Fact Check: 62 ಆಪ್‌ ಶಾಸಕರಲ್ಲಿ 40 ಮಂದಿ ರೇಪ್‌ ಆರೋಪಿಗಳು!

By Kannadaprabha NewsFirst Published Feb 18, 2020, 10:10 AM IST
Highlights

‘ದೆಹಲಿಯಲ್ಲಿ ನೂತನವಾಗಿ ಆಯ್ಕೆಯಾದ ಆಮ್‌ ಆದ್ಮಿ ಪಕ್ಷದ 62 ಶಾಸಕರ ಪೈಕಿ 40 ಮಂದಿ ಅತ್ಯಾಚಾರ ಆರೋಪಿಗಳು'! ಹೀಗೊಂದು ಸುದ್ದಿ ಓಡಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

‘ದೆಹಲಿಯಲ್ಲಿ ನೂತನವಾಗಿ ಆಯ್ಕೆಯಾದ ಆಮ್‌ ಆದ್ಮಿ ಪಕ್ಷದ 62 ಶಾಸಕರ ಪೈಕಿ 40 ಮಂದಿ ಅತ್ಯಾಚಾರ ಆರೋಪಿಗಳು. ಅವರ ಬೆಂಬಲದಿಂದ ಅರವಿಂದ ಕೇಜ್ರಿವಾಲ್‌ ಮುಖ್ಯಮಂತ್ರಿಯಾಗಿದ್ದಾರೆ. ನಿಜವಾಗಿಯೂ ಹೊಸ ರೀತಿಯ ರಾಜಕಾರಣ ಆರಂಭವಾಗಿವೆ.

ಜನರು ದೆಹಲಿಯನ್ನು ನಿಜಾರ್ಥದಲ್ಲಿ ಅತ್ಯಾಚಾರದ ರಾಜಧಾನಿ ಎಂದು ಕರೆಯಬಹುದು. ಈ ವಿಷಯದಲ್ಲಿ ಆರ್‌ಜೆಡಿಯನ್ನೂ ಆಪ್‌ ಮೀರಿಸಿದೆ. ಲಾಲುಪ್ರಸಾದ್‌ ಯಾದವ್‌ ತನ್ನನ್ನು ಕೇಜ್ರಿವಾಲ್‌ ಮೀರಿಸಿದ್ದಾರೆಂದು ಖುಷಿಪಡಬಹುದು. ನಿರ್ಭಯಾ ಪ್ರಕರಣ ದೆಹಲಿಯಲ್ಲಿ ನಡೆದಿದ್ದೇಕೆ ಎಂಬುದು ಗೊತ್ತಾಯ್ತಾ?’

ಹೀಗೊಂದು ಟ್ವೀಟ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಜೆಡಿಯು ನಾಯಕ ಅಜಯ್‌ ಅಲೋಕ್‌ ಎಂಬುವರು ಈ ಟ್ವೀಟ್‌ ಮಾಡಿದ್ದಾರೆ. ಇದು ನಿಜವೇ ಎಂದು ಪರಿಶೀಲಿಸಿದಾಗ ತಿಳಿದುಬಂದ ಸಂಗತಿಯೇ ಬೇರೆ. ಜನಪ್ರತಿನಿಧಿಗಳ ವಿರುದ್ಧದ ಪ್ರಕರಣ, ಅವರ ಆಸ್ತಿ ಮುಂತಾದ ವಿವರಗಳನ್ನು ಅಸೋಸಿಯೇಷನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾಮ್ಸ್‌ರ್‍ ಎಂಬ ಸಂಸ್ಥೆ ಕಾಲಕಾಲಕ್ಕೆ ಸಂಗ್ರಹಿಸಿ ಪ್ರಕಟಿಸುತ್ತದೆ.

ದೆಹಲಿಯ ಶಾಸಕರ ಕುರಿತ ಅದರ ವರದಿ ಪರಿಶೀಲಿಸಿದಾಗ ಅವರಲ್ಲಿ ಒಬ್ಬರ ವಿರುದ್ಧ ಮಾತ್ರ ಅತ್ಯಾಚಾರದ ಆರೋಪವಿದೆಯೆಂದು ಪತ್ತೆಯಾಗಿದೆ. ಇನ್ನು, 6 ಆಪ್‌ ಶಾಸಕರು ಹಾಗೂ ಒಬ್ಬ ಬಿಜೆಪಿ ಶಾಸಕರು ತಮ್ಮ ವಿರುದ್ಧ ಮಹಿಳಾ ದೌರ್ಜನ್ಯ ಪ್ರಕರಣವಿರುವುದಾಗಿ ಘೋಷಿಸಿಕೊಂಡಿದ್ದಾರೆ. ಒಟ್ಟು 70 ಶಾಸಕರ ಪೈಕಿ 37 ಜನರ ವಿರುದ್ಧ ಬೇರೆ ಬೇರೆ ರೀತಿಯ ಕ್ರಿಮಿನಲ್‌ ಪ್ರಕರಣಗಳಿವೆ. ಹೀಗಾಗಿ ಆಪ್‌ ಶಾಸಕರ ಪೈಕಿ 40 ಮಂದಿ ಅತ್ಯಾಚಾರ ಆರೋಪಿಗಳು ಎಂದು ವೈರಲ್‌ ಆಗಿರುವ ಸುದ್ದಿ ವಾಸ್ತವದಲ್ಲಿ ಸುಳ್ಳು.

- ವೈರಲ್ ಚೆಕ್ 

click me!