ನಿಮ್ಮ ಇಮ್ಯುನಿಟಿ ಲೆವೆಲ್‌ ಎಷ್ಟಿದೆ? ರೋಗ ನಿರೋಧಕ ಶಕ್ತಿ ಕಡಿಮೆಯಾಗಿದ್ಯಾ, ಚೆಕ್‌ ಮಾಡ್ಕೊಳ್ಳಿ!

By Kannadaprabha NewsFirst Published Jul 30, 2020, 9:37 AM IST
Highlights

ಕೋವಿಡ್‌ ಬಂದಮೇಲೆ ಇಮ್ಯುನಿಟಿ ಬೂಸ್ಟರ್‌ಗಳದ್ದೇ ಮಾತು. ಹೆಚ್ಚು ಕಡಿಮೆ ಎಲ್ಲರಿಗೂ ತಮ್ಮ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಸಾಕಷ್ಟಿದೆಯಾ ಅಂತ ಅನುಮಾನ ಇದ್ದೇ ಇದೆ. ನಿಮ್ಮ ಸಂದೇಹ ಪರಿಹರಿಸುವ ಪ್ರಯತ್ನ ಇಲ್ಲಿದೆ.

ರೋಗನಿರೋಧಕತೆ ಕಡಿಮೆ ಆಗಿರುವುದರ 5 ಲಕ್ಷಣಗಳು

1. ಯಾವಾಗಲೂ ನೆಗಡಿ

ಯಾವತ್ತೋ ಒಮ್ಮೆ ಆಗುವ ನೆಗಡಿ ರೋಗ ನಿರೋಧಕತೆ ಕಡಿಮೆಯಾಗಿರೋದರ ಲಕ್ಷಣ ಅಲ್ಲ. ಆದರೆ ಕೆಲವರಿಗೆ ಶೀತ, ನೆಗಡಿ ಯಾವಾಗಲೂ ಇರುತ್ತೆ. ಇನ್ನೂ ಕೆಲವರಿಗೆ ವಾರಕ್ಕೊಮ್ಮೆ, ಹದಿನೈದು ದಿನಕ್ಕೊಮ್ಮೆ ಕಾಣಿಸುತ್ತೆ. ರೋಗ ನಿರೋಧಕ ಶಕ್ತಿ ಕುಸಿದಿರೋದರ ಲಕ್ಷಣ ಇದು. ಈ ನೆಗಡಿ ಶೀತ ನಮ್ಮ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತೆ. ಒಮ್ಮೆ ಶೀತವಾದರೆ ಮತ್ತೆ ಇಮ್ಯೂನಿಟಿ ಹೆಚ್ಚಾಗಲು ನಾಲ್ಕರಿಂದ ಏಳು ದಿನ ಬೇಕು.

2. ಹೊಟ್ಟೆಯ ಸಮಸ್ಯೆಗಳು

ಗ್ಯಾಸ್ಟ್ರಿಕ್‌, ಮಲಬದ್ಧತೆ, ಆಗಾಗ ಬರುವ ಡಯೇರಿಯಾ ಅಥವಾ ಅತಿಸಾರದಂಥಾ ಹೊಟ್ಟೆ, ಕರುಳಿಗೆ ಸಂಬಂಧಿಸಿದ ಸಮಸ್ಯೆಗಳು ಆಗಾಗ ಉಂಟಾಗುತ್ತಿದ್ದರೆ ಕೇರ್‌ಫುಲ್‌ ಆಗಿರಿ. ಇದು ದೇಹದಲ್ಲಿ ಇಮ್ಯುನಿಟಿ ದುರ್ಬಲವಾಗುತ್ತಿರುವುದರ ಸಂಕೇತ.

ಇಮ್ಯುನಿಟಿ ಹೆಚ್ಚಿಸಿಕೊಳ್ಳಲು ಸೆಲೆಬ್ರಿಟಿಗಳೇನು ಮಾಡ್ತಾರೆ?

3. ಗಾಯಗಳು ಬೇಗ ವಾಸಿಯಾಗಲ್ಲ

ತರಚಿದ ಗಾಯಗಳು, ತರಕಾರಿ ಕಟ್‌ ಮಾಡುವಾಗ ಹರಿತದ ಚೂರಿಯಿಂದಾದ ಗಾಯ, ಕೆರೆದುಕೊಂಡ ಗಾಯ ಇತ್ಯಾದಿ ಬೇಗ ವಾಸಿಯಾಗ್ತಿಲ್ಲ ಅಂದರೆ ಇಮ್ಯೂನಿಟಿ ಬಗ್ಗೆ ಯೋಚಿಸಬೇಕಾದ ಟೈಮ್‌ ಬಂದಿದೆ ಅಂತರ್ಥ. ರೋಗ ನಿರೋಧಕತೆ ಚೆನ್ನಾಗಿದ್ರೆ ನ್ಯೂಟ್ರಿಯೆಂಟ್‌ ಅಥವಾ ಪೌಷ್ಟಿಕಾಂಶ ಹೆಚ್ಚಿರುವ ರಕ್ತ ಗಾಯವಾದ ಭಾಗಕ್ಕೆ ಪೂರೈಕೆಯಾಗಿ ಬೇಗ ಹೊಸ ಚರ್ಮ ಬರುತ್ತೆ.

4. ಪದೇ ಪದೇ ಇನ್‌ಫೆಕ್ಷನ್‌ಗಳು

ವರ್ಷದಲ್ಲಿ ನಾಲ್ಕು ಸಲಕ್ಕಿಂತ ಹೆಚ್ಚು ಕಿವಿಯ ಇನ್‌ಫೆಕ್ಷನ್‌ ಆಗಬಹುದು, ವರ್ಷದಲ್ಲಿ ಎರಡು ಬಾರಿ ನ್ಯುಮೋನಿಯಾ ಆಗಬಹುದು, ಸೈನಸ್‌ನಂಥಾ ಸಮಸ್ಯೆ ಹೆಚ್ಚಾಗಬಹುದು, ವರ್ಷಕ್ಕೆ ಎರಡಕ್ಕಿಂತ ಅಧಿಕ ಬಾರಿ ಆ್ಯಂಟಿ ಬಯಾಟಿಕ್‌ ಸೇವಿಸುವ ಸಂದರ್ಭ ಬಂದಿರಬಹುದು, ಇದು ಇಮ್ಯುನಿಟಿ ಕುಂದುತ್ತಿರುವ ಅಪಾಯಕಾರಿ ಎಚ್ಚರಿಕೆ.

5. ನಿರಂತರ ಬಳಲಿಕೆ

ಹೆಚ್ಚಾಗುವ ಒತ್ತಡ ಸಹ ಇಮ್ಯುನಿಟಿ ಕಡಿಮೆ ಆಗ್ತಿರೋದರ ಸಂಕೇತ. ಜೊತೆಗೆ ಕೂತ್ರೆ ನಿಂತ್ರೆ ಸುಸ್ತು. ಯಾವ ಕೆಲಸದಲ್ಲೂ ಉತ್ಸಾಹವೇ ಇಲ್ಲ. ಇಂಥ ಮನಸ್ಥಿತಿಯಲ್ಲಿ ಯಾವುದೇ ಕ್ಷೇತ್ರದಲ್ಲಾದರೂ ಯಶಸ್ವಿಯಾಗೋದು ಕಷ್ಟ. ಹೀಗಾಗಿ ಖಿನ್ನತೆಯೂ ಇಂಥವರಿಗೆ ಶತ್ರುವಿನಂತೆ ಕಾಡುತ್ತದೆ.

ಇಮ್ಯುನಿಟಿ ಕಡಿಮೆ ಇದ್ರೆ ಈ 5 ಅಂಶ ಪಾಲಿಸಿ

1. ಬ್ಯಾಲೆನ್ಸ್ಡ್ ಡಯೆಟ್‌

ಬರೀ ಬೇಯಿಸಿದ ಆಹಾರ, ಬಿಳಿ ಅನ್ನ ಇತ್ಯಾದಿ ಒಳ್ಳೆಯದಲ್ಲ. ಮೊಳಕೆ ಕಾಳು, ಒಣ ಹಣ್ಣು, ಕರ್ಜೂರ ಸೇವನೆ ಹೆಚ್ಚಿಸಿ. ಊಟದಲ್ಲಿ ಸಮತೋಲನ ಇರಲಿ. ಅರ್ಧ ಭಾಗ ಬೇಯಿಸಿದ ಆಹಾರ ಇದ್ರೆ, ಇನ್ನರ್ಧ ಹಸಿ ತರಕಾರಿ, ಹಣ್ಣುಗಳಿರಲಿ.

ಬಿಟೌನ್ ಬೆಡಗಿಯರ ಇಮ್ಯೂನಿಟಿ ಮಂತ್ರ, ಹೀಗ್ ಮಾಡಿ ಸ್ಟ್ರಾಂಗ್ ಆಗಿ

2. ನಿದ್ದೆ ಮಿಸ್‌ ಆಗದಿರಲಿ

ಆಧುನಿಕ ಲೈಫ್‌ಸ್ಟೈಲ್‌ನಲ್ಲಿ ನಿದ್ದೆ ಬಗ್ಗೆ ತಲೆಕೆಡಿಸಿಕೊಳ್ಳುವವರು ಕಡಿಮೆ. ಲೇಟ್‌ ನೈಟ್‌ ನಿದ್ದೆಯಿಂದ ಅನೇಕ ದೈಹಿಕ, ಮಾನಸಿಕ ಸಮಸ್ಯೆ ಹೆಚ್ಚಾಗ್ತಿದೆ. ಒಂದು ಕಂಫರ್ಟ್‌ ನಿದ್ರಾ ಟೈಮ್‌ ಫಿಕ್ಸ್‌ ಮಾಡಿಕೊಳ್ಳಿ. ಅದನ್ನೇ ಮೈಂಟೇನ್‌ ಮಾಡಿ. ನಿಮ್ಮ ದೇಹಕ್ಕೆಷ್ಟುನಿದ್ದೆ ಬೇಕು ಅನ್ನೋದರ ಬಗ್ಗೆ ನಿಮಗೆ ಅರಿವಿದ್ದೇ ಇರುತ್ತದೆ. ಅದನ್ನು ಪಾಲಿಸಿ. ಇದರಿಂದ ಇಮ್ಯುನಿಟಿಯೂ ಹೆಚ್ಚುತ್ತೆ.

3. ವ್ಯಾಯಾಮ ಮಿಸ್‌ ಮಾಡಲೇ ಬೇಡಿ

ವ್ಯಾಯಾಮದಿಂದ ನಮ್ಮ ಸ್ನಾಯು, ಮೂಳೆಗಳು ಮಾತ್ರವಲ್ಲ, ಮಿದುಳೂ ಚೈತನ್ಯ ಪಡೆಯುತ್ತೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ. ಎಕ್ಸರ್‌ಸೈಸ್‌ ನಿಯಮಿತವಾಗಿ ಮಾಡುತ್ತಿದ್ದರೆ ಆಯಾಸ ಕಡಿಮೆಯಾಗಿ ಚಟುವಟಿಕೆಯಿಂದಿರುತ್ತೀರಿ.

4. ಸ್ಟೆ್ರಸ್‌ ನಿಭಾಯಿಸಲು ಕಲಿಯಿರಿ.

ಒತ್ತಡ ಆಗೋದಲ್ಲ, ನಾವು ಮಾಡ್ಕೊಳ್ಳೋದು. ಗ್ಯಾಜೆಟ್ಸ್‌ಗೆ ಕೊಡೋ ಟೈಮ್‌ಅನ್ನು ಕಡಿಮೆ ಮಾಡ್ತಾ ಬಂದರೆ ಉಳಿದೆಲ್ಲ ಕೆಲಸ ಕರೆಕ್ಟ್ ಟೈಮ್‌ಗೆ ಆಗುತ್ತೆ. ನಿಮ್ಮಿಂದಾಗುವಷ್ಟುಕೆಲಸ ಮಾತ್ರ ಮಾಡಿ. ಕೆಲಸ ಹಂಚುವ ಅಭ್ಯಾಸವನ್ನೂ ಮಾಡಬೇಕು. ಎಲ್ಲಕ್ಕಿಂತ ಮುಖ್ಯ ಕೆಲಸವನ್ನು ಪ್ರೀತಿಸಿ, ಆಗ ಸ್ಟೆ್ರಸ್‌ ಆಗಲ್ಲ.

5. ಬಿಸಿಲು ಮೈ ಮೇಲೆ ಬೀಳುತ್ತಿರಲಿ.

ಹೆಚ್ಚಿನ ಆರೋಗ್ಯ ಸಮಸ್ಯೆ, ಮಾನಸಿಕ ಸಮಸ್ಯೆಗೆ ಬಿಸಿಲು ಮೈ ಮೇಲೆ ಬೀಳದೇ ಇರೋದು ಕಾರಣವಾಗುತ್ತೆ. ದಿನದ ಅರ್ಧ ಗಂಟೆ ಬಿಸಿಲಲ್ಲಿ ನಿಲ್ಲಲೇ ಬೇಕು. ಇಲ್ಲವಾದರೆ ವಿಟಮಿನ್‌ ಡಿ ಕೊರತೆಯಾಗಿ ನೆಗಡಿ, ಶೀತ ಹೆಚ್ಚುತ್ತೆ. ಇಮ್ಯುನಿಟಿ ಕಡಿಮೆಯಾಗುತ್ತೆ.

click me!