Health Tips: ಬರೀ ಸ್ವೀಟ್ ತಿನ್ಬೇಕು ಅನ್ನಿಸುತ್ತಾ? ಈ ಹಣ್ಣು ತಿನ್ನಿ

By Suvarna News  |  First Published Jun 3, 2023, 7:00 AM IST

ಊಟ ಆದ್ಮೇಲೆ ಸಿಹಿ ಬೇಕು, ಮಲಗುವಾಗ ಸಿಹಿ ಬೇಕು, ಬಾಯಾಡೋಕೆ ಸಿಹಿ ಬೇಕು, ಆಗಾಗ ಬಾಯಿ ಸಿಹಿ ಕೇಳ್ತಿದ್ದರೆ, ನೀವು ತಿಂತಾ ಇದ್ರೆ ಖಾಯಿಲೆ ಬರೋದು ನಿಶ್ಚಿತ. ಈ ಸಿಹಿ ಹುಚ್ಚಿನಿಂದ ಹೊರ ಬರಬೇಕೆಂದ್ರೆ ಕೆಲ ಸುಲಭ ಟಿಪ್ಸ್ ಫಾಲೋ ಮಾಡಿ.
 


ಫುಡ್ ಕ್ರೇವಿಂಗ್ ಅನೇಕರಲ್ಲಿರುತ್ತದೆ. ಸದಾ ಒಂದಿಲ್ಲೊಂದು ತಿನ್ನುವ ಬಯಕೆ ಅವರನ್ನು ಕಾಡುತ್ತದೆ. ಉದಾಹರಣೆಗೆ ಸಂತೋಷದ ಸಮಯದಲ್ಲಿ ಸಿಹಿ ತಿನ್ನುತ್ತಾರೆ. ಕೆಲವರು ಬೇಸರವಾದಾಗ ಖಾರದ ತಿಂಡಿಗಳನ್ನು ತಿನ್ನಲು ಬಯಸುತ್ತಾರೆ. ಇನ್ಕೆಲವರು ಹಾಳಾದ ಮೂಡ್ ಸರಿಪಡಿಸಿಕೊಳ್ಳಲು ಬಿಸಿ ಪಾನೀಯಗಳ ಮೊರೆಹೋಗುತ್ತಾರೆ. ಇದರ ಹೊರತಾಗಿ ಕೆಲವರಿಗೆ ಯಾವಾಗಲೂ ಸಿಹಿ ತಿನ್ನಬೇಕೆನಿಸುತ್ತದೆ. ಇನ್ನೂ ಕೆಲವರು ಯಾವಾಗಲೂ ಖಾರ ಅಥವಾ ಮಸಾಲೆಯುಕ್ತ ಆಹಾರವನ್ನೇ ಇಷ್ಟಪಡುತ್ತಾರೆ.

ಯಾವುದೇ ರೀತಿಯ ಫುಡ್ ಕ್ರೇವಿಂಗ್ (Food Craving) ಆದರೂ ಕೂಡ ಆರೋಗ್ಯ (Health) ಕ್ಕೆ ಪೂರಕವಾಗಿರಬೇಕು. ಸಿಹಿ (Sweet) ಯನ್ನು ಹೆಚ್ಚು ಇಷ್ಟಪಡುವವರು ಮತ್ತೆ ಮತ್ತೆ ಸಿಹಿ ತಿಂಡಿಗಳನ್ನೇ ತಿನ್ನುತ್ತಿದ್ದರೆ ಅದರಿಂದ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಇನ್ನು ಆರ್ಟಿಫಿಶಿಯಲ್ ಶುಗರ್ ನಿಂದ ತಯಾರಾದ ತಿಂಡಿಗಳ ಸೇವನೆಯಂತೂ ಆರೋಗ್ಯಕ್ಕೆ ಮಾರಕವೇ ಸರಿ. ಐಸ್ ಕ್ರೀಮ್, ಪೇಸ್ಟ್ರಿ, ಮಿಠಾಯಿಗಳಂತಹ ತಿಂಡಿಗಳು ಸ್ವಲ್ಪ ದಿನದಲ್ಲಿಯೇ ಮನುಷ್ಯನ ಆರೋಗ್ಯವನ್ನು ಹದಗೆಡಿಸುತ್ತವೆ. ಇಂತಹ ಆಹಾರಗಳಿಂದಲೇ ಸಕ್ಕರೆ ಖಾಯಿಲೆ, ಹೃದಯದ ತೊಂದರೆಯಂತಹ ಸಮಸ್ಯೆಗಳು ಕೂಡ ಉದ್ಭವವಾಗುತ್ತದೆ. ಹಾಗಾಗಿ ಹೆಚ್ಚು ಹೆಚ್ಚು ಸಿಹಿ ತಿನ್ನಲು ಬಯಸುವವರು ಸಕ್ಕರೆಯ ಹಸಿವನ್ನು ನೀಗಿಸುವಂತಹ ಕೆಲವು ಹಣ್ಣುಗಳ ಸೇವನೆ ಮಾಡುವುದು ಉತ್ತಮವಾಗಿದೆ. ಇದರಿಂದ ಶರೀರಕ್ಕೆ ಯಾವುದೇ ರೀತಿಯ ಅಡ್ಡಪರಿಣಾಮಗಳು ಆಗುವುದಿಲ್ಲ.  ನಿಮ್ಮ ಶುಗರ್ ಕ್ರೇವಿಂಗ್ ಕೂಡ ಕಡಿಮೆಯಾಗುತ್ತದೆ. ಅಂತಹ ಹಣ್ಣುಗಳು ಬಗ್ಗೆ ಮಾಹಿತಿ ಇಲ್ಲಿದೆ.

Tap to resize

Latest Videos

Healthy Food: ಖಾಲಿ ಹೊಟ್ಟೇಲಿ ಕಾಫಿ,ಟೀ ಕುಡಿಯೋದ ಒಳ್ಳೇದಾ?

ಮಾವಿನ ಹಣ್ಣು (Mango) : ಹಣ್ಣಿನ ರಾಜ ಮಾವಿನಹಣ್ಣನ್ನು ಇಷ್ಟಪಡದೇ ಇರುವವರು ತೀರ ವಿರಳ. ಮಾವಿನಹಣ್ಣಿನಲ್ಲಿ ಸಕ್ಕರೆಯ ಪ್ರಮಾಣ ಹೇರಳವಾಗಿರುತ್ತದೆ. ಸಕ್ಕರೆಯ ಹೊರತಾಗಿ ಇದರಲ್ಲಿ ಫೈಬರ್, ವಿಟಮಿನ್ ಸಿ, ಎ, ಇ ಮತ್ತು ವಿಟಮಿನ್ ಕೆ ಇರುತ್ತದೆ. ಹಾಗಾಗಿ ಯಾವುದೇ ಆರ್ಟಿಫಿಶಿಯಲ್ ಸಕ್ಕರೆಯನ್ನು ಹೊಂದಿರದ ಮಾವಿನಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಜೊತೆಗೆ ಹೆಚ್ಚು ಹೆಚ್ಚು ಸಿಹಿ ತಿನ್ನಬೇಕೆನಿಸುವವರು ಶುಗರ್ ಕ್ರೇವಿಂಗ್ ಅನ್ನು ಕಡಿಮೆಗೊಳಿಸಲು ಮಾವಿನಹಣ್ಣನ್ನು ಸೇವಿಸಬಹುದಾಗಿದೆ.

ಪೀಯರ್ ಹಣ್ಣು (Pear) : ಪೀಯರ್ ಹಣ್ಣು ಸಿಹಿ ತಿನ್ನಬೇಕೆನಿಸುವ ಆಸೆಯನ್ನು ಕಡಿಮೆಗೊಳಿಸುತ್ತದೆ. ಪೀಯರ್ ಹಣ್ಣು ತಿನ್ನಲು ಬಹಳ ರುಚಿಯಾಗಿರುವುದರ ಜೊತೆಗೆ ಫೈಬರ್ ಅಂಶವನ್ನು ಹೊಂದಿದೆ. ಫೈಬರ್ ನಿಂದ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ. ಸಾಮಾನ್ಯವಾಗಿ ಸಿಹಿ ತಿನ್ನುವುದರಿಂದ ತೂಕ ಹೆಚ್ಚುತ್ತದೆ. ಪೀಯರ್ ಹಣ್ಣಿನ ಸೇವನೆಯಿಂದ ತೂಕ ಏರುವುದಿಲ್ಲ. ಇದರಿಂದ ಆರೋಗ್ಯ ಕೂಡ ಚೆನ್ನಾಗಿರುತ್ತದೆ.

ಬೇಸಿಗೆಯಲ್ಲಿ ಕೂಲ್ ಆಗಿರ್ಬೇಕು ಅಂದ್ರೆ ಈ ಮ್ಯಾಂಗೋ ರೆಸಿಪಿ ಮಾಡಿ ಸವಿಯಿರಿ

ಕಲ್ಲಂಗಡಿ ಹಣ್ಣು (Watermelon) : ಬೇಸಿಗೆಯ ಕಾಲದಲ್ಲಿ ಎಲ್ಲೆಂದರಲ್ಲಿ ಕಾಣಸಿಗುವ ಕಲ್ಲಂಗಡಿ ಹಣ್ಣು ಶುಗರ್ ಕ್ರೇವಿಂಗ್ ಅನ್ನು ಕಡಿಮೆಗೊಳಿಸಲು ಉತ್ತಮ ಮಾರ್ಗವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶವನ್ನು ಹೊಂದಿರುವ ಕಲ್ಲಂಗಡಿ ಹಣ್ಣಿನಲ್ಲಿ ಕಬ್ಬಿಣದ ಅಂಶವೂ ಇರುತ್ತದೆ. ಕಲ್ಲಂಗಡಿ ಹಣ್ಣು ಕೂಡ ಸಿಹಿ ತಿನ್ನಬೇಕೆನ್ನುವ ಬಯಕೆಯನ್ನು ನಿಯಂತ್ರಿಸುತ್ತದೆ.

ಖರಬೂಜ (Muskmelon): ತಿನ್ನಲು ಸಿಹಿ ಎನಿಸುವ ಖರಬೂಜದ ಹಣ್ಣು ಅತೀ ಕಡಿಮೆ ಪ್ರಮಾಣದ ಕ್ಯಾಲೊರಿಯನ್ನು ಹೊಂದಿದೆ. ಇದು ದೇಹವನ್ನು ಕೂಡ ತಂಪಾಗಿರಿಸುತ್ತದೆ. ಶುಗರ್ ಕ್ರೇವಿಂಗ್ ಸಮಸ್ಯೆಯನ್ನು ಹೊಂದಿರುವವರು ಖರಬೂಜದ ಹಣ್ಣನ್ನು ಪ್ರತಿನಿತ್ಯ ಸೇವಿಸಬಹುದು. ಇದು ಸಕ್ಕರೆ ತಿನ್ನುವ ಆಸೆಯನ್ನು ಹತೋಟಿಯಲ್ಲಿಡುತ್ತದೆ.

ಬೆರ್ರೀಸ್ : ಬ್ಲೂ ಬೆರ್ರಿ, ಸ್ಟ್ರಾಬೆರಿ, ಬ್ಲಾಕ್ ಬೆರ್ರಿ ಮತ್ತು ರಾಸ್ಪ್ ಬೆರ್ರಿ ಮುಂತಾದವುಗಳು ಶುಗರ್ ಕ್ರೇವಿಂಗ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಎಲ್ಲ ಬೆರ್ರಿ ಗಳನ್ನು ಸೇರಿಸಿ ಕೂಡ ತಿನ್ನಬಹುದು. ಇದು ಆರೋಗ್ಯವಂತ ಶರೀರಕ್ಕೆ ಬಹಳ ಒಳ್ಳೆಯದು.

ಬಾಳೆಹಣ್ಣು : ಬಾಳೆಹಣ್ಣು ಸಾಮಾನ್ಯವಾಗಿ ವರ್ಷವಿಡೀ ಲಭ್ಯವಿರುತ್ತದೆ. ನಿಯಮಿತವಾಗಿ ಬಾಳೆಹಣ್ಣಿನ ಸೇವನೆ ಮಾಡುವುದರಿಂದಲೂ ಶುಗರ್ ಕ್ರೇವಿಂಗ್ ಅನ್ನು ಕಡಿಮೆಮಾಡಬಹುದು. ಬಾಳೆಹಣ್ಣಿನಲ್ಲಿ ಕಬ್ಬಿಣ, ಮ್ಯಾಗ್ನೀಶಿಯಮ್ ಮತ್ತು ಪೊಟಾಶಿಯಮ್ ನಂತಹ ಪೋಷಕ ತತ್ವಗಳು ಇರುತ್ತವೆ. ಇದರಲ್ಲಿ ನೈಸರ್ಗಿಕ ಸಕ್ಕರೆ ಇರುವುದರಿಂದ ಇದು ಶುಗರ್ ಕ್ರೇವಿಂಗ್ ಕಡಿಮೆಗೊಳಿಸಲು ಬಹಳ ಒಳ್ಳೆಯದು.

click me!