'ಪ್ರೀತಿಯ ಪಾರಿವಾಳ..' ಅಂತಾ ಹತ್ತಿರ ಹೋದ್ರೆ ಜೀವಕ್ಕೆ ಕುತ್ತು ಬಂದಿತು ಹುಷಾರ್‌!

Published : Mar 07, 2023, 07:54 PM ISTUpdated : Mar 07, 2023, 08:00 PM IST
'ಪ್ರೀತಿಯ ಪಾರಿವಾಳ..' ಅಂತಾ ಹತ್ತಿರ ಹೋದ್ರೆ ಜೀವಕ್ಕೆ ಕುತ್ತು ಬಂದಿತು ಹುಷಾರ್‌!

ಸಾರಾಂಶ

ಪಾರಿವಾಳದ ಹಿಕ್ಕೆಯಿಂದ  ಶ್ವಾಸಕೋಶದ ಸೋಂಕು ಉಂಟಾಗುತ್ತದೆ ಎನ್ನುವ ಅಪಾಯವನ್ನು ಅರಿತಿರುವ ಥಾಣೆ ನಗರಪಾಲಿಕೆ ಪಾಲಿಕೆ, ನಗರದಲ್ಲಿ ಪಾರಿವಾಳಕ್ಕೆ ಆಹಾರ ಹಾಕೋದಕ್ಕೆ ನಿಷೇಧ ವಿಧಿಸಿದೆ. ಹಾಗೇನಾದರೂ ಮಾಡಿದಲ್ಲಿ 500 ರೂಪಾಯಿ ದಂಡ ವಿಧಿಸುವುದಾಗಿ ತಿಳಿಸಿದೆ.  

ಮುಂಬೈ (ಮಾ.7): ಕಳೆದ ವರ್ಷ ನಟಿ ಮೀನಾ ಅವರ ಪತಿ ವಿದ್ಯಾಸಾಗರ್‌ ನಿಧನರಾದಾಗ ಮೊದಲ ಬಾರಿ ಈ ವಿಚಾರ ಗಮನಕ್ಕೆ ಬಂದಿತ್ತು. ನಟಿ ಮೀನಾ ಅವರ ಪತಿಯ ಸಾವಿಗೂ ಪಾರಿವಾಳಕ್ಕೂ ಸಂಬಂಧವಿದೆ ಎನ್ನಲಾಗಿತ್ತು. ಪಾರಿವಾಳದ ಹಿಕ್ಕೆಯಿಂದ ಬಂದ ವಾಸನೆಯಿಂದಾಗಿ ಮೀನಾ ಅವರ ಪತಿಯ ಶ್ವಾಸಕೋಶದ ಸೋಂಕು ಉಂಟಾಗಿತ್ತು. ಕೊನೆಗೆ ಇದೇ ಅವರ ಸಾವಿಗೆ ಕಾರಣವಾಗಿತ್ತು ಎಂದೆಲ್ಲಾ ವರದಿಗಳು ಬಂದಿದ್ದವು. ಆದರೆ, ಮೀನಾ ಆಗಲಿ ವೈದ್ಯರಾಗಲಿ ಖಚಿತವಾಗಿ ಹೇಳಲು ನಿರಾಕರಿಸಿದ್ದರು. ಈ ನಡುವೆ ಮಹಾರಾಷ್ಟ್ರದ ಥಾಣೆ ನಗರಪಾಲಿಕೆ ಪಾರಿವಾಳದ ಹಿಕ್ಕೆಯಿಂದ ಉಂಟಾಗುವ ಅಪಾಯವನ್ನು ಅರಿತಿದೆ. ಥಾಣೆಯಲ್ಲಿ ಹೈಪರ್‌ಸೆನ್ಸಿಟಿವ್‌ ನ್ಯುಮೋನಿಯಾ ಅಥವಾ ಅತಿಸೂಕ್ಷ್ಮ ಜ್ವರದ ಕೇಸ್‌ಗಳ ಸಂಖ್ಯೆಗಳಲ್ಲಿ ಭಾರೀ ಏರಿಕೆಯಾಗುತ್ತಿದೆ. ಇದು ಒಂದು ಮಾದರಿಯ ಶ್ವಾಸಕೋಶದ ಸೋಂಕು ಆಗಿದ್ದು, ಇದಕ್ಕೆ ಪಾರಿವಾಳದ ಹಿಕ್ಕೆಯ ವಾಸನೆಯೇ ಪ್ರಮುಖ ಕಾರಣ ಎನ್ನಲಾಗಿದೆ. ಅದಲ್ಲದೆ, ಥಾಣೆ ನಗರದಲ್ಲಿ ಯಾರಾದರೂ ಪಾರಿವಾಳಕ್ಕೆ ಆಹಾರ ಹಾಕಿದಲ್ಲಿ ಅವರಿಗೆ 500 ರೂಪಾಯಿ ದಂಡ ವಿಧಿಸಲಾಗುವುದು ಎಂದು ಎಲ್ಲಡೆ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಥಾಣೆ ಮುನ್ಸಿಪಲ್ ಕಾರ್ಪೊರೇಶನ್ ಅಥವಾ ಟಿಎಂಸಿ ಇತ್ತೀಚೆಗೆ ನಗರದಲ್ಲಿ ಹಲವಾರು ಪೋಸ್ಟರ್‌ಗಳನ್ನು ಹಾಕಿದ್ದು, ಪಾರಿವಾಳದ ಹಿಕ್ಕೆಗಳಿಂದ ಹರಡುವ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದೆ. ಪಾರಿವಾಳಗಳ ಹಿಕ್ಕೆಯಲ್ಲಿರುವ ಬ್ಯಾಕ್ಟೀರಿಯಾ ಹಾಗೂ ಇತರ ಅಂಶಗಳಿಂದ ಕೆಟ್ಟ ವಾಸನೆ ಉಂಟಾಗುತ್ತದೆ. ಇದನ್ನು ಉಸಿರಾಡಿದರೆ, ಶ್ವಾಸಕೋಶದ ಉರಿಯೂತಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದೆ.


ಅತಿಸೂಕ್ಷ್ಮ ನ್ಯುಮೋನಿಯಾ, ಶ್ವಾಸಕೋಶದ ಕಾಯಿಲೆ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ವಾಸಿಸುವ ಸ್ಥಳಗಳ ಬಳಿ ಪಾರಿವಾಳಗಳಿಗೆ ಆಹಾರವನ್ನು ನೀಡದಂತೆ ಎಚ್ಚರಿಕೆ ನೀಡಿದ್ದಾರೆ. ಹಕ್ಕಿ ಹಿಕ್ಕೆಗಳು ಮತ್ತು ಗರಿಗಳ ಮೂಲಕ ಹರಡುವ ರೋಗವು ಶ್ವಾಸಕೋಶವನ್ನು ಸಂಪೂರ್ಣವಾಗಿ ಹಾನಿ ಮಾಡುತ್ತದೆ. ಪಾರಿವಾಳಗಳಿಗೆ ಆಹಾರ ನೀಡುವವರಿಗೆ 500 ರೂಪಾಯಿ ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ನಗರದ ಎಲ್ಲಾ ಕಡೆ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಮುಂಬೈ ಮತ್ತು ಪುಣೆಯಲ್ಲಿ ಪಾರಿವಾಳ-ಸಂಬಂಧಿತ ಅತಿಸೂಕ್ಷ್ಮ ನ್ಯುಮೋನಿಯಾ ಹೆಚ್ಚುತ್ತಿದೆ ಮತ್ತು  ಈಗಾಗಲೇ ಶ್ವಾಸಕೋಶದ ಸಮಸ್ಯೆಯನ್ನು ಹೊಂದಿರುವ ಜನರು ಈ ರೋಗಕ್ಕೆ ಶೇ. 60 ರಿಂದ 65 ಪ್ರಮಾಣದಷ್ಟು ಬಲಿಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಆದರೆ, ಮುಂಬೈನಲ್ಲಿ ಇದುವರೆಗೆ ಅಂತಹ ಯಾವುದೇ ಪೋಸ್ಟರ್‌ಗಳನ್ನು ಹಾಕಿಲ್ಲ.

ಈ ಕುರಿತಂತೆ ಮಾಹಿಮ್‌ನ ಎಸ್‌ಎಲ್ ರಹೇಜಾ ಆಸ್ಪತ್ರೆಯ ಪಲ್ಮನಾಲಜಿಸ್ಟ್ ಸಲಹೆಗಾರ ಡಾ.ಸಾರ್ಥಕ್ ರಸ್ತೋಗಿ, ಪಾರಿವಾಳಗಳ ಹಿಕ್ಕೆಗಳು ಹೇಗೆ ಮನುಷ್ಯನ ಆರೋಗ್ಯದ ಅಪಾಯಗಳಿಗೆ ಕಾರಣವಾಗುತ್ತದೆ ಎಂದು ವಿವರಿಸಿದ್ದಾರೆ.

ಮೀನಾ ಪತಿ ವಿದ್ಯಾಸಾಗರ್‌ ಸಾವಿಗೆ ಕಾರಣವಾಯ್ತು ಪಾರಿವಾಳದ ಹಿಕ್ಕೆ?

ಪಾರಿವಾಳಗಳಿಂದ ಯಾವ ರೀತಿಯ ರೋಗಗಳು ಹರಡಬಹುದು: ಉಸಿರಾಟದ ಅಲರ್ಜಿಯಿಂದ ಹಿಡಿದು ಗಂಭೀರ ಸೋಂಕುಗಳವರೆಗೆ, ಪಾರಿವಾಳಗಳು ವಿವಿಧ ರೀತಿಯ ಶ್ವಾಸಕೋಶದ ಕಾಯಿಲೆಗಳಿಗೆ ಕಾರಣವಾಗಬಹುದು. ಎರಡನೆಯದು ನ್ಯುಮೋನಿಯಾ-ಸಿಟ್ಟಾಕೋಸಿಸ್ಗೆ ಕಾರಣವಾಗಬಹುದು, ಇದು ಬ್ಯಾಕ್ಟೀರಿಯಾದ ಸೋಂಕಾಗಿದೆ ಮತ್ತು ಚಿಕಿತ್ಸೆ ನೀಡದಿದ್ದಲ್ಲಿ 15 ಪ್ರತಿಶತದಷ್ಟು ಜನರು ಸಾವಿಗೆ ಕಾರಣವಾಗಬಹುದು. ಹಿಸ್ಟೋಪ್ಲಾಸ್ಮಾಸಿಸ್ ಸಮಸ್ಯೆ ಕೂಡ ಇದರಿಂದ ಉಂಟಾಗುತ್ತದೆ. ಇದು ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿರುವ ಶಿಲೀಂಧ್ರಗಳ ಸೋಂಕಾಗಿದೆ. ಕ್ರಿಪ್ಟೋಕೊಕಲ್ ಸೋಂಕುಗಳು ಇಮ್ಯುನೊಕೊಪ್ರೊಮೈಸ್ಡ್ ಹೋಸ್ಟ್ ಹೊಂದಿರುವ ಕೆಲವು ಜನರಲ್ಲಿ ಪಲ್ಮನರಿ ಅಥವಾ ಮೆನಿಂಜಿಯಲ್ ಸೋಂಕುಗಳಿಗೆ ಕಾರಣವಾಗಬಹುದು.

Pigeon Astrology: ಮನೆಯಲ್ಲಿ ಪಾರಿವಾಳ ಗೂಡು ಕಟ್ಟಿದರೆ ಒಳ್ಳೆಯದೋ ಕೆಟ್ಟದ್ದೋ?

ರೋಗ ಲಕ್ಷಣಗಳು: ಅತಿಸೂಕ್ಷ್ಮ ನ್ಯುಮೋನಿಟಿಸ್‌ನ ಲಕ್ಷಣಗಳು ತೀವ್ರ ಅಥವಾ ದೀರ್ಘಕಾಲದ್ದಾಗಿರಬಹುದು ಎಂದು ವೈದ್ಯರು ಹೇಳಿದ್ದಾರೆ. ತೀವ್ರವಾದ ರೋಗಲಕ್ಷಣಗಳು ಅಲರ್ಜಿಯನ್ನು ಹೊಂದಿರುವ ಕೆಲವೇ ಗಂಟೆಗಳಲ್ಲಿ ಕಾಣಿಸಿಕೊಳ್ಳುತ್ತವೆ ಮತ್ತು ಕೆಲವು ಗಂಟೆಗಳು ಅಥವಾ ದಿನಗಳವರೆಗೆ ಇರುತ್ತದೆ. ಮತ್ತೊಂದೆಡೆ ದೀರ್ಘಕಾಲದ ರೋಗಲಕ್ಷಣಗಳು ನಿಧಾನವಾಗಿ ಬೆಳೆಯಬಹುದು ಮತ್ತು ಕಾಲಾನಂತರದಲ್ಲಿ ಮತ್ತಷ್ಟು ಕೆಟ್ಟದಾಗಿರಬಹುದು ಎನ್ನಲಾಗಿದೆ. ರೋಗದ ಕೆಲವು ಸಾಮಾನ್ಯ ಲಕ್ಷಣಗಳೆಂದರೆ,  ಉಸಿರಾಟದ ತೊಂದರೆ, ಒಣ ಕೆಮ್ಮು, ಎದೆ ಹಿಡಿಯುವುದು, ಚಳಿ, ಆಯಾಸ, ವಿಪರೀತ ಜ್ವರ, ಸ್ನಾಯುಗಳಲ್ಲಿ ನೋವು, ದೀರ್ಘಕಾಲದ ಕೆಮ್ಮು ಹಾಗೂ ಅನಿರೀಕ್ಷಿತ ತೂಕ ನಷ್ಟ ಎನ್ನಲಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?