Fact Check: ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ರಾ ಪ್ರತಿಭಟನಾಕಾರರು?

By Suvarna News  |  First Published Dec 23, 2019, 11:48 AM IST

ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾರೆ ಎಂದು ತಲೆಗೆ, ಕೈಕಾಲಿಗೆ ಏಟು ಬಿದ್ದು ರಕ್ತ ಸುರಿಯುತ್ತಿರುವ ಪೊಲೀಸರ ಫೋಟೋವನ್ನು ಪೋಸ್ಟ್‌ ಮಾಡಲಾಗಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 


ಪೌರತ್ವ ತಿದ್ದುಪಡಿ ಕಾಯ್ದೆ ದೇಶಾದ್ಯಂತ ಸದ್ದು ಮಾಡುತ್ತಿದೆ. ಹಿಂಸಾತ್ಮಕ ಪ್ರತಿಭಟನೆಯಲ್ಲಿ ಅನೇಕರು ಸಾವನ್ನಪ್ಪಿದ್ದಾರೆ. ದೆಹಲಿಯ ಅನೇಕ ವಿಶ್ವವಿದ್ಯಾಲಯಗಳಲ್ಲೂ ಪ್ರತಿಭಟನೆ ಮಾಡಲಾಗಿತ್ತು. ಇದೇ ವೇಳೆ ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾರೆ ಎಂದು ತಲೆಗೆ, ಕೈಕಾಲಿಗೆ ಏಟು ಬಿದ್ದು ರಕ್ತ ಸುರಿಯುತ್ತಿರುವ ಪೊಲೀಸರ ಫೋಟೋವನ್ನು ಪೋಸ್ಟ್‌ ಮಾಡಲಾಗಿದೆ.

Fact Check: ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆಗಿಳಿದ್ರಾ ಪೊಲೀಸರು?

Latest Videos

ಅದರೊಂದಿಗೆ , ‘ಇದನ್ನು ಒಪ್ಪಲು ಸಾಧ್ಯವೇ ಇಲ್ಲ. ಶಾಂತಿಯುತ ಪ್ರತಿಭಟನೆ ನಡೆಸುವ ಸೋ ಕಾಲ್ಡ್‌ ಪ್ರತಿಭಟನಾಕಾರರು ಗುಜರಾತಿನ ಅಹ್ಮದಾಬಾದಿನಲ್ಲಿ ಮಾಡಿದ ಕೆಲಸ ಇದು’ ಎಂದು ಒಕ್ಕಣೆ ಬರೆದಿದ್ದಾರೆ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಕೆಲವರು ಇದನ್ನು ಪೋಸ್ಟ್‌ ಮಾಡಿ, ‘ಇದು ಶಾಂತಿಯುತ ಪ್ರತಿಭಟನೆಯೇ?’ ಎಂದು ಪ್ರಶ್ನಿಸಿದ್ದಾರೆ.

 

Maar to diya tumne patthar police pe,
Ab police pele to ye mat kehna Modi fascist hai pic.twitter.com/wZCnKph9M2

— Scar (@RAC7R)

ಆದರೆ ಈ ಫೋಟೋಗಳು ನಿಜಕ್ಕೂ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯದ್ದೇ ಎಂದು ಆಲ್ಟ್‌ ನ್ಯೂಸ್‌ ಸುದ್ದಿಸಂಸ್ಥೆ ಪರಿಶೀಲಿಸಿದಾಗ ಇವು ಈಗಿನ ಫೋಟೋವೇ ಅಲ್ಲ ಎಂದು ತಿಳಿದುಬಂದಿದೆ. ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಹೊರಟಾಗ ಇದೇ ಫೋಟೋಗಳು 2018ರಲ್ಲೂ ಹರಿದಾಡಿದ್ದವು ಎಂದು ತಿಳಿದುಬಂದಿದೆ.

Fact Check: ಅತ್ಯಾಚಾರ ಆರೋಪಿಗೆ ನಮಸ್ಕರಿಸಿದ ಸ್ಮೃತಿ ಇರಾನಿ!

ಬಹುಶಃ 2018ರ ಏಪ್ರಿಲ್‌ನಲ್ಲಿ ಹರ್ಯಾಣ ಅಥವಾ ಉತ್ತರಪ್ರದೇಶದಲ್ಲಿ ನಡೆದ ಜಾತಿ ಪ್ರತಿಭಟನೆಯಲ್ಲಿ ಉದ್ರಿಕ್ತ ಗುಂಪು ಪೊಲೀಸರ ಮೇಲೆ ಹಲ್ಲೆ ಮಾಡಿತ್ತು. ಆಗಿನ ಫೋಟೋವನ್ನು ಸದ್ಯ ಭಾರತದಲ್ಲಿ ನಡೆಯುತ್ತಿರುವ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯದ್ದು ಎಂದು ಸುಳ್ಳುಸುದ್ದಿ ಹರಡಲಾಗುತ್ತಿದೆ.

- ವೈರಲ್ ಚೆಕ್ 

click me!