ಆಂಧ್ರಪ್ರದೇಶದಲ್ಲಿ 60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೆ ಬಸ್ ಟಿಕೆಟ್‌ಗಳಲ್ಲಿ ಶೇ.25ರಷ್ಟು ರಿಯಾಯಿತಿ ನೀಡಲಾಗುವುದು. ಪ್ರಯಾಣದ ವೇಳೆ ವಯಸ್ಸಿನ ಪುರಾವೆ ತೋರಿಸುವುದು ಕಡ್ಡಾಯ.
ಅಮರಾವತಿ: ಎಲ್ಲಾ ರಾಜ್ಯದ ಹಿರಿಯ ನಾಗರಿಕರಿಗೆ ಬಸ್ ಟಿಕೆಟ್ ದರದಲ್ಲಿ ಶೇ.25 ರಷ್ಟು ರಿಯಾಯಿತಿ ನೀಡುವುದಾಗಿ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ (ಎಪಿಎಸ್‌ಆರ್‌ಟಿಸಿ) ಘೋಷಿಸಿದೆ. ಈ ರಿಯಾಯಿತಿ ಎಲ್ಲಾ ಬಸ್‌ಗಳಲ್ಲೂ ಅನ್ವಯವಾಗುತ್ತದೆ. 60 ವರ್ಷ ಮೇಲ್ಪಟ್ಟರು ತಮ್ಮ ಪ್ರಯಾಣದ ವೇಳೆ ವಯಸ್ಸಿನ ಪುರಾವೆಯಾಗಿ ಆಧಾರ್ ಕಾರ್ಡ್, ಹಿರಿಯ ನಾಗರಿಕರ ಗುರುತಿನ ಚೀಟಿ, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್ ಅಥವಾ ಪಡಿತರ ಚೀಟಿಯನ್ನು ಭೌತಿಕವಾಗಿ ಅಥವಾ ಡಿಜಿಟಲ್ ರೂಪದಲ್ಲಿ ತೋರಿಸಿ ಶೇ.25ರಷ್ಟು ರಿಯಾಯಿತಿ ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸಕ್ತ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಆಯಾ ರಾಜ್ಯದ ನಾಗರಿಕರಿಗೆ ಮಾತ್ರ ಪ್ರಯಾಣದಲ್ಲಿ ರಿಯಾಯಿತಿ ಇದೆ.
ಟ್ರಾಫಿಕ್ ನಿರ್ವಹಣೆಗೆ ತೃತೀಯ ಲಿಂಗಿಗಳು
ಹೈದರಾಬಾದ್: ಹೈದರಾಬಾದ್‌ನಲ್ಲಿ ಹೆಚ್ಚು ಜನ ಸಂಚಾರವಿರುವ ಕಡೆಗಳಲ್ಲಿ ದಟ್ಟಣೆ ನಿಯಂತ್ರಣಕ್ಕೆ ತೃತೀಯ ಲಿಂಗಿಗಳನ್ನು ಸ್ವಯಂ ಸೇವಕರಾಗಿ ನೇಮಿಸಲು ಸಿಎಂ ರೇವಂತ್ ರೆಡ್ಡಿಅಧಿಕಾರಿಗಳಿಗೆಸೂಚಿಸಿದ್ದಾರೆ.
ಅಧಿಕಾರಿಗಳ ಅಧಿಕಾರಿಗಳ ಜತೆ ನಡೆದ ಸಭೆಯಲ್ಲಿ ರೇವಂತ್ ಈ ನಿರ್ಧಾರ ಕೈಗೊಂಡಿದ್ದು, ತೃತೀಯ ಲಿಂಗಿಗಳ ಸೇವೆ ಸದುಪಯೋಗ ಬಳಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಹೋಂ ಗಾರ್ಡ್‌ಗಳಾಗಿ ನೇಮಕ ಮಾಡಲು ಆದೇಶಿಸಿದ್ದಾ ರೆ. ಆದಷ್ಟು ಶೀಘ್ರವೇ ಯೋಜನೆಯನ್ನು ಜಾರಿಗೆ ತಂದು ತೃತೀಯ ಲಿಂಗಿಗಳನ್ನು ನೇಮಿಸಿಕೊಂಡು ವೇತನ ನಿಗದಿ ಮಾಡಲಿದ್ದೇವೆ ಎಂದರು.
ಇದನ್ನೂ ಓದಿ: ಆಸ್ಪತ್ರೆಯಲ್ಲಿ ಸಿಲಿಂಡರ್ ಸ್ಫೋಟದಿಂದ ಭೀಕರ ಅಗ್ನಿ ದುರಂತ: 10 ನವಜಾತ ಶಿಶುಗಳ ಸಾವು