Published : Nov 01, 2025, 06:57 AM ISTUpdated : Nov 01, 2025, 10:44 PM IST

India Latest News Live: ಅಂತಾರಾಷ್ಟ್ರೀಯ ಬ್ಯಾಂಕ್‌ಗಳಿಗೆ 4400 ಕೋಟಿ ವಂಚನೆ ಮಾಡಿದ ಭಾರತೀಯ ಮೂಲದ ಉದ್ಯಮಿ, ಯಾರೀತ ಬಂಕಿಮ್‌ ಬ್ರಹ್ಮಭಟ್‌?

ಸಾರಾಂಶ

ಪಟನಾ: ಚುನಾವಣಾ ಕಣ ಬಿಹಾರದಲ್ಲಿ ವಿಪಕ್ಷ ಇಂಡಿಯಾ ಕೂಟದ ಬೆನ್ನಲ್ಲೇ ಎನ್‌ಡಿಎ ಮೈತ್ರಿಕೂಟವೂ ಭರ್ಜರಿ ಘೋಷಣೆಗಳುಳ್ಳ 69 ಪುಟಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ 1 ಕೋಟಿ ಉದ್ಯೋಗ ಸೃಷ್ಟಿ ಹಾಗೂ 1 ಕೋಟಿ ಲಖಪತಿ ದೀದಿಯರ ಸೃಷ್ಟಿ ಭರವಸೆಯಿಂದ ಹಿಡಿದು ಮೂಲಸೌಕರ್ಯ ನಿರ್ಮಾಣದ ವರೆಗೆ ಸುಮಾರು 25 ಭರವಸೆಗಳನ್ನು ನೀಡಲಾಗಿದೆ. ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳಿಗೆ ಶಿಶುವಿಹಾರದಿಂದ ಹಿಡಿದು ಸ್ನಾತಕೋತ್ತರ ಪದವಿಯ ತನಕ ಉಚಿತ ಶಿಕ್ಷಣ ನೀಡಲಾಗುವುದು. ಉನ್ನತ ಶಿಕ್ಷಣ ಪಡೆಯುವ ಎಸ್‌ಸಿ ವಿದ್ಯಾರ್ಥಿಗಳಿಗೆ ಮಾಸಿಕ 2000 ರು. ಸಹಾಯಧನ ನೀಡಲಾಗುವುದು.

 

10:44 PM (IST) Nov 01

ಅಂತಾರಾಷ್ಟ್ರೀಯ ಬ್ಯಾಂಕ್‌ಗಳಿಗೆ 4400 ಕೋಟಿ ವಂಚನೆ ಮಾಡಿದ ಭಾರತೀಯ ಮೂಲದ ಉದ್ಯಮಿ, ಯಾರೀತ ಬಂಕಿಮ್‌ ಬ್ರಹ್ಮಭಟ್‌?

Indian-Origin Entrepreneur Bankim Brahmbhatt Accused of ₹4,440 Cr Fraud to BlackRock ಭಾರತೀಯ ಮೂಲದ ಉದ್ಯಮಿ ಬಂಕಿಮ್ ಬ್ರಹ್ಮಭಟ್, ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಾಗತಿಕ ಬ್ಯಾಂಕ್‌ಗಳಿಗೆ ಸುಮಾರು ₹4,440 ಕೋಟಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. 

Read Full Story

08:27 PM (IST) Nov 01

ಜಿಯೋ ಬಳಕೆದಾರರಿಗೆ ಭರ್ಜರಿ ಗಿಫ್ಟ್, 35,100 ರೂ ಗೂಗಲ್ ಎಐ ಪ್ರೋ ಉಚಿತ

ಜಿಯೋ ಬಳಕೆದಾರರಿಗೆ ಭರ್ಜರಿ ಗಿಫ್ಟ್, 35,100 ರೂ ಗೂಗಲ್ ಎಐ ಪ್ರೋ ಉಚಿತ, 2 ಟಿಬಿ ಕ್ಲೌಡ್ ಸ್ಟೋರೇಜ್, ಗೂಗಲ್ ಜೆಮಿನಿ 2.5 ಪ್ರೊ ಬಳಕೆಗೆ ಅವಕಾಶ ನೀಡಲಾಗಿದೆ. ಇಷ್ಟೇ ಅಲ್ಲ ನ್ಯಾನೋ ಬನಾನಾ, Veo 3.1 ಕೂಡ ಲಭ್ಯವಾಗುತ್ತಿದೆ.

 

Read Full Story

07:38 PM (IST) Nov 01

ಪತಿಯ ಕೆಲಸ ಗಿಟ್ಟಿಸಿ ಆತನ ಕುಟುಂಬ ನಿರ್ಲಕ್ಷಿಸಿದ ಸೊಸೆ - ಮಾವನಿಗೆ ವೇತನದಲ್ಲಿ ಪಾಲು ನೀಡಲು ಹೈಕೋರ್ಟ್‌ ಸೂಚನೆ

ಪತಿಯ ಮರಣಾನಂತರ ಅನುಕಂಪದ ಆಧಾರದ ಮೇಲೆ ಆತನ ಸರ್ಕಾರಿ ಉದ್ಯೋಗ ಪಡೆದು, ಅತ್ತೆ-ಮಾವನನ್ನು ತೊರೆದ ಸೊಸೆಗೆ ರಾಜಸ್ಥಾನ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಸೊಸೆಯ ಸಂಬಳದಿಂದ ಪ್ರತಿ ತಿಂಗಳು 20,000 ರೂ.ಗಳನ್ನು ಕಡಿತಗೊಳಿಸಿ ಮಾವನ ಖಾತೆಗೆ ಜಮಾ ಮಾಡುವಂತೆ ಜೋಧ್‌ಪುರ ಪೀಠ ಐತಿಹಾಸಿಕ ತೀರ್ಪು ನೀಡಿದೆ.

Read Full Story

06:51 PM (IST) Nov 01

ಪ್ರತಿ ತಿಂಗಳ ಆದಾಯ 2.5 ಲಕ್ಷದ ಒಳಗಿದ್ದಲ್ಲಿ ಇನ್ನು ಮೂರೇ ದಿನಗಳಲ್ಲಿ ಜಿಎಸ್‌ಟಿ ನೋಂದಣಿ!

GST Registration in 3 Days for Low-Risk Businesses ಕೇಂದ್ರ ಸರ್ಕಾರವು ಸಣ್ಣ ಮತ್ತು ಕಡಿಮೆ ಅಪಾಯದ ವ್ಯವಹಾರಗಳಿಗಾಗಿ ಹೊಸ ಜಿಎಸ್‌ಟಿ ನೋಂದಣಿ ಯೋಜನೆಯನ್ನು ಆರಂಭಿಸಿದೆ, ಇದರ ಅಡಿಯಲ್ಲಿ ಕೇವಲ ಮೂರು ದಿನಗಳಲ್ಲಿ ನೋಂದಣಿ ಸಾಧ್ಯವಾಗಲಿದೆ. 

 

Read Full Story

06:11 PM (IST) Nov 01

ಮಹಿಳಾ ವಿಶ್ವಕಪ್ - ಈ ಹಿಂದಿನ ಭಾರತ-ದಕ್ಷಿಣ ಆಫ್ರಿಕಾ ಕಾದಾಟದಲ್ಲಿ ಹೆಚ್ಚು ಗೆಲುವು ಕಂಡಿದ್ದು ಯಾರು? ಇಲ್ಲಿದೆ ಡೀಟೈಲ್ಸ್

ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿವೆ. ವಿಶ್ವಕಪ್‌ನಲ್ಲಿ ಉಭಯ ತಂಡಗಳು ತಲಾ ಮೂರು ಪಂದ್ಯಗಳನ್ನು ಗೆದ್ದು ಸಮಬಲ ಸಾಧಿಸಿದ್ದು, ಎರಡೂ ತಂಡಗಳು ತಮ್ಮ ಚೊಚ್ಚಲ ವಿಶ್ವಕಪ್ ಕಿರೀಟವನ್ನು ಗೆಲ್ಲುವ ಗುರಿಯನ್ನು ಹೊಂದಿವೆ.  

Read Full Story

06:10 PM (IST) Nov 01

ವಿಶ್ವಕಪ್‌ ಗೆದ್ದರೆ ಮಹಿಳಾ ತಂಡಕ್ಕೆ ನಿರೀಕ್ಷೆಗೂ ಮೀರಿದ ಬಹುಮಾನ ಮೊತ್ತ ಘೋಷಿಸಲು ಬಿಸಿಸಿಐ ಸಿದ್ದತೆ!

Equal Pay Policy: BCCI Planning Massive ₹125 Cr Reward ಒಂದು ವೇಳೆ ಹರ್ಮಾನ್‌ಪ್ರೀತ್‌ ಕೌರ್‌ ಪಡೆ ಟ್ರೋಫಿ ಗೆದ್ದರೆ, ಬಿಸಿಸಿಐನ 'ಸಮಾನ ವೇತನ' ನೀತಿಯ ಅಡಿಯಲ್ಲಿ ಪುರುಷರ ತಂಡಕ್ಕೆ ನೀಡಿದಷ್ಟೇ ಅಂದರೆ 125 ಕೋಟಿ ರೂ. ಬಹುಮಾನ ನೀಡಲು ಚಿಂತನೆ ನಡೆಸಿದೆ.

Read Full Story

05:47 PM (IST) Nov 01

ಜನ್ಮದಿನದ ಅನ್ವಯ ನವೆಂಬರ್​ ಹೇಗಿದೆ? ಕಚೇರಿ, ಕುಟುಂಬ, ಪ್ರೇಮ, ಮದುವೆ, ಆರೋಗ್ಯ ವಿವರ- ಪರಿಹಾರ

ನವೆಂಬರ್ 2025ರ ತಿಂಗಳು ನಿಮ್ಮ ಜನ್ಮದಿನಾಂಕದ ಆಧಾರದ ಮೇಲೆ ಹೇಗಿರಲಿದೆ? ಈ ಲೇಖನವು 1 ರಿಂದ 9 ರವರೆಗಿನ ಪ್ರತಿ ಜನ್ಮಸಂಖ್ಯೆಗೆ ವೃತ್ತಿ, ಕುಟುಂಬ, ಪ್ರೀತಿ, ಆರ್ಥಿಕತೆ ಮತ್ತು ಆರೋಗ್ಯದ ಕುರಿತು ವಿವರವಾದ ಭವಿಷ್ಯವಾಣಿಯನ್ನು ನೀಡುತ್ತದೆ. ಜೊತೆಗೆ, ಎದುರಾಗಬಹುದಾದ ಸವಾಲುಗಳಿಗೆ ಪರಿಹಾರ  ಸೂಚಿಸಲಾಗಿದೆ.

 

Read Full Story

05:26 PM (IST) Nov 01

ಡಾಂಕಿ ರೂಟ್‌ಲ್ಲಿ ಅಮೆರಿಕಾಗೆ ಹೋಗಲು 25 ಲಕ್ಷ ವೆಚ್ಚ ಮಾಡಿದ ಪೋಷಕರು ಏಕೈಕ ಪುತ್ರನ ಕಳೆದುಕೊಂಡರು!

Dunki Route turned Dead route: ಡಂಕಿ ರೂಟ್ ಮೂಲಕ ಅಮೆರಿಕಾ ಸೇರಲು ಮುಂದಾಗಿದ್ದ ಹರ್ಯಾಣದ 18ರ ಹರೆಯದ ಯುವಕನನ್ನು ಆತನನ್ನು ಡಂಕಿ ರೂಟ್ ಮೂಲಕ ಕರೆದೊಯ್ದ ಮಾನವ ಕಳ್ಳಸಾಗಣೆದಾರರೇ ಕೊಲೆ ಮಾಡಿದ್ದಾರೆ. ಮಾರ್ಚ್‌ನಲ್ಲಿ ಈ ಕೊಲೆ ನಡೆದಿದ್ದು, ಪೋಷಕರಿಗೆ ಈಗ ವಿಚಾರ ತಿಳಿದಿದೆ.

Read Full Story

05:03 PM (IST) Nov 01

ಮಹಿಳಾ ವಿಶ್ವಕಪ್ ಗೆಲ್ಲಲು ಭಾರತದ ಮುಂದಿದೆ 5 ಕಂಟಕ! ಈ ಸವಾಲು ಮೆಟ್ಟಿನಿಲ್ಲುತ್ತಾ ಹರ್ಮನ್‌ಪ್ರೀತ್ ಪಡೆ?

ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಚೊಚ್ಚಲ ಪ್ರಶಸ್ತಿ ಗೆಲ್ಲಲು, ಭಾರತವು ಮರಿಜಾನ್ ಕ್ಯಾಪ್ ಅವರ ಬೌಲಿಂಗ್, ಲಾರಾ ವೋಲ್ವಾರ್ಟ್ ಅವರ ಬ್ಯಾಟಿಂಗ್, ಮತ್ತು ನಡೀನ್ ಡಿ ಕ್ಲರ್ಕ್ ಅವರ ಸ್ಫೋಟಕ ಆಟ ಸೇರಿದಂತೆ 5 ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಿದೆ.

Read Full Story

04:35 PM (IST) Nov 01

ಟ್ಯಾಕ್ಸಿಯಲ್ಲಿನ ಕ್ಯೂಆರ್ ಕೋಡ್ ಪಾವತಿಗಲ್ಲ, ಸ್ಕ್ಯಾನ್ ಮಾಡಿದ ಯುವತಿಗೆ ತೆರೆದುಕೊಂಡ ಅಚ್ಚರಿ ಲೋಕ

ಟ್ಯಾಕ್ಸಿಯಲ್ಲಿನ ಕ್ಯೂಆರ್ ಕೋಡ್ ಪಾವತಿಗಲ್ಲ, ಸ್ಕ್ಯಾನ್ ಮಾಡಿದ ಯುವತಿಗೆ ತೆರೆದುಕೊಂಡ ಅಚ್ಚರಿ ಲೋಕ, ತನ್ನ ಟ್ಯಾಕ್ಸಿ ಪಯಣದಲ್ಲಿ ಸಿಕ್ಕ ಈ ಕೋಡ್ ಕುರಿತು ಯವತಿ ಹೇಳಿಕೊಂಡಿದ್ದಾಳೆ. ಈ ಅಚ್ಚರಿಗೆ ಯುವತಿ ಫುಲ್ ಇಂಪ್ರೆಸ್ ಆಗಿದ್ದಾಳೆ. ಏನಿದು ಕ್ಯೂಆರ್ ಕೋಡ್?

 

Read Full Story

04:15 PM (IST) Nov 01

ಕಿಂಗ್‌ಫಿಶರ್‌ ಹಾದಿ ಹಿಡಿದ ಬೀರಾ 91 ಬಿಯರ್‌ ಕಂಪನಿ, ವೇತನ ಸಿಗದೆ ಕೇಂದ್ರ ಸರ್ಕಾರದ ಕದ ತಟ್ಟಿದ ಸಿಬ್ಬಂದಿ!

Bira 91 Faces Financial Crisis ಒಂದು ಕಾಲದಲ್ಲಿ ಯುವಜನರ ನೆಚ್ಚಿನ ಬಿಯರ್ ಆಗಿದ್ದ ಬೀರಾ 91, ಇದೀಗ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಕಂಪನಿಯು ತಿಂಗಳುಗಟ್ಟಲೆ ಉದ್ಯೋಗಿಗಳಿಗೆ ಸಂಬಳ ಪಾವತಿಸದ ಕಾರಣ, ನೊಂದ ಸಿಬ್ಬಂದಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ತನಿಖೆಗೆ ಆಗ್ರಹಿಸಿದ್ದಾರೆ. 

Read Full Story

03:59 PM (IST) Nov 01

ರೋಹನ್ ಬೋಪಣ್ಣ - ವೃತ್ತಿಪರ ಟೆನಿಸ್‌ಗೆ ಭಾವನಾತ್ಮಕ ವಿದಾಯ!

ಎರಡು ದಶಕಗಳ ಸುದೀರ್ಘ ಟೆನಿಸ್ ವೃತ್ತಿಜೀವನಕ್ಕೆ ಕನ್ನಡಿಗ ರೋಹನ್ ಬೋಪಣ್ಣ ವಿದಾಯ ಹೇಳಿದ್ದಾರೆ. ಎರಡು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳು ಮತ್ತು ವಿಶ್ವ ನಂ.1 ಡಬಲ್ಸ್ ಶ್ರೇಯಾಂಕ ಸೇರಿದಂತೆ ಹಲವಾರು ಸಾಧನೆಗಳನ್ನು ಮಾಡಿದ ಬೋಪಣ್ಣ, 45ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸಿದ್ದಾರೆ. 

Read Full Story

03:06 PM (IST) Nov 01

ಗಂಭೀರ್ ಹಾಗೂ ಸೂರ್ಯಕುಮಾರ್ ಯಾದವ್‌ಗೆ ಎಚ್ಚರಿಕೆ ಕೊಟ್ಟ ಇರ್ಫಾನ್ ಪಠಾಣ್!

ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ರ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾಯಿಸಿದ್ದಕ್ಕೆ ಇರ್ಫಾನ್ ಪಠಾಣ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಟಗಾರನಿಗೆ ನಿಗದಿತ ಪಾತ್ರ ನೀಡದೆ ಪದೇ ಪದೇ ಕ್ರಮಾಂಕ ಬದಲಾಯಿಸುವುದರಿಂದಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ

Read Full Story

02:58 PM (IST) Nov 01

ಹೊಸ ಪಕ್ಷ ಕಟ್ತಾರಾ ಅಣ್ಣಾಮಲೈ? ಗನ್ ತೋರಿಸಿ ಯಾರನ್ನೂ ಪಕ್ಷದಲ್ಲಿ ಉಳಿಸಲು ಸಾಧ್ಯವಿಲ್ಲ ಎಂದ ಅಣ್ಣಾಮಲೈ

Annamalai conflict with BJP: ಬಿಜೆಪಿ ಹಾಗೂ ಅಣ್ಣಾಮಲೈ ಮಧ್ಯೆ ಎಲ್ಲವೂ ಸರಿ ಇಲ್ಲ, ಅವರು ಹೊಸ ಪಕ್ಷ ಕಟ್ಟುತ್ತಾರೆ ಎಂದು ವರದಿಯಾಗಿದ್ದವು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಣ್ಣಾಮಲೈ ಅವರು ಪ್ರತಿಕ್ರಿಯಿಸಿದ್ದು, ಹಲವು ವಿಚಾರಗಳ ಬಗ್ಗೆ ಅವರು ಮಾತನಾಡಿದ್ದಾರೆ. ಆ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ..

Read Full Story

01:28 PM (IST) Nov 01

ನೀವಿಬ್ಬರು ಸಲಿಂಗಿ, ಎಲ್ಲರಿಗೂ ಹೇಳ್ತೀನಿ ಅಂದವನ ಉಸಿರು ನಿಲ್ಲಿಸಿದ್ರು - ಇಬ್ಬರು ಅರೆಸ್ಟ್

ತಮ್ಮ ಸಲಿಂಗಿ ಸಂಬಂಧದ ವಿಷಯವನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಕ್ಕೆ, ರಾಜ್‌ವೀರ್ ಮತ್ತು ಸಾಹಿಲ್ ಎಂಬ ಇಬ್ಬರು ಆರೋಪಿಗಳು ಈ ಕೃತ್ಯ ಎಸಗಿದ್ದಾರೆ. ಪೊಲೀಸರು ಇಬ್ಬರನ್ನೂ ಬಂಧಿಸಿ, ಕೊಲೆಯ ಹಿಂದಿನ ರಹಸ್ಯವನ್ನು ಬಯಲು ಮಾಡಿದ್ದಾರೆ.

Read Full Story

01:20 PM (IST) Nov 01

ರಾಷ್ಟ್ರ ಮಟ್ಟದ ಕಬ್ಬಡಿ ಆಟಗಾರ ತೇಜ್‌ಪಾಲ್ ಗುಂಡೇಟಿಗೆ ಬಲಿ

Tejpal singh shot dead: ರಾಷ್ಟ್ರಮಟ್ಟದ ಕಬ್ಬಡಿ ಆಟಗಾರ ತೇಜ್‌ಪಾಲ್ ಸಿಂಗ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಜಗ್ರಾಂವ್‌ನಲ್ಲಿರುವ ಲುಧಿಯಾನ ಗ್ರಾಮೀಣ ವಿಭಾಗದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ಹಾಡಹಗಲೇ  ಈ ಘಟನೆ ನಡೆದಿದ್ದು, ಸ್ಥಳೀಯರ ಬೆಚ್ಚಿ ಬೀಳಿಸಿದೆ.

Read Full Story

01:14 PM (IST) Nov 01

ಶ್ರೀಕಾಕುಲಂ ವೆಂಕಟೇಶ್ವರ ದೇವಸ್ಥಾನದಲ್ಲಿ ಕಾಲ್ತುಳಿತಕ್ಕೆ ಮಹಿಳೆಯರು ಮಕ್ಕಳು ಸೇರಿ 9 ಸಾವು

ಶ್ರೀಕಾಕುಲಂ ವೆಂಕಟೇಶ್ವರ ದೇವಸ್ಥಾನದಲ್ಲಿ ಕಾಲ್ತುಳಿತಕ್ಕೆ ಮಹಿಳೆಯರು ಮಕ್ಕಳು ಸೇರಿ 9 ಸಾವು, ಏಕಾದಶಿ ವಿಶೇಷ ಪೂಜೆ ಪ್ರಯುಕ್ತ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆಯಲು ನಿಂತಿರುವ ವೇಳೆ ಕಾಲ್ತುಳಿತ ಸಂಭವಿಸಿದೆ.

Read Full Story

01:07 PM (IST) Nov 01

ಸಿಡ್ನಿ ಆಸ್ಪತ್ರೆಯಿಂದ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಡಿಸ್ಚಾರ್ಜ್! ಇಲ್ಲಿದೆ ಹೊಸ ಅಪ್‌ಡೇಟ್ಸ್‌

ಸಿಡ್ನಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದ ವೇಳೆ ಕ್ಷೇತ್ರರಕ್ಷಣೆ ವೇಳೆ ಗಾಯಗೊಂಡು, ಸಿಡ್ನಿ ಆಸ್ಪತ್ರೆಗೆ ದಾಖಲಾಗಿದ್ದ ಶ್ರೇಯಸ್ ಅಯ್ಯರ್ ಇದೀಗ ಡಿಸ್ಚಾರ್ಜ್ ಆಗಿದ್ದಾರೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.

 

Read Full Story

12:48 PM (IST) Nov 01

ಸೌದಿ ಅರೇಬಿಯಾದಲ್ಲಿ ಕೆಲಸ ಮಾಡ್ತಿದ್ದ 26 ವರ್ಷ ಭಾರತೀಯ ಯುವಕ ಪೊಲೀಸರ ಗುಂಡೇಟಿಗೆ ಬಲಿ

Indian youth killed in Saudi Arabia: ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ ಪೊಲೀಸರು ಹಾಗೂ ದರೋಡೆಕೋರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಜಾರ್ಖಂಡ್ ಮೂಲದ 26 ವರ್ಷದ ಭಾರತೀಯ ಯುವಕ ವಿಜಯ್ ಕುಮಾರ್ ಮಹಾತೋ ಸಾವನ್ನಪ್ಪಿದ್ದಾರೆ. 

Read Full Story

12:06 PM (IST) Nov 01

ಆಧಾರ್​ ಕಾರ್ಡ್​ದಾರರಿಗೆ ಗುಡ್​ನ್ಯೂಸ್​ - ಇಂದಿನಿಂದ ಪ್ರಮುಖ ಬದಲಾವಣೆ- ಏನೆಲ್ಲಾ ಸೌಲಭ್ಯ ಸಿಗತ್ತೆ ನೋಡಿ

ನವೆಂಬರ್ 1 ರಿಂದ, ಆಧಾರ್ ಕಾರ್ಡ್ ಹೊಂದಿರುವವರು myAadhaar ಪೋರ್ಟಲ್ ಮೂಲಕ ಹೆಸರು, ವಿಳಾಸ, ಮತ್ತು ಜನ್ಮ ದಿನಾಂಕದಂತಹ ವಿವರಗಳನ್ನು ಮನೆಯಿಂದಲೇ ಅಪ್‌ಡೇಟ್ ಮಾಡಬಹುದು. ಬಯೋಮೆಟ್ರಿಕ್ ಅಪ್‌ಡೇಟ್‌ಗಳಿಗೆ ಮಾತ್ರ ಕೇಂದ್ರಕ್ಕೆ ಭೇಟಿ ನೀಡಬೇಕಾಗಿದ್ದು, ಡಿಸೆಂಬರ್ 31 ಆಧಾರ್-ಪ್ಯಾನ್ ಲಿಂಕ್ ಮಾಡಲು ಕೊನೆಯ ದಿನ

Read Full Story

11:48 AM (IST) Nov 01

ವಧುವಿನ ತಂದೆ ಜೊತೆ ಓಡಿ ಹೋದ ವರನ ತಾಯಿ - ಪೋಷಕರ ಪ್ರೇಮಾಯಣದಿಂದ ಮುಜುಗರಕ್ಕೀಡಾದ ಮಕ್ಕಳು

middle age love story: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ, ತಮ್ಮ ಮಕ್ಕಳ ಮದುವೆ ನಿಶ್ಚಿತಾರ್ಥಕ್ಕೆ ಕೆಲ ದಿನಗಳಿದ್ದಾಗ ವಧುವಿನ 50 ವರ್ಷದ ತಂದೆ ಮತ್ತು ವರನ 45 ವರ್ಷದ ತಾಯಿ ಪ್ರೀತಿಸಿ ಒಟ್ಟಿಗೆ ಓಡಿಹೋಗಿದ್ದಾರೆ. ಈ ಮಧ್ಯವಯಸ್ಕರ ಪ್ರೇಮ ಪ್ರಕರಣದಿಂದಾಗಿ ಎರಡೂ ಕುಟುಂಬಗಳು ತೀವ್ರ ಮುಜುಗರಕ್ಕೆ ಒಳಗಾಗಿವೆ.

Read Full Story

11:34 AM (IST) Nov 01

ವಿರಾಟ್ ಕೊಹ್ಲಿ ನಂ.18 ಜೆರ್ಸಿ ತೊಟ್ಟು ಕಣಕ್ಕಿಳಿದ ರಿಷಭ್ ಪಂತ್! ಹೊಸ ಚರ್ಚೆ ಬೆನ್ನಲ್ಲೇ ಬಿಸಿಸಿಐ ಸ್ಪಷ್ಟನೆ

ಗಾಯದಿಂದ ಚೇತರಿಸಿಕೊಂಡ ರಿಷಭ್ ಪಂತ್ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳಿದ್ದಾರೆ. ಇಂಡಿಯಾ ಎ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ 18ನೇ ನಂಬರ್ ಜೆರ್ಸಿ ಧರಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. 

 

Read Full Story

11:04 AM (IST) Nov 01

ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಯಾವಾಗ? ಎಷ್ಟು ಗಂಟೆಗೆ ಆರಂಭ? ಎಲ್ಲಿ ವೀಕ್ಷಿಸಬಹುದು?

ಮಹಿಳಾ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳು ತಮ್ಮ ಚೊಚ್ಚಲ ಪ್ರಶಸ್ತಿಗಾಗಿ ಹೋರಾಡುತ್ತಿದ್ದು, ಯಾರೇ ಗೆದ್ದರೂ ಹೊಸ ಚಾಂಪಿಯನ್ ತಂಡ ಉದಯವಾಗಲಿದೆ. ಈ ಮಹತ್ವದ ಪಂದ್ಯ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.
Read Full Story

07:25 AM (IST) Nov 01

ಬಿಹಾರ ಚುನಾವಣೆ ನಡುವೆ ಕಡಿಮೆಯಾಯ್ತು LPG ಸಿಲಿಂಡರ್ ಬೆಲೆ - ತಿಂಗಳ ಮೊದಲ ದಿನವೇ ಸಮಾಧಾನಕರ ಸುದ್ದಿ

LPG Price 1st November 2025: ಬಿಹಾರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ, 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದೆ. ಬದಲಾಗಿ ವರ್ಷದಲ್ಲಿ 50 ರೂ. ಏರಿಕೆಯಾಗಿದೆ.

Read Full Story

More Trending News