Uttar Pradesh : ಝೀಕಾ ಪ್ರಕರಣಗಳು ದಿನದಿನವೂ ಭಾರೀ ಏರಿಕೆ

Kannadaprabha News   | Asianet News
Published : Nov 06, 2021, 08:57 AM IST
Uttar Pradesh : ಝೀಕಾ ಪ್ರಕರಣಗಳು ದಿನದಿನವೂ ಭಾರೀ ಏರಿಕೆ

ಸಾರಾಂಶ

 ಕೇರಳದಲ್ಲಿ ಆರಂಭವಾಗಿದ್ದ ಝೀಕಾ ಇದೀಗ ಉತ್ತರ ಪ್ರದೇಶಕ್ಕೂ ಕಾಲಿಟ್ಟಿದೆ. ದಿನದಿನವೂ ಅತ್ಯಂತ ಹೆಚ್ಚು ಪಾಸಿಟಿವ್ ಕೇಸುಗಳು ಪತ್ತೆ

ಕಾನ್ಪುರ್ (ನ.06): ಕೇರಳದಲ್ಲಿ (kerala) ಆರಂಭವಾಗಿದ್ದ ಝೀಕಾ (Zika) ಇದೀಗ ಉತ್ತರ ಪ್ರದೇಶಕ್ಕೂ ಕಾಲಿಟ್ಟಿದೆ. ಅತ್ಯಂತ ಹೆಚ್ಚು ಪಾಸಿಟಿವ್ ಕೇಸುಗಳು ಪತ್ತೆಯಾಗಿವೆ. 

ಕಾನ್ಪುರ (Kanpur) ನಗರದಲ್ಲಿ ಝೀಕಾ ಕಂಟಕ ಏರಿಕೆಯಾಗಿದ್ದುಇಲ್ಲಿನ ಮುಖ್ಯ ಮೆಡಿಕಲ್ ಆಫಿಸರ್ ನೇಪಾಳ್ ಸಿಂಗ್ 66 ಕೇಸುಗಳು ಪತ್ತೆಯಾಗಿದ್ದಾಗಿ ಮಾಹಿತಿ ನೀಡಿದ್ದಾರೆ. 45 ಜನ ಪುರುಷರು ಹಾಗು 21 ಮಂದಿ ಮಹಿಳೆಯರಿಗೆ ಝೀಕಾ ಸೊಂಕು ತಗುಲಿದೆ. 

National Institute for Virology ಪುಣೆಯಿಂದ ಖಚಿತ ಮಾಹಿತಿ ದೊರೆತಿದ್ದು ಕಳಿಸಿದ್ದ ಸ್ಯಾಂಪಲ್‌ಗಳಲ್ಲಿ 66 ಸೋಂಕಿತರು ಪತ್ತೆಯಾಗಿದ್ದಾರೆಂದು ಹೇಳಿದ್ದಾರೆ. 

ಝೀಕಾ ಸೋಂಕು ಸೊಳ್ಳೆಗಳಿಂದ (Mosquito) ಮನುಷ್ಯನಿಗೆ ತಗುಲುವ  ವೈರಸ್ ಆಗಿದ್ದು, ವೈರಾಣು  ಹೊಂದಿದ ಈಡೀಸ್ ಸೊಳ್ಳೆ ಕಚ್ಚುವಿಕೆಯಿಂದ ಹರಡುತ್ತದೆ. ಈ ಸೊಳ್ಳೆಗಳನ್ನು ಈಡೀಸ್ ಈಜಿಪ್ಟಿ ಎಂದು ಹೆಸರಿಸಲಾಗಿದೆ.   ವಿಶ್ವ ಆರೊಗ್ಯ ಸಂಸ್ಥೆ (WHO) ಪ್ರಕಾರ ಹಗಲು ಹೊತ್ತಿನಲ್ಲಿ ಈ ಸೊಳ್ಳೆಗಳು ಕಚ್ಚುತ್ತವೆ ಎನ್ನಲಾಗಿದೆ. ಅದರಲ್ಲಿ ಬೆಳಗಿನ ಜಾವ ಹಾಗು ಸಂಜೆಯ ಸಮಯದಲ್ಲಿ ಸೊಳ್ಳೆಗಳ ಕಚ್ಚುವಿಕೆ ಹೆಚ್ಚಾಗಿರುತ್ತದೆ. 

ಉತ್ತರ ಪ್ರದೇಶದಲ್ಲಿ ಮೊದಲು ಇಂಡಿಯನ್ ಏರ್‌ಫೊರ್ಸ್‌ ಸ್ಟೇಷನ್ (Indian Air Force Station)  ಪ್ರದೇಸದಲ್ಲಿ ಅಕ್ಟೋಬರ್ 23 ರಂದು ಝೀಕಾ ಪ್ರಕರಣ ಪತ್ತೆಯಾಗಿದ್ದು ಇದರ ಸಂಖ್ಯೆ ದಿನದಿನಕ್ಕೂ ಏರಿಕೆಯಾಗುತ್ತ ಸಾಗಿದೆ. 

ಆರೋಗ್ಯ ಇಲಾಖೆ ಇಂಡಿಯನ್ ಏರ್ಫೋರ್ಸ್ ಸ್ಟೇಷನ್ ಸುತ್ತಲಿನ 2 ಕಿಮೀ ಪ್ರದೇಶವನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸಿದೆ. 

ಹೊಸದಾಗಿ ಲಾಲ್ ಕುರ್ತಿ, ಮಂಗಲಾ ವಿಹಾರ್, ತಿವಾರಿಪುರ, ಓಮ್‌ಪೂರ್ವ, ಜಗೈಪೂರ್ವ, ಶ್ಯಾಮನಗರ ಪ್ರದೇಶಗಳಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗುತ್ತಿವೆ. ಭವಾನಿಪುರ ಪ್ರದೇಶದಲ್ಲಿ ಒಂದೇ ದಿನ 30ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ.  ಕಾನ್ಪುರ  ಪ್ರದೇಶಕ್ಕೆ ಆರೋಗ್ಯಾಧಿಕಾರಿಗಳು ಭೇಟಿ ನೀಡಿದ್ದು 350ಕ್ಕೂ ಹೆಚ್ಚು ಮನೆಗಳಲ್ಲಿ ಜನರ ಪರೀಕ್ಷೆ ನಡೆಸಿದ್ದಾರೆ. ಇಲ್ಲಿಯೇ ಅತ್ಯಧಿಕ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆ ಆರೋಗ್ಯ ಸೂಕ್ತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. 

 ಝೀಕಾ ಸೋಂಕು ಹೆಚ್ಚುತ್ತಲೇ ಇರುವುದರಿಂದ  ಎಲ್ಲಾ ಕಡೆ ಸೋಂಕು ನಿವಾರಣೆಗೆ ಕ್ಯಾಂಪೇನ್ (Campane)  ಮಾಡಲಾಗುತ್ತಿದ್ದು, ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.  ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ (Treatment) ನೀಡಿದಲ್ಲಿ ಗುಣಪಡಿಸಬಹುದಾಗಿದೆ. ಈ ನಿಟ್ಟಿನಲ್ಲೇ ಕ್ರಮ ಕೈಗೊಳ್ಳಲಾಗುತ್ತಿದೆ

ಇನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ  ಯೋಗಿ ಆದಿತ್ಯನಾಥ್ (Yogi Adityanath) ಅವರು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೊರೋನಾ ಸೋಂಕು ನಿವಾರಣೆಗೆ ತೆಗೆದುಕೊಂಡ ಕ್ರಮದಂತೆ ಪತ್ತೆ, ಪರೀಕ್ಷೆ, ಚಿಕಿತ್ಸೆ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದ್ದಾರ. ಝೀಕಾ ಹಾಗು ಡೆಂಗ್ಯೂ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

ಝೀಕಾ ಲಕ್ಷಣಗಳೇನು..?

 

ಸುಮಾರು ಒಂದೂವರೆ ವರ್ಷಗಳಿಂದ, ಕೊರೊನಾ ವೈರಸ್ ಸಾಂಕ್ರಾಮಿಕ ಪ್ರಪಂಚದಾದ್ಯಂತ ಹಾನಿ ಸೃಷ್ಟಿಸುತ್ತಲೇ ಇದೆ. ಕೊರೊನಾ ಅಪಾಯ ಇನ್ನೂ ಮುಂದುವರಿದಿದ್ದರೂ, ಮತ್ತೊಂದು ವೈರಸ್ ಸೋಂಕು ಕಾಣಿಸಿಕೊಂಡು ಆತಂಕ ಮೂಡಿಸಿದೆ. ಇದರ ಹೆಸರು ಝಿಕಾ ವೈರಸ್. ಕೇರಳದಲ್ಲಿ ಝಿಕಾ ವೈರಸ್‌ನ ಮೊದಲ ಪ್ರಕರಣ ವರದಿಯಾಗಿದೆ. ಇಲ್ಲಿ 24 ವರ್ಷದ ಗರ್ಭಿಣಿಯೊಬ್ಬರಿಗೆ ಈ ಸೋಂಕು ತಗುಲಿದೆ. ಇದೇ ವೇಳೆ ಇತರ 13 ಮಂದಿ ಸೋಂಕಿಗೆ ಒಳಗಾಗಿರಬಹುದು ಎಂದು ಶಂಕಿಸಲಾಗಿದ್ದು, ಬಳಿಕ ಅವರಲ್ಲಿಯೂ ಝೀಕಾ ವೈರಸ್ ಪತ್ತೆಯಾಗಿದೆ. ಯಾವುದೀ ವೈರಸ್? ರೋಗ ಹೇಗೆ ಹರಡುತ್ತದೆ? 

ವಾಸ್ತವವಾಗಿ, ಡೆಂಗ್ಯೂ, ಮಲೇರಿಯಾ ಮತ್ತು ಚಿಕೂನ್ಗುನ್ಯವನ್ನು ಹೋಲುವ ಸೊಳ್ಳೆಗಳಿಂದ ವೈರಸ್ ಹರಡುತ್ತದೆ, ಇದು ಹಗಲಿನಲ್ಲಿ ಹೆಚ್ಚು ಸಕ್ರಿಯವಾಗಿರುತ್ತವೆ. ಇದು ಹೆಚ್ಚು ಭಯಾನಕ. ಏಕೆಂದರೆ ಸೋಂಕಿತ ವ್ಯಕ್ತಿಯನ್ನು ಕಚ್ಚಿದ ನಂತರ ಇನ್ನೊಬ್ಬ ವ್ಯಕ್ತಿಗೆ ಸೊಳ್ಳೆ ಕಚ್ಚಿದರೆ ಅದರಿಂದಲೂ ಸಹ ವೈರಸ್ ಹರಡಬಹುದು. ಇದಲ್ಲದೆ, ಅಸುರಕ್ಷಿತ ದೈಹಿಕ ಸಂಬಂಧಗಳು ಮತ್ತು ಸೋಂಕಿತ ರಕ್ತದಿಂದಲೂ ಝಿಕಾ ವೈರಸ್ ಹರಡುತ್ತದೆ.

ಝಿಕಾ ವೈರಸ್ ಮೈಕ್ರೊಸೆಫಾಲಿ ಕಾಯಿಲೆಗೆ ಕಾರಣವಾಗುತ್ತದೆ, ಗರ್ಭಿಣಿಗೆ ತಗುಲಿದರೆ ಹುಟ್ಟುವ ಮಗುವಿ ಬೆಳವಣಿಗೆ ಕುಂಠತವಾಗಿ, ಬೆಳೆಯದ ಮೆದುಳಿನೊಂದಿಗೆ ಮಗು ಜನಿಸುವ ಸಾಧ್ಯತೆ ಇರುತ್ತದೆ. 

 

ಝಿಕಾ ವೈರಸ್‌ನ ಲಕ್ಷಣಗಳು ಡೆಂಗ್ಯೂ ಮತ್ತು ವೈರಲ್‌ನಂತಹ ಜ್ವರ, ಕೀಲು ನೋವು, ದೇಹದ ಮೇಲೆ ದದ್ದು, ಆಯಾಸ, ತಲೆನೋವು ಮತ್ತು ಕಣ್ಣುಗಳು ಕೆಂಪಾಗುವುದು. ಝಿಕಾ ವೈರಸ್ ಸೋಂಕನ್ನು ತಡೆಗಟ್ಟಲು ಪ್ರಸ್ತುತ ಯಾವುದೇ ಲಸಿಕೆ ಇಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್