ತಾನು ಇಷ್ಟಪಡುವ ಹುಡುಗಿಗೆ ಐಫೋನ್ ಗಿಫ್ಟ್ ಕೊಡಬೇಕು ಎಂದು ಹುಡುಗನೊಬ್ಬ ತನ್ನ ಕಿಡ್ನಿಯನ್ನೇ ಮಾರಿದ್ದಾನೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಪ್ರೀತಿ ಕುರುಡೋ ಅಥವಾ ಪ್ರೀತಿಸುವವರು ಕುರುಡರಾಗಿರುತ್ತಾರೋ, ಗೊತ್ತಿಲ್ಲ. ಪ್ರೀತಿ ಸಿಗಲು ಕೆಲವರು ಏನು ಬೇಕಿದ್ರೂ ಮಾಡ್ತಾರೆ, ಇನ್ನೂ ಕೆಲವರು ಪ್ರೀತಿ ಸಿಕ್ಕಿಲ್ಲ ಅಂತ ಏನು ಬೇಕಿದ್ರೂ ಮಾಡಿಕೊಳ್ತಾರೆ. ಇಲ್ಲೋರ್ವ ಹುಡುಗ ತನ್ನ ಗರ್ಲ್‌ಫ್ರೆಂಡ್‌ನ್ನು ಇಂಪ್ರೆಸ್ ಮಾಡಲು ಐಫೋನ್ ಗಿಫ್ಟ್ ಕೊಡಬೇಕು ಅಂತ ಅಂದುಕೊಂಡಿದ್ದನು. ಹಣ ಇಲ್ಲ ಅಂತ ಈಗ ಕಿಡ್ನಿಯನ್ನೇ ಮಾರಿದ್ದಾನೆ. ಈಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಇದು ನಿಜವೋ? ನಾಟಕವೋ?
ಹದಿಹರೆಯದ ಹುಡುಗನೊಬ್ಬ ತನ್ನ ಗೆಳತಿಗೆ ಹೊಸದಾಗಿ ರಿಲೀಸ್ ಆಗಿರೋ ಐಫೋನ್ 16 ಪ್ರೊ ಮ್ಯಾಕ್ಸ್ ಖರೀದಿ ಮಾಡಲು ಕಿಡ್ನಿ ಕೊಟ್ಟ ಘಟನೆ ನಿಜಕ್ಕೂ ತೀವ್ರ ಆಘಾತಕಾರಿಯಾಗಿದೆ. ಐಫೋನ್ 16 ಪ್ರೊ ಮ್ಯಾಕ್ಸ್ ಖರೀದಿಸಲು ಭಾರತದಲ್ಲಿ ₹ 135,900 ರೂಪಾಯಿ ಬೇಕಿದೆ. ಎರಡು ಮೂತ್ರಪಿಂಡಗಳಲ್ಲಿ ಆ ಹುಡುಗ ಒಂದು ಕಿಡ್ನಿ ಮಾರಾಟ ಮಾಡಿದ್ದಾನೆ ಎಂದು ಹೇಳಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿಡಿಯೋವೊಂದು ವೈರಲ್ ಆಗ್ತಿದೆ. ಆದರೆ ಇದು ನಿಜವೋ? ಇಲ್ಲವೋ ಎಂಬ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.
ಈ ವರ್ಷ 15ಕ್ಕೂ ಅಧಿಕ ಪ್ರಾಡಕ್ಟ್ ರಿಲೀಸ್ ಮಾಡಲಿದೆ ಆ್ಯಪಲ್, ಬರಲಿರೋ ಹೊಸ ಐಫೋನ್ ಯಾವುದು?
ಕಿಡ್ನಿ ಮಾರಲು ಏನು ಕಾರಣ?
ದುಬಾರಿ ಉಡುಗೊರೆ ಕೊಟ್ಟರೆ ಗರ್ಲ್‌ಫ್ರೆಂಡ್ ಒಲಿಯುತ್ತಾಳೆ ಅಂತ ಆ ಹುಡುಗ ಹೀಗೆ ಮಾಡಿದ್ದಾನಂತೆ. ವೈರಲ್ ಆದ ವಿಡಿಯೋದಲ್ಲಿ ಹುಡುಗನು ಕಿಡ್ನಿ ಕೊಟ್ಟಿದ್ದೇನೆ ಎಂದು ಹೇಳುವುದಲ್ಲದೆ, ಬ್ಯಾಂಡೇಜ್ ಹಾಕಿಕೊಂಡಿದ್ದನ್ನು ಕೂಡ ತೋರಿಸುತ್ತಾನೆ. ಇದು ಎಷ್ಟು ಸತ್ಯವೋ ಏನೋ! ಉಡುಗೊರೆ ಕೊಟ್ಟರೆ ಅವಳ ಪ್ರೀತಿ ಸಿಗುತ್ತದೆ ಎನ್ನೋದು ಅವನ ಭಾವನೆ. ಇದರಿಂದ ತನ್ನ ಪ್ರೀತಿಯನ್ನು ಸಾಬೀತುಪಡಿಸಿದಂತಾಗುತ್ತದೆ ಅಂತ ಅವನು ನಂಬಿದ್ದಾನೆ.
ಆ್ಯಪಲ್ ಕಂಪನಿಯ ಮೊಟ್ಟಮೊದಲ ಮಡಚಬಹುದಾದ ಐಫೋನ್ ಫೋಟೋ ಲೀಕ್!
ಈ ಮನಸ್ಥಿತಿ ಯಾಕೆ?
ಇಂದಿನ ಯುವಕಜನತೆಯಲ್ಲಿ ಭೌತಿಕತೆ, ಸಾಮಾಜಿಕ ಸ್ಥಾನಮಾನದ ಬಗ್ಗೆ ಹೆಚ್ಚುತ್ತಿರುವ ಗೀಳಿನ ಬಗ್ಗೆ ಯೋಚಿಸಿ, ಕ್ರಮ ಕೈಗೊಳ್ಳಬೇಕಾದ ಸಮಯ ಬಂದಿದೆ. ನಿಜಕ್ಕೂ ಇಂಥ ಮನಸ್ಥಿತಿಯು ಆತಂಕಕಾರಿಯಾಗಿದೆ. ಪ್ರೀತಿ ಸಲುವಾಗಿ ತಮ್ಮ ಮುಂದಿನ ಭವಿಷ್ಯವನ್ನು, ಆರೋಗ್ಯವನ್ನು ಪಣಕ್ಕಿಡುತ್ತಾರೆ. ಇದಕ್ಕೂ ಮುನ್ನ ಅವರು ತಮ್ಮ ಹೆತ್ತವರ ಬಗ್ಗೆಯೋ, ತಮ್ಮ ಬಗ್ಗೆಯೋ ಯೋಚನೆ ಮಾಡೋದಿಲ್ಲ.
ಈ ಹಿಂದೆ ಹುಡುಗಿ ತಾಯಿಗೋಸ್ಕರ ಹುಡುಗ ತನ್ನ ಕಿಡ್ನಿ ಕೊಟ್ಟ ಘಟನೆಯೊಂದು ವಿದೇಶದಲ್ಲಿ ವರದಿಯಾಗಿತ್ತು. ಕಿಡ್ನಿ ಕೊಟ್ಟ ಬಳಿಕ ಆ ಹುಡುಗಿ ಅವನ ಜೊತೆ ಬ್ರೇಕಪ್ ಮಾಡಿಕೊಂಡಿದ್ದಳು. ಇನ್ನು ಹುಡುಗನಿಗೋಸ್ಕರ ಹುಡುಗಿ ಕಿಡ್ನಿ ಕೊಟ್ಟ ಘಟನೆಯೂ ವರದಿಯಾಗಿತ್ತು.