ವೈದ್ಯರು ರೋಗಿಯ ಜೀವವನ್ನು ಉಳಿಸೋ ದೇವರು. ಆದರೆ ಕೆಲವೊಮ್ಮೆ ವೈದ್ಯರಿಂದಲೂ ಎಡವಟ್ಟಾಗುತ್ತದೆ. ವ್ಯಕ್ತಿಯ ಜೀವಕ್ಕೂ ತೊಂದರೆಯಾಗುತ್ತೆ. ಆದ್ರೆ ಇಲ್ಲಿ ಆಗಿರೋದು ಅಂತಿಂಥಾ ಎಡವಟ್ಟಲ್ಲ. ವೈದ್ಯರು ವ್ಯಕ್ತಿಗೆ ಕ್ಯಾನ್ಸರ್ ಗಡ್ಡೆಯಿದೆ ಎಂದು ಹೇಳಿ ಗುಪ್ತಾಂಗವನ್ನೇ ಕತ್ತರಿಸಿದ್ದಾರೆ.
ವೈದ್ಯೋ ನಾರಾಯಣೋ ಹರಿ ಅನ್ನೋ ಮಾತೇ ಇದೆ. ಯಾಕೆಂದರೆ ವೈದ್ಯರು ರೋಗಿಗಳ ಜೀವವನ್ನು ಉಳಿಸುತ್ತಾರೆ. ಸಮಸ್ಯೆಯನ್ನು ಬಗೆಹರಿಸಿ ಆರೋಗ್ಯವಂತರನ್ನಾಗಿ ಮಾಡುತ್ತಾರೆ. ಆದರೆ ವೈದ್ಯರ ಕೈಯಿಂದಲೂ ಕೆಲವೊಮ್ಮೆ ಸಣ್ಣ ಪುಟ್ಟ ತಪ್ಪುಗಳಾಗುತ್ತವೆ. ಆದರೆ ಇಲ್ಲಾಗಿರುವುದು ಸಣ್ಣಪುಟ್ಟ ತಪ್ಪಲ್ಲ, ದೊಡ್ಡ ಎಡವಟ್ಟು. ಮನುಷ್ಯರು ಅಂದ್ಮೇಲೆ ಪ್ರತಿಯೊಬ್ಬರಿಂದಲೂ ತಪ್ಪುಗಳಾಗುತ್ತವೆ. ಅದು ಸಹಜ. ಅವರು ಯಾವ ಹುದ್ದೆಯಲ್ಲಿದ್ದಾರೂ ಸರಿ. ತಿಳಿದೋ, ತಿಳಿಯದೆಯೋ ತಪ್ಪುಗಳನ್ನು ಮಾಡಿಬಿಡುತ್ತಾರೆ. ಆದರೆ ಇದನ್ನು ಕೆಲವು ನಿರ್ಧಿಷ್ಟ ಕ್ಷೇತ್ರದವರು ಮಾಡಿದರೆ ಮಾತ್ರ ದೊಡ್ಡ ಎಡವಟ್ಟಾಗೋದು ಖಂಡಿತ.
ವೈದ್ಯರು, ಪೊಲೀಸರು, ಲಾಯರ್ ಮೊದಲಾದವರು ಈ ಕೆಟಗರಿಯಲ್ಲಿ ಬರುತ್ತಾರೆ. ಸದ್ಯ ವೈದ್ಯರೊಬ್ಬರು ಮಾಡಿದ ಎಡವಟ್ಟಿನಿಂದ ರೋಗಿಯೊಬ್ಬರು ನರಳುವಂತಾಗಿದೆ. ಅಷ್ಟಕ್ಕೂ ಅಲ್ಲಿ ನಡೆದಿರೋದೇನು, ವೈದ್ಯರು ಮಾಡಿರೋ ಎಡವಟ್ಟೇನು ಎಂದು ತಿಳಿದರೆ ನಿಮಗೂ ಗಾಬರಿಯಾಗೋದು ಖಂಡಿತ. ಇಟಲಿಯಲ್ಲಿ ವೈದ್ಯರೊಬ್ಬರು ವ್ಯಕ್ತಿಗೆ ಕ್ಯಾನ್ಸರ್ ಗಡ್ಡೆ ಇದೆ ಎಂದು ಹೇಳಿ ಗುಪ್ತಾಂಗವನ್ನೇ (Penis) ಕತ್ತರಿಸಿ ಬಳಿಕ ಕ್ಯಾನ್ಸರ್ ಇಲ್ಲ ಎಂದು ಹೇಳಿರುವ ಘಟನೆ ನಡೆದಿದೆ. ವೈದ್ಯರು ನೀಡಿರುವ ಸಲಹೆಯಂತೆ, ಟ್ಯೂಮರ್ ಇರುವ ಶಂಕೆ ಮೇರೆಗೆ ರೋಗಿಯು (Patient) ಗುಪ್ತಾಂಗದ ಶಸ್ತ್ರ ಚಿಕಿತ್ಸೆ (Surgery) ಮಾಡಿಸಿಕೊಳ್ಳಲು ಒಪ್ಪಿಕೊಂಡಿದ್ದರು. ಆದರೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ಗಡ್ಡೆಯಿಲ್ಲವೆಂದು ಹೇಳಿದ್ದಾರೆ.
undefined
ಮದ್ವೆ ಅಂತ ಎಕ್ಸಾಂ ಮಿಸ್ ಮಾಡೋಕಾಗುತ್ತಾ..ಚಿಕ್ಕಂದಿನಲ್ಲೇ ವೈದ್ಯೆಯಾಗುವ ಕನಸು ಕಂಡಿದ್ದ ಕೇರಳದ ವಧು
ಗುಪ್ತಾಂಗದಲ್ಲಿ ನೋವು ಕಾಣಿಸಿಕೊಂಡಿದ್ದ ಕಾರಣ ವೈದ್ಯರನ್ನು ಸಂಪರ್ಕಿಸಿದ್ದ ವ್ಯಕ್ತಿ
ಇಟಲಿಯ ವ್ಯಕ್ತಿಗೆ ಕೆಲ ದಿನಗಳಿಂದ ಗುಪ್ತಾಂಗದಲ್ಲಿ ನೋವು ಕಾಣಿಸಿಕೊಳ್ಳುತ್ತಿತ್ತು. ಪದೇ ಪದೇ ನೋವು ಕಾಣಿಸಿಕೊಳ್ಳುತ್ತಿದ್ದ ಕಾರಣ ವೈದ್ಯರನ್ನು ಸಂಪರ್ಕಿಸಿದ್ದರು ವೈದ್ಯರು ಹಲವು ಪರೀಕ್ಷೆಗಳನ್ನು ಮಾಡಿದ ಬಳಿಕ ಗುಪ್ತಾಂಗದಲ್ಲಿ ಗಡ್ಡೆ ಬೆಳೆದಿದೆ ಶಸ್ತ್ರ ಚಿಕಿತ್ಸೆ ಮಾಡಿಯೇ ತೆಗೆಯಬೇಕು ಎಂದು ಹೇಳಿದ್ದರು. ವ್ಯಕ್ತಿ ಅದಕ್ಕೊಪ್ಪಿ ಶಸ್ತ್ರಚಿಕಿತ್ಸೆ ನಡೆಸಿದರೆ, ಯಾವುದೇ ರೀತಿಯ ಗಡ್ಡೆಯೇ ಇರಲಿಲ್ಲ ಎನ್ನುವ ವಿಚಾರ ನಂತರ ತಿಳಿದುಬಂದಿದೆ.
60 ವರ್ಷದ ವ್ಯಕ್ತಿಗೆ ಸಿಫಿಲಿಸ್ ಇತ್ತು ಅದನ್ನು ಔಷಧಿಗಳಿಂದ (Medicine) ಗುಣಪಡಿಸಬಹುದಿತ್ತು. ಇದಕ್ಕೆ ಸರ್ಜರಿ ಮಾಡಬೇಕಾಗಿರಲ್ಲಿಲ್ಲ. ಆದರೆ ವೈದ್ಯರ ಎಡವಟ್ಟಿನಿಂದ ವ್ಯಕ್ತಿ ಗುಪ್ತಾಂಗವನ್ನೇ ಕಳೆದುಕೊಳ್ಳಬೇಕಾಯಿತು. ಇಟಲಿಯ ಆರೋಗ್ಯ ಇಲಾಖೆಯು ವೈದ್ಯರ ವಿರುದ್ಧ ತನಿಖೆ ಆರಂಭಿಸಿದೆ. ಮಾರ್ಚ್ 9ರಂದು ಪ್ರಕರಣದ ವಿಚಾರಣೆ ನಡೆಯಲಿದೆ. ಕಳೆದ ವರ್ಷ ಯುರೋಪ್ನಲ್ಲಿ ಇಂಥದ್ದೇ ಘಟನೆ ನಡೆದಿತ್ತು, ವೈದ್ಯರ ನಿರ್ಲಕ್ಷ್ಯದಿಂದ ಶಸ್ತ್ರ ಚಿಕಿತ್ಸೆಯಲ್ಲಿ ರೋಗಿಯ ಜನನಾಂಗವನ್ನೇ ತೆಗೆದುಹಾಕಲಾಯಿತು. ರೋಗಿಯು ಕೋರ್ಟ್ ಮೆಟ್ಟಿಲೇರಿದಾಗ ವ್ಯಕ್ತಿಗೆ 62,000 ಯೂರೋ ಪರಿಹಾರವನ್ನು ಪಾವತಿಸಲು ಆದೇಶಿಸಲಾಯಿತು.
ಭರ್ತಿ ಮೂರು ಗಂಟೆ ಸ್ತಬ್ಧವಾಗಿತ್ತು ಮಗುವಿನ ಹೃದಯ, ಬದುಕಿ ಬಂದಿದ್ದೇ ಪವಾಡ!
ಎಡಗಾಲಿನಲ್ಲಿ ನೋವಿದ್ದ ಮಹಿಳೆಯ ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ ಡಾಕ್ಟರ್ಸ್!
ಕೇರಳದ ಕಕ್ಕೋಡಿಯ ಸಜಿನಾ ಸುಕುಮಾರನ್ (60) ಅವರು ತಮ್ಮ ಎಡಗಾಲಿನ ಹಿಮ್ಮಡಿಯ ನರಕ್ಕೆ ಗಾಯವಾಗಿತ್ತೆಂದು ಮಾವೂರು ರಸ್ತೆಯಲ್ಲಿರುವ ರಾಷ್ಟ್ರೀಯ ಆಸ್ಪತ್ರೆಯ ಡಾ.ಬೆಹಿರ್ಶನ್ ಅವರ ಬಳಿ ಚಿಕಿತ್ಸೆ (Treatment) ಪಡೆದುಕೊಂಡಿದ್ದರು. ಆ ನಂತರ ಶಸ್ತ್ರ ಚಿಕಿತ್ಸೆ ಮಾಡಿಕೊಂಡ ಸುಜಿನಾಗೆ ಆಘಾತವಾಗಿತ್ತು. ಯಾಕಂದ್ರೆ ರೋಗಿ (Patient) ಹೇಳಿದ್ದೇ ಒಂದು, ವೈದ್ಯ ಮಾಡಿದ್ದೇ ಇನ್ನೊಂದು ಎಂಬಂತಾಗಿತ್ತು ಪರಿಸ್ಥಿತಿ.
ಕಕ್ಕೋಡಿಯ ಸಜಿನಾ ಸುಕುಮಾರನ್ ತಮ್ಮ ಎಡಗಾಲಿನ ಹಿಮ್ಮಡಿಯ ನರಕ್ಕೆ ಗಾಯವಾಗಿತ್ತೆಂದು ಮಾವೂರು ರಸ್ತೆಯಲ್ಲಿರುವ ರಾಷ್ಟ್ರೀಯ ಆಸ್ಪತ್ರೆಯ ಡಾ.ಬೆಹಿರ್ಶನ್ ಅವರ ಬಳಿ ಚಿಕಿತ್ಸೆ ಪಡೆಡಿದ್ದರು. ನಂತರ ಶಸ್ತ್ರ ಚಿಕಿತ್ಸೆ (Operation) ಮಾಡಿಸಿಕೊಳ್ಳಲು ಬಂದಿದ್ದರು. ಆದರೆ ಆಪರೇಷನ್ ಮುಗಿದ ನಂತರ ವೈದ್ಯರು (Doctors) ನೋಡಿದರೆ ಸುಜಿನಾ ಎಡಗಾಲಿನ ಬದಲು ಬಲಗಾಲಿಗೆ ಆಪರೇಷನ್ ಮಾಡಿರುವುದು ತಿಳಿದುಬಂದಿದೆ.