ಸಾಯೋಕೆ ಯಾರಿಗೆ ತಾನೇ ಇಷ್ಟವಿದೆ ಹೇಳಿ. ಇನ್ನಷ್ಟು, ಮತ್ತಷ್ಟು ವರ್ಷಗಳ ಕಾಲ ಬದುಕಬೇಕು ಅಂತ ಹಂಬಲಿಸ್ತಾನೆ ಇರ್ತಾರೆ. ಹೀಗಿರುವಾಗ ಇಲ್ಲೊಬ್ಬ ಬಿಲಿಯನೇರ್‌ಗೆ, ಚಿರಯುವಕನಾಗುವ ಕನಸಂತೆ. ಅದಕ್ಕಾಗಿ ದಿನಕ್ಕೆ 111 ಮಾತ್ರೆ ನುಂಗ್ತಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಅನೇಕ ಮಿಲಿಯನೇರ್‌ಗಳು ಮತ್ತು ಬಿಲಿಯನೇರ್‌ಗಳ ಲೈಫ್ ಸ್ಟೈಲ್ ಎಲ್ಲರಿಗಿಂತಲೂ ವಿಭಿನ್ನವಾಗಿರುತ್ತದೆ. ಹೊಸ ಹೊಸ ಪ್ರಾಜೆಕ್ಟ್‌ಗಳಲ್ಲಿ ಹೂಡಿಕೆ ಮಾಡುತ್ತಾ ಹೆಚ್ಚೆಚ್ಚು ಹಣವನ್ನು ಸಂಪಾದಿಸುವ ಗುರಿಯನ್ನು ಹೊಂದಿರುತ್ತಾರೆ. ಹೀಗಾಗಿಯೇ ಯಾವಾಗಾಲೂ ಹೆಲ್ದೀಯಾಗಿರಬೇಕೆಂದು ಅಂದುಕೊಳ್ಳುತ್ತಾರೆ. ಅದಕ್ಕಾಗಿ ಫಿಟ್‌ನೆಸ್, ಆರೋಗ್ಯವನ್ನು ಕಾಪಾಡಿಕೊಳ್ಳಲು ಎಷ್ಟು ಬೇಕಾದರೂ ದುಡ್ಡು ಖರ್ಚು ಮಾಡಲು ರೆಡಿಯಿರುತ್ತಾರೆ. ಹಾಗೆಯೇ ಬ್ರಿಯಾನ್ ಜಾನ್ಸನ್ ಎಂಬವರು ಶಾಶ್ವತವಾಗಿ ಚಿರಯುವಕನಾಗಿರಲು ದಿನಕ್ಕೆ 111 ಪಿಲ್ಸ್ ತೆಗೆದುಕೊಳ್ಳುತ್ತಿದ್ದಾರೆ. ನಂಬೋಕೆ ಕಷ್ಟವೆನಿಸಿದರೂ ಇದು ನಿಜ.
ಬ್ರಿಯಾನ್ ಜಾನ್ಸನ್ ಒಬ್ಬ ವಾಣಿಜ್ಯೋದ್ಯಮಿ ಮತ್ತು ಟೆಕ್ ಮಿಲಿಯನೇರ್ ಆಗಿದ್ದು, ಬರೋಬ್ಬರಿ USD 400 ಮಿಲಿಯನ್‌ಗಿಂತಲೂ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಇದು ಭಾರತೀಯ ಕರೆನ್ಸಿಯಲ್ಲಿ ಸುಮಾರು 3330 ಕೋಟಿ ರೂ. ಹೆಚ್ಚಾಗಿದೆ. ಹೀಗಾಗಿಯೇ ಇವರು ಯಾವತ್ತೂ ಚಿರಯುವಕನಾಗಿರುವುದು ಹೇಗೆ ಎಂಬ ಯೋಜನೆಯಲ್ಲಿ ಹಣ ಹೂಡಿಕೆ ಮಾಡಲು ನಿರ್ಧರಿಸಿದ್ದಾರೆ.
ಒಂದು ಕೋಣೆಯೊಂದರಲ್ಲಿ ವಾಸಿಸುತ್ತಿದ್ದವ ಕೋಟ್ಯಾಧಿಪತಿ ಆದ ಯಶೋಗಾಥೆ ಇದು!
ಸಾವು ಬರದಿರಲು ಪ್ರತಿದಿನ 111 ಮಾತ್ರೆ ತೆಗೆದುಕೊಳ್ಳುವ ಬಿಲಿಯನೇರ್
46 ವರ್ಷದ ಬ್ರಿಯಾನ್ ಅವರು ತಮ್ಮ ಸಾಹಸೋದ್ಯಮ ಬಂಡವಾಳಶಾಹಿ ಕಲ್ಪನೆಗಳು ಮತ್ತು ಉದ್ಯಮಶೀಲತೆಯ ಮೂಲಕ ತಮ್ಮ ಸಂಪತ್ತನ್ನು ನಿರ್ಮಿಸಿದ್ದಾರೆ. ಆದರೆ ಈಗ ತಂತ್ರಜ್ಞಾನವನ್ನು ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.ಇದು ಅವರ ಕಂಪನಿ 'ಬ್ಲೂಪ್ರಿಂಟ್' ಮೂಲಕ ಹೋಮೋ ಸೇಪಿಯನ್ಸ್‌ಗೆ ಅತ್ಯಂತ ಮಹತ್ವದ ಕ್ರಾಂತಿಯಾಗಬಹುದೆಂದು ಅವರು ನಂಬುತ್ತಾರೆ. ಬ್ರಿಯಾನ್ ಮೂರು ವರ್ಷಗಳ ಹಿಂದೆ ಸಾವೇ ಸಂಭವಿಸದಿರಲು ಮತ್ತು ಶಾಶ್ವತವಾಗಿ ಯುವಕರಾಗಿರಲು ಹಲವಾರು ಅಭ್ಯಾಸಗಳನ್ನು ಅನುಸರಿಸಲು ಆರಂಭಿಸಿದರು. ಇದೇ ಸಂದರ್ಭದಲ್ಲಿ ಬ್ಲೂಪ್ರಿಂಟ್ ಪ್ರಾಜೆಕ್ಟ್ ಆರಂಭಿಸಿದರು. ಶಾಶ್ವತವಾಗಿ ಬದುಕುವ ಅವರ ಕನಸು ಪ್ರತಿದಿನ 111 ಮಾತ್ರೆಗಳನ್ನು ತೆಗೆದುಕೊಳ್ಳುವುದು ಮತ್ತು ಪ್ರತಿದಿನ ಮಲ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸುವುದನ್ನು ಒಳಗೊಂಡಿದೆ.
ಪ್ರತಿದಿನ, ಬ್ರಿಯಾನ್ ಜಾನ್ಸನ್ ನೂರಾರು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಮಿನಿ ಜೆಟ್ ಪ್ಯಾಕ್‌ನೊಂದಿಗೆ ತನ್ನ ರಾತ್ರಿಯ ನಿಮಿರುವಿಕೆಯನ್ನು ಪ್ರತಿದಿನ ಮೇಲ್ವಿಚಾರಣೆ ಮಾಡುತ್ತಾರೆ. ನೆತ್ತಿಯ ಮೇಲೆ ಕೆಂಪು ಬೆಳಕನ್ನು ಹೊರಸೂಸುವ ವಿಶೇಷ ಕ್ಯಾಪ್ ಅನ್ನು ಧರಿಸುತ್ತಾರೆ. ಮಿಲಿಯನೇರ್ ತನ್ನ ಬ್ಲೂಪ್ರಿಂಟ್‌ನಲ್ಲಿ ರೂ 33 ಕೋಟಿ ಹೂಡಿಕೆ ಮಾಡಿದ್ದಾರೆ. ಅದು ಅವನನ್ನು ಶಾಶ್ವತವಾಗಿ ಬದುಕುವಂತೆ ಮಾಡುವ ಗುರಿಯನ್ನು ಹೊಂದಿದೆ ಎಂದು ವರದಿಯಾಗಿದೆ.
ಬಿಲಿಯನೇರ್ ಆಗಿದ್ರೂ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ರತನ್ ಟಾಟಾ ಹೆಸರಿಲ್ಲ, ಯಾಕೆ?
ಕಂಪನಿಯ ಮಾಹಿತಿಯ ಪ್ರಕಾರ, ಬ್ಲೂಪ್ರಿಂಟ್ ಈಗಾಗಲೇ 46 ವರ್ಷ ವಯಸ್ಸಿನವರಿಗೆ 37 ವರ್ಷ ವಯಸ್ಸಿನ ಹೃದಯ ಮತ್ತು 30 ವರ್ಷ ವಯಸ್ಸಿನ ಅಂಗಗಳು ಮತ್ತು ಮೂಳೆಗಳನ್ನು ನೀಡಿದೆ. ಕಠಿಣ ಆಹಾರ ಮತ್ತು ಕಟ್ಟುನಿಟ್ಟಾದ ದಿನಚರಿಯ ಮೂಲಕ 18 ವರ್ಷದ ಯುವಕನ ದೇಹವಾಗಿ ತನ್ನನ್ನು ತಾನು ಪರಿವರ್ತಿಸಿಕೊಳ್ಳುವುದು ಬ್ರಿಯಾನ್ ಅಂತಿಮ ಗುರಿಯಾಗಿದೆ.
ಬ್ರಿಯಾನ್ ಪ್ರತಿದಿನ ಬೆಳಿಗ್ಗೆ 4:30 ಕ್ಕೆ ಎಚ್ಚರಗೊಳ್ಳುತ್ತಾರೆ ಮತ್ತು 11 ಗಂಟೆಗೆ ಮೊದಲು ತನ್ನ ಊಟ ಮಾಡುತ್ತಾರೆ. ರಾತ್ರಿ 8:30ಕ್ಕೆ ಮಲಗುತ್ತಾರೆ. ದಿನವಿಡೀ ತನ್ನ ದೇಹವನ್ನು ಎಲ್ಇಡಿ ಬೆಳಕಿನಲ್ಲಿ ಇರಿಸುತ್ತಾರೆ. ಜೀವನದ ಅಂತಿಮ ಗುರಿ 'ಸಾಯದೇ ಇರುವುದು' ಮತ್ತು ಹದಿಹರೆಯದವನಾಗಿ ರೂಪಾಂತರಗೊಳ್ಳುವುದಾಗಿದೆ.