ಸಾಮಾನ್ಯವಾಗಿ ಟೂತ್ ಬ್ರಷ್ ಇಡೋದೆಲ್ಲಿ? ಟಾಯ್ಲೆಟ್ ಕಮ್ ಬಾತ್ ರೂಂ ಇದ್ರೆ ಹುಷಾರು!

By Suvarna NewsFirst Published May 7, 2024, 4:24 PM IST
Highlights

ಹಲ್ಲಿನ ಸ್ವಚ್ಛತೆಗೆ ಹಲ್ಲುಜ್ಜೋದು ಅತ್ಯುತ್ತಮ ಮಾರ್ಗ. ಹಲ್ಲಿನ ಆರೋಗ್ಯದ ಜೊತೆ ನಮ್ಮ ಇಡೀ ದೇಹ ಸದೃಢವಾಗಿರಬೇಕು ಅಂದ್ರೆ ನಾವು ಹಲ್ಲುಜ್ಜುವ ಜೊತೆಗೆ ಬ್ರೆಷ್, ಸ್ವಚ್ಛತೆ ಬಗ್ಗೆಯೂ ಗಮನ ಹರಿಸಬೇಕು. 
 

ದಿನಕ್ಕೆ ಎರಡು ಬಾರಿ ಹಲ್ಲುಜ್ಜಬೇಕು. ಇದು ಮಕ್ಕಳಿಗೆ ಶಾಲೆಯಲ್ಲಿ ಹೇಳುವ ಪಾಠ. ಹಲ್ಲುಜ್ಜುವುದು ನಮ್ಮ ಹಲ್ಲಿನ ಆರೋಗ್ಯ ಮಾತ್ರವಲ್ಲದೆ ನಮ್ಮ ಇಡೀ ದೇಹದ ಆರೋಗ್ಯವನ್ನು ಕಾಪಾಡುತ್ತದೆ. ಅನೇಕರು ಎರಡು ಹೊತ್ತು ಹಲ್ಲುಜ್ಜಬೇಕು ಎನ್ನುವ ಕಾರಣಕ್ಕೆ ಹಲ್ಲುಜ್ಜುತ್ತಿರುತ್ತಾರೆಯೇ ವಿನಃ ತಾವು ಬಳಸುವ ಬ್ರೆಷ್, ಪೇಸ್ಟ್ ಬಗ್ಗೆ ಗಮನ ಹರಿಸುವುದಿಲ್ಲ. ಅತೀ ಹಳೆಯ, ಕೊಳಕಾದ ಬ್ರೆಷ್ ನಲ್ಲಿಯೇ ಹಲ್ಲುಜ್ಜುತ್ತಿರುತ್ತಾರೆ. ಇದು ತಪ್ಪು ವಿಧಾನ. ನೀವು ಎರಡರಿಂದ ಮೂರು ತಿಂಗಳಲ್ಲಿ ನಿಮ್ಮ ಬ್ರೆಷ್ ಬದಲಿಸಬೇಕು, ಹಾಗೆಯೇ ಒಳ್ಳೆ ಗುಣಮಟ್ಟದ ಬ್ರೆಷ್ ಹಾಗೂ ಪೇಸ್ಟ್ ಬಳಸಬೇಕು. ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಈಗ ಬಾತ್ ರೂಮ್ ನಲ್ಲಿಯೇ ಶೌಚಾಲಯವಿರುತ್ತದೆ. ಎಲ್ಲವೂ ಒಂದೇ ಕಡೆ ಇದ್ರೆ ಅನುಕೂಲ ಎನ್ನುವ ಕಾರಣಕ್ಕೆ ಬೇಸಿನ್ ಕೂಡ ಅಲ್ಲಿಯೇ ಇರುತ್ತೆ. ಬೆಳಿಗ್ಗೆ ಎದ್ದ ತಕ್ಷಣ ಮಲ – ಮೂತ್ರ ವಿಸರ್ಜನೆ ಮಾಡುವ ಜನರು, ಅಲ್ಲಿಯೇ ಬ್ರೆಷ್ ಮಾಡಿ ಹೊರಗೆ ಬರ್ತಾರೆ. ಆದ್ರೆ ನೀವು ನಿಮ್ಮ ಅನುಕೂಲಕ್ಕಾಗಿ ಮಾಡಿಕೊಂಡ ಈ ವ್ಯವಸ್ಥೆ ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತೆ ಎಂಬುದು ಗೊತ್ತಿಲ್ಲ. ಬಾತ್ ರೂಮ್ ಹಾಗೂ ಶೌಚಾಲಯ ಒಟ್ಟಿಗೆ ಇರುವ ಜಾಗದಲ್ಲಿ ನೀವು ಬ್ರೆಷ್ ಇಡಬೇಡಿ. ಅದರಿಂದ ಏನೆಲ್ಲ ಸಮಸ್ಯೆ ಆಗುತ್ತೆ ಅಂತ ನಾವು ಹೇಳ್ತೇವೆ.

ಟಾಯ್ಲೆಟ್ (Toilet) ನಲ್ಲಿ ಬ್ಯಾಕ್ಟೀರಿಯಾ (Bacteria) ಇರೋದು ಸಾಮಾನ್ಯ ಸಂಗತಿ. ಕಮೋಡ್ (Commode)  ಬಳಸಿದ ನಂತ್ರ ನೀರು ಹಾಕುವ ಮೊದಲು ಕಮೋಡ್ ಮುಚ್ಚಳ ಮುಚ್ಚಿ ಎಂದು ಈ ಹಿಂದೆ ನಾವೇ ನಿಮಗೆ ಮಾಹಿತಿ ನೀಡಿದ್ವಿ. ಮಲ ವಿಸರ್ಜನೆ ನಂತ್ರ ಅದಕ್ಕೆ ನೀರು ಹಾಕಿದಾಗ ಅದ್ರಲ್ಲಿರುವ ಸಣ್ಣ ಮತ್ತು ಸೂಕ್ಷ್ಮ ಬ್ಯಾಕ್ಟೀರಿಯಾ ಗಾಳಿಯಲ್ಲಿ ಬೆರೆತು, ಉಸಿರಾಟ (Breath) ದ ಮೂಲಕ ನಮ್ಮ ದೇಹ ಸೇರುತ್ತವೆ. ಅದೇ ರೀತಿ ನೀವು ಬಾತ್ ರೂಮಿನಲ್ಲಿಟ್ಟ ಎಲ್ಲ ವಸ್ತುಗಳ ಮೇಲೆ ಈ ಬ್ಯಾಕ್ಟೀರಿಯಾ ವಾಸಿಸುತ್ತದೆ.

ಬಾಲಿವುಡ್ ಆಫರ್ ಬಂದಿದೆ, ರಿಜೆಕ್ಟ್ ಮಾಡಿದ್ದೇನೆ ಅಂದ್ರು ಸಮಂತಾ; ಸೀಕ್ರೆಟ್ ರಿವೀಲ್ ಮಾಡಿದ್ರಾ?

ಬಾತ್ ರೂಮ್ ಹಾಗೂ ಟಾಯ್ಲೆಟ್ ಒಟ್ಟಿಗೆ ಇರುವ ಕಾರಣ ಆ ಜಾಗ ಸದಾ ತೇವಗೊಂಡಿರುತ್ತದೆ. ಈ ತೇವಗೊಂಡ ಜಾಗದಲ್ಲಿ ಬ್ಯಾಕ್ಟೀರಿಯಾ ವೇಗವಾಗಿ ಬೆಳೆಯುತ್ತದೆ. ನೀವು ಬ್ರೆಷನ್ನು ಅಲ್ಲೇ ಇಟ್ಟಾಗ, ಟಾಯ್ಲಟ್ ಬ್ಯಾಕ್ಟೀರಿಯಾ ನಿಮ್ಮ ಬ್ರೆಷ್ ಮೇಲೆ ಬಂದು ಕುಳಿತಿರುತ್ತದೆ. ನೀವು ಅದೇ ಬ್ರೆಷ್ ನಿಂದ ಹಲ್ಲುಜ್ಜಿದಾಗ ಬ್ಯಾಕ್ಟೀರಿಯಾ ಹಲ್ಲಿನ ಮೂಲಕ ನಿಮ್ಮ ದೇಹ ಸೇರುತ್ತದೆ. ನಿಮ್ಮ ರಕ್ತಕ್ಕೆ ಸೇರುವ ಈ ಸೂಕ್ಷ್ಮಾಣುಗಳು ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತವೆ. 

ರಾತ್ರಿ ಹಾಲಿನ‌ ಜೊತೆ‌ ಕ್ಯಾಲ್ಸಿಯಂ ಪೂರಕ ಬೇಡವೇ ಬೇಡ‌

ಟಾಯ್ಲೆಟ್ ಸೀಟಿನ ಬಳಿ ಬ್ರೆಷ್ ಸ್ಟ್ಯಾಂಡ್ (Brush Stand) ಇರದಂತೆ ಆದಷ್ಟು ಗಮನ ಹರಿಸಿ. ಅಟ್ಯಾಚ್ ಬಾತ್ ರೂಮ್ – ಟಾಯ್ಲೆಟ್ ಇರುವ ಜಾಗದಲ್ಲಿ ನಿಮ್ಮ ಟೂತ್ ಬ್ರೆಷ್ ಇಡದೆ ಇದ್ದರೆ ಅತ್ಯುತ್ತಮ. ಆದ್ರೆ ಎಲ್ಲರಿಗೂ ಇದು ಸಾಧ್ಯವಿಲ್ಲ. ಆ ಸಮಯದಲ್ಲಿ ನೀವು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಟಾಯ್ಲೆಟ್ ಫ್ಲಶ್ ಮಾಡುವಾಗ ಕಮೋಡ್ ಮುಚ್ಚಳ ಮುಚ್ಚಲು ಮರೆಯಬೇಡಿ. ಯಾವಾಗ್ಲೂ ಕವರ್ ಹೊಂದಿರುವ ಬ್ರೆಷ್ ಬಳಸಿ. ನಿತ್ಯ ಹಲ್ಲುಜ್ಜುವ ಮೊದಲು ಬ್ರೆಷನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ನೀರಿನಿಂದ ನೀವು ಬ್ರೆಷ್ ಕ್ಲೀನ್ ಮಾಡಿದಾಗ, ಬ್ರೆಷ್ ನಲ್ಲಿರುವ ಬ್ಯಾಕ್ಟೀರಿಯಾ (Bacteria) ಹೊರಗೆ ಹೋಗುತ್ತದೆ. ಹಲ್ಲುಜ್ಜಿದ ನಂತ್ರವೂ ನೀವು ಬ್ರೆಷನ್ನು ಸ್ವಚ್ಛಗೊಳಿಸಿ ಅದನ್ನು ಕವರ್ ನಲ್ಲಿಡಿ. ನೀವು ಒಂದೇ ಬ್ರೆಷನ್ನು ದೀರ್ಘಕಾಲ ಬಳಕೆ ಮಾಡಬೇಡಿ. ಎಲ್ಲೆಂದರಲ್ಲಿ ಬ್ರೆಷ್ ಇಡಬೇಡಿ. ನಿಮ್ಮ ಮೌಖಿಕ ಆರೋಗ್ಯ ಕಾಪಾಡಿಕೊಳ್ಳಲು ಇದು ಬಹಳ ಉತ್ತಮ ಮಾರ್ಗವಾಗಿದೆ. 

click me!