದ ಅಬ್ಬರಕ್ಕೆ ತಬ್ಬಿಬ್ಬಾದ ಆಸಿಸ್, 331 ರನ್ ಟಾರ್ಗೆಟ್
ಮಹಿಳಾ ವಿಶ್ವಕಪ್‌ನಲ್ಲಿ ಭಾರತದ ಅಬ್ಬರಕ್ಕೆ ತಬ್ಬಿಬ್ಬಾದ ಆಸಿಸ್, 331 ರನ್ ಟಾರ್ಗೆಟ್ ನೀಡಲಾಗಿದೆ. ಸ್ಮೃತಿ ಮಂಧನಾ ಮತ್ತೆ ನ್ಯಾಶನಲ್ ಕ್ರಶ್ ಆಗಿದ್ದಾರೆ. 80 ರನ್ ಸಿಡಿಸಿದ್ದಾರೆ. ಭಾರತ ನೀಡಿದ ಬೃಹತ್ ಟಾರ್ಗೆಟ್ ಆಸ್ಟ್ರೇಲಿಯಾಗೆ ಸವಾಲಾಗಿ ಪರಿಣಮಿಸಿದೆ.

ಆಸ್ಟ್ರೇಲಿಯಾಗೆ 331 ರನ್ ಟಾರ್ಗೆಟ್
ಆಸ್ಟ್ರೇಲಿಯಾಗೆ 331 ರನ್ ಟಾರ್ಗೆಟ್
ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಮತ್ತೆ ಭಾರತ ಮಹಿಳಾ ತಂಡ ಸ್ಫೋಟಕ ಪ್ರದರ್ಶನ ನೀಡಿದೆ. ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಭಾರತ ಮಹಿಳಾ ತಂಡ ಅಬ್ಬರಿಸಿದೆ. ಹೀಗಾಗಿ ಆಸ್ಟ್ರೇಲಿಯಾಗೆ 331 ರನ್ ಟಾರ್ಗೆಟ್ ನೀಡಿದೆ. 48.5 ಓವರ್‌ಗಳಲ್ಲಿ ಭಾರತ 330 ರನ್‌ಗೆ ಆಲೌಟ್ ಆಗಿದೆ. ಅಂತಿಮ ಹಂತದಲ್ಲಿ ವಿಕೆಟ್ ಪತನದಿಂದ ಭಾರತ 330 ರನ್‌ಗೆ ತೃಪ್ತಿಪಟ್ಟುಕೊಂಡಿತು.
ಸ್ಮೃತಿ ಮಂಧನಾ 80 ರನ್ ಅಬ್ಬರ
ಸ್ಮೃತಿ ಮಂಧನಾ 80 ರನ್ ಅಬ್ಬರ
ಬ್ಯಾಟಿಂಗ್ ಇಳಿದ ಭಾರತ ಮಹಿಳಾ ತಂಡ ಮೊದಲೇ ಪ್ಲಾನ್ ಮಾಡಿದಂತೆ ಅಬ್ಬರಿಸಿತು. ಪ್ರತಿಕಾ ರಾವಲ್ ಹಾಗೂ ಸ್ಮೃತಿ ಮಂಧನಾ ಜೊತೆಯಾಟ ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲೇ ಬೃಹತ್ ಮೊತ್ತದಸೂಚನೆ ನೀಡಿತ್ತು. ಇಬ್ಬರು ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಪ್ರತಿಕಾ 75 ರನ್ ಸಿಡಿಸಿದರೆ ಸ್ಮೃತಿ ಮಂಧನಾ 80ರನ್ ಕಾಣಿಕೆ ನೀಡಿದರು.
ರೋಡಿಗ್ರಸ್ ಸ್ಫೋಟಕ ಬ್ಯಾಟಿಂಗ್
ರೋಡಿಗ್ರಸ್ ಸ್ಫೋಟಕ ಬ್ಯಾಟಿಂಗ್
ನಾಯಕಿ ಹರ್ಮನ್ ಪ್ರೀತಿ ಕೌರ್ 22 ರನ್ ಸಿಡಿಸಿ ಔಟಾದರು. ಆದರೆ ಜೇಮಿ ರೋಡಿಗ್ರಸ್ 21 ಎಸೆದಲ್ಲಿ 33 ರನ್ ಸಿಡಿಸಿದರು. ಭಾರತದ ಅಬ್ಬರಕ್ಕೆ ಬ್ರೇಕ್ ಹಾಕಲು ಆಸ್ಟ್ರೇಲಿಯಾ ಮಹಿಳಾ ತಂಡ ಹಲವು ಪ್ರಯತ್ನ ನಡೆಸಿತು. ವಿಕೆಟ್ ಕಳೆದುಕೊಂಡರು ಭಾರತದ ರನ್ ವೇಗಕ್ಕೆ ಕಡಿಣವಾನ ಬೀಳಲಿಲ್ಲ.
ರಿಚಾ ಘೋಷ್ 32 ರನ್ ಕಾಣಿಕೆ
ರಿಚಾ ಘೋಷ್ 32 ರನ್ ಕಾಣಿಕೆ
ಪ್ರಮುಖ ವಿಕೆಟ್ ಪತನದ ಬಳಿಕ ರಿಚಾ ಘೋಷ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. 22 ಎಸೆತದಲ್ಲಿ ರಿಚಾಘೋಷ್ 32 ರನ್ ಸಿಡಿಸಿದರು. ಹೀಗಾಗಿ ಭಾರತ ರನ್ 300 ರನ್ ಗಡಿ ದಾಟಿತು. ಅಮನ್‌ಜೋತ್ ಕೌರ್ 16 ರನ್ ಕಾಣಿಕೆ ನೀಡಿದರು. ಇವರಿಬ್ಬರ ಬ್ಯಾಟಿಂಗ್ ಪ್ರದರ್ಶನ ಭಾರತದ ಬೃಹತ್ ಮೊತ್ತಕ್ಕೆ ನೆರವಾಯಿತು.
330 ರನ್‌ಗೆ ಆಲೌಟ್
330 ರನ್‌ಗೆ ಆಲೌಟ್
ಅಬ್ಬರಿಸಿದ ಭಾರತ ಮಹಿಳಾ ತಂಡ ಅಂತಿಮ ಹಂತದಲ್ಲಿ ರನ್‌ಗಿಂತ ಹೆಚ್ಚು ವಿಕೆಟ್ ಕಳದುಕೊಂಡಿತು. 350 ರನ್ ಗಡಿ ದಾಟಿಸುವ ವಿಶ್ವಾಸದಲ್ಲಿದ್ದ ಭಾರತ ಮಹಿಳಾ ತಂಡ 48.5 ಓವರ್‌ನಲ್ಲಿ 10 ವಿಕೆಟ್ ಕಳೆದುಕೊಂಡು 330 ರನ್ ಸಿಡಿಸಿತು. ಆಸ್ಟ್ರೇಲಿಯಾದ ಅನ್‌ಬೇಲ್ ಸದರ್‌ಲೆಂಡ್ 5 ವಿಕೆಟ್ ಕಬಳಿಸಿ ಮಿಂಚಿದರು.