ಯುಎಸ್ ನೇವಿ ಫೋಟೋ ಹಾಕಿ ಇಂಡಿಯನ್ ನೇವಿ ಹೊಗಳಿದ ಬಿಜೆಪಿ ಅಧ್ಯಕ್ಷ!

By Suvarna NewsFirst Published Dec 4, 2019, 6:59 PM IST
Highlights

ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆದ ಬಿಜೆಪಿ ಅಧ್ಯಕ್ಷ| ಭಾರತೀಯ ನೌಕಾಸೇನೆ ಹೊಗಳುವ ಭರದಲ್ಲಿ ಎಡವಟ್ಟು| ಅಮೆರಿಕ ನೌಕಾಸೇನೆಯ ಫೋಟೋ ಹಾಕಿ ಟ್ರೋಲ್ ಆದ ಮನೋಜ್ ತಿವಾರಿ| ನೌಕಾಸೇನೆ ದಿನಾಚರಣೆ ಅಂಗವಾಗಿ ಟ್ವಿಟ್ ಮಾಡಿದ್ದ ದೆಹಲಿ ಬಿಜೆಪಿ ಅಧ್ಯಕ್ಷ|

ನವದೆಹಲಿ(ಡಿ.04): ಸಶಸ್ತ್ರಪಡೆಗಳನ್ನು ಹೊಗಳುವ ಭರಾಟೆಯಲ್ಲಿ ರಾಜಕೀಯ ನಾಯಕರು ಎಡವಟ್ಟು ಮಾಡಿಕೊಳ್ಳುವುದು ಸಾಮಾನ್ಯ ಸಂಗತಿ. ಈ ಸಾಲಿಗೆ ಇದೀಗ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಸೇರ್ಪಡೆಗೊಂಡಿದ್ದಾರೆ.

ನೌಕಾಸೇನೆ ದಿನಾಚರಣೆ ಅಂಗವಾಗಿ ಭಾರತೀಯ ನೌಕಾಪಡೆಯನ್ನು ಹೊಗಳಿ ಟ್ವಿಟ್ ಮಾಡಿರುವ ಮನೋಜ್ ತಿವಾರಿ, ಅಮೆರಿಕ ನೌಕಾಸೇನೆಯ ಫೋಟೋ ಹಾಕಿ ಟ್ರೋಲ್ ಆಗಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದರೆ...ಎಲ್ಲ ಸರಿಯಾಗುವುದು ಮನೋಜ್ ತಿವಾರಿ ಹೇಳಿದ್ದು ಕೇಳಿದರೆ..!

अत्यंत साहस और निष्ठा भाव से राष्ट्र सेवा की सुरक्षा में समर्पित सभी भारतीय नौ सैनिकों को नौ सेना दिवस की हार्दिक शुभकामनाएं। pic.twitter.com/FXo5fjHaZg

— Manoj Tiwari (@ManojTiwariMP)

ಭಾರತೀಯ ಸಮುದ್ರ ಗಡಿಗಳನ್ನು ಕಾಯುತ್ತಿರುವ ನೌಕಾಸೇನೆಯ ಧೀರ ಯೋಧರಿಗೆ ನನ್ನ ಸಲಾಂ ಎಂದು ಟ್ವಿಟ್ ಮಾಡಿದ್ದ ಮನೋಜ್ ತಿವಾರಿ, ಭಾರತೀಯ ನೌಕಾಸೇನೆಯ ಫೋಟೋ ಬದಲಿಗೆ ಅಮೆರಿಕ ನೌಕಾಸೇನೆಯ ಫೋಟೋ ಹಾಕಿದ್ದಾರೆ.

ದೆಹಲಿಗೂ NRC ಬೇಕೆಂದ ಮನೋಜ್ ತಿವಾರಿಗೆ ತಿವಿದ ಕಾಂಗ್ರೆಸ್!

ಈ ಫೋಟೋ ನೋಡಿದ ನೆಟ್ಟಿಗರು ಮನೋಜ್ ತಿವಾರಿ ಕಾಲೆಳೆದಿದ್ದು, ಭಾರತೀಯ ನೌಕಾಸೇನೆಯನ್ನು ಹೊಗಳುವ ಮೊದಲು, ಅದರ ಕುರಿತು ಸರಿಯಾಗಿ ಓದಿಕೊಳ್ಳಿ ಎಂದು ಕಿಚಾಯಿಸಿದ್ದಾರೆ.

click me!