Dizziness Causes: ಬೆಳಿಗ್ಗೆ ಏಳುವಾಗ ಬವಳಿ ಬೀಳುವಂತಾಗುತ್ತಾ? ಇದ್ಯಾಕೆ ಗೊತ್ತಾ?

By Suvarna News  |  First Published Dec 23, 2022, 6:46 PM IST

ಬೆಳಗ್ಗೆ ಏಳುವಾಗ ಕೆಲವೊಮ್ಮೆ ಬವಳಿ ಬಂದು ಬೀಳುವಂತಾಗಬಹುದು. ಬೆಳಗ್ಗೆ ಏಳುವ ಹೊತ್ತಿಗೆ ತಲೆಸುತ್ತುವುದು ಹಲವು ಕಾರಣಗಳಿಂದ ಉಂಟಾಗಬಹುದು. ಆಸಿಡಿಟಿ ಸೇರಿದಂತೆ ಮಿದುಳಿಗೆ ರಕ್ತಪೂರೈಕೆಯಲ್ಲಾಗುವ ವ್ಯತ್ಯಾಸದಿಂದಲೂ ತಲೆಸುತ್ತು ಬರುತ್ತದೆ. ಪದೇ ಪದೆ ಹೀಗಾಗುತ್ತಿದ್ದರೆ ನಿರ್ಲಕ್ಷ್ಯ ಮಾಡಬಾರದು. 


ಬೆಳಗ್ಗೆ ಏಳುತ್ತಿರುವ ಹಾಗೆಯೇ ಕೆಲವೊಮ್ಮೆ ತಲೆಸುತ್ತು ಬಂದು ಬೀಳುವಂತಾಗುತ್ತದೆ. “ಇದ್ದಕ್ಕಿದ್ದ ಹಾಗೆ ಆರೋಗ್ಯಕ್ಕೆ ಏನಾಯಿತು?ʼ ಎಂದು ಚಿಂತಿಸುವಂತಾಗುತ್ತದೆ. ಕೆಲವೊಮ್ಮೆಯಂತೂ ಹಾಸಿಗೆ ಬಿಟ್ಟೆದ್ದರೂ ಹಾಗೆಯೇ ಬವಳಿ ಮತ್ತೆ ಕುಸಿದುಕುಳಿತುಕೊಳ್ಳುವಂತೆ ಆಗುತ್ತದೆ. ತಲೆಸುತ್ತು ಬಂದಾಗ ಸಾಮಾನ್ಯವಾಗಿ ರಕ್ತದೊತ್ತಡದಲ್ಲಿ ಏನಾದರೂ ಸಮಸ್ಯೆ  ಶುರುವಾಗುವ ಲಕ್ಷಣವೆಂದು ಗಾಬರಿಯಾಗುತ್ತೇವೆ. ಆದರೆ, ಇದಕ್ಕೆ ಹಲವು ಕಾರಣಗಳಿವೆ. ಇವುಗಳಲ್ಲಿ ಅತಿ ಸಾಮಾನ್ಯ ಕಾರಣವೆಂದರೆ, ಆಸಿಡಿಟಿ ಅಥವಾ ಪಿತ್ತ. ದೇಹದಲ್ಲಿ ಪಿತ್ತದ ಅಂಶ ಅಧಿಕವಾದಾಗ ವಾಕರಿಕೆ, ಅಜೀರ್ಣದಂತಹ ಸಮಸ್ಯೆಗಳೊಂದಿಗೆ ತಲೆಸುತ್ತುವುದೂ ಕಂಡುಬರುತ್ತದೆ. ಅಥವಾ ಇವ್ಯಾವುದು ಇಲ್ಲದೆಯೂ ತಲೆ ಸುತ್ತಬಹುದು. ಆಸಿಡಿಟಿಯನ್ನು ನಿಯಂತ್ರಣ ಮಾಡಿಕೊಂಡರೆ ಈ ತಲೆಸುತ್ತುವಿಕೆ ನಿಯಂತ್ರಣಕ್ಕೆ ಬರುತ್ತದೆ. ಹೀಗಾಗಿ, ತಲೆಸುತ್ತುವ ಸಮಸ್ಯೆ ಯಾವ ಕಾರಣದಿಂದ ಉಂಟಾಗುತ್ತಿದೆ ಎನ್ನುವುದನ್ನು ಪತ್ತೆ ಮಾಡುವುದು ಬಹಳ ಮುಖ್ಯ. ಪದೇ ಪದೇ ಈ ಸಮಸ್ಯೆ ಉಂಟಾಗುತ್ತಿದ್ದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಭೇಟಿ ಮಾಡಿ ಸಮಸ್ಯೆಯ ಮೂಲ ಅರಿತುಕೊಳ್ಳಲು ಯತ್ನಿಸಬೇಕು. ತಲೆಸುತ್ತುವ ಇನ್ನಿತರ ಕಾರಣಗಳೆಂದರೆ,

ಅನೀಮಿಯಾ (Anemia): ದೇಹದ ಕೆಂಪು ರಕ್ತಕಣಗಳಿಗೆ (Red Blood Cells) ಸರಿಯಾಗಿ ಆಮ್ಲಜನಕ (Oxigen) ಪೂರೈಕೆ ಆಗದಿರುವಾಗ ತಲೆ ಸುತ್ತು (Dizziness) ಉಂಟಾಗುವುದು ಸಾಮಾನ್ಯ. ಅನೀಮಿಯಾ ಉಂಟಾದಾಗ ಸಹಜವಾಗಿ ಕೆಂಪುರಕ್ತದ ಕೊರತೆಯೂ ಇರುತ್ತದೆ. ಮಿದುಳು ಸರಿಯಾಗಿ ಕಾರ್ಯನಿರ್ವಹಣೆ ಮಾಡಲು ಉತ್ತಮ ಪ್ರಮಾಣದ ಆಮ್ಲಜನಕದ ಪೂರೈಕೆ ಅಗತ್ಯ. ಅನೀಮಿಯಾದ ಇನ್ನೂ ಕೆಲವು ಲಕ್ಷಣವೆಂದರೆ, ಉಸಿರಾಟದ ಸಮಸ್ಯೆ (Breathing Problem), ಕೈ-ಕಾಲುಗಳು ತಣ್ಣಗಾಗುವುದು, ಸುಸ್ತು, ಚರ್ಮ ಹಳದಿಯಾಗುವುದು, ತಲೆನೋವು ಇತ್ಯಾದಿ. ಅನೀಮಿಯಾ ನಿವಾರಣೆಗೆ ದೇಹಕ್ಕೆ ಕಬ್ಬಿಣಾಂಶ (Iron) ಅಗತ್ಯ.

Latest Videos

undefined

Health Tips: ಆಲೂಗಡ್ಡೆ ತಿನ್ನೋದ್ರಿಂದ ಮಧುಮೇಹದ ಅಪಾಯ ಹೆಚ್ಚುತ್ತಾ ?

ಡಿಹೈಡ್ರೇಷನ್‌ (Dehydration): ದೇಹ ಸೂಕ್ತವಾಗಿ ಕೆಲಸ ಮಾಡಲು ನೀರು (Water) ಉತ್ತಮ ಪ್ರಮಾಣದಲ್ಲಿರಬೇಕು. ದೇಹದಲ್ಲಿ ನೀರು ಮತ್ತು ದ್ರವಾಂಶ (Fluid) ಕಡಿಮೆ ಆದಾಗಲೂ ಮಿದುಳಿಗೆ ಆಮ್ಲಜನಕದ ಪೂರೈಕೆ ಕಡಿಮೆ ಆಗುತ್ತದೆ. ಇದರಿಂದಾಗಿ ತಲೆಸುತ್ತು ಬರುತ್ತದೆ. ಡಿಹೈಡ್ರೇಷನ್‌ ಸಮಸ್ಯೆಯ ಇತರ ಲಕ್ಷಣವೆಂದರೆ, ಭ್ರಮೆ ಉಂಟಾಗುವುದು, ಸುಸ್ತು, ಶಕ್ತಿ ಕುಂದುವುದು, ಸೆಕೆ ತಡೆದುಕೊಳ್ಳಲು ಸಾಧ್ಯವಾಗದಿರುವುದು.

ಬಿಪಿಪಿವಿ-ವರ್ಟಿಗೋ (Vertigo): ಬೆನೈನ್‌ ಪೆರಾಕ್ಸಿಮಲ್‌ ಪೊಸಿಷನಲ್‌ ವರ್ಟಿಗೋ ಅಂದರೆ ಇದು ಒಳಕಿವಿಯ (Inner Ear) ಸಮಸ್ಯೆಯಿಂದಾಗಿ ತಲೆಸುತ್ತು ಬರುವುದು. ಪೆರಾಕ್ಸಿಮಲ್‌ ಎಂದರೆ “ಅಚಾನಕ್ಕಾಗಿ ತಲೆಸುತ್ತುವುದುʼ ಎಂದರ್ಥ. ತಲೆಯನ್ನು ಚಲಿಸಿದಾಗಲೆಲ್ಲ ಚಕ್ಕರ್‌ ಬರುವ ಸಮಸ್ಯೆ ಇದು. ಇದು ಕೆಲವೊಮ್ಮೆ ಕೆಲವು ಸಮಯ (Time) ಮಾತ್ರ ಇರಬಹುದು. ಆದರೆ, ಬಹುತೇಕ ಪ್ರಕರಣಗಳಲ್ಲಿ ಸಮಸ್ಯೆಯನ್ನು ನಿಭಾಯಿಸುವುದು ಮುಖ್ಯವಾಗುತ್ತದೆ, ಏಕೆಂದರೆ, ನಿರ್ದಿಷ್ಟ ಪರಿಹಾರ ಇದಕ್ಕಿಲ್ಲ. ಈ ಸಮಸ್ಯೆಯ ಇತರ ಲಕ್ಷಣವೆಂದರೆ, ವಾಕರಿಕೆ (Vomit Sensation) ಗೊಂದಲ.

ಚಳಿಗಾಲದ ಹಲವು ಆರೋಗ್ಯ ಸಮಸ್ಯೆ ದೂರ ಮಾಡುತ್ತೆ ಬಟಾಣಿ

ಅರ್ಥೋಸ್ಟೇಟಿಕ್‌ ಹೈಪೊಟೆನ್ಷನ್‌ (Orthostatic Hypotension): ಎದ್ದು ನಿಲ್ಲುವಾಗ ಅಥವಾ ಕುಳಿತುಕೊಳ್ಳುವಾಗ ಏಕಾಏಕಿ ರಕ್ತದ ಒತ್ತಡದಲ್ಲಿ (Blood Pressure) ವ್ಯತ್ಯಾಸವಾಗುತ್ತದೆ. ರಕ್ತದ ಒತ್ತಡ ಕಡಿಮೆಯಾಗುತ್ತದೆ. ಆಗ ಬವಳಿ ಬೀಳುವಂತಾಗುತ್ತದೆ. ಈ ಸಮಸ್ಯೆ ರಕ್ತದ ನಾಳಗಳಲ್ಲಿ ದ್ರವಾಂಶ ಕಡಿಮೆ ಆದಾಗಲೂ ಉಂಟಾಗುತ್ತದೆ. ಇತರ ಲಕ್ಷಣಗಳೆಂದರೆ, ಭ್ರಮೆ, ನಿಃಶಕ್ತಿ, ದೃಷ್ಟಿಯಲ್ಲಿ ವ್ಯತ್ಯಾಸ, ಎಚ್ಚರ ತಪ್ಪುವುದು. 

ವಿಟಮಿನ್‌ ಬಿ12 ಕೊರತೆ (Deficiency of Vitamin B12): ವಿಟಮಿನ್‌ ಬಿ12 ದೇಹಕ್ಕೆ ಅಗತ್ಯವಾಗಿ ಬೇಕಾದ ಪೌಷ್ಟಿಕಾಂಶವಾಗಿದೆ (Nutrient). ಕೆಂಪುರಕ್ತದ ಸೃಷ್ಟಿ, ಡಿಎನ್‌ ಎ (DNA) ನಿರ್ಮಾಣವೂ ಸೇರಿದಂತೆ ಮಿದುಳ ಮತ್ತು ನರಮಂಡಲ ವ್ಯವಸ್ಥೆಯ ಮೇಲೂ ಇದು ಭಾರೀ ಪರಿಣಾಮ ಬೀರುತ್ತದೆ. ತ್ವಚೆಯ ಬಣ್ಣ ಹಳದಿಯಾಗುವುದು, ನಾಲಿಗೆ ಬಣ್ಣ ಬದಲಾಗುವುದು, ಕಣ್ಣುಗಳ ಹೊಳಪು ಕುಗ್ಗುವುದು, ಖಿನ್ನತೆ (Depression), ಸುಸ್ತು, ತಲೆನೋವು (Headache), ಹಸಿವಾಗದಿರುವುದು ಮುಂತಾದ ಲಕ್ಷಣಗಳು ಇದರ ಕೊರತೆಯನ್ನು ತಿಳಿಸುತ್ತವೆ. 

ಟ್ರಾನ್ಸಿಯೆಂಟ್‌ ಇಸ್ಕೆಮಿಕ್‌ ಅಟ್ಯಾಕ್‌:  ಇದು ಒಂದು ರೀತಿಯ ಸ್ಟ್ರೋಕ್‌ ಆಗಿದ್ದು, ಕೆಲವು ನಿಮಿಷಗಳ ಕಾಲ ಮಾತ್ರ ಸಂಭವಿಸುತ್ತದೆ. ಈ ಸಮಸ್ಯೆ ಇರುವಾಗ ಮಸ್ತಿಷ್ಕದ ಕೆಲವು ಭಾಗಕ್ಕೆ ರಕ್ತದ ಹರಿವು ನಿಂತುಹೋಗುತ್ತದೆ. ಆಗ ತಲೆಸುತ್ತು ಉಂಟಾಗುತ್ತದೆ. ಈ ಸಮಸ್ಯೆ ಇದ್ದಾಗ ಮಾತನಾಡಲು, ನಡೆಯಲು ಸಮಸ್ಯೆ, ದೃಷ್ಟಿಯಲ್ಲೂ ಸಮಸ್ಯೆ ಉಂಟಾಗುತ್ತದೆ. 

click me!