ಆಗಸ್ಟ್ 25 ರಂದು 38 ವರ್ಷದ ವ್ಯಕ್ತಿಯೊಬ್ಬರು ಹಠಾತ್ ಹೃದಯಾಘಾತಕ್ಕೆ ಒಳಗಾಗಿದ್ದರು ಮತ್ತು ಒಂದು ಗಂಟೆಗೂ ಹೆಚ್ಚು ಕಾಲ ಅವರಿಗೆ ಹೃದಯ ಬಡಿತವೇ ಇರಲಿಲ್ಲ. ಆದರೂ ಅವರು ಬದುಕುಳಿದಿದ್ದಾರೆ.
ನಾಗ್ಪುರ (ಅಕ್ಟೋಬರ್ 22, 2023): ಹೃದಯಾಘಾತಕ್ಕೆ ಒಳಗಾಗಿ ಚಿಕ್ಕ ವಯಸ್ಸಿನ ಮಕ್ಕಳು ಸಹ ಸಾಯುತ್ತಿರುವ ಹಲವು ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬರುತ್ತಿದೆ. ಆದರೆ, ಈಗ ನಾವು ಹೇಳಲು ಹೊರಟಿರುವ ಘಟನೆ ನಿಜಕ್ಕೂ ವಿರಳಾತಿ ವಿರಳ. ಹೃದಯಾಘಾತದ ಬಳಿಕ ಗಂಟೆಗೂ ಹೆಚ್ಚು ಕಾಲ ವ್ಯಕ್ತಿಯೊಬ್ಬರ ಹೃದಯ ಬಡಿತ ನಿಂತಿತ್ತು. ಆದರೂ, ಆಮೇಲೆ ಆಗಿರೋದೇ ಬೇರೆ.
ಆಗಸ್ಟ್ 25 ರಂದು 38 ವರ್ಷದ ವ್ಯಕ್ತಿಯೊಬ್ಬರು ಹಠಾತ್ ಹೃದಯಾಘಾತಕ್ಕೆ ಒಳಗಾಗಿದ್ದರು ಮತ್ತು ಒಂದು ಗಂಟೆಗೂ ಹೆಚ್ಚು ಕಾಲ ಅವರಿಗೆ ಹೃದಯ ಬಡಿತವೇ ಇರಲಿಲ್ಲ. ಇನ್ನೇನು ಅವರು ಮೃತಪಟ್ಟಿದ್ದಾರೆ ಎಂದೇ ಅನೇಕರು ಅಂದುಕೊಂಡಿದ್ದರೂ, ವೈದ್ಯರು ಅವರನ್ನು ಬದುಕಿಸುವಲ್ಲಿ ಯಶಸ್ವಿಯಾಗಿದ್ದಾರೆ.
undefined
ಇದನ್ನು ಓದಿ: ಕೋವಿಡ್ ಲಸಿಕೆಯಿಂದ್ಲೇ ಹೆಚ್ಚಾಗ್ತಿದ್ಯಾ ಹೃದಯಾಘಾತ? ಅಧ್ಯಯನ ವರದಿ ಹೇಳಿದ್ದೀಗೆ..
45 ದಿನಗಳ ಕಾಲ ICU ನಲ್ಲಿದ್ದ ಈ ವ್ಯಕ್ತಿ ಅದ್ಭುತವಾಗಿ ಚೇತರಿಕೆ ಕಂಡಿದ್ದು, ಅಕ್ಟೋಬರ್ 13 ರಂದು ಅವರನ್ನು ಬಿಡುಗಡೆ ಮಾಡಲಾಯಿತು ಎಂದು ತಿಳಿದುಬಂದಿದೆ. ಇನ್ನು, ಅಮೇರಿಕನ್ ಹಾರ್ಟ್ ಅಸೋಸಿಯೇಷನ್‌ನ ಪ್ರಕಾರ, ಸ್ವಯಂಪ್ರೇರಿತ ರಕ್ತಪರಿಚಲನೆ (ROSC) ಅಥವಾ ಹೃದಯ ಬಡಿತವು ಹಿಂತಿರುಗದಿದ್ದರೆ 40 ನಿಮಿಷಗಳ ಬಳಿಕ ಕಾರ್ಡಿಯೋಪಲ್ಮನರಿ ಪುನರುಜ್ಜೀವನವನ್ನು ಅಂದರೆ CPR ಅನ್ನು ನಿಲ್ಲಿಸಲಾಗುತ್ತದೆ.
ಆದರೆ, ಈ ಈ ಸಂದರ್ಭದಲ್ಲಿ, ರೋಗಿಯ ವಯಸ್ಸು ಮತ್ತು ಮಾನಿಟರ್‌ನಲ್ಲಿ ಕಂಡುಬರುವ ವೆಂಟಟ್ರಿಕ್ಯುಲಾರ್ ಕಂಪನದಿಂದಾಗಿ ಹೃದ್ರೋಗ ತಜ್ಞ ಡಾ. ರಿಷಿ ಲೋಹಿಯಾ ಅವರು 40 ನಿಮಿಷಗಳ ಮಿತಿಯನ್ನು ಮೀರಿ ಆ ವ್ಯಕ್ತಿಯನ್ನು ಬದುಕಿಸಲಾಗಿದೆ. ಹೃದಯದ ಕಾರ್ಯಚಟುವಟಿಕೆಯನ್ನು ಪುನಃಸ್ಥಾಪಿಸುವವರೆಗೆ ಡಿಫಿಬ್ರಿಲೇಷನ್ ಆಘಾತಗಳೊಂದಿಗೆ CPR ಮುಂದುವರೆದಿದ್ದು, ಈ ಹಿನ್ನೆಲೆ ಒಂದು ಗಂಟೆಗೂ ಹೆಚ್ಚು ಕಾಲ ಹೃದಯ ಬಡಿತ ಇಲ್ಲದಿದ್ದರೂ ಆ ವ್ಯಕ್ತಿ ಬದುಕುಳಿದಿದ್ದಾರೆ.
ಇದನ್ನು ಓದಿ: ಹೃದಯ ಸ್ತಂಭನದಿಂದ 8ನೇ ತರಗತಿ ವಿದ್ಯಾರ್ಥಿ ಸಾವು: ಯುವ ವಯಸ್ಕರಲ್ಲೇ ಹೃದಯಾಘಾತ ಹೆಚ್ಚುತ್ತಿರೋದೇಕೆ?
ಆಸ್ಪತ್ರೆಯ ದಾಖಲೆಗಳ ಪ್ರಕಾರ, ವ್ಯಕ್ತಿಗೆ 45 ನಿಮಿಷಗಳ ಸಿಪಿಆರ್ ನೀಡಲಾಗಿದೆ. ಅಲ್ಲದೆ, ROSC ಅನ್ನು 30 ಸೆಕೆಂಡುಗಳ ಕಾಲ ರೆಕಾರ್ಡ್ ಮಾಡಿದಾಗ ಮೊದಲ CPR 20 ನಿಮಿಷಗಳ ಕಾಲ ಮುಂದುವರೆದಿದ್ದರೂ, ತುರ್ತು ಪರಿಸ್ಥಿತಿಯ ಕಾರಣದಿಂದಾಗಿ ದಾಖಲೆಗಳಿಲ್ಲ ಎಂದು ಡಾ. ಲೋಹಿಯಾ ಹೇಳಿದ್ದಾರೆ. “ವೆಂಟ್ರಿಕ್ಯುಲರ್ ಕಂಪನ ಕಂಡುಬಂದರೆ, ಕಾರ್ಡಿಯಾಕ್ ಮಸಾಜ್ ಜೊತೆಗೆ ಡಿಫಿಬ್ರಿಲೇಷನ್ ಆಘಾತಗಳನ್ನು ಬಳಸಲಾಗುತ್ತದೆ. ಇದು ಹೃದಯವನ್ನು ಪುನಾರಂಭಿಸಲು ಸಹಾಯ ಮಾಡುತ್ತದೆ. ದೀರ್ಘಕಾಲದ CPR ನಿಂದಾಗಿ ಪಕ್ಕೆಲುಬುಗಳು ಮುರಿತವಾಗುತ್ತವೆ ಮತ್ತು ಪುನರಾವರ್ತಿತ ಆಘಾತಗಳು ಚರ್ಮದ ಸುಡುವಿಕೆಗೆ ಕಾರಣವಾಗುತ್ತದೆ. ಆದರೆ, ಉತ್ತಮ ಸಿಪಿಆರ್‌ನಿಂದಾಗಿ ಈ ರೋಗಿಯು ಈ ಎರಡು ಅಡ್ಡ ಪರಿಣಾಮಗಳನ್ನು ಅನುಭವಿಸಲಿಲ್ಲ" ಎಂದೂ ಡಾ. ಲೋಹಿಯಾ ಹೇಳಿದ್ದಾರೆ.
ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ವ್ಯಕ್ತಿ, 3 - 4 ದಿನಗಳ ಕಾಲ ಎದೆಯುರಿಯಾಗುತ್ತಿದೆ ಎಂದಿದ್ದರು. ಹಾಗೂ, ಆಗಸ್ಟ್ 25 ರಂದು ಬೆಳಗ್ಗೆ ಕಿಮ್ಸ್-ಕಿಂಗ್ಸ್‌ವೇ ಆಸ್ಪತ್ರೆಗೆ ತಲುಪುವ ಮೊದಲು ಎರಡು ಬಾರಿ ಪ್ರಜ್ಞಾಹೀನರಾಗಿದ್ದರು. ಆಸ್ಪತ್ರೆಯಲ್ಲಿ ಅವರು 8ನೆಯ ದಿನದ ಬಳಿಕ ಸ್ವಲ್ಪ ಚೇತರಿಕೆ ಕಂಡುಬಂದಿತಾದರೂ, ಅವರಿಗೆ 40 ದಿನಗಳವರೆಗೆ ವೆಂಟಿಲೇಟರ್ ಬೆಂಬಲದ ಅಗತ್ಯವಿತ್ತು ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ಮೊಬೈಲ್ ಪ್ರಿಯರೇ ಎಚ್ಚರ: ವಾರಕ್ಕೆ ಅರ್ಧಗಂಟೆ ಫೋನ್‌ನಲ್ಲಿ ಮಾತಾಡಿದ್ರೂ ಬಿ.ಪಿ. ಹೆಚ್ಚಳ, ಅಕಾಲಿಕ ಮರಣ ಸಾಧ್ಯತೆ