ಜಮ್ಮು ಕಾಶ್ಮೀರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯ ಬರ್ಬರ ಹತ್ಯೆ: ಮನೆ ಕೆಲಸದವ ಪರಾರಿ

By Anusha KbFirst Published Oct 4, 2022, 6:59 AM IST
Highlights

 ಜಮ್ಮುಕಾಶ್ಮೀರದ ಹಿರಿಯ ಐಪಿಎಸ್ ಅಧಿಕಾರಿ, ಹಾಗೂ ಕಾರಾಗೃಹ ಅಧಿಕಾರಿಯನ್ನು ಅವರ ಮನೆಯಲ್ಲೇ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಜಮ್ಮು ಹೊರವಲಯದಲ್ಲಿರುವ ಉದಯವಾಲಾದಲ್ಲಿರುವ ನಿವಾಸದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

ಜಮ್ಮುಕಾಶ್ಮೀರ: ಜಮ್ಮುಕಾಶ್ಮೀರದ ಹಿರಿಯ ಐಪಿಎಸ್ ಅಧಿಕಾರಿ, ಹಾಗೂ ಕಾರಾಗೃಹ ಅಧಿಕಾರಿಯನ್ನು ಅವರ ಮನೆಯಲ್ಲೇ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಜಮ್ಮು ಹೊರವಲಯದಲ್ಲಿರುವ ಉದಯವಾಲಾದಲ್ಲಿರುವ ನಿವಾಸದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. 57 ವರ್ಷದ ಹೇಮಂತ್ ಲೋಹಿಯಾ ಕೊಲೆಯಾದವರು. ಇವರು 1992ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಆಗಿದ್ದರು. 

ಕತ್ತು ಸೀಳಿದ ಸ್ಥಿತಿಯಲ್ಲಿ ಉದಯ್‌ವಾಲಾದ ನಿವಾಸದಲ್ಲಿ ಅವರ ಶವ ಪತ್ತೆ ಆಗಿದೆ. ಕಳೆದ ಆಗಸ್ಟ್‌ನಲ್ಲಷ್ಟೇ ಅವರು ಜಮ್ಮು ಕಾಶ್ಮೀರದ ಜೈಲಿನ ಮಹಾ ನಿರ್ದೇಶಕರಾಗಿದ್ದರು. ಘಟನೆಯ ಬಳಿಕ ಮನೆಯ ಕೆಲಸದವ ಪರಾರಿ ಆಗಿದ್ದಾನೆ. ಆತನಿಗಾಗಿ ಹುಡುಕಾಟ ಶುರು ಆಗಿದೆ. 

Director General of J&K (Prisons) Hemant Lohia murdered at his residence in Jammu: Police

— Press Trust of India (@PTI_News)

ಬಗ್ಗೆ ಹೆಚ್ಚುವರಿ ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಮುಕೇಶ್ ಸಿಂಗ್ (Mukesh Sing) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಲೋಹಿಯಾ ಅವರ ಮನೆ ಕೆಲಸದವ ಪರಾರಿಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ವಿಧಿ ವಿಜ್ಞಾನ ಹಾಗೂ ಅಪರಾಧ ತನಿಖಾ ದಳವೂ ಕಾರ್ಯಾಚರಣೆಗೆ ಇಳಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

'ಈಶ್ವರ ಅಲ್ಲಾ ತೇರೇ ನಾಮ್‌..' ಎಂದ ಕಾಶ್ಮೀರ ಮಕ್ಕಳು, ಇದು ಹಿಂದುತ್ವದ ಅಜೆಂಡಾ ಎಂದ ಮೆಹಬೂಬಾ ಮುಫ್ತಿ!

ತನಿಖೆ ಪ್ರಕ್ರಿಯೆ ಆರಂಭವಾಗಿದೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದಾರೆ ಎಂದು ಅಧಿಕಾರಿ ಹೇಳಿದ್ದು, ಜಮ್ಮು ಕಾಶ್ಮೀರ ಪೊಲೀಸರ ಕುಟುಂಬವು ತಮ್ಮ ಹಿರಿಯ ಅಧಿಕಾರಿಯ ಸಾವಿನ ತೀವ್ರ ಶೋಕ ಹಾಗೂ ದುಃಖ ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್‌: 3 ಎಲ್‌ಇಟಿ ಉಗ್ರರನ್ನು ಹತ್ಯೆಗೈದ ಭದ್ರತಾ ಪಡೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಶ್ಮೀರದಲ್ಲಿರುವ ದಿನದಲ್ಲಿ ಈ ದುರಂತ ಸಂಭವಿಸಿದೆ. ಸೋಮವಾರ ಮಧ್ಯರಾತ್ರಿ ಈ ಅನಾಹುತ ಸಂಭವಿಸಿದೆ. ಜಮ್ಮು ಪೊಲೀಸ್ ಮಹಾ ನಿರ್ದೇಶಕ(Director General of Police) ದಿಲ್ಬಂಗ್ ಸಿಂಗ್(Dilbag Singh) ಈ ಘಟನೆಯನ್ನು ಅತ್ಯಂತ ದುರಾದೃಷ್ಟಕರ ಎಂದು ಕರೆದಿದ್ದಾರೆ. ತಲೆ ಮರೆಸಿಕೊಂಡಿರುವ ಲೋಹಿಯಾ ಅವರ ಮನೆ ಕೆಲಸದವ ಜಾಸೀರ್‌ನ(Jasir) ಪತ್ತೆಗೆ ತಂಡವೊಂದು ಕಾರ್ಯಾಚರಣೆಗೆ ಇಳಿದಿದೆ ಎಂದು ಅವರು ತಿಳಿಸಿದ್ದಾರೆ. ಹತ್ಯೆ ಮಾಡಿದ್ದಲ್ಲದೇ ಅಧಿಕಾರಿ ಲೋಹಿಯಾ ಅವರ ದೇಹವನ್ನು ಆತ ಸುಡಲು ಯತ್ನಿಸಿದ್ದ ಎಂದು ತಿಳಿದು ಬಂದಿದೆ.

ಲೋಹಿಯಾ ಅವರ ದೇಹವೂ ಕತ್ತು ಸೀಳಿದ ಸ್ಥಿತಿಯಲ್ಲಿ, ಜೊತೆಗೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯ ಹೊರಗಿದ್ದ ಭದ್ರತಾ ಸಿಬ್ಬಂದಿ ಮನೆಯ ಒಳಗೆ ಬೆಂಕಿ ಕಾಣಿಸಿಕೊಂಡಿದ್ದನ್ನು ನೋಡಿ ಬಾಗಿಲು ಮುರಿದು ಒಳ ನುಗ್ಗಿದಾಗ ಘಟನೆ ಬೆಳಕಿಗೆ ಬಂದಿದೆ.

click me!