Uric Acid: ಮಂಡಿನೋವೇ ? ದೇಹದಲ್ಲಿ ಯೂರಿಕ್ ಆಮ್ಲ ಕಡಿಮೆ ಮಾಡೋ ಆಹಾರ ತಿನ್ನಿ

By Suvarna NewsFirst Published Dec 8, 2022, 1:28 PM IST
Highlights

ದೇಹದಲ್ಲಿ ಯೂರಿಕ್ ಆಮ್ಲದ ಸಂಗ್ರಹ ಹೆಚ್ಚಾದಾಗ ಮಂಡಿನೋವು, ಕೀಲುಗಳಲ್ಲಿ ನೋವು ಕಂಡುಬರುತ್ತದೆ. ಚಿಕ್ಕ ವಯಸ್ಸಿನಲ್ಲೂ ಮಂಡಿ ನೋವು ಕಂಡುಬಂದರೆ ಯೂರಿಕ್ ಆಮ್ಲ ಹೆಚ್ಚಾಗುತ್ತಿದೆ ಎಂದರ್ಥ. ಈ ಬಗ್ಗೆ ಗಮನ ನೀಡಿದರೆ ಆಹಾರದಲ್ಲೇ ನಿಯಂತ್ರಣ ಮಾಡಿಕೊಳ್ಳಬಹುದು.

ಮಕ್ಕಳು, ದೊಡ್ಡವರೆನ್ನದೆ ಎಲ್ಲರೂ ಇಷ್ಟಪಟ್ಟು ಕುಡಿಯುವ ಸಾಫ್ಟ್ ಡ್ರಿಂಕ್ಸ್ ಆರೋಗ್ಯಕ್ಕೆ (Health) ಉತ್ತಮವೇನೂ ಅಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಆದರೂ ಅವುಗಳನ್ನು ಕುಡಿಯುವುದು ಕೆಲವರಿಗೆ ಶೋಕಿ, ಕೆಲವರಿಗೆ ಅಭ್ಯಾಸಬಲ. ಈ ಪಾನೀಯಗಳಲ್ಲಿ ಸಕ್ಕರೆ ಅಂಶ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇದು ದೇಹದಲ್ಲಿ ಯೂರಿಕ್ ಆಸಿಡ್ ಅಂಶವನ್ನು ಹೆಚ್ಚಿಸುತ್ತದೆ. ನಿಮಗೆ ಗೊತ್ತಿರಬಹುದು, ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಾಗಲೂಬಾರದು, ಕಡಿಮೆಯೂ ಆಗಬಾರದು. ಯೂರಿಕ್ ಆಸಿಡ್ ಸಮಸ್ಯೆ ಈಗಾಗಲೇ ಇರುವವರಿಗೆ ಅಧಿಕ ಸಕ್ಕರೆ ಸೇವನೆ ಅತ್ಯಂತ ಹಾನಿಕಾರಕವಾಗಿ ಪರಿಣಮಿಸುತ್ತದೆ. ಒಂದೊಮ್ಮೆ ಸಮಸ್ಯೆ ಇಲ್ಲದಿದ್ದರೂ ಆರಂಭವಾಗುವುದು ನಿಶ್ಚಿತ.

ಹೀಗಾಗಿ, ಯೂರಿಕ್ ಆಮ್ಲದ  ಸಮಸ್ಯೆಯಿಂದ ಬಳಲುತ್ತಿರುವವರು ಸಾಫ್ಟ್ ಡ್ರಿಂಕ್ಸ್ ಸೇವನೆ ಮಾಡಲೇಬಾರದು. ಇದೊಂದೇ ಅಲ್ಲ, ಇನ್ನೂ ಕೆಲವು ಪದಾರ್ಥಗಳ ಸೇವನೆಯಿಂದ ದೇಹದಲ್ಲಿ ಯೂರಿಕ್ ಆಸಿಡ್ ಸಮಸ್ಯೆ ಹೆಚ್ಚುತ್ತದೆ. ಅವುಗಳನ್ನು ಸಹ ದೂರವಿಡುವುದು ಉತ್ತಮ. ಇವುಗಳನ್ನು ಕುಡಿಯುವುದು, ತಿನ್ನುವುದರಿಂದ ದೂರವುಳಿದರೆ ತಕ್ಷಣ ಪರಿಣಾಮ ಕಾಣಬಹುದು. ಯೂರಿಕ್ ಆಮ್ಲ ದೇಹದಲ್ಲಿ ಕಂಡುಬರುವ ಅನಗತ್ಯ ಅಥವಾ ಕೊಳಕು ಅಂಶವಾಗಿದೆ. ಇದು ದೇಹದಲ್ಲಿ ಉತ್ಪಾದನೆ ಆಗುವುದಿಲ್ಲ ಎನ್ನುವುದು ವಿಶಿಷ್ಟ. ನಾವು ಯಾವ ರೀತಿಯ ಆಹಾರ ಸೇವನೆ ಮಾಡುತ್ತೇವೆಯೋ ಅದರ ಆಧಾರದ ಮೇಲೆ ದೇಹದಲ್ಲಿ ಸಂಗ್ರಹವಾಗುತ್ತದೆ. 

ಈಗೀಗ ಜನರಲ್ಲಿ ಮಂಡಿನೋವು ಹೆಚ್ಚಲು ಕಾರಣವೇನು ಗೊತ್ತಾ?

ಪ್ಯೂರಿನ್ (Purine) ಭರಿತ ಆಹಾರದಿಂದ ಯೂರಿಕ್ ಆಮ್ಲ (Uric Acid) ಹೆಚ್ಚುತ್ತದೆ. ಯುರೇಟ್ ಹರಳು ಸಂಗ್ರಹವಾಗಿ ರಕ್ತ (Blood) ಮತ್ತು ಮೂತ್ರ (Urine) ಆಮ್ಲೀಯವಾಗುತ್ತದೆ. ಇದರಿಂದಾಗಿ ಕೀಲುಗಳಲ್ಲಿ ನೋವು, ಮಂಡಿನೋವು (Joint Pain) ಸೇರಿದಂತೆ ಹಲವು ರೀತಿಯ ತೊಂದರೆ ಕಾಣಿಸಬಹುದು. ಗೌಟ್ ಎನ್ನುವ ಸಮಸ್ಯೆಗೂ ಕಾರಣವಾಗಬಹುದು. ಮೈಯಲ್ಲಿ ನೀರು ತುಂಬಿಕೊಳ್ಳಬಹುದು.

•    ಮದ್ಯಪಾನ (Alcohol)
ಅಲ್ಕೋಹಾಲ್ ನಲ್ಲಿ ಪ್ಯೂರಿನ್ ಅಂಶ ಹೆಚ್ಚಾಗಿರುತ್ತದೆ. ಇದು ದೇಹದಲ್ಲಿ ಯೂರಿಕ್ ಆಮ್ಲವನ್ನು ಸಹ ಏರಿಕೆ ಮಾಡುತ್ತದೆ. ಅಧ್ಯಯನಗಳ ಪ್ರಕಾರ, ಬಿಯರ್ ನಲ್ಲಿ (Beer) ಅತಿ ಹೆಚ್ಚು ಪ್ರಮಾಣದ ಪ್ಯೂರಿನ್ ಇರುತ್ತದೆ. 

•    ರೆಡ್ ಮೀಟ್ (Red Meat)
ರೆಡ್ ಮೀಟ್ ಸೇವನೆಯಿಂದಲೂ ಯೂರಿಕ್ ಆಮ್ಲ ದೇಹದಲ್ಲಿ ಹೆಚ್ಚುತ್ತದೆ. ಇದರಲ್ಲೂ ಸಹ ಪ್ಯೂರಿನ್ ಅಂಶ ಅಧಿಕವಾಗಿರುತ್ತದೆ. ದೀರ್ಘಕಾಲ ರೆಡ್ ಮೀಟ್ ಸೇವನೆ ಮಾಡುವ ಜನರ ರಕ್ತದಲ್ಲೂ ಸಹ ಈ ಯೂರಿಕ್ ಆಮ್ಲ ಸೇರಿಕೊಂಡಾಗ ಕಿಡ್ನಿಯಲ್ಲಿ ಕಲ್ಲುಗಳು (Kidney Stones) ಉಂಟಾಗುತ್ತವೆ. 

•    ಸಮುದ್ರ ಆಹಾರ (Sea Food)
ಕೆಲವು ಸಮುದ್ರ ಆಹಾರ ಪದಾರ್ಥಗಳಲ್ಲೂ ಪ್ಯೂರಿನ್ ಅಂಶ ಹೆಚ್ಚಾಗಿರುತ್ತದೆ. ಟೂನಾ (Tuna), ಸಾಲ್ಮನ್ ನಂತಹ ಮೀನುಗಳಲ್ಲಿ ಪ್ಯೂರಿನ್ ಅಂಶ ಹೆಚ್ಚಿದ್ದು, ಯೂರಿಕ್ ಆಮ್ಲದ ಪ್ರಮಾಣವನ್ನು ಅಧಿಕಗೊಳಿಸುತ್ತವೆ ಹಾಗೂ ಇವುಗಳ ನಿರಂತರ ಸೇವನೆಯಿಂದ ಕಿಡ್ನಿ ಫೆಲ್ಯೂರ್ ಕೂಡ ಉಂಟಾಗಬಹುದು. 

•    ತರಕಾರಿ (Vegetables)
ಹೂಕೋಸು, ಪಾಲಕ್ ಸೊಪ್ಪು ಹಾಗೂ ಅಣಬೆಗಳಲ್ಲಿ ಪ್ಯೂರಿನ್ ಅಂಶ ಅಧಿಕವಾಗಿದ್ದು, ಇವು ಸಹ ಯೂರಿಕ್ ಆಮ್ಲದ ಪ್ರಮಾಣವನ್ನು ಹೆಚ್ಚಿಸುತ್ತವೆ. ಇವು ಆಲ್ಕೋಹಾಲ್, ಸಾಫ್ಟ್ ಡ್ರಿಂಕ್ಸ್ (Soft Drinks) ನಷ್ಟು ಅಪಾಯಕಾರಿ ಅಲ್ಲವಾದರೂ ಯೂರಿಕ್ ಆಮ್ಲದ ಪ್ರಮಾಣ ತುಸು ಹೆಚ್ಚುವುದು ಸಾಬೀತಾಗಿದೆ. 

ಚಳಿಗಾಲದಲ್ಲಿ ಮಂಡಿನೋವು ತಡೆಯೋದು ಹೇಗೆ?

ಯಾವ ಆಹಾರ (Food) ಉತ್ತಮ?
•    ಕೊಬ್ಬಿನ (Fat) ಅಂಶ ಕಡಿಮೆ ಇರುವ ಆಹಾರ ಪದಾರ್ಥ ಸೇವನೆ ಮಾಡಬೇಕು. 
•    ವಿಟಮಿನ್ ಸಿ ಹೊಂದಿರುವ ಹಣ್ಣು (Fruit), ತರಕಾರಿಗಳಿಂದ ಯೂರಿಕ್ ಆಮ್ಲದ ಪ್ರಮಾಣ ಕಡಿಮೆ ಆಗುತ್ತದೆ. ಹೀಗಾಗಿ, ಕೀಲುಗಳ ಸಮಸ್ಯೆ ಇರುವವರು  ಚೆರಿ, ಕಿತ್ತಳೆ ಹಣ್ಣುಗಳನ್ನು ಸೇವನೆ ಮಾಡಬೇಕು. 
•    ಸಸ್ಯ ಆಧಾರಿತ ಆಹಾರದ ಸೇವನೆ ಮಾಡಬೇಕು. ದ್ವಿದಳ ಧಾನ್ಯ, ಹಣ್ಣು, ತರಕಾರಿಗಳು ಉತ್ತಮ. ಸೇಬು, ಸ್ಟ್ರಾಬೆರಿ, ಬೀನ್ಸ್ ಸೇವನೆ ಮಾಡಬೇಕು. ಬೀನ್ಸ್ ಬೇಯಿಸಿದ ನೀರನ್ನು ಕುಡಿಯಬೇಕು. ಸಕ್ಕರೆ ಇಲ್ಲದ ನೀರಿಗೆ ನಿಂಬೆ ಹಣ್ಣಿನ (Lemon) ರಸ ಬೆರೆಸಿ ಕುಡಿಯಬೇಕು. 

click me!