ಸಲ್ಮಾನ್ ಖಾನ್‌ಗೆ ನೆರವು ನೀಡಿದರೆ ಇದೇ ಗತಿ, ಸಿದ್ದಿಕ್ಕಿ ಹತ್ಯೆ ಬಳಿಕ ಲಾರೆನ್ಸ್ ಗ್ಯಾಂಗ್ ಎಚ್ಚರಿಕೆ!

By Chethan Kumar  |  First Published Oct 13, 2024, 7:11 PM IST

ಮುಂಬೈ ಪೊಲೀಸರು ಸಲ್ಮಾನ್ ಖಾನ್‌ಗೆ ಹೆಚ್ಚಿನ ಭದ್ರತೆಯನ್ನು ನೀಡಿದೆ. ಬಾಬಾ ಸಿದ್ದಿಕಿ ಹತ್ಯೆ ಹೊಣೆ ಹೊತ್ತ ಬಳಿಕ ಗ್ಯಾಂಗ್‌ಸ್ಟರ್ ಲಾರೆನ್ಸ್ ಗ್ಯಾಂಗ್ ನೀಡಿದ ಎಚ್ಚರಿಕೆಯಿಂದ ಮುಂಬೈ ಪೊಲೀಸರು ಅಲರ್ಟ್ ಆಗಿದ್ದಾರೆ. ಅಷ್ಟಕ್ಕು ಲಾರೆನ್ಸ್ ಗ್ಯಾಂಗ್ ನೀಡಿದ ವಾರ್ನಿಂಗ್ ಏನು?


ಮುಂಬೈ(ಅ.13) ಮಾಜಿ ಸಚಿವ ಬಾಬಾ ಸಿದ್ದಿಕ್ಕಿ ಹತ್ಯೆ ಹೊಣೆಯನ್ನು ಗ್ಯಾಂಗ್‌ಸ್ಟರ್ ಲಾರೆನ್ಸ್ ಗ್ಯಾಂಗ್ ಹೊತ್ತುಕೊಂಡಿದೆ. ಮುಂಬೈನ ಬಾಂದ್ರಾದಲ್ಲಿ ನಿನ್ನೆ(ಅ.12) ರಾತ್ರಿ ಗುಂಡಿನ ದಾಳಿ ನಡೆಸಿ ಬಾಬಾ ಸಿದ್ದಿಕಿಯನ್ನು ಹತ್ಯೆ ಮಾಡಲಾಗಿತ್ತು. ಈ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಆದರೆ ಈ ಹತ್ಯೆ ಹೊಣೆಯನ್ನು ಗ್ಯಾಂಗ್‌ಸ್ಟರ್ ಲಾರೆನ್ಸ್ ಗ್ಯಾಂಗ್ ಹೊತ್ತುಕೊಂಡಿದೆ. ಆದರೆ ಕೃತ್ಯ ಹೊಣೆ ಹೊತ್ತುಕೊಂಡಿದ್ದು ಮಾತ್ರವಲ್ಲ, ನೀಡಿದ ಎಚ್ಚರಿಕೆ ಇದೀಗ ಸಲ್ಮಾನ್ ಖಾನ್ ಆತಂಕ ಹೆಚ್ಚಿಸಿದೆ. ಸಲ್ಮಾನ್ ಖಾನ್‌ಗೆ ಯಾರೆಲ್ಲಾ ನೆರವು ನೀಡುತ್ತೀರಿ? ಅವರಿಗೆಲ್ಲಾ ಇದೇ ಗತಿ ಎಂದು ಲಾರೆನ್ಸ್ ಗ್ಯಾಂಗ್ ಎಚ್ಚರಿಸಿದೆ. ಇದರ ಬೆನ್ನಲ್ಲೇ ಮುಂಬೈ ಪೊಲೀಸರು ಸಲ್ಮಾನ್ ಖಾನ್ ಭದ್ರತೆ ಹೆಚ್ಚಿಸಿದೆ.

ಪುತ್ರ ಜೀಶಾನ್ ಸಿದ್ದಿಕಿ ಕಚೇರಿಯಲ್ಲಿ ಈ ಗುಂಡಿನ ದಾಳಿ ನಡೆದಿತ್ತು. ರಾತ್ರಿ ವೇಳೆ ಮಾಜಿ ಚಿವರ ಬಾಬಾ ಸಿದ್ದಿಕಿ ಕಚೇರಿಯಲ್ಲಿರುವಾಗ ಗುಂಡಿನ ದಾಳಿ ನಡೆದಿತ್ತು. ಮೂರು ಗುಂಡುಗಳು ಸಿದ್ದಿಕಿ ದೇಹ ಹೊಕ್ಕಿತ್ತು. ತಕ್ಷಣವೇ ಲೀಲಾವತಿ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಘಟನೆ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ ಬಳಿಕ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಗ್ಯಾಂಗ್ ಈ ಹತ್ಯೆ ಹೊಣೆ ಹೊತ್ತುಕೊಂಡಿದೆ. ಇದೇ ವೇಳೆ ನೀಡಿದ ಎಚ್ಚರಿಕೆ ಹಲವರ ಆತಂಕಕ್ಕೆ ಕಾರಣವಾಗಿದೆ.

Latest Videos

undefined

ಭೀಕರ ಗುಂಡಿನ ದಾಳಿಯಲ್ಲಿ ಮಾಜಿ ಸಚಿವ ಬಾಬಾ ಸಿದ್ದಿಕಿ ನಿಧನ, ದೇಹ ಹೊಕ್ಕಿತ್ತು 3 ಬುಲೆಟ್!

ಬಾಬಾ ಸಿದ್ದಿಕಿ ಬಾಲಿವುಡ್ ಸೆಲೆಬ್ರೆಟಿಗಳ ನೆಚ್ಚಿನ ನಾಯಕ. ಪ್ರತಿ ನಟ ನಟಿಯರಿಗೂ ಸಿದ್ದಿಕಿ ನೆರವು ನೀಡಿದ್ದಾರೆ. ಇನ್ನು ಈದ್ ಹಬ್ಬದ ಸಂಭ್ರಮದಲ್ಲಿ ಬಹುತೇಕ ಎಲ್ಲಾ ಬಾಲಿವುಡ್ ಸೆಲೆಬ್ರೆಟಿಗಳು ಸಿದ್ದಿಕಿ ಮನೆಯಲ್ಲಿ ಹಾಜರಿರುತ್ತಾರೆ. ಇದಕ್ಕೆ ಸಲ್ಮಾನ್ ಖಾನ್ ಕೂಡ ಹೊರತಾಗಿಲ್ಲ.  ಸಿದ್ದಿಕಿ ಹತ್ಯೆ ಬಳಿಕ ಲಾರೆನ್ಸ್ ಗ್ಯಾಂಗ್ ಸದಸ್ಯ ಶುಭಮನ್ ರಾಮೇಶ್ವರ ಲೋಂಕಾರ್ ಮಾಡಿದ ಪೋಸ್ಟ್ ಈ ಆತಂಕಕ್ಕೆ ಕಾರಣವಾಗಿದೆ. 

ಈ ಪೋಸ್ಟ್‌ನಲ್ಲಿ ಬಾಬಾ ಸಿದ್ದಿಕಿ ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವುದ್ ಇಬ್ರಾಹಿಂ ಜೊತೆ ಸಂಪರ್ಕದಲ್ಲಿದ್ದಾರೆ. ಇಷ್ಟೇ ಅಲ್ಲ ಸಲ್ಮಾನ್ ಖಾನ್ ಜೊತೆ ಆತ್ಮೀಯರಾಗಿದ್ದಾರೆ. ಸಲ್ಮಾನ್ ಖಾನ್ ಮನೆ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಬಂಧಿತನಾಗಿದ್ದ ಅನೂಜ್ ತಾಪನ್ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾನೆ. ಈ ಲಾಕ್ ಅಪ್ ಡೆತ್ ಸಹಜ ಸಾವಲ್ಲ. ಇವೆಲ್ಲಾ ಕಾರಣಗಳಿಗೆ ಬಾಬಾ ಸಿದ್ದಿಕಿ ಹತ್ಯೆ ಮಾಡಲಾಗಿದೆ ಎಂದು ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾನೆ.

ನಮಗೆ ಯಾರ ವಿರುದ್ಧವೂ ದ್ವೇಷವಿಲ್ಲ. ಆದರೆ ಮೋಸ್ಟ್ ವಾಂಟೆಡ್ ಉಗ್ರ ದಾವುದ್ ಇಬ್ರಾಹಿಂ ಹಾಗೂ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಯಾರೆಲ್ಲಾ ನೆರವು ನೀಡುತ್ತೀರೋ ಅವರೆಲ್ಲಾ ನಮ್ಮ ಟಾರ್ಗೆಟ್ ಎಂದು ಲೋಂಕಾರ್ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾನೆ. ಈ ಎಚ್ಚರಿಕೆ ಬೆನ್ನಲ್ಲೇ ಪೊಲೀಸರು ಸಲ್ಮಾನ್ ಖಾನ್ ಭದ್ರತೆ ಹೆಚ್ಚಿಸಿದ್ದಾರೆ. ಇದೀಗ ಈ ಪೋಸ್ಟ್ ಕುರಿತ ತನಿಖೆಯೂ ನಡೆಯುತ್ತಿದೆ.

ಹತ್ಯೆಯಾದ ಬಾಬಾ ಸಿದ್ದಿಕಿಯ ಆಸ್ತಿ ಎಷ್ಟಿದೆ? ಇಡಿ ದಾಳಿ ವೇಳೆ ಸಿಕ್ಕಿದ್ದೆಷ್ಟು?
 

click me!