
ಕೊರೋನಾ ಸಾಂಕ್ರಾಮಿಕ ಜಗತ್ತನ್ನೇ ತಲ್ಲಣಗೊಳಿಸಿತ್ತು. ಕಣ್ಣಿಗೆ ಕಾಣದ ಪುಟ್ಟ ವೈರಸ್ ಚೀನಾದ ವುಹಾನ್‌ನಿಂದ ತೊಡಗಿ ಎಲ್ಲಾ ದೇಶಗಳಿಗೆ ಹಬ್ಬಿ ಕೋಟ್ಯಾಂತರ ಮಂದಿಯ ಸಾವಿಗೆ ಕಾರಣವಾಯಿತು. ಅದೆಷ್ಟೋ ಮಂದಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇವತ್ತಿಗೂ ಕೋವಿಡ್‌ನಿಂದ ಉಂಟಾದ ಹೆಲ್ತ್ ಪ್ರಾಬ್ಲಂಗಳು ಕಡಿಮೆಯಾಗಿಲ್ಲ. ಆದರೆ ಕೋವಿಡ್ ಪ್ರಕರಣಗಳು ಸದ್ಯ ಕಡಿಮೆಯಾಗಿವೆ. ಸಾಂಕ್ರಾಮಿಕದಿಂದ ಇಡೀ ಜಗತ್ತು ಸಂಪೂರ್ಣ ಚೇತರಿಸಿಕೊಂಡಿದೆ ಎಂದುಕೊಳ್ಳುವಷ್ಟರಲ್ಲಿ ಹೊಸ ಕೋವಿಡ್ ರೂಪಾಂತರಗಳು ಹುಟ್ಟಿಕೊಳ್ಳುತ್ತಿವೆ. ಎರಿಸ್ ಎಂದು ಅಡ್ಡಹೆಸರು ಹೊಂದಿರುವ EG.5 ಅಮೆರಿಕದಲ್ಲಿ ಸಕ್ರಿಯವಾಗಿದೆ.
ಅಮೆರಿಕ-ಬ್ರಿಟನ್‌ನಲ್ಲಿ ಕೋವಿಡ್ ಹೊಸ ರೂಪಾಂತರಿ ಸೋಂಕು ಪತ್ತೆ
ಅಮೆರಿಕಾ ಹಾಗೂ ಬ್ರಿಟನ್‌ನಲ್ಲಿ ಈ ರೂಪಾಂತರವು (Variant) ವೇಗವಾಗಿ ಹರಡುತ್ತಿದೆ. ಈ ಮಧ್ಯೆ BA.2.86, BA.X ಎಂದು ಹೆಸರಿಸಲಾಗಿರುವ ಕೋವಿಡ್ ರೂಪಾಂತರಿಯನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಗುರುತಿಸಿದೆ. ಆದರೆ ಈ ಹೊಸ ವೇರಿಯೆಂಟ್‌ನ, ರೋಗಲಕ್ಷಣಗಳಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಹೀಗಾಗಿ, ಆರೋಗ್ಯ ತಜ್ಞರು (Health experts) ಜನರು ಕೋವಿಡ್‌ನ ಸಾಮಾನ್ಯ ಲಕ್ಷಣಗಳ ಬಗ್ಗೆ ಕಾಳಜಿ ವಹಿಸುವಂತೆ ಸೂಚಿಸಿದ್ದಾರೆ. ಸೋಂಕಿನ ಲಕ್ಷಣಗಳಿದ್ದರೆ ಕೂಡಲೇ ಪರೀಕ್ಷಿಸಿಕೊಳ್ಳಬೇಕು, ಆದಷ್ಟು ಬೇಗ ಅಗತ್ಯ ಮುನ್ನೆಚ್ಚರಿಕೆಗಳನ್ನು (Precautions) ತೆಗೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.
ಕೋವಿಡ್ ಆತಂಕ ಮತ್ತೆ ಆರಂಭ, ಲಂಡನ್‌ನಲ್ಲಿ ಎರಿಸ್ ವೇರಿಯೆಂಟ್ ಪ್ರಕರಣ ಗಣನೀಯ ಏರಿಕೆ!
ವಿಶ್ವ ಆರೋಗ್ಯ ಸಂಸ್ಥೆ (WHO) ಕೋವಿಡ್ -19 ನ ಹೊಸ ರೂಪಾಂತರವನ್ನು ಹೆಚ್ಚಿನ ಸಂಖ್ಯೆಯ ರೂಪಾಂತರಗಳನ್ನು ಹೊಂದಿದೆಯಾ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದೆ. BA.2.86 ಎಂಬ ರೂಪಾಂತರವು ಬೆರಳೆಣಿಕೆಯಷ್ಟು ದೇಶಗಳಲ್ಲಿ ಪತ್ತೆಯಾಗಿದೆ ಮತ್ತು ಅದರ ಹರಡುವಿಕೆಯನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಡೇಟಾ ಅಗತ್ಯವಿದೆ ಎಂದು UN ಆರೋಗ್ಯ ಸಂಸ್ಥೆ ಹೇಳಿದೆ. ನೀಡಿದೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ (ಸಿಡಿಸಿ) ಸಹ ಈ ರೂಪಾಂತರವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ದೃಢಪಡಿಸಿದೆ.
ಸಿಡಿಡಿ, 'ಕೋವಿಡ್-19ಗೆ ಕಾರಣವಾಗುವ ವೈರಸ್‌ನ ಹೊಸ ವಂಶಾವಳಿಯನ್ನು ಟ್ರ್ಯಾಕ್ ಮಾಡುತ್ತಿದೆ. ಈ ವಂಶವನ್ನು BA.2.86 ಎಂದು ಹೆಸರಿಸಲಾಗಿದೆ ಮತ್ತು ಯುನೈಟೆಡ್ ಸ್ಟೇಟ್ಸ್, ಡೆನ್ಮಾರ್ಕ್ ಮತ್ತು ಇಸ್ರೇಲ್‌ನಲ್ಲಿ ಪತ್ತೆಯಾಗಿದೆ. ಸಿಡಿಸಿ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊರೋನಾದಿಂದ ನೆನಪಿನ ಶಕ್ತಿ ಕುಂಠಿತ, ಅಧ್ಯಯನದಲ್ಲಿ ಶಾಕಿಂಗ್ ಮಾಹಿತಿ ಬಹಿರಂಗ
ವೇರಿಯಂಟ್ ಅಂಡರ್ ಮಾನಿಟರಿಂಗ್ ಪಟ್ಟಿಗೆ BA.2.86
ಡೆನ್ಮಾರ್ಕ್ ಮತ್ತು ಇಸ್ರೇಲ್‌ನಲ್ಲಿ ಮೊದಲು ಗುರುತಿಸಲಾದ BA.2.86 ಅನ್ನು WHO ನ ಮೇಲ್ವಿಚಾರಣೆಯಲ್ಲಿರುವ ರೂಪಾಂತರಗಳ ಪಟ್ಟಿಗೆ ಸೇರಿಸಿದೆ. WHO ನಲ್ಲಿ COVID-19 ಪ್ರತಿಕ್ರಿಯೆಯ ತಾಂತ್ರಿಕ ಪ್ರಮುಖರಾದ ಮಾರಿಯಾ ವ್ಯಾನ್ ಕೆರ್ಕೋವ್ ಈ ರೂಪಾಂತರದ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ತನ್ನ ಟ್ವೀಟ್‌ನಲ್ಲಿ, ಖೆರ್ಖೋವ್ ಅವರು ಪ್ರಸ್ತುತ ರೂಪಾಂತರದ ಬಗ್ಗೆ ಕಡಿಮೆ ಮಾಹಿತಿ ಲಭ್ಯವಿದೆ, ಆದರೆ ನಿಕಟವಾಗಿ ಮೇಲ್ವಿಚಾರಣೆ ಮಾಡುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.