ಕಾಸರಗೋಡಿನಲ್ಲಿ ಚಿಕನ್ ಬಿರಿಯಾನಿ ತಿಂದು ಯುವತಿ ಸಾವು ಪ್ರಕರಣಕ್ಕೆ ಟ್ವಿಸ್ಟ್

By Vinutha Perla  |  First Published Jan 11, 2023, 4:35 PM IST

ಕೇರಳದ ಕಾಸರಗೋಡಿನಲ್ಲಿ ಚಿಕನ್ ಬಿರಿಯಾನಿ ತಿಂದು ಯುವತಿ ಸಾವನ್ನಪ್ಪಿದ ಪ್ರಕರಣದಲ್ಲಿ ಸಾವಿಗೆ ಫುಡ್ ಪಾಯ್ಸನ್ ಕಾರಣವಲ್ಲ ಅನ್ನೋ ಅನುಮಾನ ವ್ಯಕ್ತವಾಗಿದೆ. ಬದಲಿಗೆ ಆತ್ಮಹತ್ಯೆ ಎಂಬ ಶಂಕೆ ಮೂಡಿದೆ. ಸ್ಥಳದಿಂದ ಪೊಲೀಸರು ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡಿದ್ದಾರೆ.


ಫುಡ್​ ಪಾಯಿಸನ್​ನಿಂದ ಕೇರಳದ ಕಾಸರಗೋಡಿನಲ್ಲಿ ಯುವತಿ (Girl)ಯೊಬ್ಬಳು ಮೃತಪಟ್ಟಿರುವುದು ಇತ್ತೀಚಿಗೆ ಸುದ್ದಿಯಾಗಿತ್ತು. ಮೃತ ಯುವತಿಯನ್ನು ಕಾಸರಗೋಡಿನ ಥಲಕ್ಲೇ ಮೂಲದ ಅಂಜುಶ್ರೀ ಪಾರ್ವತಿ ಎಂದು ಗುರುತಿಸಲಾಗಿತ್ತು. ಉದುಮದಲ್ಲಿರುವ ಹೋಟೆಲ್​ ಒಂದರಲ್ಲಿ ಆನ್​ಲೈನ್​ ಮೂಲಕ ಚಿಕನ್​ ಆಹಾರ ತರಿಸಿ ಅಂಜುಶ್ರೀ ಸೇವಿಸಿದ್ದಳು. ಇದಾದ ಬಳಿಕ ಆಕೆಯ ಆರೋಗ್ಯ (Health)ದಲ್ಲಿ ಏರುಪೇರು ಕಂಡುಬಂದಿತ್ತು. ಪರಿಸ್ಥಿತಿ ಗಂಭೀರವಾದ ಬೆನ್ನಲ್ಲೇ ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ (Hospital) ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಯುವತಿ ಮೃತಪಟ್ಟಿದ್ದಳು. ಪುಡ್​ ಪಾಯಿಸನ್​ನಿಂದ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿತ್ತು. ಆದರೆ ಈ ಸಾವು ಫುಡ್ ಪಾಯ್ಸನ್‌ನಿಂದ ಆಗಿಲ್ಲ. ಬದಲಿಗೆ ಆತ್ಮಹತ್ಯೆ ಆಗಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.

ಸ್ಥಳದಿಂದ ಆತ್ಮಹತ್ಯೆ ಪತ್ರ ವಶಪಡಿಸಿಕೊಂಡ ಪೊಲೀಸರು
ಘಟನೆ ಬೆಳಕಿಗೆ ಬರ್ತಿದ್ದಂತೆ, ಸಂಬಂಧಪಟ್ಟ ಹೋಟೆಲ್‌ನಲ್ಲಿರುವ ನೀರು ಮತ್ತು ಆಹಾರ (Food)ವನ್ನು ಪರಿಶೀಲಿಸಲಾಯಿತು. ಈ ಘಟನೆ ಆರೋಗ್ಯ ಸಚಿವರ ಗಮನಕ್ಕೆ ಬರುತ್ತಿದ್ದಂತೆ ತನಿಖೆಗೆ ಆದೇಶಿಸಲಾಗಿದೆ. ದಿ.ಕುಮಾರನ್ ನಾಯರ್ - ಅಂಬಿಕಾ ದಂಪತಿಯ ಪುತ್ರಿಯಾದ ಅಂಜುಶ್ರೀ ಅವರು ತಾಯಿ ಅಲ್ಲದೆ ಸಹೋದರರನ್ನು ಅಗಲಿದ್ದಾರೆ. ಪೊಲೀಸರು ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಅಧಿಕಾರಿಗಳು ಈ ಮಾಹಿತಿಯನ್ನೂ ಖಚಿತಪಡಿಸಿಲ್ಲ.

Latest Videos

undefined

Food Poisoning Remedies: ಫುಡ್ ಪಾಯಿಸನ್ ಸಮಸ್ಯೆಯೇ? ಮನೆಯಲ್ಲಿಯೇ ಈ ಔಷಧ ಮಾಡಿ

ಫುಡ್ ಪಾಯ್ಸನ್‌ನಲ್ಲಿ ಗಂಟೆಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತೆ
ಯುವತಿ ಕುಂಜಿಮತಿ ಬಿರಿಯಾಗಿ ಸೇವಿಸಿದ ನಂತರ ಮೃತಪಟ್ಟ ಕಾರಣ ಈಕೆ ಆಹಾರ ವಿಷದಿಂದ ಸಾವನ್ನಪ್ಪಿದ್ದಾಳೆ ಎಂದೇ ಊಹಿಸಲಾಗಿತ್ತು. ಕಾಸರಗೋಡು ಪೊಲೀಸ್ ಕಮಿಷನರ್ ವೈಭವ್ ಸಕ್ಸೇನಾ ಮಾತನಾಡಿ, 'ಪ್ರಕರಣದಲ್ಲಿ ಮಹತ್ವದ ಸಾಕ್ಷ್ಯಗಳು ಸಿಕ್ಕಿದ್ದು, ಆಂತರಿಕ ಅಂಗಗಳ ರಾಸಾಯನಿಕ ಪರೀಕ್ಷೆಯ ಫಲಿತಾಂಶ ಬಂದ ನಂತರವೇ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಬಹುದು' ಎಂದು ಹೇಳಿದರು. 

'ಸಾಮಾನ್ಯ ವಿಷದಿಂದ ಸಾವು ಸಂಭವಿಸುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಅವರು ಕೆಲವು ಇತರ ವಸ್ತುಗಳನ್ನು ಕಂಡುಕೊಳ್ಳಲಾಗಿದೆ ಮತ್ತು ನಾವು ಇತರ ನಿರ್ಣಾಯಕ ಪುರಾವೆಗಳನ್ನು ಸಂಗ್ರಹಿಸಿದ್ದೇವೆ, ಆದರೆ ಅದು ರಾಸಾಯನಿಕ ಪರೀಕ್ಷೆಯ ಫಲಿತಾಂಶಗಳೊಂದಿಗೆ ಹೊಂದಾಣಿಕೆಯಾಗಬೇಕು. ಆಕೆಯ ಯಕೃತ್ತು ತೀವ್ರವಾಗಿ ಹಾನಿಗೊಳಗಾಗಿತ್ತು. ಸಾಮಾನ್ಯ ಆಹಾರ ವಿಷದಲ್ಲಿ, ಇದು ಸಂಭವಿಸುವುದಿಲ್ಲ. ಅವರು ಡಿಸೆಂಬರ್ 31 ರಂದು ಆಹಾರವನ್ನು ಸೇವಿಸಿದರು ಮತ್ತು ಜನವರಿ 2ರಂದು ರೋಗಲಕ್ಷಣಗಳನ್ನು ತೋರಿಸಲು ಪ್ರಾರಂಭಿಸಿದರು. ಆಹಾರ ವಿಷದ ಸಂದರ್ಭದಲ್ಲಿ, ಎರಡು ಮೂರು ಗಂಟೆಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ' ಎಂದು ಸಕ್ಸೇನಾ ಹೇಳಿದರು.

ಫುಡ್ ಪಾಯ್ಸನ್‌ ಯಾಕಾಗುತ್ತೆ ? ತಕ್ಷಣವೇ ಕಡಿಮೆಯಾಗಲು ಏನು ಮಾಡ್ಬೋದು ?

'ನಾವು ವಶಪಡಿಸಿಕೊಂಡ ಪುರಾವೆಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಒಂದು ವೇಳೆ ಅಂತಹ ಟಿಪ್ಪಣಿ ಸಿಕ್ಕಿದ್ದರೂ, ಅದನ್ನು ಅದೇ ಹುಡುಗಿ ಬರೆದಿದ್ದಾರೋ, ಈ ಸಮಯದಲ್ಲಿ ಅಥವಾ ಹಿಂದೆಯೇ ಎಂದು ಪರಿಶೀಲಿಸಬೇಕು ಮತ್ತು ಇತರ ಹಲವು ಹೊಂದಾಣಿಕೆಯ ಅಂಶಗಳನ್ನು ಪರಿಶೀಲಿಸಬೇಕು. ಆದರೆ ರಾಸಾಯನಿಕ ಫಲಿತಾಂಶಗಳು ಹೊಂದಾಣಿಕೆಯಾದರೆ ಫುಡ್ ಪಾಯ್ಸನ್‌ ಅಲ್ಲ ಎಂಬುದನ್ನು ಹೇಳುವ ನಿರ್ಣಾಯಕ ಪುರಾವೆಗಳು ನಮ್ಮ ಬಳಿ ಇವೆ' ಎಂದು ಅವರು ಹೇಳಿದರು.

ಕಾಸರಗೋಡು ಸಮೀಪದ ಪೆರುಂಬಳ ನಿವಾಸಿ ಅಂಜು ಶ್ರೀಪಾರ್ವತಿ ಎಂಬವರು ಡಿಸೆಂಬರ್ 31 ರಂದು ಕಾಸರಗೋಡಿನ ರೊಮ್ಯಾನ್ಸಿಯಾ ಎಂಬ ರೆಸ್ಟೊರೆಂಟ್‌ನಿಂದ ಆನ್‌ಲೈನ್‌ನಲ್ಲಿ ಖರೀದಿಸಿದ ಕುಜಿಮಂಡಿಯನ್ನು ಸೇವಿಸಿದ್ದಾರೆ. ಆಹಾರ ಸೇವಿಸಿದ ನಂತರ ಅವರು ಅಸ್ವಸ್ಥರಾಗಿದ್ದರು ಮತ್ತು ನಂತರ ಚಿಕಿತ್ಸೆ ಪಡೆಯುತ್ತಿದ್ದರು. ಜನವರಿ 7ರ ಶನಿವಾರದಂದು ಆಕೆ ಸಾವನ್ನಪ್ಪಿದ್ದು, ಬಿರಿಯಾನಿ ಮಂಡಿಯಿಂದ ವಿಷ ಸೇವಿಸಿದ್ದೇ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ. ಅವರು ತಾಯಿ ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

click me!