ರೈಲ್ವೆ ನಿಲ್ದಾಣದಲ್ಲಿ ಬೇಲ್‌ಪುರಿ ಮಾರಾಟ ಮಾಡುವ ಮಹಿಳೆಯ ರೀಲ್ಸ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನಟಿಯರಿಗಿಂತಲೂ ಚೆಂದದ ಎಕ್ಸ್‌ಪ್ರೆಷನ್ ಕೊಡುವ ಸಂಗೀತಾ ಅವರನ್ನು ಮೆಚ್ಚಿ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮುಂಬೈ: ಇಂದು ಎಲ್ಲರ ಕೈಯಲ್ಲಿಯೂ ಸ್ಮಾರ್ಟ್‌ಫೋನ್ ಇರುತ್ತದೆ. 16ರ ಹುಡುಗನಿಂದ 90ರ ಅಜ್ಜನಿಗೂ ಸ್ಮಾರ್ಟ್‌ಫೋನ್ ಬೇಕು. ಕೆಲವರು ತಮ್ಮಲ್ಲಿರುವ ಪ್ರತಿಭೆಯನ್ನು ಸೋಶಿಯಲ್ ಮೀಡಿಯಾ ಮೂಲಕ ಪ್ರದರ್ಶನ ಮಾಡುತ್ತಾರೆ. ಈ ಮೂಲಕ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಲಕ್ಷ ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿರುತ್ತಾರೆ. ಇವರ ವಿಡಿಯೋಗಾಗಿ ನೆಟ್ಟಿಗರು ಸಹ ಕಾಯುತ್ತಿರುತ್ತಾರೆ. ಇದೀಗ ರೈಲಿನಲ್ಲಿ ಬೇಲ್‌ಪುರಿ/ಮಂಡಕ್ಕಿ ಮಾರಾಟ ಮಾಡುವ ಮಹಿಳೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ವ್ಯಾಪಾರ ಮಾಡುವ ಸಂದರ್ಭದಲ್ಲಿ ಮಹಿಳೆ ಚೆಂದದ ರೀಲ್ಸ್‌ಗಳನ್ನು ಮಾಡುತ್ತಿರುತ್ತಾರೆ.
ಸಂಗೀತಾ ಗಾಯಕ್ವಾಡ್ (SangeetaGaikwad123) ಎಂಬವರ ರೀಲ್ಸ್‌ಗಳು ಹೆಚ್ಚು ವೈರಲ್ ಆಗುತ್ತಿದ್ದು, ನೆಟ್ಟಿಗರಿಂದಲೂ ಪ್ರಶಂಸೆ ಪಡೆದುಕೊಳ್ಳುತ್ತಿವೆ. ಸಂಗೀತಾ ಗಾಯಕ್ವಾಡ್ ಮಹಾರಾಷ್ಟ್ರದ ಲಾಸೂರ್ ರೈಲ್ವೆ ನಿಲ್ದಾಣದಲ್ಲಿ ಖಾರವಾದ ಬೇಲ್‌ಪುರಿ ಮತ್ತು ಮಾವು ಮಾರಾಟ ಮಾಡುತ್ತಾರೆ. ಲಾಸೂರ್‌ನಿಂದ ಹೊರಡುವ ರೈಲುಗಳಲ್ಲಿ ನಿಗಧಿತ ದೂರದವರೆಗೆ ತೆರಳಿ ಬೇಲ್‌ಪುರಿ ಮಾರಾಟ ಮಾಡುತ್ತಾರೆ. ಈ ಭಾಗದ ರೈಲು ಮಾರ್ಗದಲ್ಲಿ ಸಂಗೀತಾ ಗಾಯಕ್ವಾಡ್ ಫುಲ್ ಫೇಮಸ್. ಈ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಸಹ ಸಂಗೀತಾ ಅವರನ್ನು ಹುಡುಕುತ್ತಿರುತ್ತಾರೆ.
ಎರಡು ದಿನಗಳ ಹಿಂದೆ ಸಂಗೀತಾ ಗಾಯಕ್ವಾಡ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಅಪ್ಲೋಡ್ ಮಾಡಿಕೊಂಡಿದ್ದಾರೆ. ಹಿಂದಿಯ ಹಾಡು "ಮೈ ತೋ ಸಜ್ ಗಯಿರಿ, ಸಜನಾ ಕೇ ಲಿಯೇ" ಎಂದು ಹೇಳುತ್ತಾ ರೀಲ್ಸ್ ಮಾಡಿದ್ದಾರೆ. ಸಂಗೀತಾ ಗಾಯಕ್ವಾಡ್ ರೀಲ್ಸ್‌ನಲ್ಲಿ ಕೊಟ್ಟ ಎಕ್ಸ್‌ಪ್ರೆಷನ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಇಂದಿನ ಬಹುತೇಕ ನಟಿಯರಿಗೆ ಈ ರೀತಿ ಭಾವನೆಗಳನ್ನು ತೋರಿಸಲು ಬರಲ್ಲ. ಕೇವಲ ಗ್ಲಾಮರ್ ಆಗಿದ್ರೆ ಸಾಕು ಎಂದು ಸಿನಿಮಾ ಮಾಡೋಕೆ ಬರುತ್ತಾರೆ. ಅಂತಹವರು ಸಂಗೀತಾ ಆಂಟಿಯ ವಿಡಿಯೋ ನೋಡಿ ನಟನೆ ಕಲಿತುಕೊಳ್ಳಲಿ ಎಂಬ ಸಾಲುಗಳಲ್ಲಿ ವಿಡಿಯೋ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಮನೆಗೆಲಸಕ್ಕೆ ವ್ಯಕ್ತಿ ಬೇಕೆಂದು ಕೇಳಿದ್ದಕ್ಕೆ ಅಡುಗೆ ಸಹಾಯಕಿ ಹೇಳಿದ್ದ ವಿಷಯ ಕೇಳಿ ಬೆಂಗಳೂರಿನ ನಿವಾಸಿ ಶಾಕ್!
"ಮೈ ತೋ ಸಜ್ ಗಯಿರಿ, ಸಜನಾ ಕೇ ಲಿಯೇ" ಹಾಡಿನ ರೀಲ್ಸ್‌ಗೆ 57 ಸಾವಿರಕ್ಕೂ ಅಧಿಕ ಮತ್ತು 1,000ಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿವೆ. ವಾವ್ ಆಂಟಿ, ನಿಮ್ಮ ಆಕ್ಟಿಂಗ್ ಸೂಪರ್. ನಾನು ನಿಜವಾಗಿಯೂ ಇಂಪ್ರೆಸ್ ಆಗಿದ್ದೇನೆ. ಹಾಡು ಮತ್ತು ನೀವು ಸಹ ಸುಂದರ. ನಿಮ್ಮನ್ನು ಭೇಟಿಯಾಗಬೇಕೆಂದು ಅನ್ನಿಸುತ್ತಿದೆ. ನೀವು ಯಾವ ರೈಲುಗಳಲ್ಲಿ ಬೇಲ್‌ಪುರಿ ಮಾರಾಟ ಮಾಡುತ್ತೀರಿ ಎಂದು ಸಹ ನೆಟ್ಟಿಗರು ಕೇಳಿದ್ದಾರೆ. ನಿಮ್ಮ ವಿಡಿಯೋಗಳನ್ನು ನೋಡಿದ್ರೆ ಬದುಕಬೇಕೆಂದು ಅನ್ನಿಸುತ್ತದೆ ಎಂಬ ಭಾವನಾತ್ಮಕ ಕಮೆಂಟ್‌ಗಳು ಸಹ ಬರುತ್ತವೆ. ಅಷ್ಟು ಮಾತ್ರವಲ್ಲದೇ ದೇವರು ಕೊಟ್ಟ ಬದುಕಿನ ಪ್ರತಿಯೊಂದು ಕ್ಷಣಗಳನ್ನು ಹೇಗೆ ಆನಂದಿಸಬೇಕು ಎಂಬುದನ್ನು ನಿಮ್ಮಿಂದ ಕಲಿತುಕೊಳ್ಳಬೇಕು ಎಂದಿದ್ದಾರೆ.
ಸಂಗೀತಾ ಗಾಯಕ್ವಾಡ್ ಇನ್‌ಸ್ಟಾಗ್ರಾಂನಲ್ಲಿ ತಮ್ಮದೇ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ 7.71 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿದ್ದು, ಇವರ ಕೆಲ ರೀಲ್ಸ್‌ಗಳು ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿರುತ್ತವೆ. ಲಾಸೂರ್ ರೈಲ್ವೆ ನಿಲ್ದಾಣ ಮಾರ್ಗವಾಗಿ ಚಲಿಸುವ ರೈಲುಗಳಲ್ಲಿ ಸಂಗೀತಾ ಗಾಯಕ್ವಾಡ್ ಸೆಲಿಬ್ರಿಟಿಯಾಗಿದ್ದು, ಪ್ರಯಾಣಿಕರು ಇವರ ಬಳಿ ಬೇಲ್ ಖರೀದಿಸಿ, ಸೆಲ್ಫಿ ಸಹ ಕ್ಲಿಕ್ಕಿಸಿಕೊಳ್ಳುತ್ತಿರುತ್ತಾರೆ.
ಇದನ್ನೂ ಓದಿ: ದೀಪಾವಳಿಯಂದು ರಾತ್ರಿ 11ರವರೆಗೂ ಕೆಲಸ ಮಾಡಿದ್ದ Zomato ಡೆಲಿವರಿ ಬಾಯ್‌ಗೆ ಸಿಕ್ಕ ಹಣ ಎಷ್ಟು?