ಸತ್ತ ವ್ಯಕ್ತಿ ಎಟಿಎಂ ಕಾರ್ಡ್‌ ನಿಂದ ಹಣ ಪಡೆಯಬಹುದಾ?

By Roopa Hegde  |  First Published Nov 16, 2024, 9:53 AM IST

ಬ್ಯಾಂಕ್ ಎಟಿಎಂ ಕಾರ್ಡ್ ಸೌಲಭ್ಯವನ್ನು ಖಾತೆದಾರನಿಗೆ ನೀಡುತ್ತದೆ. ಖಾತೆದಾರ ಸಾವನ್ನಪ್ಪಿದ ನಂತ್ರ ಕುಟುಂಬಸ್ಥರು ಅವರ ಎಟಿಎಂ ಬಳಸ್ತಾರೆ. ಆದ್ರೆ ಇದು ಕಾನೂನು ಪ್ರಕಾರ ಎಷ್ಟು ಸೂಕ್ತ ಎಂಬುದು ನಿಮಗೆ ಗೊತ್ತಾ?
 


ಬ್ಯಾಂಕ್ ನಲ್ಲಿ ಖಾತೆ (bank account) ತೆರೆದ ನಂತ್ರ ಬ್ಯಾಂಕ್ ಚೆಕ್ (Cheque), ಎಟಿಎಂ ಕಾರ್ಡ್ (ATM Card) ಸೇರಿದಂತೆ ಕೆಲವೊಂದು ಸೌಲಭ್ಯವನ್ನು ನೀಡುತ್ತದೆ. ಚೆಕ್ ಮೂಲಕ ಹಣ ವಿತ್ ಡ್ರಾ ಮಾಡುವ ಸಂದರ್ಭದಲ್ಲಿ ಕೆಲವೊಂದು ಮಾಹಿತಿಯನ್ನು ಅದರಲ್ಲಿ ಭರ್ತಿ ಮಾಡಬೇಕಾಗುತ್ತದೆ. ಆದ್ರೆ ಎಟಿಎಂ ಮೂಲಕ ಹಣ  ವಿತ್ ಡ್ರಾ ಮಾಡುವ ಸಂದರ್ಭದಲ್ಲಿ ಖಾತೆದಾರನ ಯಾವುದೇ ಮಾಹಿತಿಯನ್ನು ಭರ್ತಿ ಮಾಡ್ಬೇಕಾಗಿಲ್ಲ. ಎಟಿಎಂ ಪಿನ್ ಹಾಕಿದ್ರೆ ಸಾಕು. ಈಗಿನ ದಿನಗಳಲ್ಲಿ ಆನ್ಲೈನ್ ಪೇಮೆಂಟ್ (Online Payment) ಹೆಚ್ಚಾಗಿದ್ರೂ ಎಟಿಎಂ ಕಾರ್ಡ್ ಬಳಸುವವರ ಸಂಖ್ಯೆ ಸಂಪೂರ್ಣ ನಿಂತಿಲ್ಲ. ಸತ್ತ ವ್ಯಕ್ತಿಯ ಎಟಿಎಂ ಕಾರ್ಡ್ ಬಳಸಿ ಹಣ ವಿತ್ ಡ್ರಾ ಮಾಡ್ಬಹುದಾ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ಸಾಮಾನ್ಯವಾಗಿ ಮನೆಯಲ್ಲಿ ಯಾವುದೇ ವ್ಯಕ್ತಿ ಸಾವನ್ನಪ್ಪಿದ್ರೆ ಮನೆ ಸದಸ್ಯರು ಆತನ ಎಟಿಎಂ ಬಳಕೆ ಮಾಡಿ ಹಣ ವಿತ್ ಡ್ರಾ ಮಾಡ್ತಾರೆ. ನಿಯಮಗಳ ಪ್ರಕಾರ, ಹಣ ವಿತ್ ಡ್ರಾ ಮಾಡುವುದು ಅಪರಾಧ. ಒಂದ್ವೇಳೆ ನೀವು ಸಿಕ್ಕಿಬಿದ್ರೆ ನಿಮಗೆ ಜೈಲು ಶಿಕ್ಷೆಯಾಗುತ್ತದೆ. ನಾಮಿನಿಗೆ ಕೂಡ ಹಣ ಪಡೆಯುವ ಅಧಿಕಾರವಿಲ್ಲ. ಹಾಗಿದ್ರೆ ಮೊದಲು ಏನು ಮಾಡ್ಬೇಕು ಎನ್ನುವ ಪ್ರಶ್ನೆ ಬರುತ್ತದೆ.

Tap to resize

Latest Videos

undefined

IRCTC ಮಾತ್ರವಲ್ಲ ಈ ಅಪ್ಲಿಕೇಷನ್ ಮೂಲಕವೂ ರೈಲ್ವೆ ಟಿಕೆಟ್ ಬುಕ್ ಮಾಡ್ಬಹುದು

ಮನೆಯಲ್ಲಿ ಯಾವುದೇ ವ್ಯಕ್ತಿ ಸಾವನ್ನಪ್ಪಿದ್ರೆ ಮೊದಲು ಬ್ಯಾಂಕ್ ಗೆ ತಿಳಿಸಬೇಕು. ಮೃತ ವ್ಯಕ್ತಿಯ ಬ್ಯಾಂಕ್ ಖಾತೆಯಲ್ಲಿ ನಾಮಿನಿ ಇದ್ದರೆ, ಅವರು ಬ್ಯಾಂಕ್‌ಗೆ ತಿಳಿಸಬೇಕಾಗುತ್ತದೆ. ಒಂದಕ್ಕಿಂತ ಹೆಚ್ಚು ನಾಮಿನಿಗಳ ಸಂದರ್ಭದಲ್ಲಿ, ಒಪ್ಪಿಗೆ ಪತ್ರವನ್ನು ಬ್ಯಾಂಕ್‌ಗೆ ನೀಡಬೇಕು. ಅದರ ನಂತರವೇ ನೀವು ಸತ್ತ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಹಣವನ್ನು ಹಿಂಪಡೆಯಬಹುದು. 

ಹಣ ಹಿಂಪಡೆಯಲು ಏನೆಲ್ಲ ಮಾಡಬೇಕು? : ಬ್ಯಾಂಕ್ ಗೆ ಮೃತ ವ್ಯಕ್ತಿಯ ಬಗ್ಗೆ ಮಾಹಿತಿ ನೀಡುವುದು ಮಾತ್ರವಲ್ಲ, ನಾಮಿನಿ ಕೆಲವು ದಾಖಲೆಗಳನ್ನು ಬ್ಯಾಂಕ್ ಗೆ ನೀಡ್ಬೇಕು. ಖಾತೆಯಲ್ಲಿ ಠೇವಣಿ ಮಾಡಿದ ಹಣವನ್ನು ಕ್ಲೈಮ್ ಮಾಡಲು ಫಾರ್ಮ್ ಭರ್ತಿ ಮಾಡಬೇಕಾಗುತ್ತದೆ. ಫಾರ್ಮ್ ಜೊತೆಗೆ  ನೀವು ಸತ್ತವರ ಪಾಸ್‌ಬುಕ್, ಖಾತೆ ಟಿಡಿಆರ್, ಚೆಕ್ ಬುಕ್, ಮರಣ ಪ್ರಮಾಣಪತ್ರ ಮತ್ತು ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ ಅನ್ನು ಸಹ ಲಗತ್ತಿಸಬೇಕು. ನಂತರ ಬ್ಯಾಂಕ್ ಎಲ್ಲವನ್ನೂ ಪರಿಶೀಲಿಸುತ್ತದೆ ಮತ್ತು ಪರಿಶೀಲನೆಯು ಸರಿಯಾಗಿ ಕಂಡುಬಂದ ನಂತರ ನೀವು ಸತ್ತ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಹಣವನ್ನು ಹಿಂಪಡೆಯಬಹುದು.

ಯಾರು ನೀಡ್ಬಹುದು ದೂರು? : ಮೃತ ವ್ಯಕ್ತಿ ಖಾತೆಯಿಂದ ಹಣ ವಿತ್ ಡ್ರಾ ಮಾಡಿದ ಮಾಹಿತಿ ಸಿಕ್ಕಿದ್ರೆ, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲು ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರಿಗೆ ಹಕ್ಕಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಕಾರ, ಮೃತ ವ್ಯಕ್ತಿಯ ಎಟಿಎಂ ಕಾರ್ಡ್‌ನಿಂದ ಹಣವನ್ನು ಹಿಂಪಡೆಯುವುದು ಕಾನೂನುಬದ್ಧವಲ್ಲ. ಮೃತ ಖಾತೆದಾರನ ವಾರಸುದಾರರಿಗೆ ತಿಳಿಸದೆ ಹಣವನ್ನು ಹಿಂಪಡೆದಿದ್ದಕ್ಕಾಗಿ ಬ್ಯಾಂಕ್ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಹುದು. 

ಡೆಬಿಟ್ ಕಾರ್ಡ್ ಇಲ್ಲದೆ UPI ಪಿನ್ ಸೆಟ್ ಮಾಡೋದು ಹೇಗೆ ಗೊತ್ತಾ?

ಖಾತೆದಾರ ತನ್ನ ಖಾತೆಯಲ್ಲಿ ಯಾವುದೇ ವ್ಯಕ್ತಿಯನ್ನು ನಾಮಿನಿ ಮಾಡದಿದ್ದರೆ, ಖಾತೆದಾರನ ಮರಣದ ನಂತರ, ಅವನ ಎಲ್ಲಾ ಕಾನೂನು ಉತ್ತರಾಧಿಕಾರಿಗಳು, ಉತ್ತರಾಧಿಕಾರ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಇದರ ನಂತರವೇ ಕ್ಲೈಮ್ ಪ್ರಕ್ರಿಯೆ  ಪೂರ್ಣಗೊಳ್ಳುತ್ತದೆ.

ಉಚಿತ ವಿಮೆ : ಬ್ಯಾಂಕ್ ಗ್ರಾಹಕರಿಗೆ ಡೆಬಿಟ್ ಮತ್ತು ಎಟಿಎಂ ಕಾರ್ಡ್‌ಗಳನ್ನು ನೀಡಿದಾಗ, ಅಪಘಾತ ಅಥವಾ ಅಕಾಲಿಕ ಮರಣದ ವಿರುದ್ಧ ಉಚಿತ ವಿಮೆಯನ್ನು ಸಹ ನೀಡಲಾಗುತ್ತದೆ. ಎಟಿಎಂ ಕಾರ್ಡ್ ಹೊಂದಿದ್ದ ವ್ಯಕ್ತಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ರೆ ಮೃತರ ಸಂಬಂಧಿಕರು ಅಪಘಾತ ವಿಮೆಯನ್ನು ಕ್ಲೈಮ್ ಮಾಡಬಹುದು. 
 

click me!