ಡೆಡ್‌ಲೈನ್, ಟಾರ್ಗೆಟ್, ಸ್ಯಾಲರಿ ಹೈಕ್, ಬೆಸ್ಟ್ ಎಂಪ್ಲಾಯ್, ಕಮಿಟ್‌ಮೆಂಟ್, ಹೀಗೆ ಕೆಲಸದಲ್ಲೇ ತಲ್ಲೀನರಾಗುವ ವೃತ್ತಿಪರರಿಗೆ ಬೆಂಗಳೂರು ಮೂಲದ ಕಂಪನಿಯ ಸಿಇಒ ಇದೀಗ ಆಸ್ಪತ್ರೆಯ ಐಸಿಯುವಿನಿಂದ ಮಹತ್ವದ ಸಂದೇಶ ನೀಡಿದ್ದಾರೆ.
ಬೆಂಗಳೂರು(ಏ.01) ಆರೋಗ್ಯ ಬಗ್ಗೆ ಕಾಳಜಿ ವಹಿಸುತ್ತೀರೋ? ಅಥವಾ ಕೆಲಸದಲ್ಲೇ ತಲ್ಲೀನರಾಗುತ್ತೀರೋ? ಕಾರ್ಪೋರೇಟ್ ಕೆಲಸ ಸೇರಿದಂತೆ ಬಹುತೇಕ ಸ್ಯಾಲರಿ ಬೇಸ್ ಉದ್ಯೋಗದಲ್ಲಿ ಒತ್ತಡ ಹೆಚ್ಚು. ಇನ್ನು ಟಾರ್ಗೆಟ್, ಡೆಡ್‌ಲೈನ್, ರಾಜಕೀಯ ಸೇರಿದಂತೆ ಮತ್ತೊಂದಷ್ಟು ತಲೆನೋವು ಇದ್ದೇ ಇರುತ್ತೆ. ಹೀಗಾಗಿ ಶ್ರಮವಹಿಸಿ, ಆರೋಗ್ಯ ಲೆಕ್ಕಿಸದೆ ದುಡಿಯುವರ ಸಂಖ್ಯೆ ಹೆಚ್ಚಿದೆ. ಇದೀಗ ಹೀಗೆ ದುಡಿದ ಬೆಂಗಳೂರು ಮೂಲದ ಕಂಪನಿಯ ಸಿಇಒ ಇದೀಗ ಐಸಿಯುವಿನಲ್ಲಿ ಕಳೆದ ನಾಲ್ಕು ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಂಚ ಚೇತರಿಸಿಕೊಂಡ ಬೆನ್ನಲ್ಲೇ ವೃತ್ತಿಪರರಿಗ ಐಸಿಯುವಿನಂದಲೇ ಮಹತ್ವದ ಸಂದೇಶ ನೀಡಿದ್ದಾರೆ.
ಬೆಂಗಳೂರಿನ ಖಾಸಗಿ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಅಮಿತ್ ಮಿಶ್ರಾ ಲಿಂಕ್ಡಿನ್ ಪೋಸ್ಟ್ ಇದೀಗ ವೃತ್ತಿಪರರ ಜೀವನ ಶೈಲಿಯನ್ನು ಬದಲಿಸಿಕೊಳ್ಳುವ ಎಚ್ಚರಿಕೆ ಸಂದೇಶವಾಗಿ ಮಾರ್ಪಟ್ಟಿದೆ. ಅಮಿತ್ ಮಿಶ್ರಾ ಎಂದಿನಂತೆ ಕಚೇರಿಯಲ್ಲಿ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕಂಪನಿಯ ಒಟ್ಟು ಬೆಳವಣಿಗೆ, ಪ್ರತಿ ದಿನದ ಕೆಲಸ, ರಿಪೋರ್ಟ್ ಎಲ್ಲಾ ವಿಭಾಗವನ್ನು ನೋಡಿಕೊಳ್ಳುತ್ತಿದ್ದರು. ಹೆಚ್ಚಿನ ಕೆಲಸದ ಕಾರಣ ಹೆಚ್ಚಿನ ಸಮಯ ಅನಿವಾರ್ಯವಾಗಿ ಕೆಲಸ ಮಾಡುತ್ತಿದ್ದರು. ಕೇಚರಿಯಲ್ಲೇ ಹೆಚ್ಚಿನ ಸಮಯ ಕಳೆಯಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು. ಶನಿವಾರ ಮಧ್ಯಾಹ್ನಾದ ಬಳಿಕ ಹೀಗೆ ಕೆಲಸ ಮಾಡುತ್ತಿದ್ದ ವೇಳೆ ಅಮಿತ್ ಮಿಶ್ರಾ ಮೂಗು, ಬಾಯಿಯಿಂದ ರಕ್ತ ಸುರಿಯಲು ಆರಂಭಿಸಿದೆ.
70, 90 ಗಂಟೆ ಕೆಲಸಕ್ಕೆ ಪರಿಹಾರ ಕೊಟ್ಟ ಬೆಂಗಳೂರಿಗ, ಈತನ ಐಡಿಯಾಗೆ ದಿಗ್ಗಜರೆ ಕಕ್ಕಾಬಿಕ್ಕಿ
ಯಾವುದೇ ಮುನ್ಸೂಚನೆಯಾಗಲಿ, ಅಸ್ವಸ್ಥತೆಯಾಗಲಿ ಇರಲಿಲ್ಲ. ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿದೆ. ಕಚೇರಿಯ ಸಹೋದ್ಯೋಗಿಗಳು ತಕ್ಷಣ ಅಮಿತ್ ಮಿಶ್ರಾರನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಅಷ್ಟೊತ್ತಿಗೆ ಅಮಿತ್ ಮಿಶ್ರಾ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ಆಸ್ಪತ್ರೆ ವೈದ್ಯರ ತಂಡ ಐಸಿಯುವಿನಲ್ಲಿ ಚಿಕಿತ್ಸೆ ಆರಂಭಿಸಿದೆ. ಆದರೆ ನಿಯಂತ್ರಣಕ್ಕೆ ಬರಲು ಕೆಲ ಹೊತ್ತು ಬೇಕಾಗಿತ್ತು. ಅಮಿತ್ ಮಿಶ್ರಾ ಬಿಪಿ 230 ದಾಟಿತ್ತು. ರಕ್ತ ಸುರಿಯುತ್ತಲೇ ಇತ್ತು. ವೈದ್ಯರ ಸತತ ಪ್ರಯತ್ನದ ಬಳಿಕ ನಿಧಾನವಾಗಿ ನಿಯಂತ್ರಣಕ್ಕೆ ಬಂದಿತ್ತು. ಆದರೆ ಅಮಿತ್ ಮಿಶ್ರಾ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿತು.
ಮರುದಿನ ಬೆಳಗ್ಗೆ ಅಮಿತ್ ಮಿಶ್ರಾ ಅಸ್ವಸ್ಥರಾಗಿದ್ದರು. ದೇಹದಲ್ಲಿ ಚಲನೆ ಇರಲಿಲ್ಲ. ಕೇವಲ ಉಸಿರು ಮಾತ್ರ ಇತ್ತು. ಕಳೆದ ನಾಲ್ಕು ದಿನಗಳಿಂದ ಹೆಚ್ಚಿನ ಬದಲಾವಣೆ ಇಲ್ಲ. ಇದೀಗ ಅಮಿತ್ ಮಿಶ್ರಾ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಇದರ ಬೆನ್ನಲ್ಲೇ ಅಮಿತ್ ಮಿಶ್ರಾ ಮಹತ್ವದ ಸಂದೇಶ ನೀಡಿದ್ದಾರೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುಂತೆ ಸೂಚಿಸಿದ್ದಾರೆ. ವೈದ್ಯಕೀಯ ತಪಾಸಣೆ ಮಾಡುವಂತೆ ಸಲಹೆ ನೀಡಿದ್ದಾರೆ. ಯಾವುದೇ ಸಣ್ಣ ಆರೋಗ್ಯ ಸೂಚನೆ, ದೇಹದ ಸೂಚನೆಯನ್ನು ನಿರ್ಲಕ್ಷಿಸದಂತೆ ಸಲಹೆ ನೀಡಿದ್ದಾರೆ. ಅಸ್ವಸ್ಥತೆ, ತಲೆ ಸುತ್ತು ಸೇರಿದಂತೆ ಸಣ್ಣ ಸಣ್ಣ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ ಆರೋಗ್ಯ ತಪಾಸಣೆ ಮಾಡುವಂತೆ ಸೂಚಿಸಿದ್ದಾರೆ. ಕೆಲಸ ಮಾಡುವಾಗ ಆರೋಗ್ಯದ ಬಗ್ಗೆ ಗಮನ ಇರಲಿ ಎಂದಿದ್ದಾರೆ.
ಕೆಲಸ ಮುಖ್ಯ, ಆದರೆ ಆರೋಗ್ಯ ವಿಚಾರದಲ್ಲಿ ಚೌಕಾಸಿ ಇಲ್ಲ, ರಾಜಿಯಿಲ್ಲ ಎಂದು ಅಮಿತ್ ಮಿಶ್ರಾ ಹೇಳಿದ್ದಾರೆ. ಈ ಮೂಲಕ ಆರೋಗ್ಯಕ್ಕೆ ಮೊದಲ ಪ್ರಾಶಸ್ತ್ಯ ನೀಡಲು ಸೂಚಿಸಿದ್ದಾರೆ. ನಿಮ್ಮ ನಿಮ್ಮ ಆರೋಗ್ಯ, ದೇಹದ ಬಗ್ಗೆ ನಿಮಗೆ ಗೊತ್ತಿರಬೇಕು ಎಂದಿದ್ದಾರೆ. ಅಮಿತ್ ಮಿಶ್ರಾ ಕೆಲ ತಿಂಗಳ ಹಿಂದೆ ಆರೋಗ್ಯ ತಪಾಸಣೆ ಮಾಡಿದ್ದರು. ಯಾವುದೇ ಸಮಸ್ಯೆ ಇರಲಿಲ್ಲ. ಇನ್ನು ಆರೋಗ್ಯ ಹದಗೆಡುವ ಮೊದಲು ಯಾವ ಸೂಚನೆಯೂ ಇರಲಿಲ್ಲ. ಹೀಗಾಗಿ ಆರೋಗ್ಯ ಕಾಪಾಡಿಕೊಳ್ಳುವಂತೆ ಅಮಿತ್ ಮಿಶ್ರಾ ಮಹತ್ವದ ಸಲಹೆ ನೀಡಿದ್ದಾರೆ.
ನಿಮ್ಮ ದೇಹ ಯಾವತ್ತೂ ಸ್ಪಷ್ಟ ಸೂಚನೆ ನೀಡುವುದಿಲ್ಲ. ಅದರಲ್ಲೂ ಬಿಪಿ, ಒತ್ತಡ ಸೇರಿದಂತೆ ಇತರ ಕೆಲ ಕಾರಣಗಳು ಸೈಲೆಂಟ್ ಕಿಲ್ಲರ್ಸ್ ಎಂದು ಮಿಶ್ರಾ ಹೇಳಿದ್ದಾರೆ. 15ಕ್ಕೂ ಹೆಚ್ಚಿನ ಪರೀಕ್ಷೆ ನಡೆಸಿದರೂ ನನ್ನ ಬಿಪಿ ವ್ಯತ್ಯಾಸ ಸ್ಪಷ್ಟವಾಗಿಲ್ಲ. ಇನ್ನು ಒಂದಷ್ಟು ಟೆಸ್ಟ್ ಬಾಕಿ ಇದೆ. ಆರೋಗ್ಯ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ ಎಂದು ಮಿಶ್ರಾ ಹೇಳಿದ್ದಾರೆ.
ನೀವು ಸ್ಯಾಲರಿ ಉದ್ಯೋಗಿಯಾ? ವಾರದಲ್ಲಿ 80 ಗಂಟೆ ಕೆಲಸ ಸೂಚಿಸಿದ ನೀತಿ ಆಯೋಗ ಮಾಜಿ ಸಿಇಒ