ರಾಷ್ಟ್ರಪತಿ ಆಗಮನಕ್ಕೆ ಮುನ್ನ ವಿಶಾಖಪಟ್ಟಣದಲ್ಲಿ 185 ಹಂದಿಗಳ ಹತ್ಯೆ

By Kannadaprabha NewsFirst Published Dec 5, 2022, 9:09 AM IST
Highlights

ನೌಕಾ ದಿನ ಆಚರಣೆಗಾಗಿ ಭಾನುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸುವ ಮುನ್ನ ವಿಶಾಖಪಟ್ಟಣ ನಗರ ವ್ಯಾಪ್ತಿಯಲ್ಲಿದ್ದ ಶನಿವಾರ 185 ಹಂದಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ವಿಶಾಖಪಟ್ಟಣ: ನೌಕಾ ದಿನ ಆಚರಣೆಗಾಗಿ ಭಾನುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸುವ ಮುನ್ನ ವಿಶಾಖಪಟ್ಟಣ ನಗರ ವ್ಯಾಪ್ತಿಯಲ್ಲಿದ್ದ ಶನಿವಾರ 185 ಹಂದಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಆದರೆ ರಾಷ್ಟ್ರಪತಿ ಆಗಮನಕ್ಕೂ ಹಂದಿ ಹತ್ಯೆಗೂ ಸಂಬಂಧವಿಲ್ಲ. ಹಂದಿಗಳು ರೋಗಗಳನ್ನು ಹರಡುತ್ತಿದ್ದವಲ್ಲದೇ, ಟ್ರಾಫಿಕ್‌ಗೆ ಅಡ್ಡಿಮಾಡುತ್ತಿದ್ದವು. ಹೀಗಾಗಿ ಹತ್ಯೆ ಮಾಡಲಾಗಿದೆ ಎಂದು ಬೃಹತ್‌ ವಿಶಾಖಪಟ್ಟಣ ಮಹಾನಗರ ಪಾಲಿಕೆ ಆಯುಕ್ತ ಪಿ. ರಾಜಾ ಬಾಬು ಹೇಳಿದ್ದಾರೆ. 

ಸುಮಾರು 5000 ಹಂದಿಗಳನ್ನು ನಗರದಿಂದ ಅವುಗಳ ಮಾಲಿಕರಿಗೆ ದೂರ ಸಾಗಿಸುವಂತೆ ಹೇಳಲಾಗಿದ್ದು, ಶನಿವಾರ 1000 ಕ್ಕೂ ಹೆಚ್ಚು ಹಂದಿಗಳನ್ನು ಬೇರೆಡೆ ಸಾಗಿಸಲಾಗಿದೆ. ಆದರೆ ಉಳಿದ ಮಾಲಿಕರು ಹಂದಿಗಳನ್ನು ಬೇರೆಡೆ ಸಾಗಿಸದಿದ್ದಕ್ಕೆ ವೃತ್ತಿಪರ ಶೂಟರ್‌ಗಳನ್ನು ಬಳಸಿ185 ಹಂದಿಗಳ ಹತ್ಯೆ ಮಾಡಲಾಗಿದೆ. ಈ ಪ್ರಕ್ರಿಯೆ ಮುಂದುವರೆಸಲಾಗುವುದು’ ಎಂದಿದ್ದಾರೆ. 
ಆದರೆ, ನಗರಪಾಲಿಕೆಯು ಹಂದಿಗಳಿಗೆ ಆಶ್ರಯ ನಿರ್ಮಾಣದ ಬದಲು ಹತ್ಯೆ ಮಾಡಿದ್ದಕ್ಕೆ ಹಲವರು ಆಕ್ಷೇಪಿಸಿದ್ದಾರೆ.

ಹಂದಿ ಹಾವಳಿಯಿಂದ ಬೆಳೆನಾಶ; ಹಂದಿಗಳನ್ನು ನಿಯಂತ್ರಿಸಿ, ಇಲ್ಲ ವಿಷ ಕೊಡಿ ಎಂದು ರೈತರ ಆಕ್ರೋಶ

ಜಾರ್ಖಂಡ್‌ನಲ್ಲಿ ಮೂವರಿಗೆ ಹಂದಿ ಜ್ವರ: ಸೋಂಕಿಗೆ 800 ಹಂದಿ ಬಲಿ

click me!