Vaccination: ವಯೋವೃದ್ಧರು ಬೂಸ್ಟರ್‌ ಡೋಸ್‌ ಪಡೆಯಲು ಮೆಡಿಕಲ್‌ ಸರ್ಟಿಫಿಕೆಟ್‌ ಕಡ್ಡಾಯ!

By Kannadaprabha News  |  First Published Dec 27, 2021, 3:05 AM IST

* ನಿರ್ದಿಷ್ಟ20 ಕಾಯಿಲೆಗಳಿರುವ ವಯೋವೃದ್ಧರಿಗೆ ಮುಂಜಾಗ್ರತಾ ಡೋಸ್‌

* ವಯೋವೃದ್ಧರ ಬೂಸ್ಟರ್‌ ಡೋಸ್‌ಗೆ ಮೆಡಿಕಲ್‌ ಸರ್ಟಿಫಿಕೆಟ್‌ ಕಡ್ಡಾಯ

ನವದೆಹಲಿ(ಡಿ.27): ಕೋವಿಡ್‌-19 ಬೂಸ್ಟರ್‌ ಡೋಸ್‌ ಪಡೆಯಲು 60 ವರ್ಷ ಮೇಲ್ಪಟ್ಟರೋಗಪೀಡಿತರು ವೈದ್ಯಕೀಯ ಪ್ರಮಾಣಪತ್ರ ಒದಗಿಸಬೇಕು. ಈ ಮೂಲಕ ತಮಗಿರುವ ಕಾಯಿಲೆಗಳ ಬಗ್ಗೆ ವಿವರ ನೀಡಬೇಕು. ಪಟ್ಟಿಮಾಡಿದ ನಿರ್ದಿಷ್ಟ20 ಕಾಯಿಲೆಗಳಿರುವ ವಯೋವೃದ್ಧರಿಗೆ ಮುಂಜಾಗ್ರತಾ ಡೋಸ್‌ ನೀಡಲಾಗುತ್ತದೆ ಎಂದು ಕೋವಿನ್‌ ಪ್ಲಾರ್ಟ್‌ಫಾಮ್‌ರ್‍ ಮುಖ್ಯಸ್ಥ, ರಾಷ್ಟ್ರೀಯ ಆರೋಗ್ಯ ಇಲಾಖೆ ಮುಖ್ಯ ಕಾರ‍್ಯನಿರ್ವಾಹಕ ಅಧಿಕಾರಿ ಡಾ.ಆರ್‌.ಎಸ್‌.ಶರ್ಮಾ ತಿಳಿಸಿದ್ದಾರೆ.

ಹೃದಯ ಸಮಸ್ಯೆ, ಮಧುಮೇಹ, ಸ್ಟೆಮ್‌ ಸೆಲ್‌ ಕಸಿ, ಕಿಡ್ನಿ ಸಂಬಂಧಿತ ಕಾಯಿಲೆ, ಕ್ಯಾನ್ಸರ್‌, ಸಿರೋಸಿಸ್‌ ಮುಂತಾದ 20 ಕಾಯಿಲೆಗಳಿರುವ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್‌ ಡೋಸ್‌ ನೀಡಲಾಗುತ್ತದೆ. ಇಂಥ ರೋಗಿಗಳು ಸಲ್ಲಿಸುವ ಪ್ರಮಾಣ ಪತ್ರದಲ್ಲಿ ನೋಂದಾಯಿತ ವೈದ್ಯರ ಸಹಿ ಇರಬೇಕು. ಫಲಾನುಭವಿಗಳು ಇದನ್ನು ಸ್ವತಃ ಕೋವಿನ್‌ 2.0 ವೆಬ್‌ಸೈಟಲ್ಲಿ ಅಪ್ಲೋಡ್‌ ಮಾಡಬಹುದು ಅಥವಾ ಲಸಿಕಾ ಕೇಂದ್ರಕ್ಕೆ ಹಾರ್ಡ್‌ ಕಾಪಿ ತಂದು ನಂತರ ಲಸಿಕೆ ಪಡೆಯಬಹುದು ಎಂದು ತಿಳಿಸಿದ್ದಾರೆ.

Latest Videos

undefined

ಮಕ್ಕಳಿಗೆ, ವಯಸ್ಕರಿಗೆ ನೀಡಲು ಬೇಕು 20 ಕೋಟಿ ಡೋಸ್‌ ಲಸಿಕೆ

15-18ರ ವಯೋಮಾನದ ಮಕ್ಕಳಿಗೆ ಲಸಿಕೆ, ಆರೋಗ್ಯ, ಮುಂಚೂಣಿ ಕಾರ್ಯಕರ್ತರು ಮತ್ತು ವಯೋವೃದ್ಧರಿಗೆ ಬೂಸ್ಟರ್‌ ಡೋಸ್‌ ಕೋವಿಡ್‌ ಲಸಿಕೆ ನೀಡುವ ಕೇಂದ್ರದ ನಿರ್ಧಾರದಿಂದಾಗಿ ಹೆಚ್ಚುವರಿ 20 ಕೋಟಿ ಡೋಸ್‌ ಲಸಿಕೆ ಅಗತ್ಯ ಬೀಳಲಿದೆ.

2011ರ ಜನಗಣತಿಯ ಪ್ರಕಾರ ಭಾರತದಲ್ಲಿ ಒಟ್ಟು 7.4 ಕೋಟಿ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿದ್ದಾರೆ. 13.79 ಕೋಟಿ 60 ವರ್ಷ ಮೇಲ್ಪಟ್ಟವಯಸ್ಕರಿದ್ದಾರೆ. ಈ ಪೈಕಿ ಶೇ.75ರಷ್ಟುಜನರು ನಾನಾ ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಕೇಂದ್ರ ಕುಟುಂಬ ಹಾಗೂ ಆರೋಗ್ಯ ಕಲ್ಯಾಣ ಸಚಿವಾಲಯದ ವರದಿ ಹೇಳಿದೆ. ಅಂದರೆ 13.79 ಕೋಟಿ ಜನರ ಪೈಕಿ 10 ಕೋಟಿ ಜನರು ಬೂಸ್ಟರ್‌ ಡೋಸ್‌ ಪಡೆಯುವ ಅರ್ಹತೆ ಪಡೆಯುತ್ತಾರೆ. ಇವರ ಜೊತೆ 1 ಕೋಟಿ ಆರೋಗ್ಯ ಕಾರ್ಯಕರ್ತರು, 2 ಕೋಟಿ ಮುಂಚೂಣಿ ಕಾರ್ಯಕರ್ತರು ಇದ್ದಾರೆ. ಹೀಗಾಗಿ 20 ಕೋಟಿಗಿಂತ ಹೆಚ್ಚಿನ ಡೋಸ್‌ ಹೆಚ್ಚುವರಿ ಡೋಸ್‌ ಲಸಿಕೆ ಬೇಕಾಗಿ ಬರಲಿದೆ.

ಕೋವ್ಯಾಕ್ಸಿನ್‌ಗೆ ಮಾನ್ಯತೆ ತಡೆಗೆ ಜಾಗತಿಕ ಮಟ್ಟದ ಸಂಚು: ಸಿಜೆಐ

ಭಾರತದಲ್ಲೇ ಸಂಶೋಧಿಸಲ್ಪಟ್ಟಕೋವಿಡ್‌-19ರ ಲಸಿಕೆ ಕೋವ್ಯಾಕ್ಸಿನ್‌ ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದುಕೊಳ್ಳುವುದನ್ನು ತಡೆಯಲು ಜಾಗತಿಕ ಮಟ್ಟದಲ್ಲಿ ಸಂಚು ನಡೆದಿತ್ತು ಎಂಬ ವಿಚಾರವನ್ನು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಬಹಿರಂಗ ಪಡೆಸಿದ್ದಾರೆ.

ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಫೈಝರ್‌ನಂತಹ ಹಲವು ಬಹುರಾಷ್ಟ್ರೀಯ ಕಂಪನಿಗಳು ಮತ್ತು ಕೆಲ ಸ್ಥಳೀಯರೂ ಸೇರಿ ಕೋವಾಕ್ಸಿನ್‌ ವಿರುದ್ಧ ಅಪಪ್ರಚಾರ ನಡೆಸಿದ್ದರು. ಡಬ್ಲ್ಯುಎಚ್‌ಒಗೆ ದೂರು ನೀಡಿ ಭಾರತದಲ್ಲೇ ನಿರ್ಮಾಣವಾದ ವ್ಯಾಕ್ಸಿನ್‌ಗೆ ಜಾಗತಿಕ ಮನ್ನಣೆ ನೀಡುವುದನ್ನು ತಪ್ಪಿಸಲು ಯತ್ನಿಸಿದ್ದರು ಎಂದಿದ್ದಾರೆ.

ಭಾರತ್‌ ಬಯೋಟೆಕ್‌ನ ಸ್ಥಾಪಕ ಕೃಷ್ಣ ಎಲ್ಲಾ ಹಾಗೂ ಅವರ ಪತ್ನಿ ಸುಚಿತ್ರಾ ಅವರು ಈ ಸಮಯದಲ್ಲಿ ಭಾರೀ ಸವಾಲುಗಳನ್ನು ಎದುರಿಸಬೇಕಾಯಿತು. ಆದರೆ ಇವರ ಸತತ ಪ್ರಯತ್ನದಿಂದಾಗಿ ಭಾರತಕ್ಕೆ ಲಸಿಕೆ ತಯಾರಿಕೆಯಲ್ಲಿ ವಿಶ್ವಮಟ್ಟದಲ್ಲಿ ಖ್ಯಾತಿ ಲಭಿಸಿದೆ ಎಂದರು.

click me!