ದಿನಪೂರ್ತಿ ಕಂಪ್ಯೂಟರ್‌ನಲ್ಲಿ ಕೆಲ್ಸ ಮಾಡ್ತೀರಾ ? ಕೈ ನರಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತೆ ಹುಷಾರ್..!

Published : Apr 02, 2022, 02:13 PM IST
ದಿನಪೂರ್ತಿ ಕಂಪ್ಯೂಟರ್‌ನಲ್ಲಿ ಕೆಲ್ಸ ಮಾಡ್ತೀರಾ ? ಕೈ  ನರಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತೆ ಹುಷಾರ್..!

ಸಾರಾಂಶ

ಇವತ್ತಿನ ದಿನಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನವರು ಕಂಪ್ಯೂಟರ್‌ (Computer)ನಲ್ಲಿ ಕೆಲಸ ಮಾಡುವವರೇ. ಗಂಟೆಗಟ್ಟಲೆ ಕಂಪ್ಯೂಟರ್ ಮುಂದೆ ಕೂತು ಕೀಬೋರ್ಡ್ (Keyboard) ಒತ್ತುತ್ತಾ ಕೂರುವುದು. ಇದ್ರಿಂದ ಬೆನ್ನುನೋವು, ಸೊಂಟ ನೋವು ಮೊದಲಾದ ಸಮಸ್ಯೆ ಕಾಣಿಸಿಕೊಳ್ಳುತ್ತೆ ಅನ್ನೋದು ನಿಮ್ಗೆ ಗೊತ್ತಿರೋ ವಿಷ್ಯ. ಆದ್ರೆ ದಿನಪೂರ್ತಿ ಕಂಪ್ಯೂಟರ್‌ನಲ್ಲಿ ಕೆಲ್ಸಮಾಡೋದ್ರಿಂದ ಕೈ  ನರಗಳಲ್ಲಿ ಸಮಸ್ಯೆ (Nerve Problem) ಕಾಣಿಸಿಕೊಳ್ಳುತ್ತೆ ಅನ್ನೋದು ನಿಮ್ಗೆ ಗೊತ್ತಾ ?

ತಂತ್ರಜ್ಞಾನಗಳು ಮನುಷ್ಯನ ಜೀವನವನ್ನು ಎಷ್ಟರಮಟ್ಟಿಗೆ ಆಕ್ರಮಿಸಿವೆಯೆಂದರೆ ಪ್ರತಿದಿನ ಇವುಗಳ ಅನಿವಾರ್ಯ ಎಂಬಂತಾಗಿದೆ. ಹೀಗಾಗಿಯೇ ಕಂಪ್ಯೂಟರ್ (Computer), ಮೊಬೈಲ್ (Mobile) ಬಳಕೆಯಿಲ್ಲದೆ ದಿನವೇ ಕಳೆಯುವುದಿಲ್ಲ. ಕಂಪ್ಯೂಟರ್ ಬಳಸುವುದರಿಂದ ಕೆಲಸ ಬೇಗ ಪಡೆದುಕೊಳ್ಳುತ್ತದೆ ಎಂಬುದೇನೋ ನಿಜ. ಆದರೆ ಇದರಿಂದ ನರರೋಗ (Nerms Problem)ದ ಸಮಸ್ಯೆ ಕಾಣಿಸಿಕೊಳ್ಳುತ್ತೆ ಅನ್ನೋದು ನಿಮ್ಗೆ ಗೊತ್ತಾ ?

ನರರೋಗ ಎಂದರೇನು ?
ಮನುಷ್ಯನ ಶರೀರದಲ್ಲಿರುವ ನರಗಳಿಗೆ ಹಾನಿಯಾದರೆ ಇದನ್ನು ನರರೋಗ ಎನ್ನುತ್ತಾರೆ. ನರಗಳ ಸಮಸ್ಯೆ ಕಾಣಿಸಿಕೊಂಡಾಗ ಸ್ನಾಯುಗಳ ಸೆಳೆತ, ಸ್ನಾಯುಗಳ ಗಾತ್ರ ಹಿಗ್ಗುವುದು,ಕೆಲವೊಮ್ಮೆ ಕುಗ್ಹುವುದನ್ನು ಗಮನಿಸಬಹುದಾಗಿದೆ.  ನರರೋಗಗಳು ದೌರ್ಬಲ್ಯ, ಸ್ವನಿಯಂತ್ರಿತ ಬದಲಾವಣೆಗಳು ಹಾಗೂ ಸಂವೇದನಾ ಬದಲಾವಣೆಗಳ ವಿಭಿನ್ನ ಸಂಯೋಗಗಳೊಂದಿಗೆ ಸಂಬಂಧಿಸಿರುತ್ತದೆ. ನರರೋಗ ಸಮಸ್ಯೆಯಿದ್ದಾಗ ಇದು ಸಂಪೂರ್ಣ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನರರೋಗ ದೇಹದ (Body) ಹಲವು ಭಾಗಗಳಲ್ಲಿ ಕಾಣಿಸಿಕೊಳ್ಳಬಹುದು. ಕೈ, ಕಾಲು, ತಲೆ, ತೊಡೆ, ಸೊಂಟ ಹೀಗೆ ಹಲವೆಡೆ ನರರೋಗದ ಸಮಸ್ಯೆ ಉಂಟಾದರೆ ಆರೋಗ್ಯ ಸಮಸ್ಯೆ (Health Problem) ಕಾಣಿಸಿಕೊಳ್ಳುತ್ತದೆ. ನಾವು ಇವತ್ತು ಕೈಗೆ ಬರುವ ನರಗಳ ಸಮಸ್ಯೆಯ ಬಗ್ಗೆ ತಿಳಿಯೋಣ.

ಈ ಕೆಲಸ ಮಾಡಿಸಿದ್ರೆ ಮಕ್ಕಳ ಮೆದುಳು ಕಂಪ್ಯೂಟರ್‌ಗಿಂತ ಚುರುಕಾಗುತ್ತೆ!

ಕೈಗೆ ಬರುವ ನರಗಳ ಸಮಸ್ಯೆ
ಕೈಯ ನರಗಳ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕಾದುದು ಅಗತ್ಯ. ಕೈಯಲ್ಲಿ ಮುಖ್ಯವಾಗಿ ಮೂರು ಮುಖ್ಯವಾದ ನರಗಳು ಇರುತ್ತವೆ. ಈ ಎಲ್ಲಾ ನರಗಳು ಕುತ್ತಿಗೆಯಿಂದ ಕೈಗೆ ಸಂಪರ್ಕ ಹೊಂದಿರುವವು ಆಗಿವೆ. ದೇಹದ ಪ್ರತಿಯೊಂದ ಚಲನವಲನಗಳಿಗೂ ಈ ನರಗಳು ಸಂಬಂಧ ಹೊಂದಿದ್ದು, ಮನುಷ್ಯನ ಚಟುವಟಿಕೆಗಳಲ್ಲಿ ಅತಿ ಮುಖ್ಯವಾಗಿವೆ. ಕೆಲವು ನರಗಳು ಭುಜದ ಚಲವಲನಕ್ಕೆ, ಇನ್ನು ಕೆಲವು ಕೈಗಳು ಮಡಚೋದಕ್ಕೆ ಮತ್ತು ಬೆರಳುಗಳನ ಚಲನವಲಕ್ಕೆ ಸಂಬಂಧಿಸಿದ್ದಾಗಿವೆ. 

ಕಂಪ್ಯೂಟರ್ ಬಳಸುವುದರಿಂದ ನರ ಸಮಸ್ಯೆ
ಸತತವಾಗಿ ಕಂಪ್ಯೂಟರ್ ಬಳುಸವವರಲ್ಲಿ ಕಂಡು ಬರುವ ಸಮಸ್ಯೆಗಳಲ್ಲಿ ಕೈಗಳಲ್ಲಿ ಕಂಡುಬರುವ ನರ ಸಮಸ್ಯೆ ಸಹ ಒಂದು. ವೈದ್ಯಕೀಯ ಭಾಷೆಯಲ್ಲಿ ಇದನ್ನು ಕಾರ್ಪಲ್ ಟನಲ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಅಂಗೈಯಲ್ಲಿರುವ ನರಗಳ ಮೇಲೆ ಒತ್ತಡ ಬೀಳುವುದರಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬೆರಳುಗಳನ್ನು ತುದಿಯನ್ನು ಬಳಸಿ ಕಿಬೋರ್ಡ್‍ಗಳನ್ನು ಒತ್ತುವರಿಂದ ಅಂಗೈಯ ನರಗಳ ಮೇಲೆ ಸಮಸ್ಯೆ ಉಂಟಾಗುತ್ತದೆ. ಮಾತ್ರವಲ್ಲ ಸತತವಾಗಿ ಕಿಬೋರ್ಡ್ ಬಳಸುವ ಈ ಅಭ್ಯಾಸದಿಂದ ಬೆರಳುಗಳು ಸ್ಪರ್ಶ ಜ್ಞಾನ ಕಳೆದುಕೊಂಡಂತೆ ಭಾಸವಾಗಿತ್ತದೆ. ಯಾವುದಾದರೂ ವಸ್ತುವನ್ನು ಹಿಡಿದುಕೊಂಡಾಗ ಬಿದ್ದುಹೋಗುತ್ತದೆ ಎಂಬಂತೆ ಅನಿಸುತ್ತದೆ. ಕೈಯಲ್ಲಿ ನರಸಮಸ್ಯೆಯಿದ್ದಲ್ಲಿ ಈ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಕಂಪ್ಯೂಟರ್‌ ನೋಡಿದ್ರೆ ಕಣ್ಣು ಸುಸ್ತಾಗುತ್ತಾ? ಈ ಫುಡ್‌ಗಳನ್ನು ಸೇವಿಸಿ!

ಹೀಗಾಗಿ ಈ ಸಮಸ್ಯೆಗಳು ಕಾಣಿಸಿಕೊಳ್ಳುವ ಮೊದಲು ನಾವು ಪರಿಹಾರ ಕಂಡುಕೊಳ್ಳಬಹುದು. ಕಂಪ್ಯೂಟರ್ ಎದುರು ಕುಳಿತುಕೊಳ್ಳುವಾಗ ಕುಳಿತುಕೊಳ್ಳುವ ಸ್ಥಳ, ರೀತಿಯನ್ನು ಗಮನಿಸಿಕೊಳ್ಳಬೇಕು. ಬೆನ್ನು ಸ್ಟ್ರೈಟ್ ಆಗಿದ್ದು ನೇರವಾಗಿ ಕುತ್ತಿಗೆಗೆ ಹೆಚ್ಚು ಆಯಾಸವಾಗದಂತೆ ಕುಳಿತುಕೊಳ್ಳಬೇಕು. ಕಿಬೋರ್ಡ್ ಉಪಯೋಗಿಸುವಾಗ ಕೈಗೆ ಆಧಾರ ಇರುವಂತೆ ನೋಡಿಕೊಳ್ಳಬೇಕು. ಕೈಯಲ್ಲಿನ ನರಸಮಸ್ಯೆ ಆರಂಭದ ಹಂತದಲ್ಲಿದ್ದಾಗ ಕೈ ಬೆರಳುಗಳು ಕೆಲವು ಎಕ್ಸರ್‌ ಸೈಸ್‍ನಿಂದ ಇದನ್ನು ಗುಣಪಡಿಸಿಕೊಳ್ಳಬಹುದು. ಆದರೆ ನರಸಮಸ್ಯೆ ಹೆಚ್ಚಾದರೆ ಆಪರೇಷನ್ ಮಾಡಬೇಕಾದ ಪರಿಸ್ಥಿತಿಯೂ ಬರಬಹುದು.

ಹಲವರಲ್ಲಿ ಒಂದು ಭಾವನೆಯಿದೆ. ನರ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಂಡರೆ ಯಾವತ್ತಿಗೂ ಕಡಿಮೆಯಾಗುವುದಿಲ್ಲ ಅನ್ನೋದು. ಆದರೆ ಇದು ನಿಜವಲ್ಲ. ನರಸಂಬಂಧಿತ ಸಮಸ್ಯೆಗಳು ಕಾಣಿಸಿಕೊಂಡಾಗ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವುದರಿಂದ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಿಕೊಳ್ಳಬಹುದು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?
ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?