ಇಲ್ಲೊಂದು ಆಪ್ಟಿಕಲ್ ಇಲ್ಯೂಶನ್ ಚಿತ್ರವಿದೆ. ಈ ಫೋಟೋ ನೋಡಿದ ತಕ್ಷಣ ನಿಮಗೇನು ಕಾಣುತ್ತದೆ ಎಂಬುದು ನೀವು ಜೀವನದಲ್ಲಿ ಯಾವುದರ ಬಗ್ಗೆ ಅತೀ ಹೆಚ್ಚು ಭಯ ಪಡುತ್ತೀರಿ ಎಂಬುದನ್ನು ತಿಳಿಸುತ್ತದೆ.
ಆಪ್ಟಿಕಲ್ ಇಲ್ಯೂಷನ್‌ಗಳು ನಮ್ಮನ್ನು ಎರಡು ಬಾರಿ ಅಥವಾ ಮೂರು ಬಾರಿ ಯೋಚಿಸುವಂತೆ ಮಾಡುವ ಅಥವಾ ಗ್ರಹಿಕೆಯನ್ನು ಸಂಪೂರ್ಣವಾಗಿ ಬದಲಾಯಿಸುವ ಅತ್ಯಂತ ಆಸಕ್ತಿದಾಯಕ ಒಗಟುಗಳಾಗಿವೆ. ಇದು ಗುಪ್ತ ಅರ್ಥವನ್ನು ಕಂಡುಹಿಡಿಯಲು ಸಾಧ್ಯವಿರುವ ಪ್ರತಿಯೊಂದು ತಂತ್ರವನ್ನು ಅಳವಡಿಸಿಕೊಂಡಿರುತ್ತದೆ. ಮಾತ್ರವಲ್ಲ, ಅಚ್ಚರಿಯ ಸಂಗತಿಯೆಂದರೆ ಇದು ನಮ್ಮ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ. ಹಾಗೆಯೇ ಇಲ್ಲೊಂದು ಆಪ್ಟಿಕಲ್ ಇಲ್ಯೂಶನ್ ಚಿತ್ರವಿದೆ. ಈ ಫೋಟೋ ನೋಡಿದ ತಕ್ಷಣ ನಿಮಗೇನು ಕಾಣುತ್ತದೆ ಎಂಬುದು ನೀವು ಜೀವನದಲ್ಲಿ ಯಾವುದರ ಬಗ್ಗೆ ಅತೀ ಹೆಚ್ಚು ಭಯ ಪಡುತ್ತೀರಿ ಎಂಬುದನ್ನು ತಿಳಿಸುತ್ತದೆ.
ಅರ್ಥಪೂರ್ಣ ಕೃತಿಗಳಿಗೆ ಹೆಸರುವಾಸಿಯಾದ ಪ್ರಸಿದ್ಧ ನವ್ಯ ಸಾಹಿತ್ಯವಾದಿ ವ್ಲಾಡಿಮಿರ್ ಕುಶ್, ಈ ರಹಸ್ಯವಾದ ಬಟರ್‌ಫ್ಲೈ ಆಪಲ್ ಪೇಂಟಿಂಗ್‌ನ್ನು ರಚಿಸಿದ್ದಾರೆ. ಅದರಲ್ಲಿ, ಅವರು ಕೆಲವೊಂದು ಅಸ್ಪಷ್ಟ ಚಿತ್ರಗಳು, ರಹಸ್ಯ ಸಂಕೇತಗಳು ಮತ್ತು ಸಂದೇಶಗಳನ್ನು ತಿಳಿಸಿದ್ದಾರೆ. ಅದನ್ನು ತಿಳಿದುಕೊಳ್ಳಲು ನೀವು ಮೊದಲ ಬಾರಿಗೆ ಈ ಫೋಟೋವನ್ನು ನೋಡಬೇಕು. ಫೋಟೋ ನೋಡಿದ ತಕ್ಷಣ ನಿಮಗೇನು ಕಾಣುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು.
undefined
ಪೋಟೋ ನೋಡಿದ ತಕ್ಷಣ ನೀವು ಮೊದಲ ಬಾರಿಗೆ ಗಮನಿಸಿದ ಚಿತ್ರಣ ಯಾವುದು? ಚಿಟ್ಟೆ, ಸೇಬು, ಚಾಕು ಅಥವಾ ಕ್ಯಾಟರ್‌ಪಿಲ್ಲರ್. ನೀವು ಏನನ್ನು ಗಮನಿಸಿದ್ದೀರಿ ಆ ಚಿತ್ರದ ಅರ್ಥ ಇಲ್ಲಿದೆ ನೋಡಿ.
ಸೇಬು
ಚಿತ್ರವನ್ನು ನೋಡಿದ ತಕ್ಷಣಕ್ಕೆ ನೀವು ಸೇಬನ್ನು ಗಮನಿಸಿದರೆ, ಸಾವಿನ ಬಗ್ಗೆ ಹೆಚ್ಚು ಭಯವನ್ನು ಹೊಂದಿರುವಿರಿ ಎಂದರ್ಥ. ಇದು ನಿಮ್ಮ ಸಾವಿನ ಬಗ್ಗೆಯೇ ಆಗಿರಬೇಕೆಂದಿಲ್ಲ. ಆದರೆ ನೀವು ಕಾಳಜಿವಹಿಸುವ ಯಾರನ್ನಾದರೂ ಕಳೆದುಕೊಳ್ಳುವ ಭಯ ನಿಮ್ಮನ್ನು ಕಾಡುತ್ತಿರುತ್ತದೆ. ನೀವು ಈ ಮೊದಲು ಹೀಗೆಯೇ ಯಾರೋ ಪ್ರೀತಿ ಪಾತ್ರರನ್ನು ಕಳೆದುಕೊಂಡಿರುವ ಕಾರಣ ಆ ಬಗ್ಗೆ ಹೆಚ್ಚು ಭಯ ಹೊಂದಿದ್ದೀರಿ. ಆ ಘಟನೆ ನಿಮ್ಮ ಮನಸ್ಸಿನಲ್ಲಿ ಶಾಶ್ವತವಾಗಿ ಗಾಯವನ್ನು ಉಂಟು ಮಾಡಿದೆ.
ಕ್ಯಾಟರ್ ಪಿಲ್ಲರ್
ಪೋಟೋ ನೋಡಿದ ಕೂಡಲೇ ಕ್ಯಾಟರ್ ಪಿಲ್ಲರ್ ಕಂಡರೆ ದುಷ್ಟ ಶಕ್ತಿಗಳು, ದೆವ್ವಗಳು, ರಕ್ತಪಿಶಾಚಿಗಳು, ಮಾಟಗಾತಿಯರ ಬಗ್ಗೆ ನೀವು ಹೆಚ್ಚು ಭಯವನ್ನು ಹೊಂದಿದ್ದೀರಿ ಎಂದು ತಿಳಿದುಕೊಳ್ಳಬಹುದು. ನಿಮ್ಮ ನಿದ್ದೆಯಲ್ಲಿಯೂ ದೆವ್ವ, ಭೂತಗಳನ್ನು ಕಾಣುತ್ತೀರಿ. ಆ ವಿಷಯದ ಬಗ್ಗೆ ಹೆಚ್ಚು ಭಯಪಡುತ್ತೀರಿ.
ಫೋಟೋದಲ್ಲಿ ಫಸ್ಟ್ ನಿಮಗೇನ್ ಕಾಣುತ್ತೆ, ಇದು ನೀವೆಷ್ಟು Workaholic ತಿಳಿಸುತ್ತೆ!
ಚಾಕು
ಪೋಟೋವನ್ನು ನೋಡಿದ ತಕ್ಷಣ ನಿಮಗೆ ಚಾಕು ಕಾಣಿಸಿದರೆ ಭವಿಷ್ಯದಲ್ಲಿ ಯಾವುದಾದರೂ ಭೀಕರ ಕಾಯಿಲೆಗೆ ತುತ್ತಾಗಬಹುದು ಎಂಬ ಭಯ ಕಾಡುತ್ತಲೇ ಇರುತ್ತದೆ ಎಂದರ್ಥ. ನೀವು ವಯಸ್ಸಾಗುವುದರ ಬಗ್ಗೆ ಮಾತ್ರವಲ್ಲ, ಮಾರಣಾಂತಿಕ ಕಾಯಿಲೆಯ ಬಗ್ಗೆಯೂ ಚಿಂತಿಸುತ್ತೀರಿ. ಮಾರಣಾಂತಿಕ ಅನಾರೋಗ್ಯದ ಪರಿಣಾಮವಾಗಿ ದುಃಖ ಮತ್ತು ನೋವನ್ನು ಅನುಭವಿಸುವ ಆಲೋಚನೆಯಲ್ಲಿ ನೀವು ಸಂಪೂರ್ಣವಾಗಿ ಭಯಭೀತರಾಗಿದ್ದೀರಿ.
ಚಿಟ್ಟೆ
ಚಿಟ್ಟೆಯು ಮೊದಲು ನಿಮ್ಮ ಗಮನವನ್ನು ಸೆಳೆದರೆ, ನೀವು ಮತ್ತೆ ನಿರಾಕರಣೆ ಮತ್ತು ನೋವನ್ನು ಅನುಭವಿಸುವ ಬಗ್ಗೆ ಭಯಭೀತರಾಗಿದ್ದೀರಿ ಎಂದರ್ಥ. ಏಕೆಂದರೆ ನೀವು ಹಲವಾರು ಬಾರಿ ಜೀವನದಲ್ಲಿ ಇದನ್ನು ಅನುಭವಿಸಿದ್ದೀರಿ. ಮತ್ತೊಬ್ಬರಿಂದ ತಿರಸ್ಕೃತಗೊಂಡಿದ್ದೀರಿ. ಇದು ಕೆಲಸ, ಪ್ರೀತಿ ಯಾವುದೇ ವಿಚಾರದಲ್ಲಿ ಆಗಿರಬಹುದು. ಜೀವನದಲ್ಲಿ ಮುಂದೆಯೂ ಹೀಗೆಯೇ ಆಗಬಹುದು ಎಂದು ನೀವು ಹೆಚ್ಚು ಭಯವನ್ನು ಹೊಂದಿದ್ದೀರಿ.
Personality Test: ನೀವು ಶಕ್ತಿಶಾಲಿಯೋ, ಸಹಾನುಭೂತಿಯುಳ್ಳವರೋ? ಈ ಚಿತ್ರದಿಂದ ತಿಳ್ಕೊಳಿ