ಅನಸ್ತೇಶಿಯಾ ಓವರ್‌ಡೋಸ್: ದಂತ ಚಿಕಿತ್ಸೆಗೆ ಬಂದಿದ್ದ 9 ವರ್ಷದ ಬಾಲಕಿ ಸಾವು

ಮನೆಗೆ ಹೋಗುವ ದಾರಿಯಲ್ಲಿ 9 ವರ್ಷದ ಬಾಲಕಿ ಮಲಗಿದ್ದಳು. ಅರಿವಳಿಕೆ ನಂತರದ ಸಾಮಾನ್ಯ ನಿದ್ರೆ ಎಂದು 9 ವರ್ಷದ ಬಾಲಕಿಯ ತಾಯಿ ಭಾವಿಸಿದ್ದರು. ಆದರೆ ಮನೆಗೆ ಬಂದ ನಂತರವೂ ಮಗು ಅಲುಗಾಡದೆ ಇದ್ದಾಗ ಪೋಷಕರು ತುರ್ತು ಸಹಾಯ ಕೋರಿದರು.


ಸ್ಯಾಂಡಿಯಾಗೋ: ಸಾಮಾನ್ಯವಾಗಿ ಹಲ್ಲಿನ ಚಿಕಿತ್ಸೆ ನೀಡುವಾಗ, ಹಲ್ಲು ಕೀಳುವಾಗ ಸೇರಿದಂತೆ ಯಾವುದೇ ಸಸ್ತ್ರಚಿಕಿತ್ಸೆ ವೇಳೆ ರೋಗಿಗೆ ನೋವಿನ ಅರಿವಾಗದಂತೆ ಅನಸ್ತೇಶಿಯಾ (ಅರಿವಳಿಕೆ ಔಷಧಿ) ನೀಡುತ್ತಾರೆ. ಆದರೆ ಹೀಗೆ ನೀಡಿದ ಅರಿವಳಿಕೆ ಓವರ್‌ಡೋಸ್ ಆಗಿ 9 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ಸ್ಯಾಂಡಿಯಾಗೋದಲ್ಲಿ ಈ ಘಟನೆ ನಡೆದಿದೆ. 

ಹಲ್ಲಿಗೆ ಚಿಕಿತ್ಸೆ ಮುಗಿದ ನಂತರ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ 9 ವರ್ಷದ ಬಾಲಕಿಯನ್ನು ದಂತ ವೈದ್ಯರು ತಾಯಿಯೊಂದಿಗೆ ಮನೆಗೆ ಕಳುಹಿಸಿದರು. ಮನೆಗೆ ಹೋಗುವ ದಾರಿಯಲ್ಲಿ 9 ವರ್ಷದ ಬಾಲಕಿ ಮಲಗಿದ್ದಳು. ಅರಿವಳಿಕೆ ನಂತರದ ಸಾಮಾನ್ಯ ನಿದ್ರೆ ಇದು ಎಂದು 9 ವರ್ಷದ ಬಾಲಕಿಯ ತಾಯಿ ಭಾವಿಸಿದ್ದರು. ಆದರೆ ಮನೆಗೆ ಬಂದ ನಂತರವೂ ಮಗು ಅಲುಗಾಡದೆ ಇದ್ದಾಗ ಪೋಷಕರು ತುರ್ತು ಸಹಾಯ ಕೋರಿದರು. ಆಂಬ್ಯುಲೆನ್ಸ್ ಸಹಾಯದಿಂದ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕ್ಯಾಲಿಫೋರ್ನಿಯಾದ ಸ್ಯಾಂಡಿಯಾಗೋದಲ್ಲಿರುವ ವಿಸ್ಟಾದ ಡ್ರೀಮ್ ಟೈಮ್ ಡೆಂಟಿಸ್ಟ್ರಿ ಎಂಬ ಕ್ಲಿನಿಕ್‌ನಲ್ಲಿ ಈ ಘಟನೆ ನಡೆದಿದೆ. ಆದರೆ ಚಿಕಿತ್ಸೆಯ ಸಮಯದಲ್ಲಿ ಮಗು ಯಾವುದೇ ಆರೋಗ್ಯ ಸಮಸ್ಯೆಗಳನ್ನು ಎದುರಿಸಲಿಲ್ಲ ಎಂದು ಸಂಸ್ಥೆಯ ವೈದ್ಯರು ವಿವರಿಸಿದ್ದಾರೆ.

ಬೆಳಗ್ಗೆ ಎದ್ದ ತಕ್ಷಣ ಯಾಕೆ ಹಲ್ಲುಜ್ಜಬಾರದು? ಆಯುರ್ವೇದ ಹೇಳೋದು ಕೇಳಿ!

Latest Videos

ಆರೋಗ್ಯದಲ್ಲಿ ಯಾವುದೇ ತೊಂದರೆ ಇಲ್ಲದೆ ಮಗುವನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಚಿಕಿತ್ಸೆ ನೀಡಿದ ಸಂಸ್ಥೆ ವಾದಿಸಿದೆ. ಡಿಸ್ಚಾರ್ಜ್ ಮಾಡುವ ಸಮಯದಲ್ಲಿ ಮಗುವಿನ ಹೃದಯ ಬಡಿತ ಸೇರಿದಂತೆ ಎಲ್ಲವೂ ಸಾಮಾನ್ಯ ಸ್ಥಿತಿಯಲ್ಲಿತ್ತು ಎಂದು ದಂತ ವೈದ್ಯರು ವಿವರಿಸಿದ್ದಾರೆ.. ಆದರೆ ಅವರು ನೀಡಿದ ವೈದ್ಯಕೀಯ ವರದಿ ಪ್ರಕಾರ, ಮಗುವನ್ನು ಡಿಸ್ಚಾರ್ಜ್ ಮಾಡುವಾಗ ಪ್ರಜ್ಞಾಹೀನ ಸ್ಥಿತಿಯಲ್ಲಿತ್ತು. ಈ ಬಗ್ಗೆ ಸ್ಯಾಂಡಿಯಾಗೋ ಪೊಲೀಸರು ತನಿಖೆ ಆರಂಭಿಸಿದ್ದಾರೆ.

2016ರಲ್ಲಿ ಹಲ್ಲು ತೆಗೆಯಲು ಬಂದ ರೋಗಿಯೊಬ್ಬರು ಅರಿವಳಿಕೆ ನಂತರ ಗಂಭೀರ ಸ್ಥಿತಿಗೆ ತಲುಪಿದ ನಂತರ ತನಿಖೆ ಎದುರಿಸುತ್ತಿದ್ದ ಕ್ಲಿನಿಕ್‌ನಲ್ಲೇ ಮತ್ತೆ ಈ ರೀತಿಯ ಅವಂತಾರ ನಡೆದಿದೆ.  2016ರಲ್ಲಿ ಇದೇ ರೀತಿಯ ಘಟನೆಯಲ್ಲಿ ಈ ಕ್ಲಿನಿಕ್ ವಿರುದ್ಧ ತನಿಖೆ ನಡೆಸಲಾಗಿತ್ತು. 54 ವರ್ಷದ ರೋಗಿಯೊಬ್ಬರು ಅರಿವಳಿಕೆ ನಂತರ ಗಂಭೀರ ಸ್ಥಿತಿಗೆ ತಲುಪಿದ್ದರು. ಆ ಘಟನೆ ಮಾಸುವ ಮೊದಲೇ ಈಗ ಮತ್ತೊಂದು ಅನಸ್ತೇಶಿಯ ಅವಾಂತರ ನಡೆದಿದ್ದು, ಪುಟ್ಟ ಬಾಲಕಿಯ ಜೀವ ಹೋಗಿದೆ. 

ಹುಳುಕು ಹಲ್ಲು ನಿರ್ಲಕ್ಷಿಸಿದವನ ಜೀವವೇ ಹೋಯ್ತು: ದುರಂತ ಕತೆ ಹೇಳಿದ ಪತ್ನಿ

click me!