ಚಳಿಗಾಲ ಶುರುವಾಗಿದೆ. ಈಗೇನಿದ್ರೂ ಬಿಸಿ ಬಿಸಿ, ಖಾರ ಖಾರವಾಗಿ ಏನಾದ್ರೂ ತಿನ್ಬೇಕು ಅನಿಸ್ತಿರುತ್ತೆ. ಹಾಗೇ ಇಲ್ಲೊಬ್ಬ ಮಹಿಳೆ ಮಸಾಲೆಯುಕ್ತ ಖಾರ ತಿನ್ನೋಕೆ ಎಡವಟ್ಟು ಆಗೋಗಿದೆ. ಖಾರ ಹೆಚ್ಚಾಗಿ ಆಕೆ ಕೆಮ್ಮಿದ ಕಾರಣ ಪಕ್ಕೆಲುಬೇ ಮುರಿದು ಹೋಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಆಹಾರಕ್ರಮ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಕೆಲವೊಬ್ಬರು ಸಿಹಿಯಾದ ಪದಾರ್ಥಗಳನ್ನು ತಿನ್ನಲು ಇಷ್ಟಪಟ್ಟರೆ, ಇನ್ನು ಕೆಲವರು ಖಾರ ಖಾರವಾಗಿ (Spicy) ಏನಾದ್ರೂ ತಿನ್ಬೇಕು ಅಂದ್‌ಕೊಳ್ತಾರೆ. ಅದರಲ್ಲೂ ಮಳೆಗಾಲ, ಚಳಿಗಾಲ (Winter) ಬಂತೂಂದ್ರೆ ಹೆಚ್ಚಿನವರು ಖಾರ ತಿನ್ನೋಕೆ ಇಷ್ಟಪಡ್ತಾರೆ. ಇದಲ್ಲದೆಯೂ ಯಾವಾಗಲೂ ಮಸಾಲೆಯುಕ್ತ ಆಹಾರವನ್ನು ಹಂಬಲಿಸುವ ಜನರಿದ್ದಾರೆ ಮತ್ತು ಅದು ಹಲವಾರು ಕಾರಣಗಳಿಂದಾಗಿರಬಹುದು. ಮಸಾಲೆಯುಕ್ತ ಆಹಾರವನ್ನು ಒಮ್ಮೊಮ್ಮೆ ತಿನ್ನುವುದು ಪರವಾಗಿಲ್ಲ ಆದರೆ ನಿತ್ಯವೂ ತಿನ್ನುವುದರಿಂದ ಜೀರ್ಣಕ್ರಿಯೆ (Digestion) ಸಮಸ್ಯೆಗಳು ಉಂಟಾಗಬಹುದು. ಇದು ಅಜೀರ್ಣ, ಅಸಿಡಿಟಿ ಮತ್ತು ಹಲವಾರು ಇತರ ಸಮಸ್ಯೆಗಳನ್ನು ಉಂಟುಮಾಡಬಹುದು.
ಆರೋಗ್ಯದ (Health) ದೃಷ್ಟಿಯಿಂದ ನೋಡುವಾಗ ನೀವು ಆಗೊಮ್ಮೆ ಈಗೊಮ್ಮೆ ಮಾತ್ರ ಮಸಾಲೆಯುಕ್ತ ಆಹಾರವನ್ನು ತಿನ್ನಲು ಸಲಹೆ ನೀಡಲಾಗುತ್ತದೆ. ಇಲ್ಲದಿದ್ದರೆ ಆರೋಗ್ಯ ಸಮಸ್ಯೆ ಕಾಡೋದು ಖಂಡಿತ. ಇದಕ್ಕೆ ಉತ್ತಮ ಉದಾಹರಣೆ ಚೀನಾದಲ್ಲಿ ನಡೆದಿರೋ ಈ ಘಟನೆ. ಚೀನಾದಲ್ಲಿ ಮಹಿಳೆ (Woman)ಯೊಬ್ಬಳು ಮಸಾಲೆಯುಕ್ತ ಆಹಾರಗಳನ್ನು ಸೇವಿಸಿದ ನಂತರ ಕೆಮ್ಮು (Cough) ಕಾಣಿಸಿಕೊಂಡಿದೆ. ಕೆಮ್ಮಿದ ಕಾರಣ ಎದೆಗೂಡಲ್ಲಿ ಶಬ್ದ ಕೇಳಿದ್ದು ಪಕ್ಕೆಲುಬು ಮುರಿದಂತಾಗಿದೆ.
undefined
ಚಳಿಗಾಲದಲ್ಲಿ ಕುಗ್ಗುವ ರಕ್ತನಾಳ, ಹೀಗೆ ಮಾಡಿಲ್ಲಾಂದ್ರೆ ಹಾರ್ಟ್ ಅಟ್ಯಾಕ್ ಗ್ಯಾರಂಟಿ
ಖಾರ ಆಯ್ತೂಂತ ಕೆಮ್ಮಿದ್ದಷ್ಟೆ..ನಾಲ್ಕು ಪಕ್ಕೆಲುಬು ಮುರೀತು
ಹೌದು, ಕೇಳೋಕೆ ಅಚ್ಚರಿಯೆನಿಸಿದರೂ ಇದು ನಿಜ. ಚೀನಾದ ಮಹಿಳೆಯೊಬ್ಬರು ಕೆಮ್ಮಿದ ಕಾರಣ ನಾಲ್ಕು ಪಕ್ಕೆಲುಬುಗಳನ್ನು ಕಳೆದುಕೊಂಡಿದ್ದಾರೆ. ಶಾಂಘೈ ನಿವಾಸಿಯಾಗಿರುವ ಈ ಮಹಿಳೆಯನ್ನು ಹುವಾಂಗ್ ಎಂದು ಗುರುತಿಸಲಾಗಿದ್ದು ಈಗ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಹುವಾಂಗ್‌ಗೆ ಮಸಾಲೆಯುಕ್ತ ಆಹಾರವನ್ನು ಸೇವಿಸಿದ ನಂತರ ಕೆಮ್ಮು (Cought) ಕಾಣಿಸಿಕೊಂಡಾಗ, ಆಕೆಯ ಎದೆಯಲ್ಲಿ ಬಿರುಕು (Crack) ಬೀಳುವ ಶಬ್ದ ಕೇಳಿಸಿತು.
ಆದರೆ ಮಾತನಾಡುವಾಗ ಮತ್ತು ಉಸಿರಾಡುವಾಗ ನೋವು ಅನುಭವಿಸುವವರೆಗೂ ಅವಳು ಅದರ ಬಗ್ಗೆ ಹೆಚ್ಚು ಗಮನ ಹರಿಸಲ್ಲಿಲ್ಲ. ನಂತರ ವೈದ್ಯರನ್ನು ಭೇಟಿಯಾಗಲು ನಿರ್ಧರಿಸಿದಳು. ತಪಾಸಣೆಯ ಸಂದರ್ಭ ಹುವಾಂಗ್ ಅವರ ನಾಲ್ಕು ಪಕ್ಕೆಲುಬುಗಳು ಮುರಿದಿವೆ ಎಂದು CT ಸ್ಕ್ಯಾನ್ ತೋರಿಸಿದೆ. ವೈದ್ಯರು (Doctor) ಆಕೆಯ ಎದೆಗೆ ಬ್ಯಾಂಡೇಜ್ ಹಾಕಿದರು ಮತ್ತು ಆಕೆಯ ಪಕ್ಕೆಲುಬುಗಳು ಗುಣವಾಗಲು ಒಂದು ತಿಂಗಳ ಕಾಲ ವಿಶ್ರಾಂತಿ (Rest) ಪಡೆಯಲು ಸೂಚಿಸಿದರು.
Exercise ಅತಿಯಾದ್ರೆ ಹಾರ್ಟ್ ಅಟ್ಯಾಕ್ ಗ್ಯಾರಂಟಿ, ಅತಿಯಾಗ್ತಿದೆ ಅಂತ ತಿಳ್ಕೊಳ್ಳೋದು ಹೇಗೆ ?
ತೂಕ ಕಡಿಮೆ ಇರೋದ್ರಿಂದ ಆರೋಗ್ಯ ಸಮಸ್ಯೆ ಎಂದ ವೈದ್ಯರು
ಕೆಮ್ಮಿದಾಗ ಪಕ್ಕೆಲುಬು ಮುರಿತಕ್ಕೆ ಹುವಾಂಗ್ ಅವರ ದೇಹದ ತೂಕ (Weight) ಕಡಿಮೆ ಇರುವುದೇ ಮೂಲ ಕಾರಣ ಎಂದು ವೈದ್ಯರು ಹೇಳಿದ್ದಾರೆ. ಹುವಾಂಗ್ 171 ಸೆಂಟಿಮೀಟರ್ ಎತ್ತರ ಮತ್ತು 57 ಕಿಲೋಗ್ರಾಂಗಳಷ್ಟು ಭಾರವಿದ್ದಾರೆ. ನೋಡಲು ತೆಳ್ಳಗಿದ್ದಾರೆ. 'ನಿಮ್ಮ ಪಕ್ಕೆಲುಬುಗಳನ್ನು ನಿಮ್ಮ ಚರ್ಮದ ಅಡಿಯಲ್ಲಿ ಸ್ಪಷ್ಟವಾಗಿ ಕಾಣಬಹುದು. ಮೂಳೆಯನ್ನು ಬೆಂಬಲಿಸಲು ಯಾವುದೇ ಸ್ನಾಯುಗಳಿಲ್ಲ, ಆದ್ದರಿಂದ ಕೆಮ್ಮುವಾಗ ನಿಮ್ಮ ಪಕ್ಕೆಲುಬುಗಳು ಮುರಿತಕ್ಕೆ ಒಳಗಾಗುವುದು ಸುಲಭ' ಎಂದು ವೈದ್ಯರು ತಿಳಿಸಿದ್ದಾರೆ. ಚೇತರಿಸಿಕೊಂಡ ನಂತರ ತನ್ನ ಸ್ನಾಯುವಿನ ದ್ರವ್ಯರಾಶಿ ಮತ್ತು ಮೇಲಿನ ದೇಹದ ತೂಕವನ್ನು ಹೆಚ್ಚಿಸಲು ಹೆಚ್ಚಿನ ದೈಹಿಕ ವ್ಯಾಯಾಮಗಳನ್ನು ಮಾಡುವುದಾಗಿ ಹುವಾಂಗ್ ಹೇಳಿದರು.
ಚಳೀಲಿ ಮಲಬದ್ಧತೆ ಕಾಡೋದು ಕಾಮನ್, ಬಾಳೆ ಹಣ್ಣು ತಿಂದು ಆರೋಗ್ಯ ನೋಡ್ಕಳ್ಳಿ
ಅಷ್ಟೇ ಅಲ್ಲ ಹೆಚ್ಚು ಖಾರವಿರುವ ಆಹಾರ ತಿಂದ್ರೆ ಹೊಟ್ಟೆನೋವು, ಮಲಬದ್ಧತೆ, ಜೀರ್ಣಕಾರಿ ಸಮಸ್ಯೆ, ಅಸಿಡಿಟಿ ಮೊದಲಾದ ಸಮಸ್ಯೆಯೂ ಕಾಡುತ್ತದೆ. ಹೀಗಾಗಿ ಖಾರ ತಿನ್ನೋವಾಗ ಯಾವಾಗಲೂ ಹುಷಾರಾಗಿರಿ.