
ಹಸಿವಾಗಲ್ಲ (Hunger) ಎಂಬ ಮಾತನ್ನು ನೀವು ಅನೇಕರ ಬಾಯಿಂದ ಕೇಳ್ಬಹುದು. ಸ್ವತಃ ನೀವೇ ಇದನ್ನು ಅನುಭವಿಸಿರಬಹುದು. ಬೆಳಿಗ್ಗೆ ಆಹಾರ (Food) ದಿಂದ ಹಿಡಿದು ರಾತ್ರಿ (Night) ಊಟದ ಸಮಯ ಬಂದ್ರೂ ಅನೇಕರಿಗೆ ಹಸಿವಾಗುವುದಿಲ್ಲ. ಹಸಿವಿಲ್ಲ, ಸಮಯಕ್ಕೆ ತಿನ್ಬೇಕು ಎನ್ನುವ ಕಾರಣಕ್ಕೆ ಊಟ ಮಾಡ್ತಿದ್ದೇನೆ ಎನ್ನುತ್ತಾರೆ. ಹಸಿವಿನ ಕೊರತೆಯು ಅನೇಕ ಜನರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಇದನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷ್ಯಿಸಬೇಡಿ. ಈ ಸಮಸ್ಯೆಯನ್ನು ನೀವು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆಯಿದೆ. ಹಸಿವಾಗದೆ ಹೋದಾಗ ನಿಮಗೆ ಆಹಾರ ಸೇವಿಸಲು ಮನಸ್ಸಾಗುವುದಿಲ್ಲ. ಆಹಾರ ಸೇವನೆ ಮಾಡದೆ ಹೋದಲ್ಲಿ ದೇಹವು ಅಗತ್ಯವಾದ ಪೋಷಕಾಂಶ (Nutrition) ಗಳನ್ನು ಪಡೆಯುವುದಿಲ್ಲ. ಇದ್ರಿಂದ ದೇಹ ದುರ್ಬಲರಾಗುವುದು ಮಾತ್ರವಲ್ಲ, ಅನೇಕ ರೋಗ (Disease) ಗಳ ಅಪಾಯವೂ ಹೆಚ್ಚಾಗುತ್ತದೆ. ಕೆಲ ಅನಾರೋಗ್ಯ ಸಮಸ್ಯೆ, ಕಾಯಿಲೆಯಿಂದಾಗಿ ಕೆಲವರು ಹಸಿವಾಗದ ಸಮಸ್ಯೆ ಎದುರಿಸುತ್ತಾರೆ. ಇನ್ನು ಕೆಲವು ರೋಗಗಳ ಆರಂಭವೇ ಹಸಿವು ನಷ್ಟದಿಂದ ಶುರುವಾಗುತ್ತದೆ. ಕೆಲವೊಮ್ಮೆ ಶಸ್ತ್ರಚಿಕಿತ್ಸೆ (Surgery) , ಔಷಧಿ (Medicine) ಗಳ ಅಡ್ಡ ಪರಿಣಾಮಗಳು, ಅನಾರೋಗ್ಯ ಮತ್ತು ಕ್ಯಾನ್ಸರ್ (Cancer ) ನಂತಹ ಗಂಭೀರ ಸಮಸ್ಯೆಗಳು ಹಸಿವಿನ ನಷ್ಟವನ್ನು ಉಂಟು ಮಾಡುತ್ತದೆ ಎಂದು ತಜ್ಞರು ಹೇಳ್ತಾರೆ.
ನಿರಂತರವಾಗಿ ನೀವು ಹಸಿವಿನ ನಷ್ಟಕ್ಕೊಳಗಾಗಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಹಸಿವಿನ ನಷ್ಟಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡಿ. ಆರಂಭದಲ್ಲಿಯೇ ಕಾಯಿಲೆಗೆ ಔಷಧಿ ಪಡೆಯಿರಿ. ಹಸಿವಿನ ಈ ಸಮಸ್ಯೆಯನ್ನು ಕಡಿಮೆ ಮಾಡಲು ದಿನಚರಿಯಲ್ಲಿ ಕೆಲವು ಯೋಗ (Yoga) ಆಸನಗಳನ್ನು ಸೇರಿಸಬಹುದು. ಯೋಗಗಳು ದೈಹಿಕ ಮಾತ್ರವಲ್ಲ ಮಾನಸಿಕ ಆರೋಗ್ಯವನ್ನೂ (Mental Health) ಸುಧಾರಿಸುತ್ತದೆ. ಯೋಗಾಸನದಿಂದ ಅನೇಕ ಪ್ರಯೋಜನಗಳಿವೆ. ಹಸಿವು ಹೆಚ್ಚಾಗ್ಬೇಕು ಎನ್ನುವವರು ಯಾವ ಯೋಗಾಸನಗಳನ್ನು ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
ಹಸಿವು ಹೆಚ್ಚಿಸಲು ಮಾಡಿ ಈ ಆಸನ :
ಬದ್ಧಕೋನಾಸನ (Baddha Konasana)(ಚಿಟ್ಟೆ ಭಂಗಿ) : ನಿಯಮಿತವಾಗಿ ಬಟರ್‌ಫ್ಲೈ ಭಂಗಿಯನ್ನು ಅಭ್ಯಾಸ ಮಾಡುವುದ್ರಿಂದ ಅನೇಕ ಪ್ರಯೋಜವಿದೆ. ಹಸಿವಿನ ನಷ್ಟ ಅನುಭವಿಸುವವರು ಹಸಿವನ್ನು ಹೆಚ್ಚಿಸಲು, ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಮಲಬದ್ಧತೆಯನ್ನು ನಿವಾರಿಸಲು ಚಿಟ್ಟೆ ಭಂಗಿ ಪ್ರಯೋಜನಕಾರಿಯಾಗಿದೆ. ಹೊಟ್ಟೆಯ ಸಮಸ್ಯೆಗಳನ್ನು ಗುಣಪಡಿಸುವುದರ ಜೊತೆಗೆ ಈ ಯೋಗ ಆಸನದಿಂದ ಅನೇಕ ಪ್ರಯೋಜನಗಳಿವೆ. ಸಂಧಿವಾತ, ಬೆನ್ನು ನೋವು, ಹೃದ್ರೋಗ, ಪೈಲ್ಸ್, ಕೊಬ್ಬು ಕಡಿಮೆ ಮಾಡುವಂತಹ ಅನೇಕ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ. ಒತ್ತಡದ ಸಮಸ್ಯೆಗಳನ್ನು ಹೊಂದಿರುವ ಜನರಿಗೆ ಈ ಆಸನವನ್ನು ಅಭ್ಯಾಸ ಮಾಡುವುದು ಪ್ರಯೋಜನಕಾರಿ ಎಂದು ತಜ್ಞರು ಹೇಳ್ತಾರೆ.
ಇದನ್ನೂ ಓದಿ: Acrylic Nail: ಗರ್ಭಿಣಿಯರ ಆರೋಗ್ಯ ಹಾಳು ಮಾಡುತ್ತೆ ಉದ್ದದ ಉಗುರು
ಪವನಮುಕ್ತಾಸನ ಯೋಗ : ಪವನ ಮುಕ್ತಾಸನ ಯೋಗವನ್ನು ಅಭ್ಯಾಸ ಮಾಡುವುದರಿಂದ ಬಹುತೇಕ ಎಲ್ಲಾ ಹೊಟ್ಟೆಯ ಸಮಸ್ಯೆಗಳನ್ನು ಕಡಿಮೆ ಮಾಡ್ಬಹುದು. ಇದು ಹಸಿವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ. ಆಗಾಗ್ಗೆ ಅಸಿಡಿಟಿ ಸಮಸ್ಯೆಗಳನ್ನು ಹೊಂದಿರುವ ಜನರು ಹಸಿವಿನ ನಷ್ಟ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳ ಅಪಾಯವನ್ನು ಹೊಂದಿರುತ್ತಾರೆ. ಪವನ್ಮುಕ್ತಾಸನ ಯೋಗವನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ಇದನ್ನೂ ಓದಿ: ಯೋಗಾಸನದಿಂದ ಮರೆತು ಹೋಗುವ ಸಮಸ್ಯೆಗೆ ಹೇಳಿ ಗುಡ್ ಬೈ
ಬಾಲಾಸನ ಯೋಗ : ಬಾಲಾಸನ ಅಥವಾ ಮಗುವಿನ ಭಂಗಿಯನ್ನು ದಿನನಿತ್ಯ ಅಭ್ಯಾಸ ಮಾಡುವುದ್ರಿಂದ ಅನೇಕ ವಿಧಗಳಲ್ಲಿ ಪ್ರಯೋಜನವಿದೆ. ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸಲು ಇದು ಪ್ರಯೋಜನಕಾರಿ. ಬೆನ್ನು ಮತ್ತು ಬೆನ್ನುಮೂಳೆಯಲ್ಲಿನ ಒತ್ತಡ-ನೋವುಗಳನ್ನು ಕಡಿಮೆ ಮಾಡುವುದು ಮತ್ತು ಮೆದುಳಿನ ನರಗಳಿಗೆ ವಿಶ್ರಾಂತಿ ನೀಡುವುದ್ರಲ್ಲೂ ಇದು ಪ್ರಯೋಜನಕಾರಿ. ಸಾಮಾನ್ಯಕ್ಕಿಂತ ಕಡಿಮೆ ಹಸಿವಾಗ್ತಿದ್ದರೆ ನೀವು ಬಾಲಾಸನ ಯೋಗವನ್ನು ಅಭ್ಯಾಸ ಮಾಡಬೇಕು. ಇದು ಹಸಿವನ್ನು ಹೆಚ್ಚಿಸಲು ನೆರವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.