ಭರ್ತಿ ಮೂರು ಗಂಟೆ ಸ್ತಬ್ಧವಾಗಿತ್ತು ಮಗುವಿನ ಹೃದಯ, ಬದುಕಿ ಬಂದಿದ್ದೇ ಪವಾಡ!
ವೈದ್ಯಕೀಯ ಲೋಕ ಹಲವು ಅಚ್ಚರಿಗಳ ಆಗರ. ಇನ್ನೇನು ಬದುಕೋದೆ ಇಲ್ಲ ಎಂದು ಅಂದುಕೊಂಡವರು ಸಹ ಕೊನೇ ಕ್ಷಣದಲ್ಲಿ ಬದುಕಿ ಬರುತ್ತಾರೆ. ಅಂಥಹದ್ದೇ ಘಟನೆಯೊಂದು ಕೆನಡಾದಲ್ಲಿ ನಡ್ದಿದೆ. ಹೃದಯ ಸ್ತಬ್ಧಗೊಂಡಿದ್ದ ಮಗು ಪವಾಡಸದೃಶವಾಗಿ ಬದುಕಿ ಬಂದಿದೆ.
ಕಾಲ ಬದಲಾದಂತೆ ಆರೋಗ್ಯ ಸಮಸ್ಯೆಗಳು ಸಹ ಹೆಚ್ಚಾಗುತ್ತಿವೆ. ವೈದ್ಯಕೀಯ ಲೋಕಕ್ಕೇ ಸವಾಲೊಡ್ಡುವಂಥಹಾ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಆದರೆ ವೈದ್ಯಕೀಯ ಲೋಕ ಹಲವು ಅಚ್ಚರಿಗಳ ಆಗರ. ಇನ್ನೇನು ಬದುಕೋದೆ ಇಲ್ಲ ಎಂದು ಅಂದುಕೊಂಡವರು ಸಹ ಕೊನೇ ಕ್ಷಣದಲ್ಲಿ ಬದುಕಿ ಬರುತ್ತಾರೆ. ವೈದ್ಯರ ತಂಡ ಶತಾಯಗತಾಯ ಪ್ರಯತ್ನ ಮಾಡಿ ರೋಗಿಗಳ ಜೀವವನ್ನು ಉಳಿಸುತ್ತದೆ. ಅಂಥಹದ್ದೇ ಘಟನೆಯೊಂದು ಕೆನಡಾದಲ್ಲಿ ನಡ್ದಿದೆ. ಹೃದಯ ಸ್ತಬ್ಧಗೊಂಡಿದ್ದ ಮಗು ವೈದ್ಯರ ಪ್ರಯತ್ನದಿಂದ ಪವಾಡಸದೃಶವಾಗಿ ಬದುಕಿ ಬಂದಿದೆ. ವೈದ್ಯರ ತಂಡದ ಕಾರ್ಯಕ್ಕೆ ಮಗುವಿನ ಪೋಷಕರು, ಸಂಬಂಧಿಕರು ಮೆಚ್ಚುಗೆ ಸೂಚಿಸಿದ್ದಾರೆ.
ಅಂಬೆಗಾಲಿಡುವ ಮಕ್ಕಳನ್ನು ತುಂಬಾ ಜೋಪಾನದಿಂದ ನೋಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಈ ವಯಸ್ಸಿನಲ್ಲಿ ಮಕ್ಕಳು ಅಂಬೆಗಾಲಿಡುತ್ತಲೇ ಓಡಾಡಿ ಎಲ್ಲೆಂದರಲ್ಲಿ ಬಿದ್ದು ಬಿಡುತ್ತಾರೆ. ಹಾಗೆಯೇ ಇಲ್ಲೊಂದು ಮಗು ಅಂಬೆಗಾಲಿಡುತ್ತಲೇ ಹೋಗಿ ಸ್ವಿಮ್ಮಿಂಗ್ ಪೂಲ್‌ಗೆ ಬಿದ್ದಿದ್ದು, ಹೃದಯ ಬಡಿತವೇ ನಿಂತು ಹೋಗಿತ್ತು. ಆದರೆ ಇನ್ನೇನು ಬದುಕೋದೆ ಇಲ್ಲ ಎಂದು ಅಂದುಕೊಂಡಿದ್ದ ಮಗುವನ್ನು ಇಲ್ಲೊಂದು ವೈದ್ಯರ ತಂಡ ಬದುಕಿಸಿದೆ. ಈ ಅಂಬೆಗಾಲಿಡುವ ಮಗುವಿನ ಹೃದಯವು (Heart) ಮೂರು ಗಂಟೆಗಳ ಕಾಲ ನಿಂತುಹೋಗಿತ್ತು. ಆದರೆ ವೈದ್ಯರ ತಂಡವು (Doctors team) ಆತನ ಜೀವವನ್ನು ಉಳಿಸಿದೆ.
ಸುಬಿ ಸುರೇಶ್ ಸಾವಿಗೆ ಕಾರಣ ಯಕೃತ್ತಿನ ಕಾಯಿಲೆ, ಜೀವಕ್ಕೆ ಅಪಾಯವಾಗೋ ಮುನ್ನ ತಡೆಗಟ್ಟೋದು ಹೇಗೆ ?
ಸ್ವಿಮ್ಮಿಂಗ್ ಪೂಲ್‌ಗೆ ಬಿದ್ದಿದ್ದ ಮಗುವನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಜನವರಿ 24ರಂದು ಕೆನಡಾದ ನೈಋತ್ಯ ಒಂಟಾರಿಯೊದ ಪೆಟ್ರೋಲಿಯಾದಲ್ಲಿನ ಹೋಮ್ ಡೇಕೇರ್‌ನಲ್ಲಿ 20 ತಿಂಗಳ ಮಗು ಹೊರಾಂಗಣ ಪೂಲ್‌ಗೆ ಬಿದ್ದಿತ್ತು. ಅಗ್ನಿಶಾಮಕ ಸಿಬ್ಬಂದಿ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ (Hospital) ಕರೆತಂದಾಗ ಮಗು ಚಲಿಸುತ್ತಿರಲ್ಲಿಲ್ಲ. ಷಾರ್ಲೆಟ್ ಎಲೀನರ್ ಎಂಗಲ್ಹಾರ್ಟ್ ಆಸ್ಪತ್ರೆ. ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ, ಆರಾಧ್ಯ ಮಗುವನ್ನು ಉಳಿಸಲು ನಿರಂತರ ಪ್ರಯತ್ನ ಮಾಡಿದರು. ಪೆಟ್ರೋಲಿಯಾ ಲಂಡನ್‌ನಿಂದ 100 ಕಿಲೋಮೀಟರ್ ದೂರದಲ್ಲಿದೆ ಮತ್ತು ಆಸ್ಪತ್ರೆಯಲ್ಲಿ ಗಮನಾರ್ಹ ಮಕ್ಕಳ ಆಸ್ಪತ್ರೆಯ ಸಂಪನ್ಮೂಲಗಳು ಮತ್ತು ಸಿಬ್ಬಂದಿ ಕೊರತೆಯಿದೆ. ಆ ದಿನ ಲ್ಯಾಬ್ ಕೆಲಸಗಾರರು ಮತ್ತು ದಾದಿಯರು ಸೇರಿದಂತೆ ಎಲ್ಲರೂ ತಾವು ಮಾಡುವುದನ್ನು ನಿಲ್ಲಿಸಿದರು ಮತ್ತು ವೇಲಾನ್ ಅನ್ನು ಪುನರುಜ್ಜೀವನಗೊಳಿಸುವ ಕಾರ್ಯದಲ್ಲಿ ಸಹಾಯ ಮಾಡಲು ಪ್ರಾರಂಭಿಸಿದರು. ಸತತ ಮೂರು ಗಂಟೆಗಳ ಕಾಲ ಮಗುವಿಗೆ ಸಿಪಿಆರ್ ಅನ್ನು ಪರ್ಯಾಯವಾಗಿ ನೀಡಿದರು.
ಸಂಪೂfಣ ವೈದ್ಯರ ತಂಡದ ಚಿಕಿತ್ಸೆಯಿಂದ ಬದುಕುಳಿದ ಮಗು
'ಇದು ನಿಜವಾಗಿಯೂ ಒಂದು ತಂಡದ ಪ್ರಯತ್ನವಾಗಿತ್ತು: ಲ್ಯಾಬ್ ಟೆಕ್‌ಗಳು ಒಂದು ಹಂತದಲ್ಲಿ ಕೋಣೆಯಲ್ಲಿ ಪೋರ್ಟಬಲ್ ಹೀಟರ್‌ಗಳನ್ನು ಹಿಡಿದಿದ್ದರು; ಇಎಮ್‌ಎಸ್ ಸಿಬ್ಬಂದಿ ಕೂಡ ಕಂಪ್ರೆಸರ್‌ಗಳ ಮೂಲಕ ತಿರುಗುವ ಮೂಲಕ ಮತ್ತು ಅವರ ವಾಯುಮಾರ್ಗವನ್ನು ನಿರ್ವಹಿಸುವಲ್ಲಿ ಸಹಾಯ ಮಾಡಿದರು. ದಾದಿಯರು ಮಗುವಿನ ದೇಹ ಬೆಚ್ಚಗಾಗಲು ಸಹಾಯ ಮಾಡಲು ಮೈಕ್ರೋವೇವ್ ನೀರಿಗೆ ಓಡುತ್ತಿದ್ದರು' ಎಂದು ಡಾ. ಟೇಲರ್ ವಿವರಿಸುತ್ತಾರೆ. ಕೊನೆಯಲ್ಲಿ ಸಂಪೂರ್ಣ ವೈದ್ಯರ ತಂಡದ ಪ್ರಯತ್ನದಿಂದ ಮಗುವನ್ನು ಯಶಸ್ವಿಯಾಗಿ ರಕ್ಷಿಸಲಾಯಿತು.
ನಿನ್ನಂಥಾ ಕಂದ ಇಲ್ಲ..ಅನಾರೋಗ್ಯಕ್ಕೀಡಾದ ಅಮ್ಮನಿಗೆ ಊಟ ತಯಾರಿಸಿದ ಪುಟ್ಟ ಮಗ
ಮಗುವನ್ನು ಫೆಬ್ರವರಿ 6ರಂದು ಆಸ್ಪತ್ರೆಯಿಂದ ಡಿಸ್ಚಾರ್ಚ್ ಮಾಡಲಾಯಿತು. ಈಗ ಮನೆ ಮಂದಿಯ ಆರೈಕೆಯಲ್ಲಿ ಮಗು ಚೇತರಿಸಿಕೊಳ್ಳುತ್ತಿದೆ. 'ಪ್ರತಿಯೊಬ್ಬರೂ ತಮ್ಮ ಕೌಶಲ್ಯಗಳನ್ನು ಬಳಸಿದರು, ಮತ್ತು ನಾವು ನಿಜವಾಗಿಯೂ ತಂಡವಾಗಿ ಕೆಲಸ ಮಾಡಿದ್ದೇವೆ. ಹೀಗಾಗಿ ಉತ್ತಮ ಫಲಿತಾಂಶ ಬಂದಿದೆ' ಎಂದು ವೈದ್ಯರ ತಂಡ ತಿಳಿಸಿದೆ.
ಅಣ್ಣ-ತಂಗಿ ನಡುವೆ ಸೆಕ್ಸ್ ಓಕೇನಾ? ಪಾಕ್ ವಿವಿ ಪ್ರಶ್ನೆಗೆ ಸ್ಟೂಡೆಂಟ್ಸ್ ಕಕ್ಕಾಬಿಕ್ಕಿ!