
ಉಡುಪಿ (ಮಾ.7): ಮಾರ್ಚ್ ತಿಂಗಳನ್ನು ಕೊಲೊರೆಕ್ಟಲ್ ಕ್ಯಾನ್ಸರ್ (ದೊಡ್ಡ ಕರುಳು ಮತ್ತು ಗುದನಾಳ ಸಂಬಂಧಿತ ) ಜಾಗೃತಿ ಮಾಸವನ್ನಾಗಿ ರಾಷ್ಟ್ರೀಯವಾಗಿ ಆಚರಿಸಲಾಗುತ್ತದೆ. ಈ ಪ್ರಯುಕ್ತ ಇಂದು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಕೊಲೊರೆಕ್ಟಲ್ ಕ್ಯಾನ್ಸರ್ ಜಾಗೃತಿ ಜಾಗೃತಿ ಮಾತು ಮತ್ತು ಮಾಹಿತಿ ಕೈ ಪಿಡಿ ಹಾಗೂ ವಿಶೇಷ ರಿಯಾಯಿತಿ ದರದ ಪ್ಯಾಕೇಜ್ ಬಿಡುಗಡೆ ಮಾಡಲಾಯಿತು. ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ ಆನಂದ್ ವೇಣುಗೋಪಾಲ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಗ್ಯಾಸ್ಟ್ರೋ ಎಂಟೆರೊಲೊಜಿ ವಿಭಾಗದ ಪ್ರಾದ್ಯಾಪಕರು ಮತ್ತು ಮುಖ್ಯಸ್ಥರು ಹಾಗೂ ಉಪವೈದ್ಯಕೀಯ ಅಧೀಕ್ಷಕರಾದ ಡಾ ಶಿರನ್ ಶೆಟ್ಟಿ ಅವರು ಕೊಲೊರೆಕ್ಟಲ್ ಕ್ಯಾನ್ಸರ್, ಕೋಲನ್ (ದೊಡ್ಡ ಕರುಳು) ಅಥವಾ ಗುದನಾಳದಲ್ಲಿ ಸಂಭವಿಸುತ್ತದೆ. ಜೀವಕೋಶಗಳು ಅಸಹಜವಾದಾಗ ಮತ್ತು ನಿಯಂತ್ರಣವಿಲ್ಲದೆ ವಿಭಜಿಸಿ, ಗೆಡ್ಡೆ ಎಂದು ಕರೆಯಲ್ಪಡುವ ದ್ರವ್ಯರಾಶಿಯನ್ನು ರೂಪಿಸುತ್ತವೆ.
ದೇಶದಲ್ಲಿ ಕ್ಯಾನ್ಸರ್‌ನಂತೆ ಹರಡಿದ ಭ್ರಷ್ಟಾಚಾರ: ಸುಪ್ರೀಂ ಕಳವಳ
ಭಾರತದಲ್ಲಿ, ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಕರುಳಿನ ಕ್ಯಾನ್ಸರ್ ಮತ್ತು ಗುದನಾಳದ ಕ್ಯಾನ್ಸರ್ ನ ಪ್ರಮಾಣವು ಹೆಚ್ಚಾಗಿರುತ್ತದೆ. ಕೊಲೊರೆಕ್ಟಲ್ ಕ್ಯಾನ್ಸರ್ ಮರಣಕ್ಕೆ ಕಾರಣವಾಗಿರುವ ಕ್ಯಾನ್ಸರ್ ಗಳಲ್ಲಿ ಎರಡನೇ ಸ್ಥಾನದಲ್ಲಿದೆ, ಕೊಲೊರೆಕ್ಟಲ್ ಕ್ಯಾನ್ಸರ್ ಅನ್ನು ತಡೆಗಟ್ಟಬಹುದು, ಕೊಲೊನೋಸ್ಕೋಪಿ ಇದನ್ನು ಪತ್ತೆ ಹಚ್ಚಲು ಇರುವ ಸೂಕ್ತ ಪರೀಕ್ಷಾ ವಿಧಾನವಾಯಿದೆ. ಆದ್ದರಿಂದ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಈ ತಿಂಗಳ 31 ದಿನಾಂಕದವರೆಗೆ ವಿಶೇಷ ರಿಯಾಯಿತಿಯಾಗಿ 4999 ರೂಪಾಯಿ ದರದಲ್ಲಿ ಕೊಲೊನೋಸ್ಕೋಪಿ ಮತ್ತು ಅವಶ್ಯಕ ರಕ್ತ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಗಡ್ಡೆಯಿದೆ ಎಂದು ರೋಗಿಯ ಗುಪ್ತಾಂಗ ಕತ್ತರಿಸಿದ ವೈದ್ಯ, ನಂತ್ರ ಹಾಗೇನೂ ಇರ್ಲಿಲ್ಲ Sorry ಅಂದ್ಬಿಟ್ಟ!
ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.ವೈದ್ಯಕೀಯ ಅಧೀಕ್ಷಕರಾದ ಡಾ ಅವಿನಾಶ ಶೆಟ್ಟಿ, ಕಾರ್ಕಳ ಡಾ ಟಿ ಎಂ ಪೈ ಆಸ್ಪತ್ರೆ ವೈದ್ಯಾಧಿಕಾರಿ ಡಾ ಕೀರ್ತಿನಾಥ ಬಲ್ಲಾಳ, ಮಾರ್ಕೆಟಿಂಗ್ ಮುಖ್ಯಸ್ಥ ಸಚಿನ್ ಕಾರಂತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.