ಮಡದಿ ಇಚ್ಛೆಗೆ ವಿರುದ್ಧ ನಡೆಸೋ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಹೈಕೋರ್ಟ್‌

By Suvarna NewsFirst Published Aug 26, 2021, 3:32 PM IST
Highlights

* ಭಾರತೀಯ ಕಾನೂನಿನ ಅನ್ವಯ ವೈವಾಹಿಕ ಜೀವನದಲ್ಲಿ ನಡೆಸುವ ಸೆಕ್ಸ್ ರೇಪ್ ಅಲ್ಲ

* ಗಂಡ ಹೆಂಡತಿ ಇಚ್ಛೆಗೆ ವಿರೋಧವಾಗಿ ಲೈಂಗಿಕ ಕ್ರಿಯೆ ನಡೆಸಿದರೂ ಅಪರಾಧವಲ್ಲ

* ಛತ್ತೀಸ್‌ಗಢ ಹೈಕೋರ್ಟ್‌ ಆದೇಶ

ರಾಯ್ಪುರ(ಆ.26): ಭಾರತೀಯ ಕಾನೂನಿನ ಅನ್ವಯ ಮದುವೆ ಬಳಿಕದ ಲೈಂಗಿಕ ಕ್ರಿಯೆ ಒತ್ತಾಯಪೂರ್ವಕವಾಗಿದ್ದರೂ ಅಪರಾಧ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿರುವ ಛತ್ತೀಸ್‌ಗಢ ಹೈಕೋರ್ಟ್‌ ವ್ಯಕ್ತಿಯೊಬ್ಬನನ್ನು ಬಿಡುಗಡೆಗೊಳಿಸಿದೆ.

ಪತ್ನಿಯೊಬ್ಬಳು ತನ್ನ ಗಂಡನ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದರು. ಈ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಜ| ಎನ್‌. ಕೆ. ಚಂದ್ರವಂಶಿ ಗಂಡನೊಬ್ಬ ತನ್ನ ಹೆಂಡತಿ ಜೊತೆಗೆ ನಡೆಸುವ ಲೈಂಗಿಕ ಕ್ರಿಯೆ ಅಥವಾ ಚಟುವಟಿಕೆಯನ್ನು ಅತ್ಯಾಚಾರ ಎನ್ನಲು ಸಾಧ್ಯವಿಲ್ಲ. ಇದು ಒತ್ತಾಯಪೂರ್ವಕ ಸೆಕ್ಸ್ ಆಗಿದ್ದರೂ ರೇಪ್ ಎಂದು ಹೇಳಲು ಆಗುವುದಿಲ್ಲ ಎಂದಿದೆ. 

ವೈವಾಹಿಕ ಜೀವನದಲ್ಲಿ ಪತ್ನಿ ಇಚ್ಚೆಗೆ ವಿರುದ್ಧ ಲೈಂಗಿಕ ಕ್ರಿಯೆ ಅತ್ಯಾಚಾರಕ್ಕೆ ಸಮ; ಹೈಕೋರ್ಟ್!

ಕಾನೂನುಬದ್ಧವಾಗಿ ಮದುವೆಯಾದ ಬಳಿಕ ಗಂಡ ತನ್ನ ಹೆಂಡತಿ ಜೊತೆ ಅವಳ ಇಚ್ಛೆ ಇದ್ದರೂ, ಇಲ್ಲದಿದ್ದರೂ ನಡೆಸುವ ಲೈಂಗಿಕ ಕ್ರಿಯೆ ಅತ್ಯಾಚಾರವಾಗುವುದಿಲ್ಲ ಎಂದಿರುವ ಛತ್ತೀಸ್‌ಗಢ ಹೈಕೋರ್ಟ್‌ ಅಪರಾಧಿಗೆ ಈ ಪ್ರಕರಣದಿಂದ ಬಿಡುಗಡೆ ನೀಡಿದೆ. 

ಇಷ್ಟಾದರೂ ಪತಿ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಸೆಕ್ಷನ್ 498 ಎ (ಮಹಿಳೆಯರಿಗೆ ಹಿಂಸೆಗೆ ಸಂಬಂಧಿಸಿದ) ಮತ್ತು 377 (ಅಸಹಜ ಅಪರಾಧಗಳು, "ಅಸ್ವಾಭಾವಿಕ" ವಾಗಿ ನಡೆಸಿದ ದೈಹಿಕ ಸಂಬಂಧ) ಪ್ರಕರಣಗಳ ಅಡಿಯಲ್ಲಿ ಆರೋಪಗಳಿಂದ ಬಿಡುಗಡೆ ಸಿಕ್ಕಿಲ್ಲ. 

ಹೆಂಡತಿ ಕೊಟ್ಟ ದೂರೇನು?

ತನ್ನ ಗಂಡನ ವಿರಉದ್ಧ ದೂರು ದಾಖಲಿಸಿದ್ದ ಹೆಂಡತಿ ಈ ದೂರಿನಲ್ಲಿ 'ತಮ್ಮ ಮದುವೆಯಾದ ಮರುದಿನವೇ, ತನ್ನ ಗಂಡ ತನ್ನ ಮೇಲೆ ದೌರ್ಜನ್ಯ ನಡೆಸಲಾರಂಭಿಸಿದ್ದ. ಗಂಡನ ಮನೆಯಲ್ಲಿ ವರದಕ್ಷಿಣೆ ಕಿರುಕುಳವೂ ಆರಂಭವಾಗಿತ್ತು ಎಂದದ್ದಾರೆ. ಇನ್ನು ಲೈಂಗಿಕ ದೌರ್ಜನ್ಯದ ಬಗ್ಗೆಯೂ ಉಲ್ಲೇಖಿಸಿರುವ ಪತ್ನಿ ತನ್ನ ಗಂಡ ಅದೆಷ್ಟೇ ವಿರೋಧಿಸಿದರೂ ಗುಪ್ತಾಂಗಕ್ಕೆ ಬೆರಳು ಹಾಗೂ ತರಕಾರಿಗಳನ್ನು ಹಾಕಿ ಹಿಂಸಿಸುತ್ತಾನೆ. ಅಲ್ಲದೇ ಅಸ್ವಾಭಾವಿಕ ದೈಹಿಕ ಸಂಪರ್ಕ ಬೆಳೆಸಲು ಒತ್ತಾಯಿಸುತ್ತಾನೆ' ಎಂದು ತಿಳಿಸಿದ್ದಾರೆ.

click me!