ಚಳಿಗಾಲ ಶುರುವಾಗಿದೆ. ಎಲ್ಲೆಡೆ ತಣ್ಣನೆಯ ಗಾಳಿ ಬೀಸುತ್ತಿದೆ. ಚುಮು ಚುಮು ಚಳಿ ಮೈಯನ್ನು ಥರಗುಟ್ಟಿಸುತ್ತಿದೆ. ಇಂಥಾ ಮೈ ಕೊರೆಯುವ ಚಳಿಗೆ ಹಾಸಿಗೆಯಿಂದ ಏಳೋದೆ ಕಷ್ಟ. ಸ್ನಾನ ಮಾಡೋದು ಇನ್ನೂ ದೊಡ್ಡ ಟಾಸ್ಕ್. ಹೀಗಿರುವಾಗ ಪೋಷಕರು ಚಳಿಯಲ್ಲಿ ಸ್ನಾನ ಮಾಡೋಕೆ ಒತ್ತಾಯ ಮಾಡಿದ್ರು ಅಂತ ಬಾಲಕನೊಬ್ಬ ಪೋಷಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ದೇಶಾದ್ಯಂತ ಚಳಿಯ ಪ್ರಮಾಣ ಹೆಚ್ಚಾಗಿದೆ. ಉತ್ತರ ಭಾರತವಂತೂ ಚಳಿಗೆ ತತ್ತರಿಸಿ ಹೋಗಿದೆ. ಉತ್ತರ ಭಾರತದಲ್ಲಿ ಚಳಿ ಹೆಚ್ಚಾಗಿದ್ದು, ಶೂನ್ಯ ಡಿಗ್ರಿಯತ್ತ ತಾಪಮಾನ ಕುಸಿಯುತ್ತಿದೆ. ಕಾಶ್ಮೀರದಲ್ಲಿ ಮೈನಸ್ 7 ಡಿಗ್ರಿಗೆ ಉಷ್ಣಾಂಶ ಕುಸಿದಿದ್ದರೆ, ಪಂಜಾಬ್, ರಾಜಸ್ಥಾನ, ಪಂಜಾಬಿನಲ್ಲಿಯೂ ಚಳಿ ಹೆಚ್ಚಳವಾಗಿದೆ. ದಕ್ಷಿಣ ಭಾರತದಲ್ಲೂ ಚಳಿ ಕಡಿಮೆಯೇನಿಲ್ಲ. ಹಲವು ರಾಜ್ಯಗಳಲ್ಲಿ ಉಷ್ಣಾಂಶ ಭಾರಿ ಪ್ರಮಾಣದಲ್ಲಿ ಕುಸಿದಿದ್ದು, ಬಹುತೇಕ ಕಡೆ ಗರಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್‌ಗಿಂತ ಕೆಳಗೆ ಇಳಿಕೆ ಇಳಿದಿದೆ. ಪರಿಣಾಮ ಹಲವು ನಗರಗಳಲ್ಲಿ ಭಾರಿ ಮಂಜು ಮುಸುಕಿದ್ದು ಸಾಮಾನ್ಯ ಜನಜೀವನದ ಮೇಲೆ ವ್ಯತ್ಯಯ ಬೀರಿದೆ.
ಚಳಿಯಲ್ಲಿ ಸ್ನಾನ ಮಾಡಲು ಹೇಳಿದ ತಾಯಿ, ಪೊಲೀಸರಿಗೆ ದೂರು ನೀಡಿದ ಬಾಲಕ
ಮೈ ಕೊರೆಯುವ ಚಳಿಗೆ (Winter) ಹಾಸಿಗೆಯಿಂದ ಏಳೋದೆ ಕಷ್ಟ. ಬೆಚ್ಚಗೆ ಹೊದ್ದುಕೊಂಡು ಇನ್ನಷ್ಟು ಹೊತ್ತು ಮಲಗೋಣ ಅನ್ಸುತ್ತೆ. ಮೈ ಮೇಲಿಂದ ಹೊದಿಕೆ ತೆಗೆದರೆ ಸಾಕು ಮತ್ತೆ ಚಳಿಯಾಗುತ್ತೆ. ಈ ಚಳಿಯಲ್ಲಿ ಕಷ್ಟಪಟ್ಟು ಎದ್ದು ಸ್ನಾನ (Bath) ಮಾಡ್ಬೇಕು ಅಂದ್ರೆ ಅದೂ ಒಂದು ದೊಡ್ಡ ಟಾಸ್ಕ್. ಎಷ್ಟು ಬಿಸಿಯಾಗಿರುವ ನೀರಿನಲ್ಲಿ ಸ್ನಾನ ಮಾಡಿದರೂ ಸಮಾಧಾನವಾಗುವುದಿಲ್ಲ. ಮೈಗೆ ಬಿಸಿ ತಾಗುವುದೂ ಇಲ್ಲ. ಸ್ನಾನ ಆದ ಮೇಲೆ ಮತ್ತಷ್ಟು ಚಳಿಯಾಗಲು ಆರಂಭವಾಗುತ್ತದೆ. ಹೀಗಾಗಿಯೇ ಚಳಿಗಾಲದಲ್ಲಿ ಹೆಚ್ಚಿನವರು ಬೆಳಗ್ಗೆದ್ದು ಸ್ನಾನ ಮಾಡುವುದನ್ನು ಸ್ಕಿಪ್ ಮಾಡುತ್ತಾರೆ. ಆದ್ರೆ ಇಲ್ಲೊಬ್ಬ ಬಾಲಕನಿಗೆ (Boy) ಸ್ನಾನ ಮಾಡುವಂತೆ ಪೋಷಕರು ಪದೇ ಪದೇ ಒತ್ತಾಯಿಸ್ತಿದ್ರಂತೆ. ಇದರಿಂದ ಸಿಟ್ಟಿಗೆದ್ದ ಬಾಲಕ ಈ ಬಗ್ಗೆ ಪೊಲೀಸರಿಗೆ ದೂರು (Complaint) ನೀಡಿದ್ದಾನೆ.
undefined
ಚಳಿಗಾಲದಲ್ಲಿ ಆರೋಗ್ಯದ ಕಾಳಜಿ ಹೇಗೆ ? ಜಯದೇವ ಆಸ್ಪತ್ರೆಯ ಡಾ.ಸಿಎನ್ ಮಂಜುನಾಥ್ ಏನ್ ಹೇಳ್ತಾರೆ ?
ಸ್ಟೈಲಿಶ್ ಆಗಿ ಹೇರ್ ಕಟ್ ಮಾಡಿಸಿಕೊಳ್ಳಲು ಬಿಡಲ್ಲ ಎಂದು ಬಾಲಕನ ಆರೋಪ
ಕೊರೆವ ಚಳಿಯಲ್ಲಿ ಸ್ನಾನ ಮಾಡುವುದು ಬಹಳಷ್ಟು ಜನರಿಗೆ ದೊಡ್ಡ ಸಮಸ್ಯೆಯೇ ಸರಿ. ಇದಕ್ಕೆ ಉತ್ತಮ ಉದಾಹರಣೆಯೊಂದು ಇಲ್ಲಿದೆ. ತನಗೆ ಇಷ್ಟವಿಲ್ಲದಿದ್ದರೂ ಸ್ನಾನ ಮಾಡುವಂತೆ ಒತ್ತಾಯಿಸುತ್ತಾರೆಂದು 9 ವರ್ಷದ ಬಾಲಕನೊಬ್ಬ 112ಕ್ಕೆ ಡಯಲ್ ಮಾಡಿ ಮನೆಗೇ ಪೊಲೀಸರನ್ನು ಕರೆಯಿಸಿ ಪೋಷಕರ ವಿರುದ್ಧ ದೂರು ನೀಡಿದ್ದಾನೆ. ಅಲ್ಲದೇ ಸ್ಟೈಲಿಶ್ ಆಗಿ ಹೇರ್ ಕಟ್ ಮಾಡಿಸಿಕೊಳ್ಳಲು ಬಿಡಲ್ಲ ಎಂದು ಗಂಭೀರ ಆರೋಪ ಮಾಡಿದ್ದಾನೆ. ಉತ್ತರ ಪ್ರದೇಶದ ಹಾಪುರನಲ್ಲಿ ಈ ಘಟನೆ ನಡೆದಿದೆ. ಮನೆಗೆ ಬಂದ ಪೊಲೀಸರು ಬಾಲಕನನ್ನು ಸಮಾಧಾನಪಡಿಸಿ ಪೋಷಕರ (Parents) ಮಾತು ಕೇಳುವಂತೆ ಬಾಲಕನಿಗೆ ಬುದ್ಧಿ ಹೇಳಿ ಹೋಗಿದ್ದಾರೆ.
ಚಳಿಗಾಲದಲ್ಲಿ ಸ್ನಾನ ಮಾಡಲು ಒತ್ತಾಯಿಸುತ್ತಿದ್ದ ತಾಯಿಯ ಬಗ್ಗೆ ಬಾಲಕ ಪೊಲೀಸರಿಗೆ ದೂರು ನೀಡಿದ್ದಾನೆ. ಸ್ನಾನ ಮಾಡು ಎಂದು ತಾಯಿ ಹೇಳಿದಾಗ ಕೋಪಗೊಂಡ ಆತ ತುರ್ತು ಸೇವೆಗೆ ಕರೆ ಮಾಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ. ಇದಾದ ನಂತರ ಪೊಲೀಸರು ಬಾಲಕನ ಮನೆಗೆ ಬಂದು ಎಲ್ಲವನ್ನೂ ತಿಳಿದುಕೊಂಡಾಗ ಪ್ರಕರಣ ವೈರಲ್ ಆಗಿತ್ತು.ವರದಿಗಳ ಪ್ರಕಾರ, ಘಟನೆ ಉತ್ತರಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ನಡೆದಿದೆ. ಹಳ್ಳಿಯೊಂದರಲ್ಲಿ ವಾಸಿಸುವ ಕುಟುಂಬದ ಒಂಬತ್ತು ವರ್ಷದ ಮಗನಲ್ಲಿ ತಾಯಿ ಚಳಿಯಲ್ಲಿ ಸ್ನಾನ ಮಾಡುವಂತೆ ಒತ್ತಾಯಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಬಾಲಕ ಪೊಲೀಸರಿಗೆ ಕರೆ ಮಾಡಿದ್ದಾನೆ.
ಏನ್ ಚಳೀನಪ್ಪಾ ಅಂದ್ಕೊಂಡು ಸ್ವೆಟ್ಟರ್ ಹಾಕಿ ಮಲಗಿದ್ರೆ ಜೀವಾನೇ ಹೋಗ್ಬೋದು !
ಪೊಲೀಸರು ಹುಡುಗ ನೀಡಿದ ವಿಳಾಸವನ್ನು ತಲುಪಿದಾಗ ಮತ್ತು ಕರೆ ಹಿಂದಿನ ನಿಜವಾದ ಕಾರಣವನ್ನು ಕಂಡುಕೊಂಡಾಗ, ಅವರಿಗೆ ನಗು ತಡೆಯಲಾಗಲಿಲ್ಲ. ಹುಡುಗನು ತನ್ನ ತಾಯಿ ಚಳಿಯಲ್ಲಿ ತಂಪಾದ ನೀರಿನಲ್ಲಿ ಸ್ನಾನ ಮಾಡುವಂತೆ ಕೇಳಿಕೊಂಡಿದ್ದಾಳೆ ಎಂದು ಸ್ಥಳಕ್ಕೆ ಬಂದ ಪೊಲೀಸರಲ್ಲಿ ದೂರಿದನು.