ಗಂಟಲು ನೋವೆಂದ ಮಗುವಿಗೆ ಐಸ್‌ಕ್ರೀಂ ತಿನ್ನು, ವಿಡಿಯೋ ಗೇಮ್ ನೋಡೆಂದು ಪ್ರಿಸ್ಕ್ರಿಪ್ಶನ್ ಬರೆದುಕೊಟ್ಟ ಡಾಕ್ಟರ್‌!

By Vinutha PerlaFirst Published Jun 3, 2023, 9:09 AM IST
Highlights

ಯಪ್ಪಾ..ಇಂಥಾ ಡಾಕ್ಟರ್ಸ್‌ ಕೂಡಾ ಇರ್ತಾರ ಅಂತ. ಆ ಮಗುವಿಗೆ ಪಾಪ ಸಿಕ್ಕಾಪಟ್ಟೆ ಗಂಟಲು ನೋವು. ನೋವು ತಡೆಯೋಕೆ ಆಗ್ತಿಲ್ಲ ಅಂತ ತಾಯಿ ಕರ್ಕೊಂಡು ಆಸ್ಪತ್ರೆಗೆ ಬಂದಿದ್ಲು. ಆದ್ರೆ ಈ ಡಾಕ್ಟರ್ಸ್‌ ಬರೆದುಕೊಟ್ಟ ಪ್ರಿಸ್ಕ್ರಿಪ್ಶನ್ ನೋಡಿ ದಂಗಾದ್ರು.

ಪುಟ್ಟ ಮಕ್ಕಳಲ್ಲಿ ಆಗಾಗ ಗಂಟಲು ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಜ್ವರ ಬಂದಾಗ, ಹೆಚ್ಚು ಕೂಲ್‌ಡ್ರಿಂಕ್ಸ್, ಐಸ್‌ಕ್ರೀ, ಚಾಕೊಲೇಟ್ ತಿಂದಾಗ ಹೀಗೆ ಆಗೋದಿದೆ. ಹಾಗೆಯೇ ಆ ಮಗುವಿಗೆ ಪಾಪ ಸಿಕ್ಕಾಪಟ್ಟೆ ಗಂಟಲು ನೋವು. ನೋವು ತಡೆಯೋಕೆ ಆಗ್ತಿಲ್ಲ ಅಂತ ತಾಯಿ ಕರ್ಕೊಂಡು ಆಸ್ಪತ್ರೆಗೆ ಬಂದಿದ್ಲು. ಆದ್ರೆ ಈ ಡಾಕ್ಟರ್ಸ್‌ ಬರೆದುಕೊಟ್ಟ ಪ್ರಿಸ್ಕ್ರಿಪ್ಶನ್ ನೋಡಿ ದಂಗಾದ್ರು. ಹೌದು ಆಸ್ಪತ್ರೆಯಲ್ಲಿ ವೈದ್ಯರು ಮಗುವನ್ನು ಪರೀಕ್ಷಿಸಿ ಮೆಡಿಸಿನ್‌ಗಳನ್ನು ಬರೆದು ಕೊಡುವುದು ಬಿಟ್ಟು ಪ್ರಿಸ್ಕ್ರಿಪ್ಶನ್‌ನಲ್ಲಿ ಐಸ್‌ಕ್ರೀಂ ತಿನ್ನುವಂತೆ, ಹೆಚ್ಚು ವಿಡಿಯೋ ಗೇಮ್ ನೋಡುವಂತೆ ಬರೆದುಕೊಟ್ಟಿದ್ದಾರೆ. ಇದನ್ನು ನೋಡಿ ಮನೆಮಂದಿಯೆಲ್ಲಾ ಬೆಚ್ಚಿಬಿದ್ದಿದ್ದಾರೆ. ಸದ್ಯ ವೈದ್ಯರ ಈ ಪ್ರಿಸ್ಕ್ರಿಪ್ಶನ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಬ್ರೆಜಿಲ್‌ನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

9 ವರ್ಷದ ಬಾಲಕ ಗಂಟಲು ನೋವು (Sore throat), ಜ್ವರ, ಶೀತ, ಗಂಟಲು ನೋವು  ಮೊದಲಾದ ಆರೋಗ್ಯ ಸಮಸ್ಯೆ (Health problem)ಗಳನ್ನು ಹೊಂದಿದ್ದರು. ಮೇ 18ರಂದು ಒಸಾಸ್ಕೋದ 37 ವರ್ಷದ ಪ್ರಿಸ್ಸಿಲಾ ಸಿಲ್ವಾ ರಾಮೋಸ್, ಅನಾರೋಗ್ಯದ ತಮ್ಮ ಮಗುವನ್ನು ಸರ್ಕಾರಿ ಸ್ವಾಮ್ಯದ ಕ್ಲಿನಿಕ್‌ಗೆ ಕರೆದೊಯ್ದಾಗ ಈ ಘಟನೆ ಸಂಭವಿಸಿದೆ. ವೈದ್ಯರು (Doctors) ಮಗುವನ್ನು ನೋಡಿ ಪ್ರಿಸ್ಕ್ರಿಪ್ಶನ್‌ನಲ್ಲಿ ಐಸ್‌ಕ್ರೀಂ ತಿನ್ನುವಂತೆ, ಹೆಚ್ಚು ವಿಡಿಯೋ ಗೇಮ್ ನೋಡುವಂತೆ ಬರೆದುಕೊಟ್ಟಿದ್ದಾರೆ. ಮಗುವಿಗೆ ಅಸಂಬದ್ಧ ಮೆಡಿಸಿನ್ ಸೂಚಿಸಿದ್ದಕ್ಕೆ ವೈದ್ಯರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

National Doctors Day: ಪ್ರಿಸ್ಕ್ರಿಪ್ಷನ್‌ನಲ್ಲಿ ಡಾಕ್ಟರ್ ಬಳಸೋ ಕೋಡ್ ವರ್ಡ್ ಅರ್ಥ ಗೊತ್ತಾ?

ಮಗುವಿನ ಗಂಟಲನ್ನು ಪರೀಕ್ಷಿಸದೆ ಪ್ರಿಸ್ಕ್ರಿಪ್ಷನ್‌ ಬರೆದ ವೈದ್ಯರು
ಸಿಲ್ವಾ ರಾಮೋಸ್ ಪ್ರಕಾರ, ವೈದ್ಯರು ಮಗುವಿನ ಗಂಟಲನ್ನು ಸ್ವತಃ ಪರೀಕ್ಷಿಸಲು ನಿರ್ಲಕ್ಷಿಸಿದರು. ಬದಲಿಗೆ ವೃತ್ತಿಪರವಲ್ಲದ ನಡವಳಿಕೆಯನ್ನು ಪ್ರದರ್ಶಿಸಿದರು. ಅವರು ಅಮೋಕ್ಸಿಸಿಲಿನ್, ಐಬುಪ್ರೊಫೇನ್ ಮತ್ತು ಎನ್-ಅಸೆಟೈಲ್ಸಿಸ್ಟೈನ್‌ನಂತಹ ಚಿಕಿತ್ಸಾ ಆಯ್ಕೆಗಳನ್ನು ಸೂಚಿಸಿದರು. ಜೊತೆಗೆ ಚಾಕೊಲೇಟ್ ಐಸ್‌ಕ್ರೀಮ್‌ ತಿನ್ನುವಂತೆ ಮತ್ತು ದೈನಂದಿನ ವಿಡಿಯೋ ಗೇಮ್ ಸೆಷನ್‌ ಹೆಚ್ಚಿಸುವಂತೆ ಸೂಚಿಸಿದರು ಎಂದು ಸಿಲ್ವಾ ರಾಮೋಸ್ ಹೇಳಿದ್ದಾರೆ.

ಮಗನಿಗೆ ಯಾವುದೇ ಪರೀಕ್ಷೆ (Test) ನಡೆಸದೆ ವೈದ್ಯರು ಔಷಧಿ ಚೀಟಿ ಬರೆಯಲು ಆರಂಭಿಸಿದ್ದರು ಎಂದು ತಾಯಿ ಆಕ್ರೋಶ ವ್ಯಕ್ತಪಡಿಸಿದರು. ವೈದ್ಯರು ಮಗುವಿನ ಐಸ್ ಕ್ರೀಮ್ ತಿನ್ನುವ ಅಭ್ಯಾಸದ (Habit) ಬಗ್ಗೆ ವಿಚಾರಿಸಿದರು. ಚಾಕೊಲೇಟ್ ಬಗ್ಗೆ ಪ್ರಶ್ನೆಯನ್ನು ಕೇಳಿದರು. ನಂತರ ಐಸ್ ಕ್ರೀಮ್ ಸೇವನೆ ಮತ್ತು ಮೊಬೈಲ್ ವಿಡಿಯೋ ಗೇಮ್ ಫ್ರೀ ಫೈರ್‌ನ ದೈನಂದಿನ ಅವಧಿಗಳನ್ನು ಲಿಖಿತ ಪ್ರಿಸ್ಕ್ರಿಪ್ಷನ್‌ನಲ್ಲಿ ಸೇರಿಸಿದರು ಎಂದು ಸಿಲ್ವಾ ತಿಳಿಸಿದ್ದಾರೆ. ಪ್ರಿಸ್ಕ್ರಿಪ್ಷನ್‌ನ ಕೆಳಭಾಗದಲ್ಲಿ ಹೀಗೆ ವಿಚಿತ್ರವಾಗಿರುವುದನ್ನು ಸೇರಿಸಿದ್ದನ್ನು ನಾನು ಕೊನೆಯವರೆಗೂ ಗಮನಿಸಿರಲ್ಲಿಲ್ಲ. ರಾಮೋಸ್ ಅವರ ತಂಗಿ ಇದನ್ನು ತಿಳಿಸಿದ್ದು, ಪ್ರಿಸ್ಕ್ರಿಪ್ಷನ್‌ ನೋಡಿ ಇಬ್ಬರೂ ಅಚ್ಚರಿಗೊಂಅಡರು. ನಂತರ ಫೇಸ್‌ಬುಕ್‌ನಲ್ಲಿ ಅಸಾಮಾನ್ಯ ಪ್ರಿಸ್ಕ್ರಿಪ್ಷನ್ ಅನ್ನು ಹಂಚಿಕೊಳ್ಳಲು ನಿರ್ಧರಿಸಿದರು, ಇದು ವೈರಲ್ ಆಗಲು ಕಾರಣವಾಯಿತು.

ಅರ್ಥವಾಗದಂತೆ ಬರೆದ 3 ವೈದ್ಯರಿಗೆ 5000 ದಂಡ

ನಿರ್ಲಕ್ಷ್ಯವೆಸಗಿದ ಡಾಕ್ಟರ್‌ ಹುದ್ದೆಯಿಂದ ವಜಾ
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಡಾಕ್ಟರ್ ಪ್ರಿಸ್ಕ್ರಿಪ್ಷನ್‌ಗೆ ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ವೈದ್ಯರ ಕ್ರಮಗಳು ವೃತ್ತಿಪರವಲ್ಲ ಎಂದು ಕೆಲವು ವ್ಯಕ್ತಿಗಳು ಒಪ್ಪಿಕೊಂಡಿದ್ದಾರೆ. ಇತರರು ಐಸ್ ಕ್ರೀಮ್ ಮತ್ತು ಗೇಮಿಂಗ್ ಅನ್ನು ಲಘು ಹೃದಯದ ಸೂಚಕವಾಗಿ ಉದ್ದೇಶಿಸಿರಬಹುದು ಎಂದು ವಾದಿಸಿದರು. ಹೆಂಡರ್ಸನ್ ಫರ್ಸ್ಟ್, ವಕೀಲರು ಮತ್ತು ಬ್ರೆಜಿಲಿಯನ್ ಬಾರ್ ಅಸೋಸಿಯೇಷನ್‌ನ ಸಾವೊ ಪಾಲೊ ವಿಭಾಗದ ಬಯೋಎಥಿಕ್ಸ್ ಆಯೋಗದ ಅಧ್ಯಕ್ಷರು ತಮ್ಮ ರೋಗಿಗಳೊಂದಿಗೆ ಹೆಚ್ಚು ವೈಯಕ್ತಿಕ ಸಂಪರ್ಕವನ್ನು ಬೆಳೆಸಲು ಕೆಲವು ವೈದ್ಯರು ಇಂತಹ ಕ್ರಮಗಳಲ್ಲಿ ತೊಡಗುತ್ತಾರೆ ಎಂದು ಉಲ್ಲೇಖಿಸಿದ್ದಾರೆ.

ಆದರೆ, ಅಂತಹ ಉದ್ದೇಶಗಳ ಹೊರತಾಗಿಯೂ, ವೈದ್ಯರು ತಮ್ಮ ವಿವಾದಾತ್ಮಕ ಪ್ರಿಸ್ಕ್ರಿಪ್ಷನ್‌ಗಾಗಿ ತೀವ್ರ ಪರಿಣಾಮಗಳನ್ನು ಎದುರಿಸಿದರು, ಇದರ ಪರಿಣಾಮವಾಗಿ ಬ್ರೆಜಿಲಿಯನ್ ಸಾರ್ವಜನಿಕ ಆರೋಗ್ಯ ನೆಟ್‌ವರ್ಕ್‌ನಿಂದ ಅವರನ್ನು ವಜಾ ಮಾಡಲಾಯಿತು. ಒಸಾಸ್ಕೋದ ಸಿಟಿ ಹಾಲ್ ತಮ್ಮ ಸೇವಾ ಪೂರೈಕೆದಾರರ ವ್ಯವಸ್ಥೆಯಿಂದ ವೈದ್ಯರನ್ನು ವಜಾಗೊಳಿಸಿರುವುದನ್ನು ದೃಢಪಡಿಸಿದೆ. 

click me!