ಸಿಡ್ನಿ ಆಸ್ಪತ್ರೆಯಿಂದ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಡಿಸ್ಚಾರ್ಜ್! ಇಲ್ಲಿದೆ ಹೊಸ ಅಪ್‌ಡೇಟ್ಸ್
ಸಿಡ್ನಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದ ವೇಳೆ ಕ್ಷೇತ್ರರಕ್ಷಣೆ ವೇಳೆ ಗಾಯಗೊಂಡು, ಸಿಡ್ನಿ ಆಸ್ಪತ್ರೆಗೆ ದಾಖಲಾಗಿದ್ದ ಶ್ರೇಯಸ್ ಅಯ್ಯರ್ ಇದೀಗ ಡಿಸ್ಚಾರ್ಜ್ ಆಗಿದ್ದಾರೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.

ಕ್ಯಾಚ್ ಹಿಡಿಯುವ ವೇಳೆಯಲ್ಲಿ ಗಾಯಗೊಂಡಿದ್ದ ಅಯ್ಯರ್
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಅಲೆಕ್ಸ್ ಕ್ಯಾರಿ ಅವರ ಕ್ಯಾಚ್ ಹಿಡಿಯುವ ಯತ್ನದಲ್ಲಿ ಶ್ರೇಯಸ್ ಅಯ್ಯರ್ ಗಂಭೀರವಾಗಿ ಗಾಯಗೊಂಡು ಸಿಡ್ನಿ ಆಸ್ಪತ್ರೆಗೆ ದಾಖಲಾಗಿದ್ದರು.
ಶ್ರೇಯಸ್ ಪಕ್ಕೆಲುಬಿಗೆ ಗಾಯ
ಇದಾದ ಬಳಿಕ ಅವರಿಗೆ ಆಂತರಿಕ ರಕ್ತಸ್ರಾವ ಆಗಿರುವ ವಿಚಾರ ಬೆಳಕಿಗೆ ಬಂದಿತ್ತು. ಇದಷ್ಟೇ ಅಲ್ಲದೇ ಪಕ್ಕೆಲುಬಿಗೂ ಹಾನಿಯಾಗಿದ್ದರಿಂದ ಶ್ರೇಯಸ್ ಅಯ್ಯರ್ ಅವರನ್ನು ತೀವ್ರ ನಿಗಾ ಘಟಕಕ್ಕೆ(ಐಸಿಯು) ದಾಖಲು ಮಾಡಲಾಗಿತ್ತು.
ಸರಿಯಾದ ಸಮಯದಲ್ಲಿ ಅಯ್ಯರ್‌ಗೆ ಚಿಕಿತ್ಸೆ
ತಂಡದ ವೈದ್ಯರು ಮತ್ತು ಫಿಸಿಯೋ ಶ್ರೇಯಸ್ ಅವರನ್ನು ಆದಷ್ಟು ಬೇಗ ಆಸ್ಪತ್ರೆಗೆ ಸೇರಿಸಿ ಪರಿಸ್ಥಿತಿ ಸುಲಭಗೊಳಿಸಿದರು. ಆದರೆ ಅದು ಮಾರಣಾಂತಿಕವಾಗಬಹುದಿತ್ತು ಎಂದು ವರದಿಯಾಗಿತ್ತು.
ಶ್ರೇಯಸ್ ಆರೋಗ್ಯದ ಅಪ್‌ಡೇಟ್
ಇನ್ನು ಕೆಲ ದಿನಗಳ ಹಿಂದಷ್ಟೇ ಸ್ವತಃ ಶ್ರೇಯಸ್ ಅಯ್ಯರ್ ತಮ್ಮ ಆರೋಗ್ಯದ ಕುರಿತಂತೆ ಮಹತ್ವದ ಅಪ್‌ಡೇಟ್ ನೀಡಿದ್ದರು.
ಟ್ವೀಟ್ ಮೂಲಕ ಹೆಲ್ತ್ ಅಪ್‌ಡೇಟ್ ನೀಡಿದ್ದ ಅಯ್ಯರ್
'ನಾನು ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಿದ್ದೇನೆ. ನೀವೆಲ್ಲರೂ ನೀಡಿದ ಪ್ರೀತಿ, ಬೆಂಬಲ ಹಾಗೂ ಹಾರೈಕೆಗಳಿಗೆ ನಾನು ಋಣಿ. ನನಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಶ್ರೇಯಸ್ ಅಯ್ಯರ್ ಟ್ವೀಟ್ ಮಾಡಿದ್ದರು.
ಆಸ್ಪತ್ರೆಯಿಂದ ಅಯ್ಯರ್ ಡಿಸ್ಚಾರ್ಜ್
ಇದೀಗ ಶ್ರೇಯಸ್ ಅಯ್ಯರ್ ಸಿಡ್ನಿಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಬಿಸಿಸಿಐ ಖಚಿತಪಡಿಸಿದೆ. ಇದೀಗ ಶ್ರೇಯಸ್ ಅಯ್ಯರ್ ಆರೋಗ್ಯ ಸ್ಥಿರವಾಗಿದ್ದು, ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಸಿಡ್ನಿಯಲ್ಲೇ ಉಳಿದುಕೊಂಡಿರುವ ಅಯ್ಯರ್
ಸದ್ಯ ಶ್ರೇಯಸ್ ಅಯ್ಯರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರೂ, ಕೆಲ ಸಮಯದ ಮಟ್ಟಿಗೆ ಸಿಡ್ನಿಯಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಅಯ್ಯರ್ ಒಂದು ಹಂತದಲ್ಲಿ ಫಿಟ್ ಆದ ಬಳಿಕ ಭಾರತಕ್ಕೆ ವಿಮಾನ ಏರಲಿದ್ದಾರೆ ಎಂದು ತಿಳಿದುಬಂದಿದೆ.