ರೈಲು ಸಂಚಾರಕ್ಕೆ ಅಡ್ಡ ಬಂದ 1 ಲಕ್ಷ ದನಗಳು: ರೈಲು ಸಮಯದಲ್ಲಿ ವ್ಯತ್ಯಯ

By Sathish Kumar KHFirst Published Feb 6, 2023, 12:14 PM IST
Highlights

ರೈಲ್ವೆ ಇಲಾಖೆಯ ನಿಯಮಗಳನ್ನು ಮೀರಿ ರೈಲು ಟ್ರ್ಯಾಕ್‌ನಲ್ಲಿ ಅನಧಿಕೃತವಾಗಿ ದನಗಳನ್ನು ಮೇಯಿಸಲಾಗುತ್ತಿದೆ.  ಕಳೆದ ನಾಲ್ಕು ವರ್ಷಗಳಲ್ಲಿ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ದನಗಳು ರೈಲಿಗೆ ಅಡ್ಡಬಂದಿವೆ ಎಂದು ತಿಳಿದುಬಂದಿದೆ.

ಬೆಂಗಳೂರು (ಫೆ.06): ನಮ್ಮ ದೇಶದಲ್ಲಿ ರೈಲು ಸಂಚಾರಕ್ಕೆ ಅಡ್ಡಿಯನ್ನು ಉಂಟುಮಾಡುವ ಅನೇಕ ಘಟನೆಗಳು ನಡೆಯುತ್ತವೆ. ರೈಲು ಮಾರ್ಗದ ಮೇಲೆ ಸಾರ್ವಜನಿಕರು, ದನಗಳು, ಕುರಿಗಳು ಅಥವಾ ಇನ್ಯಾವುದೇ ರೈಲು ಸಂಚಾರಕ್ಕೆ ಅಡ್ಡಿಯನ್ನು ಉಂಟುಮಾಡುವಂತಿಲ್ಲ. ಆದರೆ, ಕಳೆದ ನಾಲ್ಕು ವರ್ಷಗಳಲ್ಲಿ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ದನಗಳು ರೈಲಿಗೆ ಅಡ್ಡಬಂದಿವೆ ಎಂದು ತಿಳಿದುಬಂದಿದೆ. 

ಏಪ್ರಿಲ್ 2019 ಮತ್ತು ಜನವರಿ 2023 ರ ನಡುವೆ, ಭಾರತೀಯ ರೈಲ್ವೆ ಇಲಾಖೆಯ ಅಧಿಕೃತ ಅಂಕಿಅಂಶಗಳ ಪ್ರಕಾರ ಒಂದು ಲಕ್ಷಕ್ಕೂ ಹೆಚ್ಚು ಜಾನುವಾರುಗಳು ರೈಲುಗಳ ಸಂಚಾರಕ್ಕೆ ಅಡ್ಡಿಯನ್ನು ಉಂಟುಮಾಡಿರುವ  ಘಟನೆಗಳು ವರದಿಯಾಗಿವೆ. ಹೀಗೆ ರೈಲಯ ಮಾರ್ಗದಲ್ಲಿ ಬಂದ ದನಗಳಿಂದಾಗಿ ಬರೋಬ್ಬರಿ 1.3 ಲಕ್ಷಕ್ಕೂ ಹೆಚ್ಚು ರೈಲುಗಳ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಜೊತೆಗೆ, ದನಗಳ ಅಡ್ಡಿಯಿಂದಾಗಿ ರೈಲುಗಳು ಸಂಚಾರದ ಸಮಯದಲ್ಲಿ ವ್ಯತ್ಯಯ ಉಂಟಾಗಿರುವುದು ಕಂಡುಬಂದಿದೆ. ಇನ್ನು ಜನವರಿ 2019 ಮತ್ತು ಡಿಸೆಂಬರ್ 2022 ರ ನಡುವೆ, ರೈಲ್ವೇ ಕಾಯಿದೆಯಡಿಯಲ್ಲಿ 900ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಿವಿಧ ಪ್ರಕರಣಗಳ ಅಡಿಯಲ್ಲಿ  1,038 ಕೇಸ್‌ಗಳನ್ನು ದಾಖಲಿಸಲಾಗಿದ್ದು, ತಪ್ಪಿತಸ್ಥರನ್ನು ವಶಕ್ಕೆ ಪಡೆಯಲಾಗಿದೆ. 

 

ರೈಲ್ವೆ ಹಳಿಯಲ್ಲೇ ತರಕಾರಿ ಮಾರ್ಕೆಟ್ : ವೈರಲ್ ವಿಡಿಯೋ

ರೈಲ್ವೆ ಇಲಾಖೆಯ ಯಾವುದೇ ಪ್ರದೇಶಕ್ಕೆ ಸಾರ್ವಜನಿಕರು ಪ್ರವೇಶ ಮಾಡುವಂತಿಲ್ಲ. ಹೀಗಾಗಿ ರೈಲ್ವೆ ಇಲಾಖೆಯ ಸೆಕ್ಷನ್ 147 ಅಡಿಯಲ್ಲಿ ದನಗಳನ್ನು ಮೇಯಿಸಲು ರೈಲ್ವೆ ಇಲಾಖೆ ಪ್ರದೇಶಕ್ಕೆ ಬಂದಿರುವ ಸಾರ್ವಜನಿಕರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಸೆಕ್ಷನ್‌ ಅಡಿಯಲ್ಲಿ ಕಾನೂನುಬದ್ಧ ಅಧಿಕಾರವಿಲ್ಲದೆ ಜನರು ಅಥವಾ ರೈಲ್ವೆಯ ಯಾವುದೇ ಭಾಗಕ್ಕೆ ಪ್ರವೇಶಿಸುವಂತಿಲ್ಲ. ಜೊತೆಗೆ ಕಾನೂನುಬದ್ಧವಾಗಿ ಪ್ರವೇಶಿಸಿದವರು ರೈಲ್ವೆ ಇಲಾಖೆಯ ಆಸ್ತಿಯನ್ನು ದುರುಪಯೋಗ ಮಾಡಿಕೊಳ್ಳುವಂತಿಲ್ಲ. ಮತ್ತೊಂದೆಡೆ ಸೆಕ್ಷನ್ 154ರ ಅಡಿಯಲ್ಲಿ ವ್ಯಕ್ತಿಯ ನಿರ್ಲಕ್ಷ್ಯದ ವರ್ತನೆ ಹಾಗೂ ರೈಲಿನಲ್ಲಿ ಪ್ರಯಾಣಿಸುವ ವ್ಯಕ್ತಿಯ ಸುರಕ್ಷತೆಗೆ ಧಕ್ಕೆ ಉಂಟುಮಾಡಿದ ಕಾರಣಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.

ಕಾರವಾರ (ಜ.31) : ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಷರತ್ತುಬದ್ಧ ಒಪ್ಪಿಗೆ ನೀಡಿದೆ. ದೆಹಲಿಯಲ್ಲಿ ಸೋಮವಾರ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಬಗ್ಗೆ ಚರ್ಚೆ ನಡೆಸಿ ಕೆಲ ಮಾರ್ಗದರ್ಶಿ ಕ್ರಮಗಳನ್ನು ಕೈಗೊಳ್ಳಲೂ ಶಿಫಾರಸು ಮಾಡಿದೆ. 

ಈ ರೈಲು ಮಾರ್ಗ ನಿರ್ಮಾಣಕ್ಕೆ ವಿರೋಧ, ಆಕ್ಷೇಪ ಇಲ್ಲ. ಆದರೆ ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲೇ ರೈಲು ಮಾರ್ಗ ನಿರ್ಮಿಸಬೇಕು. ದೊಡ್ಡ ಪ್ರಮಾಣದಲ್ಲಿ ಅಂದರೆ ಎರಡು ಟ್ರ್ಯಾಕ್‌ಗಳನ್ನು ಅಳವಡಿಸಬೇಕು. ರೈಲು ಮಾರ್ಗದಲ್ಲಿ ಸುರಂಗದ ಉದ್ದ 35 ಕಿ.ಮೀ. ಇರಬೇಕು. ರೈಲ್ವೆ ಮಾರ್ಗ ನಿರ್ಮಾಣ ಮಾಡುವಲ್ಲಿ ಭಾಗಿಯಾಗುವವರು ಮಾರ್ಗದ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಬೇಕು ಎಂದು ವನ್ಯಜೀವಿ ಮಂಡಳಿ ಅಭಿಪ್ರಾಯಪಟ್ಟಿದೆ. ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ವನ್ಯಜೀವಿ ಮಂಡಳಿ ಈ ಹಿಂದೆ ಪರವಾನಗಿ ನೀಡಿತ್ತು. ಇದನ್ನು ರದ್ದುಪಡಿಸುವಂತೆ ಪರಿಸರ ಸಂಘಟನೆಗಳು ಹೈಕೋರ್ಚ್‌ ಮೊರೆ ಹೋಗಿದ್ದವು. ಹೈಕೋರ್ಚ್‌ ವನ್ಯಜೀವಿ ಮಂಡಳಿಯ ಪರವಾನಗಿಗೆ ತಡೆಯಾಜ್ಞೆ ನೀಡಿತ್ತು.

Mandya: ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲು ಗುದ್ದಿ ಇಬ್ಬರು ಮಹಿಳೆಯರ ಸಾವು: ರೈಲ್ವೆ ನಿಲ್ದಾಣದಲ್ಲಿ ದುರ್ಘಟನೆ

ಇದನ್ನು ಪ್ರಶ್ನಿಸಿ ಉತ್ತರ ಕನ್ನಡ ಜಿಲ್ಲಾ ರೈಲ್ವೆ ಸೇವಾ ಸಮಿತಿ ತಡೆಯಾಜ್ಞೆ ತೆರವಿಗೆ ಹೈಕೋರ್ಚ್‌ ಮೊರೆ ಹೋಗಿತ್ತು. ಹೈಕೋರ್ಚ್‌ ತಡೆಯಾಜ್ಞೆ ತೆರವುಗೊಳಿಸಿ ಉನ್ನತಾಧಿಕಾರಿ ಸಮಿತಿ ರಚಿಸಿ ಈ ಬಗ್ಗೆ ಅಧ್ಯಯನ ನಡೆಸಿ ಕಾಲಮಿತಿಯಲ್ಲಿ ವರದಿ ನೀಡುವಂತೆ ಕೇಂದ್ರ ವನ್ಯಜೀವಿ ಮಂಡಳಿಗೆ ಸೂಚನೆ ನೀಡಿತ್ತು. ನಂತರ ವನ್ಯಜೀವಿ ಮಂಡಳಿ ಕಾರವಾರ ಹಾಗೂ ಧಾರವಾಡದಲ್ಲಿ ಸಾರ್ವಜನಿಕ ಅಹವಾಲು ಆಲಿಕೆ ಸಭೆ ನಡೆಸಿ, ಅಧಿಕಾರಿಗಳೊಂದಿಗೂ ಮಾತುಕತೆ ನಡೆಸಿತ್ತು. ರೈಲು ಮಾರ್ಗದ ಪರಿಶೀಲನೆ ನಡೆಸಿತ್ತು. ಇದೀಗ ಅದರ ಆಧಾರದಲ್ಲಿ ನಡೆದ ಸಭೆಯಲ್ಲಿ ಈ ರೈಲು ಮಾರ್ಗಕ್ಕೆ ಷರತ್ತುಬದ್ಧ ಒಪ್ಪಿಗೆ ಕೊಟ್ಟಿದೆ. ಈ ವನ್ಯಜೀವಿ ಮಂಡಳಿಯ ಈ ಶಿಫಾರ ಸ್ಸು ಇನ್ನು ಹೈಕೋರ್ಚ್‌ಗೆ ಸಲ್ಲಿಕೆಯಾಗಬೇಕಿದೆ.

click me!