ಸಂತಸ, ಖುಷಿ ಯಾವುದರಿಂದ ಬರುತ್ತದೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ. ಎಲ್ಲ ಇದ್ದರೂ ಖುಷಿಯಾಗಿರಲು ಕೆಲವರಿಗೆ ಸಾಧ್ಯವಾಗುವುದಿಲ್ಲ. ಆದರೆ, ಕೆಲವು ಜನ ಎಷ್ಟು ಸಮಸ್ಯೆಯ ನಡುವಲ್ಲೂ ಒಂದು ನೆಮ್ಮದಿ ಕಾಯ್ದುಕೊಂಡಿರುತ್ತಾರೆ. ಅವರ ಅಂತರಂಗ ಶಾಂತಿ, ಖುಷಿಯಲ್ಲಿರುತ್ತದೆ. ಅವ ರು ಎಂದಿಗೂ ಕೆಲ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದಿಲ್ಲ.
ಸದಾಕಾಲ ಖುಷಿಯಾಗಿರಬೇಕು ಎಂದೆನಿಸುತ್ತದೆ, ಆದರೆ, ಸಾಧ್ಯವಾಗುವುದಿಲ್ಲ. ಇದು ಬಹುಜನರ ಸಮಸ್ಯೆ. ಕೆಲವರು ಯಾವಾಗಲೂ ಖುಷಿಯಾಗಿಯೇ ಕಂಡುಬರುತ್ತಾರೆ. ಯಾವಾಗಲೂ ನಗುತ್ತ ಮಾತನಾಡುತ್ತಾರೆ. ಎಲ್ಲ ಸಮಯದಲ್ಲೂ ಸಹಾನುಭೂತಿ ಹೊಂದಿರುತ್ತಾರೆ. ಹಾಗಾದರೆ, ಅವರಿಗೆ ಜೀವನದಲ್ಲಿ ಸಮಸ್ಯೆಯೇ ಇಲ್ಲವೇ ಎನಿಸುತ್ತದೆ. ಆದರೆ, ಖುಷಿಯಾಗಿರುವ ಜನರ ಗುಟ್ಟು ಬೇರೆಯೇ ಇದೆ. ಅವುಗಳನ್ನು ಅನುಸರಿಸಿದರೆ ಎಲ್ಲರೂ ಖುಷಿಯಾಗಿರಬಹುದು. ಏಕೆಂದರೆ, ಸದಾಕಾಲ ಮುಖದಲ್ಲಿ ಮತ್ತು ಮನದಲ್ಲಿ ಮಂದಹಾಸ ಹೊಂದಿರುವ ಜನ ಕೆಲವು ಪದ್ಧತಿಗಳನ್ನು ಜೀವನದಲ್ಲಿ ಎಂದಿಗೂ ಅನುಸರಿಸುವುದಿಲ್ಲ ಹಾಗೂ ರೂಢಿಸಿಕೊಳ್ಳುವುದಿಲ್ಲ. ಯಾರಾದರೂ ನೆಗೆಟಿವ್ ಜನರರೊಂದಿಗೆ ಸ್ವಲ್ಪ ಸಮಯ ಇದ್ದಾಗ, ಅವರು ಬರೀ ಮತ್ತೊಬ್ಬರ ಗಾಸಿಪ್ ಬಗ್ಗೆ ಮಾತನಾಡುತ್ತಿದ್ದರೆ ನೀವು ಕೆಲ ಹೊತ್ತಿನಲ್ಲೇ ಅವರ ಸಹವಾಸಕ್ಕೆ ಬೈ ಹೇಳುತ್ತೀರಾ ಅಥವಾ ಅವರೊಂದಿಗೆ ಸಂಪರ್ಕದಲ್ಲೇ ಇರುತ್ತೀರಾ? ಏಕೆಂದರೆ, ಇದು ನಿಮ್ಮ ಖುಷಿಯ ಮನಸ್ಥಿತಿಯನ್ನು ನಿರ್ಧರಿಸುವ ಅಂಶಗಳಲ್ಲಿ ಒಂದು. ಸಹಜವಾಗಿ ಪ್ರಬುದ್ಧರಿಗೆ ಗಾಸಿಪ್ ಇಷ್ಟವಾಗುವುದಿಲ್ಲ, ಖುಷಿ ಕೊಡುವುದಿಲ್ಲ. ಯಾವುದು ಖುಷಿ ಕೊಡುತ್ತದೆಯೋ ಅಂತಹ ಕೆಲಸಗಳಲ್ಲಿ ಮಾತ್ರ ನಿರತರಾಗುವುದು ಈ ಜನರ ಪ್ರಮುಖ ಕೆಲಸ. ಯಾವೆಲ್ಲ ಪದ್ಧತಿಗಳು ಅವರಲ್ಲಿರುತ್ತವೆ ಎಂದು ನೋಡಿಕೊಳ್ಳಿ.
• ಪ್ರತೀಕಾರವಿಲ್ಲ (Grudge)
ನಿಮಗೆ ಜೀವನದಲ್ಲಿ (Life) ನಿಜವಾಗಿಯೂ ಖುಷಿ (Happy)ಯಾಗಿರಬೇಕು ಎಂದಾದರೆ ದ್ವೇಷ, ಪ್ರತೀಕಾರದ ಮನಸ್ಥಿತಿಗೆ ಬೈ ಹೇಳಬೇಕು. ಕ್ಷಮೆ (Forgive) ಎನ್ನುವುದು ಅತ್ಯಂತ ನೆಮ್ಮದಿ ನೀಡುವ ಅಂಶ. ನಮ್ಮ ಮನಸ್ಸು ಸ್ವತಂತ್ರವಾಗಿರುವುದಕ್ಕಾಗಿಯೇ ಕ್ಷಮೆಯನ್ನು ರೂಢಿಸಿಕೊಳ್ಳಬೇಕು ಎನ್ನುವುದು ಹ್ಯಾಪಿ ಮನಸ್ಕರಿಗೆ ತಿಳಿದಿರುತ್ತದೆ. ಹೀಗಾಗಿ ಅವರು ನೋವು (Pain) ನೀಡಿದವರನ್ನು ಕ್ಷಮಿಸಿ ಮುಂದೆ ಸಾಗುತ್ತಾರೆ.
Personality Tips: ಹಿಡಿದ ಕೆಲಸವನ್ನ ಬಿಡೋಲ್ಲ ಅಂತೀರಾ? ಕೆಲವೊಮ್ಮೆ ಬಿಟ್ನೋಡಿ, ಅದ್ರಿಂದ ಲಾಭವೇ ಹೆಚ್ಚು
• ವ್ಯಕ್ತಿಗತವಾಗಿ ಪರಿಗಣಿಸುವುದಿಲ್ಲ
ಕಚೇರಿಯಲ್ಲಿ ಕೆಲವರಿರುತ್ತಾರೆ, ಏನಾದರೂ ಕೆಲಸಕ್ಕೆ ಸಂಬಂಧಿಸಿದ ಸೂಚನೆ ನೀಡಿದರೂ ಖಾಸಗಿಯಾಗಿ (Personal) ತೆಗೆದುಕೊಂಡು ಕುಗ್ಗುತ್ತಾರೆ. ಆದರೆ, ಹ್ಯಾಪಿಯಾಗಿರುವ ಜನರು ಇಂಥವುಗಳನ್ನು ಅತ್ಯಂತ ಕ್ರೀಡಾಸ್ಫೂರ್ತಿಯಿಂದ ಸ್ವೀಕಾರ ಮಾಡುತ್ತಾರೆ. ಯಾವುದಕ್ಕೂ ವ್ಯಕ್ತಿಗತವಾಗಿ ಸ್ವೀಕರಿಸುವುದಿಲ್ಲ. ಆ ಸಂದರ್ಭಕ್ಕೆ, ಕೆಲಸಕ್ಕೆ ಅಂಥದ್ದೊಂದು ಸೂಚನೆ ಅಗತ್ಯವಾಗಿತ್ತು ಎಂದು ತಿಳಿದು ನೆಮ್ಮದಿ ಕಾಪಾಡಿಕೊಳ್ಳುತ್ತಾರೆ.
• ನೆಗೆಟಿವ್ (Negative) ಜನರಿಗೆ ಸಮಯವಿಲ್ಲ
ಮೊದಲೇ ಹೇಳಿದಂತೆ ನೆಗೆಟಿವ್ ಭಾವನೆಯನ್ನು ಬಿತ್ತುವ ಜನರೊಂದಿಗೆ ಇವರು ಸಮಯ ಕಳೆಯುವುದಿಲ್ಲ. ತಮ್ಮ ಶಾಂತಿಯನ್ನು (Peace) ಕಳೆದುಕೊಳ್ಳಲು ಬಯಸುವುದಿಲ್ಲ. ಸಾಮಾನ್ಯವಾಗಿ ನೆಗೆಟಿವ್ ಜನರು ಎಲ್ಲದರ ಬಗೆಗೂ ನೆಗೆಟಿವ್ ಧೋರಣೆಯನ್ನೇ ಹೊಂದಿದ್ದು, ಹಠಮಾರಿತನ ಪ್ರದರ್ಶಿಸುತ್ತಾರೆ. ಹ್ಯಾಪಿಯಾಗಿರುವ ಜನ ಇವರಿಂದ ದೂರವೇ ಇದ್ದುಬಿಡುತ್ತಾರೆ. ತಮ್ಮಂಥದ್ದೇ ಸಮಾನ ಮನಸ್ಕರೊಂದಿಗೆ ಸಮಯ ಕಳೆಯುತ್ತಾರೆ. ಧನಾತ್ಮಕ ವಾತಾವರಣದಲ್ಲಿರುತ್ತಾರೆ.
• ಇತರರ ಕನಸುಗಳ ಬಗ್ಗೆ ಆಸಕ್ತಿ (Interest)
ಸದಾಕಾಲ ಖುಷಿಯಾಗಿರಬೇಕು ಎಂದರೆ, ಇತರರ ಬಗ್ಗೆಯೂ ಆಸಕ್ತಿ ಹೊಂದಿರಬೇಕು. ಅವರ ಸಾಧನೆಗೆ ನೆರವು ನೀಡಬೇಕು. ಸಹಕಾರದ ಮನೋಧರ್ಮವಿದ್ದಾಗ ಮನದಲ್ಲಿ ಸಂತಸದ ಭಾವನೆ ತನ್ನಿಂತಾನೇ ನೆಲೆಯಾಗಿರುತ್ತದೆ. ಇದನ್ನು ಹ್ಯಾಪಿ ಜನ ಸಾಧ್ಯವಾದಷ್ಟು ಅನುಸರಿಸುತ್ತಾರೆ.
• ನಿಯಂತ್ರಣವಿಲ್ಲದ್ದರ (Control) ಬಗ್ಗೆ ಚಿಂತೆ ಇಲ್ಲ
ತಮ್ಮ ಕೈಯಲ್ಲಿ ಯಾವುದರ ಬಗ್ಗೆ ನಿಯಂತ್ರಿಸಲು ಸಾಧ್ಯವಿಲ್ಲವೋ ಅದರ ಬಗ್ಗೆ ಯೋಚಿಸುವುದನ್ನು ಬಿಟ್ಟುಬಿಡುವುದು ಹ್ಯಾಪಿ ಜನರ ಗುಣ. ಅವರ ಚಿತ್ತ ಈ ಬಗ್ಗೆ ಹೆಚ್ಚು ಯೋಚಿಸುವುದನ್ನು ಬಿಟ್ಟುಬಿಡುತ್ತದೆ. ಏಕೆಂದರೆ, ತಮ್ಮಿಂದ ಅಲ್ಲಿ ಯಾವುದೇ ಬದಲಾವಣೆ, ಸುಧಾರಣೆ ತರುವುದು ಸಾಧ್ಯವಿಲ್ಲ ಎಂದಾದರೆ ಅದರ ಬಗ್ಗೆ ಯೋಚಿಸುವುದು ಪ್ರಯೋಜನವಿಲ್ಲ ಎಂದು ಅರಿತಿರುತ್ತಾರೆ.
ಮೈಂಡ್ ಫುಲ್ ಆಗಿದ್ರೆ ವಿದ್ಯಾರ್ಥಿಗಳಲ್ಲಿ ಒತ್ತಡ ದೂರ; ಇದೇನಿದು ವಿಧಾನ?
• ಇತಿಹಾಸ (History) ಬೇಕಾಗಿಲ್ಲ
ಖುಷಿಯಾಗಿರುವ ಜನ ಇತಿಹಾಸ ಅಥವಾ ಭವಿಷ್ಯದಲ್ಲಿ (Future) ಬದುಕುವುದಿಲ್ಲ. ಇಂದಿನ ಕ್ಷಣವನ್ನು ಅದ್ಭುತವಾಗಿ ಕಳೆಯಲು ಇಷ್ಟಪಡುತ್ತಾರೆ.
• ಹೋಲಿಕೆಯಿಂದ (Compare) ದೂರ
ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳದ ಗುಣ ಖುಷಿಯಾಗಿರುವವರಲ್ಲಿ ಕಂಡುಬರುತ್ತದೆ. ಹಾಗೂ ಅವರು ತಮ್ಮನ್ನು ಎಂದಿಗೂ ನೆಗ್ಲೆಕ್ಟ್ ಮಾಡಿಕೊಳ್ಳುವುದಿಲ್ಲ. ತಮ್ಮ ಬೇಕು-ಬೇಡಗಳ ಕುರಿತು ಸ್ಪಷ್ಟತೆ ಹೊಂದಿರುತ್ತಾರೆ.